ಚಿಮ್ಮಿದ ಹನಿಗಳು

ಸುಖ ಕ್ಷಣಿಕ, ದುಖ ನಿರಂತರ.. ಹೀಗಾಗಿ
ಇರಲಿ ಪ್ರೀತಿಗೂ, ಮದುವೆಗೂ ಅಂತರ.

-0-

ಗೆಳತಿ, ಆ ಕನ್ನಡಕದ ಹಿಂದಿರುವ
ನಿನ್ನ ಕಣ್ಣುಗಳ ಮೇಲಾಣೆ,
ವರ್ಷ ವರ್ಷವೂ ಹೆಚ್ಚಾಗುತ್ತಿರುವ
ನಿನ್ನ ಕನ್ನಡಕದ ನಂಬರಿಗೂ, ಏರುತ್ತಿರುವ
ನನ್ನ ಸುತ್ತಳತೆಗೂ ಸುತಾರಾಮ್ ಸಂಭಂದವಿಲ್ಲ.

-0-

ನೀನಿಲ್ಲದೇ ಬದುಕಿನಲ್ಲಿ
ಏನಿಲ್ಲವೆಂದುಕೊಂಡಿದ್ದೆ.
ಈಗ ಗೊತ್ತಾಯಿತು ನನಗೆ,
ಏನೆಲ್ಲಾ ಕಳೆದುಕೊಂಡಿದ್ದೆ.

-0-

ಚುನಾವಣೆ ಸಮಯದಲ್ಲಿ
ಎಲ್ಲ ಪಕ್ಷಗಳ ಪ್ರಣಾಲಿಕೆಯಲ್ಲಿ ಬರಿ “ಅಭಿವೃದ್ಡಿ”
ಚುನಾವಣೆ ಮುಗಿದ ಮೇಲೆ
ಕೂಡಿಸಿದರೆ ಎಷ್ಟೊಂದು ರದ್ದಿ.

7 Responses to “ಚಿಮ್ಮಿದ ಹನಿಗಳು”


  1. 1 maruti April 28, 2008 at 2:10 pm

    Shettara,

    modalaneyaddu sakhattAgide

    -Maruti

  2. 2 ಶೆಟ್ಟರು (Shettaru) April 29, 2008 at 1:20 pm

    ಥ್ಯಾಂಕ್ಸ್ ಮಾರುತಿ,

    ಯಾವಾಗಲೋ ಬರೆದಿಟ್ಟವು, ಹೀಗೆ ಏಕೋ ನೆನಪಾದವು ಹಿಡಿದಿಟ್ಟೆ.

    ಪ್ರೀತಿಯಿರಲಿ ನಿರಂತರ

    -ಶೆಟ್ಟರು

  3. 3 Avalu May 3, 2008 at 12:21 pm

    “ನಿನ್ನ ಕನ್ನಡಕದ ನಂಬರಿಗೂ, ಏರುತ್ತಿರುವ
    ನನ್ನ ಸುತ್ತಳತೆಗೂ ಸುತಾರಾಮ್ ಸಂಭಂದವಿಲ್ಲ.”

    ನನ್ನ ಗೆಳೆಯನದೆ ನೇನಪಾಯಿತು, ಅವನೂ ಹೀಗೆ ಅಂತಿರುತ್ತಾನೆ…

    ಅವಳು.

  4. 4 varsha May 5, 2008 at 10:38 am

    tumba chennagide.innu munde nanoo idannu oduttene

  5. 5 ಶೆಟ್ಟರು (Shettaru) May 5, 2008 at 12:57 pm

    ಅವಳು. ಮತ್ತು ವರ್ಷಾ ನಿಮಗಿಬ್ಬರಿಗೂ ಸ್ವಾಗತ.

    ಅವಳು.

    ಹೆಸರು ಬರೆದಿದ್ದರೆ ಚೆನ್ನಾಗಿತ್ತು, ನಿಮ್ಮ ಗೆಳೆಯನ ನೆನಪಿನ ಪುಳಕಕ್ಕೆ, ಆ ಸಾಲಿಗೆ ನಮ್ಮದೂ ಅಭಿನಂದನೆಗಳು.

    ವರ್ಷಾ,

    ತುಂಬಾ ಥ್ಯಾಂಕ್ಸ, ನಿಮನ್ನು ಮತ್ತೆ ಮತ್ತೆ ಎದುರು ನೋಡ್ತೇನೆ, ವಿಮರ್ಷೆಯೂ ಜೋತೆಗಿರಲಿ. ಹಚ್ಚಿದ ಅವಲಕ್ಕಿಯ ಜೋತೆ ಬೆಚ್ಚನೇ ಚಹಾದ ಹಾಗೆ.

    ಪ್ರೀತಿಯಿರಲಿ

    ಶೆಟ್ಟರು

  6. 6 M.D May 8, 2008 at 5:31 pm

    ಶೆಟ್ರೆ ನಮಸ್ಕಾರ,
    ಏನು ಅವಳೇ ಅವಳು ತುಂಬಿಕೊಳ್ಳುತ್ತಿದ್ದಾಳಲ್ಲ ಬ್ಲಾಗಿನಲ್ಲಿ ಈಗೀಗ.
    ಹನಿಗಳು ಚಾಟ್ ನಂತಿವೆ, ಸ್ವಲ್ಪ ಹುಳೀ ಸ್ವಲ್ಪ ಸಿಹಿ

  7. 7 ಶೆಟ್ಟರು (Shettaru) May 10, 2008 at 6:41 pm

    ನಮಸ್ಕಾರ ಎಮ್.ಡಿ.ಯವರೇ,

    ಹೌದು, ಇತ್ತಿಚಿಗೆ “ಅವಳೆ” ಆವರಿಸುತ್ತಿದ್ದಾಳೆ ಬ್ಲಾಗ್ ಮನೆಯಲ್ಲಿ, ಬ್ಲಾಗಿಗನ ಮನದಲ್ಲಿ.

    “ಅವಳು” ಸಿಕ್ಕ ಮೇಲಾದರೂ ಸುಮ್ಮನೆ ನಮ್ಮನೆಯಲ್ಲಿರುತ್ತಾಳೆನೊ ನೋಡಬೇಕು.

    ಮತ್ತು ಬದುಕೇ ಹಾಗಲ್ವೆ “ಸ್ವಲ್ಪ ಹುಳೀ ಸ್ವಲ್ಪ ಸಿಹಿ”

    ಬರ್ತಾ ಇರಿ

    ಪ್ರೀತಿಯಿರಲಿ

    ಶೆಟ್ಟರು


Leave a Reply




a

Blog Stats

  • 7,973 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು