
ಬದುಕಿನ ಪ್ರತಿ ಸಂಭಂದವು Renewal ಆಗ್ತಾಯಿರಬೇಕು ಇಲ್ಲದೇ ಹೋದರೇ ಪ್ರತಿ ಸಂಭಂದವು Expire ಆಗಿಬಿಡುತ್ತೆ. ಎಷ್ಟೊಂದು ನಿಜವಲ್ಲವೆ? ಬದುಕಿನಲ್ಲಿ ಪ್ರತಿ ದಿನವೂ ಹೋಸ ಸಂಭಂದಗಳು ಸೃಷ್ಟಿ ಆಗ್ತಾನೆ ಹೋಗುತ್ತಿರುತ್ತವೆ, ಹಾಗೆಯೇ ಎಷ್ಟೊ ಹಳೆಯ ಸಂಭಂದಗಳು ನರಳಿಕೆಯೇ ಇಲ್ಲದೇ ಸಾಯುತ್ತಿರುತ್ತವೆ.
ಮೋನ್ನೆ ತಾನೇ ಸೇರಿದ ಕಂಪನಿಯಲ್ಲಿ ಪಕ್ಕದ Cubicalನವನ ಜೋತೆ ವಿಕೇಂಡನಲ್ಲಿ ಮೂವಿಗೆ ಹೋಗಲು ಪ್ಲಾನ ಮಾಡುವ ನಾವೇ, ಮೋನ್ನೆ ಮೋನ್ನೆಯವರೇಗೆ ಒಂದೇ ಬೆಂಚನಲ್ಲಿ ಜೋತೆಯಲ್ಲಿಯೇ ಕೂಡುತ್ತಿದ್ದ ಗೇಳೆಯನನ್ನು ಕರೆಯಲು ಮರೆಯುತ್ತೇವೆ.
ಆಫಿಸಿಗೇ ಒಂದೇ ಬಸ್ಸಿನಲ್ಲಿ ಬರುವವರಿಗೆಲ್ಲ SMS ಕಳುಹಿಸುವ ನಾವು, ಹಾಸ್ಟೇಲಿನಲ್ಲಿ ರೂಮಮೇಟ ಆಗಿದ್ದವನ ನಂಬರ ಯಾವತ್ತೋ ಡಿಲಿಟ ಅಗಿದ್ದನ್ನು ಮರೇಯುತ್ತೇವೆ. ನಾವು ನೋಡಿಯೇ ಇರದ ಕ್ಲೈಂಟಗಳಿಗೆ ಕ್ರಿಸ್ಮಸ , ನ್ಯೂ ಇಯರಗೇ e-ಮೇಲ ಕಳುಹಿಸುವ ನಾವು, ಪರಿಕ್ಷೇಯ ಸಮಯದಲ್ಲಿ ತನ್ನ ನೋಟ್ಸ ಕೊಟ್ಟು ಓದಿಸಿದ ಗೆಳೆಯನ ಪೋಸ್ಟಲ ಅಡ್ರೇಸ್ಸನ್ನೇ ಮರೇಯುತ್ತೇವೆ.
ಪ್ರತಿ ಸಂಭಂದವು ಅಷ್ಟೆ ನೀರೆರೆಯದಿದ್ದರೆ ಒಣಗಿದ ಬಳ್ಳಿಯೇ, ಹೂವು ಅರಳದು, ಕಂಪು ಹರಡದು.
ಗೆಳೆತನವೆಂಬುದು ಬಳ್ಳಿಯಿದ್ದಂತೆ ಅದು ಏಷ್ಟೆ ಬೆಳೆದರು ನೀರು ಹಾಕದಿದ್ದರೇ ಬಾಡುವುದೆ. ಹಾಗಾದರೇ ನಮ್ಮ ಗೆಳೆತನದ ಬಳ್ಳಿಗೆ ನೀರೆರೆಯೋಣ , ಮತ್ತೆ Reneval ಮಾಡೋಣ, Expiry Date ಸಮೀಪೀಸ್ತಾಯಿದೆ. ಗೆಳೆಯಾ, ನಾನಿಲ್ಲಿ ನಿನ್ನ e-ಮೇಲ ಹಾದಿಯನ್ನೆ ಕಾಯ್ತಾ ಕುಳಿತಿದ್ದೀನಿ ಅನ್ಕೊಬೇಡ, ನಾನೀಗ ನಿನ್ನ ನಂಬರನ್ನೇ ಡೈಯಲ್ ಮಾಡ್ತಯಿದ್ದೇನೆ.
“ಗೆಳೆತನವೆಂಬುದು ಬಳ್ಳಿಯಿದ್ದಂತೆ ಅದು ಏಷ್ಟೆ ಬೆಳೆದರು ನೀರು ಹಾಕದಿದ್ದರೇ ಬಾಡುವುದೆ.”
Salugalu chennagive, Sorry not familiar with kannada keyboard
ಸಂಗರಾಜ,
ಧನ್ಯವಾದಗಳು, Quillpad ಅಥವಾ kannadaslate.com ಬಳಸಿ
-ಶೆಟ್ಟರು