ಮನೆ ಮತ್ತು ಮನಸ್ಸು

ಮಳೆ-ಗಾಳಿಗೆ ಬಿದ್ದ ಮರಗಳು,
ಗೆಳತಿ ನಾವ್ಕಂಡ್ ಕನಸುಗಳೇ?
ಈ ನಲುಗಿದ ಬಳ್ಳಿಗಳು
ನಮ್ಮ ಪ್ರೀತಿಯೇ?

ದಿನವೂ ಕಾಣುವ ಸೂರ್ಯನಿಗೆ
ಅಡ್ಡಲಾಗಿ ದಟ್ಟ ಕಾರ್ಮೋಡಗಳು,
ನಮ್ಮ ಪ್ರೀತಿಯ ಸುತ್ತ
ಬರಿ ಸ್ವಾರ್ಥದ ಗೆರೆಗಳು.
ಆ ಎರಡರಿಂದಲೂ
ಬದಕು ಬರಿ ಕತ್ತಲು.

ಕುಸಿದು ಬಿದ್ದ ಮನೆಗಳು
ಮುರಿದು ಬಿದ್ದ ಮನಗಳು,
ಕಾಯಬೇಕು ಮುಗಿವವರೆಗೆ ಮಳೆಗಾಲ,
ಎರಡು ಮತ್ತೆ ಮೇಲೇಳಲು,
ಮನೆ ಕಟ್ಟುವವರು ಸಿಕ್ಕಾರೂ,
ಆದರೆ ಮನ ಕಟ್ಟುವವರು?

3 Responses to “ಮನೆ ಮತ್ತು ಮನಸ್ಸು”


  1. 1 ನಮಸ್ಕಾರ, April 11, 2008 at 5:32 pm

    ನಮಸ್ಕಾರ,

    ಉಗಾದಿ ಹಬ್ಬದ ಶುಭಾಶಯ.

    ಮನಸ್ಸು ಮುರಿದು ಬಿದ್ರು, ಬದುಕು ನೆಡೆಯಲೇ ಬೇಕಲ್ಲಾ?

    ಹೀಗಾಗಿ ಮತ್ತೆ ನಿಲ್ಲಲೇ ಬೇಕು ಮನಸ್ಸು, ನೆಡೆಯಲೇ ಬೇಕು ಬದುಕು.

    ಮಾರುತಿ

  2. 2 navada April 12, 2008 at 12:46 pm

    ಶೆಟ್ಟರೇ, ನಮಸ್ಕಾರ.
    ಕವಿತೆ ಇಷ್ಟವಾಯಿತು. ಅದರಲ್ಲೂ ಎರಡನೇ ಪ್ಯಾರಾ ಚೆನ್ನಾಗಿದೆ. ಮಳೆಗಾಲದವರೆಗೆ ಕಾಯುವ ಆಶಯ ಇರಬೇಕು ಸದಾ. ಆಗಲೇ ಮನ ಕಟ್ಟುವ ನಮ್ಮೆಲ್ಲರ ಪ್ರಯತ್ನ ಸಾಧ್ಯವಾಗುವುದು.
    ನಾವಡ

  3. 3 ಶೆಟ್ಟರು (Shettaru) April 12, 2008 at 4:56 pm

    ತುಂಬಾ ಧನ್ಯವಾದಗಳು,

    @ ಮಾರುತಿ,

    ಹೌದು, ಬದುಕು ನೆಡೆಯಲಾದರೂ ಮನಸ್ಸು ನಿಲ್ಲಲೇಬೇಕು.

    @ ನಾವಡ,

    ಹೌದು ನಾವಡರೇ, ಕಾಯದೇ ‘ಕಾಯಿ ಹಣ್ಣಾಗಲು” ಸಾಧ್ಯವಿಲ್ಲ.

    ಪ್ರೀತಿಯಿರಲಿ

    ಶೆಟ್ಟರು


Leave a Reply




a

Blog Stats

  • 7,973 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು