ಈ ಮೌನ, ಒಂಟಿತನ ಮತ್ತೇ ಅದೇ ಬೇಸರ

ಈ ಮೌನ, ಒಂಟಿತನ
ಮತ್ತೇ ಅದೇ ಬೇಸರ
ಎಕೋ ಇಷ್ಟವಾಗುತಿದೆ
ಬದುಕಿದು ಎಂಥ ಸೋಜಿಗ.

 

ಊರು, ಊರೋಳಗಿನ ಹೋಳೆ,
ಹೋಳೆಯ ಮುಂದಲ ಬಯಲು
ಅವನ್ನೇಲ್ಲ ಮುಳುಗಿಸಿದ ಆಣೇಕಟ್ಟು.
ಈ ಮೌನ, ಒಂಟಿತನ
ಮತ್ತೇ ಅದೇ ಬೇಸರ

 

ಕಲಿತ ಶಾಲೆ, ಶಾಲೆಯಾ ಗೆಳೆಯರು,
ಗೆಳೆಯರಾ ಜೋತೆ ಆಡಿದಾ ಆಟಗಳು
ಆ ಹುಡುಗಾಟವ ಬಿಡಿಸಿದ ಬದುಕು.
ಈ ಮೌನ, ಒಂಟಿತನ
ಮತ್ತೇ ಅದೇ ಬೇಸರ

 

ಅವಳು, ಅವಳೊಳಗಿನ ನಾನು,
ನಮ್ಮಿಬ್ಬರ ಆ ಪ್ರೀತಿ-ಕನಸುಗಳು
ನಮ್ಮನ್ನಗಲಿಸಿದ ಹುಸಿ ಸ್ವಾರ್ಥ.
ಈ ಮೌನ, ಒಂಟಿತನ
ಮತ್ತೇ ಅದೇ ಬೇಸರ

 

ಈ ಸಂಜೆ, ಸಂಜೆಯೋಳಗಿನ ಎಕಾಂತ,
ಕೈಯಲ್ಲಿ ಚಿನ್ನದ ಮಧುಪಾತ್ರೆ
ಮನದಲ್ಲವಳ ನೆನಪಿನಾ ಜಾತ್ರೆ.
ಈ ಮೌನ, ಒಂಟಿತನ
ಮತ್ತೇ ಅದೇ ಬೇಸರ

 

ಈ ಮೌನ, ಒಂಟಿತನ
ಮತ್ತೇ ಅದೇ ಬೇಸರ
ಎಕೋ ಇಷ್ಟವಾಗುತಿದೆ
ಬದುಕಿದು ಎಂಥ ಸೋಜಿಗ.

4 Responses to “ಈ ಮೌನ, ಒಂಟಿತನ ಮತ್ತೇ ಅದೇ ಬೇಸರ”


  1. 1 Ravi February 24, 2008 at 3:32 pm

    Ura baggenuu swalp bare,

    ಊರು, ಊರೋಳಗಿನ ಹೋಳೆ,
    ಹೋಳೆಯ ಮುಂದಲ ಬಯಲು
    ಅವನ್ನೇಲ್ಲ ಮುಳುಗಿಸಿದ ಆಣೇಕಟ್ಟು.

    ivugala bagge innu hechchige bare

    Thanks
    Ravi

  2. 2 ಬಾಲ February 24, 2008 at 6:22 pm

    ಶೆಟ್ಟರೆ, ಬೇಸರವಾದರೂ ಇಷ್ಟವಾಗುವ ಈ ಬದುಕು ನಿಜಕ್ಕೂ ಸೋಜಿಗ.. ಕವಿತೆ ಚೆನ್ನಾಗಿದೆ.
    - ಬಾಲ.

  3. 3 ಮಾರುತಿ February 25, 2008 at 8:44 am

    ಚೆಂದ ಐತಿಪಾ, ನಿನ್ನ ಕವನಾ..

    ಇನ್ನು ಹೋಸ ಹೋಸ ಪ್ರಯತ್ನಗಳಾಗಲಿ.

    ತಮ್ಮ ಗೆಳೆಯ

    ಮಾರುತಿ, ಮಳಲಿ

  4. 4 ಶೆಟ್ಟರು (Shettaru) February 25, 2008 at 9:17 am

    @ ರವಿ
    ಒಂದು ಸಾರಿ ಊರಿಗೆ ಹೋಗಿ ಬಂದು, ಆ ಜಾಗಗಳಿಗೆಲ್ಲ ದಡದಿಂದ ಕಣ್ಣಾಡಿಸಿ ಬರಬೇಕಂತ ಮಾಡಿನಿ, ಆಮ್ಯಾಲೆ ನಾವಾಡಿದ್ದ ಆಟಗಳು, ಮಾಡಿದ ಕಮಾಯಿಗಳು, ಮನಿ ಮುಂದ ನೀರು ಬಂದು ನಿಂತಾಗ್ಲೂ ನಿಮ್ಮ ಅಜ್ಜ ಮತ್ತ ಒಣ್ಯಾಗಿನ ಇನ್ನು ಹೀರೇರು ಮನಿ ಬಿಟ್ಟು ಬರುದಿಲ್ಲ ಅಂತ ಕುಂತಿದ್ದು, ಟ್ರ್ಯಾಕ್ಟರನ್ಯಾಗ ಸಾಮಾನ್ ತುಂಬ್ಕೊಂಡು ಹೋದ ಆ ಕ್ಷಣ ಇನ್ನು ಕಣ್ಣ ಮುಂದ ಕಟ್ಟಿದಂಗೈತಿ, ಆದ್ರ್ ಮನಸ್ನ್ಯಾಗಿಂದು ಕೈ ಯಿಂದ ಹೋರಗ ಬರವಲ್ಲದು. ಆದರೂ ಪ್ರಯತ್ನ ಪಡ್ತಿನಿ.

    @ ಬಾಲ

    ಈ ಬದುಕೆ ಹಾಗೆ ಒಂದು ಶುದ್ದ ಜೂಜು, ಎಷ್ಟೆ ಬೇಸರವಾದರೂ ಬದುಕಿನೆಡೆಯ ಸೇಳತ ಹೆಚ್ಚುತ್ತಲೆ ಇರುವುದು ಮೇಲಾಗಿ ಅದೇ ಬದುಕು.

    ಕಮೆಂಟಿಸಿದ್ದಕ್ಕೆ ಧನ್ಯವಾದಗಳು.

    @ ಮಾರುತಿ

    ಹೀಗೆ ಕಮೆಂಟಿಸುತ್ತಿರು, ವಿಮರ್ಷೆಯೂ ಇರಲಿ.

    ಸ್ನೇಹವಿರಲಿ

    ಶೆಟ್ಟರು, ಮುಂಬಯಿ


Leave a Reply




a

Blog Stats

  • 7,975 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು