ನೀನು ಇಂದು ನನ್ನ ಬಿಟ್ಟು ಹೋಗುತ್ತಿರುವೆ ಎಂದು ನಿನ್ನ ಮೇಲೆ ಆಪಾದನೆ ಮಾಡಲಾರೆ ಏಕೆಂದರೆ “ಬಿಟ್ಟು ಬಂದವನು” ನಾನು. ಬದುಕನ್ನು ಎದುರಿಸುವ ಧೈರ್ಯವಿಲ್ಲದೇ, ಬದುಕನ್ನೇ ಅರ್ಧ ದಾರಿಗೆ ಬಿಟ್ಟು ಬಂದವನು ನಾನು.
ಗೆಳತಿ ನೀನಿಲ್ಲದ ಬದಕು ಇನ್ನು ಕೇವಲ Black and White ಆಗಿರುತ್ತದೆ ಎಂಬುದೇ ಈ ಬದುಕಿನ ಬಹುದೊಡ್ಡ ಕಷ್ಟವಾಗಿದೆ. ಒಂದನ್ನು ಗಮನಿಸಿದೆಯಾ, ನನಗಿನ್ನೂ “ಬದಕು” ಎಂಬ ಮೂರಕ್ಷರದ ಮೇಲಿನ ನನ್ನ ನಂಬಿಕೆ. ಯಾಕೆ ನನಗಿನ್ನೂ ಆ ನಂಬಿಕೆ ಇದೆಯೆಂದರೆ, ನೀನು ನನ್ನ ಬಾಳಲ್ಲಿ ಕಾಲಿಡುವುದಕ್ಕೂ ಮುಂಚೆ ಕೂಡ ಒಂದು ಬದುಕಿತ್ತು, ಅದು ಕೂಡಾ ಚೆನ್ನಾಗಿತ್ತು. ಆದರೆ ಹೀಗೆ ಕಲರ್-ಕಲರ್ ಆಗಿರಲಿಲ್ಲ ಅಷ್ಟೇ ಹೀಗಾಗಿ ಬದುಕು ಅಲ್ಲಿಗೆ ಮರಳಿ ಬಂದು ನಿಂತಿರದಿದ್ದರೂ, ಅಲ್ಲಿಗೇನೇ ಬಂದು ನಿಂತಿದೆ ಎಂದು ಮನಸ್ಸಿಗೆ ನಂಬಿಸಿದೆ. ಅಂತಹ ಹಲವಾರು ನಂಬಿಕೆಗಳ ಒಟ್ಟು ಮೊತ್ತವೆ ಬದುಕಲ್ಲವೇ? ಈಗ ನಿನ್ನ ಮನದಲ್ಲಿ ಅದೆಷ್ಟು ಹೊಸ ನಂಬಿಕೆಗಳೋ ಏನೋ?
ನೀನೇನೆ ಹೇಳು ಗೆಳತಿ, ಈ ಪ್ರೀತಿ, ಪ್ರೇಮ, ಆಣೆ, ಪ್ರಮಾಣಗಳೆಲ್ಲ ಬಾರಿ ಈ ಹುಚ್ಚು ಪ್ರೇಮಿಗಳ ಹುಚ್ಚಾಟಗಳು ಅನಿಸುವುದಿಲ್ಲವೇ? ಆದರೂ ಗೆಳತಿ ನನಗೆ ಈ ಪ್ರೀತಿಯ ಮೇಲಿನ ನಂಬಿಕೆ ಇನ್ನು ಹೋಗಿಲ್ಲ ಏಕೆಂದರೆ ನಮ್ಮೆಲ್ಲರ ಬದುಕಿನಲ್ಲಿ ಪ್ರೀತಿಸುವ ಜೀವಗಲೆಷ್ಟೋ ಅಲ್ಲವೇ? ಈ ಪ್ರೇಮದ ಹುಚ್ಚಿನಲ್ಲಿ ನಾವೆಲ್ಲ ಕೇವಲ ಒಂದು ಗಂಡು ಮತ್ತು ಹೆಣ್ಣಿನ ನಡುವೆ ಮಾತ್ರ “ಪ್ರೀತಿ” ಇರುವುದು ಎಂದು ನಂಬಿಬಿಟ್ಟಿದ್ದೇವೆ. ಆದರೆ ನಮ್ಮನ್ನು ನಮಗಿಂತ ಹೆಚ್ಚಾಗಿ ಪ್ರೀತಿಸುವ ಅವ್ವ-ಅಪ್ಪ, ಅಕ್ಕ-ತಂಗಿ, ಅಣ್ಣ – ತಮ್ಮ, ಅಜ್ಜ-ಅಜ್ಜಿ, ಕುಟುಂಬ ಇವರೆಲ್ಲರನ್ನೂ ನಾವು ಮರೆತಿದ್ದೆವು ಅಲ್ಲವೇ?
ಹೋಗಲಿ ಬಿಡು, ಮಾತುಗಳು ಎಲ್ಲಿಂದ ಎಲ್ಲಿಗೋ ಹೋದವು. ನೀನಿಗ ಹೊಸ ಬದುಕಿನ ಹೊಸ ಹಾದಿಯಲ್ಲಿರುವೆ. ನಿನಗೆ ಶುಭ ಹಾರೈಸಿ ಬೀಳ್ಕೊಡುವ ಸಡಗರ ನನಗಿರಲಿ ಗೆಳತಿ ನಿನ್ನ ಬಾಳು ಬಂಗಾರವಾಗಲಿ.
ಹುಡುಗಿ.. ಚೆಲುವಾಂತ ಚೆನ್ನಿಗಾರಾಯ ಕೈಯ ಹಿಡಿವನು
ನಿನ್ನ ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡುವನು….
ಗೆಳತಿ, ಇನ್ನೊಮ್ಮೆ ನಿನ್ನ ಬಾಳು ಬಂಗಾರವಾಗಲಿ. ನಿನ್ನ ಬದುಕು ತುಂಬಿ ನಿಂತ ಮುತ್ತಿನ ತೆನೇಯಾಗಲಿ. ನೀನು ನೆಡೆಯುವ ಹಾದಿ ನಗೆ ಹೂ ಹಾಸಲಿ ಇದೆ ನನ್ನ ಹಾರೈಕೆ. ಗೆಳತಿ ನಿನಗಾಗಿ ನಾನು ಇಷ್ಟೇ ಮಾಡಬಲ್ಲೆ ಜೊತೆಗೆ ನಿನಗೊಂದು ಭರವಸೆ ನೀಡಬಲ್ಲೆ, “ಪ್ರೀತಿಯ ಗೋರಿಯ ಮೇಲೆ ಸ್ನೇಹದ ಹುಲ್ಲು ಅರಳದು, ಅರಳುವುದಿಲ್ಲ”.
ಬರುತ್ತೇನೆ, ಇಲ್ಲ ಗೆಳತಿ ಹೋಗುತ್ತೇನೆ. ನಿನ್ನಿಂದ ದೂರ, ನಿನ್ನ ಬದುಕಿಗೆ ನನ್ನ ನೆರಳು ಕೂಡ ಸೋಕದ ಹಾಗೆ…


Recent Comments