ಮರೆತೇನಂದರ ಮರೆಯಲಿ ಹ್ಯಾಂಗ: “ನೆನಪುಗಳೇ ಕಾಡದಿರಿ please”

ನಿನ್ನೊಂದಿಗೆ ಕಳೆದ ದಿನಗಳು ಮರೆಯಲು ಸಾಧ್ಯವೇ? ನಿನ್ನ ಜೊತೆ ಕಳೆದ ಆ ಸುಂದರ ದಿನಗಳ ಸವಿನೆನಪುಗಳು, ಆ ಸುಂದರ ಸಂಜೆಗಳ ಒಡನಾಟ, ಆ ತುಂಟಾಟ… ಆ ನೆನಪುಗಳೇ ಹಾಗೆ ಬಿಟ್ಟು ಬಿಡದೆ ಕಾಡುತ್ತವೆ।ನೆನಪುಗಳೇ ನೀವೇಕೆ ಹೀಗೆ? ಆಫೀಸಿನಲ್ಲಿ ದುಡಿದು ದಣಿದ ಕಣ್ಣುಗಳಿಗೆ ವಿಶ್ರಾಂತಿ ಕೊಡಲೆಂದು ಸ್ವಲ್ಪ ಕಣ್ಣರೆಪ್ಪೆ ಮುಚ್ಚಿದರೆ ಸಾಕು, ದಾಳಿ ಆರಂಭ। “ನೆನಪುಗಳೇ ಕಾಡದಿರಿ please”. ಹೀಗೆನ್ನಲು ಕೂಡಾ ಭಯ.!!!

ನಾನು ಹಾಗೆ ಹೇಳಿದೆನೆಂದು ನೀವು ಮುನಿಸಿಕೊಂಡು ಬರದೇ ಹೋದರೆ?, ನಾನು ನನಗೆ ಮತ್ತೆ ಸಿಗದೇ ಕಳೆದು ಹೋಗಬಹುದು। ನಾನು “ನಾನೇ” ಎಂಬುದನ್ನು ಜ್ಞಾಪಿಸ ಲಾದರು ನೀವು ತಿರುಗಿ ಬರಬೇಕು. ಆದರೂ ಇಷ್ಟೊಂದು ಕಾಡದಿರಿ please. ನಾನು ಯಾರೆಂಬುದನ್ನು ಜ್ಞಾಪಿಸುತ್ತಾ, ನಾನೇನಾಗಬೇಕೊ ಅದನ್ನು ಮರೆಯಿಸದಿರಿ, ನನ್ನ ದಾರಿ ತಪ್ಪಿಸದಿರಿ ನೆನಪುಗಳೇ… ಅರ್ಜೆಂಟಾಗಿ ನಾನು ಏನೋ ಆಗಬೇಕಾಗಿದೆ, ಏನೋ ಸಾಧಿಸಬೇಕಾಗಿದೆ. ದೊಡ್ಡ ಊರಿಗೆ ಹೋದವನು ದೊಡ್ಡದಾಗಿ ಏನೋ ಸಾಧಿಸುತ್ತಾನೆಂದು ಮನೆಯಲ್ಲಿ ಎಲ್ಲರೂ “ಕನಸು” ಕಾಣುತ್ತಿದ್ದಾರೆ, ಅವರ ಕನಸುಗಳನ್ನು ಕೊಲ್ಲದಿರಿ ನೆನಪುಗಳೇ…

ಹಾಗೆಂದು ಬರದೇ ಹೋಗದಿರಿ, ನೀವಲ್ಲದೇ ಈ ಊರಲ್ಲಿ ನನಗಾರು ಹೇಳಿ? ಹೊಸ ಊರಲ್ಲಿ ಹೊಸ ಪರಿಚಯಗಳಾಗಬೇಕು, ಹೊಸ ಗೆಳೆತನ ಬೆಳೆಯಲೇಬೇಕು ಆದರೆ ಅದು ಹಳೆಯ ಗೆಳೆತನದ ಸಾವಲ್ಲ। ನೆನಪುಗಳೇ ದಯವಿಟ್ಟು ಮುನಿಯದಿರಿ, ಮುನಿದು ನನ್ನ ನೂಯಿಸದಿರಿ. ಈ ಹೊಸ ಗೆಳೆಯರು ಕೊಡಾ ಯಾವೊತ್ತೊ ಮುಂದೊಂದು ದಿನ ನಿಮ್ಮೊಡನೆ ಸೇರಿ ಮತ್ತೆ ನನ್ನನ್ನೇ ಕಾಡುತ್ತೀರಿ. ಕೊನೆಯಲ್ಲಿ ಒಂಟಿಯಾಗುವನು ನಾನೇ. “ನೆನಪುಗಳೇ ಕಾಡದಿರಿ please”.

“ಬಾಳ ದಾರಿಯಲಿ ಬೇರೆಯಾದರೂ, ಚಂದಿರ ಬರುವನು ನಮ್ಮ ಜೊತೆ,
ಕಾಣುವೆನು ಅವನಲಿ ನೀನ್ನನೇ…
ಇರಲಿ ಗೇಳೆಯಾ… ಈ ಅನುಭಂದ ಹೀಗೆ ಸುಮ್ಮನೇ…”

4 Responses to “ಮರೆತೇನಂದರ ಮರೆಯಲಿ ಹ್ಯಾಂಗ: “ನೆನಪುಗಳೇ ಕಾಡದಿರಿ please””


  1. 1 ವೀಣಾ April 23, 2008 at 4:26 pm

    ನೆನಪುಗಳು ಯಾವಾಗಲೂ ಸಿಹಿಯಾಗಿರುತ್ತವೆ. ಅಪ್ಪ ಅಮ್ಮ, ಸ್ನೇಹಿತರೊಂದಿಗೆ ಕಳೆದಂತಹ ಎಲ್ಲಾ ಕ್ಷಣಗಳು ನೆನಪಾದಗೆಲ್ಲಾ ನಮ್ಮಲ್ಲಿಯೇ ನಾವು ನಗುತಿರುತ್ತೇವೆ ವಾಸ್ತವವನ್ನ ಮರೆತು!! ಕಳೆದು ಹೋದ ನೆನಪುಗಳನ್ನು ನೆನೆದು ಪಡುವ ಸುಖ ಬೇರೆಲ್ಲೂ ಸಿಗಲ್ಲ!!!

  2. 2 ಶೆಟ್ಟರು (Shettaru) April 24, 2008 at 5:38 pm

    ವೀಣಾ ನಿಮಗೆ ಸ್ವಾಗತ…

    ನೆನಪುಗಳನ್ನು ನೆನೆದು ಪಡುವ ಸುಖ ಬೇರೆಲ್ಲೂ ಸಿಗಲ್ಲ. ನಿಜ,ಆದರೆ ನೆನಪುಗಳು ನಮ್ಮ ಇವತ್ತನ್ನು ಕೊಲ್ಲದಿರಲಿ ಎಂಬುದು ನನ್ನ ಕಳಕಳಿ.

    ಪ್ರೀತಿಯಿರಲಿ

    ಶೆಟ್ಟರು

  3. 3 ರಾಜೇಶ್ April 26, 2008 at 2:46 pm

    ಮನುಷ್ಯನಿಗೆ ದೇವರು ಕೊಟ್ಟ ಅತಿ ದೊಡ್ಡ ವರ ಅಂದ್ರೆ ಮರೆವು.

    ಇಲ್ಲದಿದ್ದರೆ ಹಳೆಯ ನೋವುಗಳು ಜೀವನ ಇಡೀ ಕಾಡಿ ಕೊಂದು ಬಿಡುತ್ತಿದ್ದವು.

    ಶೆಟ್ಟರೇ ಚೆನ್ನಾಗಿದೆ ಕಣ್ರಿ.

    -ರಾಜೇಶ್

  4. 4 ಶೆಟ್ಟರು (Shettaru) April 29, 2008 at 1:08 pm

    ಥ್ಯಾಂಕ್ಸ್ ರಾಜೇಶ,

    ನಿಜ ಮರೆವೆ ಇಲ್ಲದಿದ್ದರೆ ಬದುಕು ಪೂರ್ತಿ ದುಖಿಸುವುದೆ ಆಗುತ್ತಿತ್ತು.

    ಪ್ರೀತಿಯಿರಲಿ ನಿರಂತರ

    -ಶೆಟ್ಟರು


Leave a Reply




a

Blog Stats

  • 8,400 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು