ಗೆಳತಿಯಂಥ ಅವ್ವನಿಗೆ, ಅವ್ವನಂತ ಗೆಳತಿಯರಿಗೆ

05-flower.jpg

ಗೆಳತಿಯಂಥ ಅವ್ವನಿಗೆ,
ಅವ್ವನಂತ ಗೆಳತಿಯರಿಗೆ..ಮಹೀಳಾ ದಿನದ ಶುಭಾಷಯ…ಹೇಳ್ಲೆಬೇಕಾ?

ನಾನು ಥ್ಯಾಂಕ್ಸ್ ಹೇಳಲ್ಲಾ… ನೀವು ಕಣ್ಣಿರ ಕಲೆ ಒರೆಸಿ ನನ್ನ ನಗಿಸಿದ್ದಕ್ಕೆ, ನಿಮಗೆ ಕಿಟಲೆ ಮಾಡಿದಾಗ ನಕ್ಕಿದ್ದಕ್ಕೆ, ನಿಮ್ಮ ಬುತ್ತಿಯಲ್ಲಿ ನನಗೊಂದು ತುತ್ತು ಇಟ್ಟಿದ್ದಕ್ಕೆ, ನಾನು ಒಡೆದ ಹೋದಾಗ ನನ್ನಲ್ಲಿ ಜೀವನೋತ್ಸಾಹ ತುಂಬಿದ್ದಕ್ಕೆ, ನಿಮ್ಮನ್ನು ಬೇಜಾರು ಮಾಡಿದಾಗೆಲ್ಲ ನನ್ನನ್ನು ಕ್ಷಮಿಸಿದ್ದಕ್ಕೆ, ನಾನು ತಪ್ಪು ಮಾಡಿದಾಗೆಲ್ಲ ತಿದ್ದಿದ್ದಕ್ಕೆ, ನನ್ನ ಇವತ್ತಿನ ಸಂತೋಷಗಳಿಗೆ overall ನನ್ನನ್ನ “ನಾನು..” ಅಂಥೆಲ್ಲಾ ಹೇಳೊದಕ್ಕೆ ಕಾರಣವಾಗಿದ್ದಕ್ಕೆ ನಿಮಗೆ ನಾನು ಥ್ಯಾಂಕ್ಸ್ ಹೇಳೊದಿಲ್ಲ.

ಕೈ ಮುಗಿತೇನೆ ಅಷ್ಟೆ…

2 Responses to “ಗೆಳತಿಯಂಥ ಅವ್ವನಿಗೆ, ಅವ್ವನಂತ ಗೆಳತಿಯರಿಗೆ”


  1. 1 Mallikarjunagowda March 15, 2008 at 4:03 pm

    ಮ್ಯಾಗಿನ ಕಥಿಗೂ ಈ ಸ್ವಗತಕ್ಕೂ ಎಂಥಾ ವ್ಯತ್ಯಾಸ ಅದ , ಹುಡಿಗೇರ ಸಲಿಗಿ ಕೇವಲ ಒಂದ ರೀತಿ ಪ್ರೀತಿ ಅಂತ ತಿಳಿದ ವಸಂತಗೂ, ತಾಯಿಯಂತ ಪ್ರೀತಿ ತೋರ್ಸಿದ ಗೆಳತಿ ಅಂತ ತಿಳಿದ ಈ ಮನಸ್ಸಿಗೂ ಎಂತಾ ವ್ಯತ್ಯಾಸ?!!
    ಈ ರೀತಿ attitude ಇದ್ರ ಮಾತ್ರ ಎಲ್ಲರೊಳಗೂ ನಿಜವಾದ ಪ್ರೀತಿ ಕಾನೂದು ಸಾದ್ಯ ಅನ್ನು ಮಾತು ಈ ೪ ಸಾಲಿನೊಳಗ ಕಂಡ ಬರ್ತದ, ಗೆಳತಿ ಪ್ರೀತಿಗೆ ಮತ್ತೊಂದ dimension ಕೊಡುವಂತ ಪ್ರಯತ್ನ ಮಾಡಿದೀರಾ, ಉತ್ತಮವಾದ ಸಾಲು ಓದಿದ ಖುಷಿ ಆಯ್ತು, ಧನ್ಯವಾದ.

  2. 2 M.D April 14, 2008 at 7:46 pm

    ಶೀರ್ಷಿಕೆ ಭಾಳ ಛಂದ ಅನಿಸ್ತು.
    ಅದಕ್ಕೂ ಮಿಗಿಲಾಗಿ ಮನ ಮುಟ್ಟುವಂಥ ಮಾತುಗಳನು ಕೆಲವೇ ಶಬ್ದಗಳಲ್ಲಿ ಹೇಳಿದ್ದೀರ.
    ಖುಶಿ ಆತು. ಮತ್ತ ಬರ್ತೀನ್ರಿ


Leave a Reply




a

Blog Stats

  • 8,400 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು