ಇವತ್ತೇಕೋ ಮತ್ತೆ ಮತ್ತೆ ಅವೇ ದಿನಗಳು ನೆನಪಾಗುತ್ತಿವೆ. ಹೌದು ಆ ದಿನಗಳು ಯೂನಿವರ್ಸಿಟಿಯ ಪರೀಕ್ಷೆಯ ದಿನಗಳು। ನೀನು ಸಿಕ್ಕು ಸಿಗದಂತಿರುತ್ತಿದ್ದ ದಿನಗಳು, ನೀನೇಕೆ ಕೆಲವೊಮ್ಮೆ ನನಗೆ ನಾನೇ ಸಿಗುತ್ತಿರಲಿಲ್ಲ.
ಆ ಅಖಂಡ ಮೌನದ ಗ್ರಂಥಾಲಯ, ಯಾವಾಗಲೂ ಪಿಸುಗುಟ್ಟುತ್ತಿದ್ದ ಅದರ ಮೂಲೆಗಳು ಕೂಡಾ ಮೌನವಾಗುತ್ತಿದ್ದವು, ಹಳೆಯ ಪುಸ್ತಕದ ಪುಟಗಳು ಕೂಡಾ “ಚರಪರ್” ಸದ್ದು ಮಾಡಲು ಹೆದರುತ್ತಿವೆಯೇನೋ ಎಂದು ಅನಿಸುತ್ತಿತ್ತು. ಸದಾ “ಚಿಲೀಪಿಲೀ”ಗಿಟ್ಟು ತ್ತಿದ್ದ “ಬೋಟಾನಿಕಲ್” ಗಾರ್ಡನ್ ಕೊಡಾ ಉಸಿರು ಗಟ್ಟಿಹಿಡಿದು ಓದಲು ಕೂಡುತ್ತಿತ್ತು.
ಸದಾ ಹುಡುಗರ ಕೇಕೆ ಕೂಗುಗಳಿಂದ ಗಿಜಿಗುಟ್ಟುತ್ತಿದ್ದ ಹುಡುಗರ ಹಾಸ್ಟೆಲ್ ಕೂಡಾ “ಸುನಾಮಿ” ಬಂದು ಹೋದ ಊರಂತಾಗುತ್ತಿತ್ತು. ಗೆಳೆಯರೆಲ್ಲರೂ ಕೈಲ್ಲೊಂದು xerox ನೋಟ್ಸ ಹಿಡಿದು ಕಾರಿಡಾರಿನಲ್ಲಿ ತಿರುಗುತ್ತಾ, ಹೋದ ವರುಷಗಳ ಪ್ರಶ್ನೆಗಳನ್ನು ಮತ್ತೆ ಕೇಳೂವರೆಂದು ಪದೇ ಪದೇ ಅವನ್ನೇ ಓದುತ್ತಿದ್ದಾರೆ, ದಪ್ಪಗಾಜಿನ ಗೆಳೆಯರಂತೂ ರೂಮೆಲ್ಲ ಪುಸ್ತಕ ಹರಡಿಕೊಂಡು, ಅವುಗಳ ಮೇಲೆಯೇ ಕುಳಿತು ಓದುತ್ತಿದ್ದಾರೆ. Toilet ಗೆ ಹೋದರೆ ಟೈಮೆಲ್ಲಿ ವೆಸ್ಟಾಗುತ್ತೋ ಎಂದು ಹೆದರಿ ಎಷ್ಟೋ ಹೊತ್ತಿನವರೆಗೂ ಹಿಡಿದಿಟ್ಟುಕೊಳ್ಳುತ್ತಿದ್ದಾರೆ.
ಸಾಯಾಂಕಾಲವಾದರೆ ಸಾಕು “ಲೇಡಿಜ್ ಹಾಸ್ಟೆಲಿ”ನ ಹಿಂದೆ-ಮುಂದೆ ಸುತ್ತುತ್ತಿದ್ದವರೆಲ್ಲ ಅವರಿವರನ್ನು ಕಾಡಿ-ಬೇಡಿ ನೋಟ್ಸ್ ಇಸೀದುಕೊಂಡು xerox ಮಾಡಿಸಿ “ಯುದ್ದಕಾಲೆ ಸಮರಾಭ್ಯಾಸ”ಕ್ಕೆ ತಯಾರಾಗುತ್ತಿದ್ದಾರೆ.
ಯಾರ ಮುಖದಲ್ಲಿಯೂ ಜೀವ ಕಳೆಯೇ ಇಲ್ಲ. ಯೂನಿವರ್ಸಿಟಿ ಎಂಬುದು “ಸೂತಕದ ಮನೆ”ಯಾಗುತ್ತಿತ್ತು. ಆದರೂ ಆ ದಿನಗಳು ಎಷ್ಟೊಂದು ಛoದವಲ್ಲವೇ?

0 Responses to “ಯೂನಿವರ್ಸಿಟಿ ಎಂಬ “ಸೂತಕದ ಮನೆ””