ಪ್ರೀತಿ ಇದ್ದರೆ ಸಾಕೆ,
ಹೋಗಲು ಬೇಕು ಪಾರ್ಕು
ಪಾರ್ಕಿಗೆ ಹೋಗಲು ಬೈಕು
ಪ್ರೀತಿ ಮಾಡೋಕೆ…
ಅವಳು ಕೂಡಲು ನಿನ್ನ ಪಕ್ಕ
ನಿನ್ನ ಬಳಿಯಿರಬೇಕು ರೊಕ್ಕ,
ಆಯಿಸ್ಕ್ರೀಮ ತಿನ್ನಿಸಬೇಕು
ಹೇಳಿದು ಕೇಳಲುಬೇಕು,
ಪ್ರೀತಿ ಮಾಡೋಕೆ…
ನಿನ್ನ ಗೆಳೆಯರು ತುಂಬ ಕೆಟ್ಟ
ಜೋತೆಗಿರಬೇಡ ಒಟ್ಟ,
ಅವಳ ಗೆಳತಿಯರು ತುಂಬ ಇಷ್ಟ
ಹೊಗಳಲು ಬೇಡ ಕಷ್ಟ,
ಪ್ರೀತಿ ಮಾಡೋಕೆ…
ಪ್ರೀತಿ ಇದ್ದರೆ ಸಾಕೆ,
ಜೊತೆಗಿರಬೇಕು ಮೊಬೈಲ
ಅವಳದೆ ಬರಿ ಮಿಸ್ ಕಾಲ
ಪ್ರೀತಿ ಮಾಡೋಕೆ…
ಟಿಪ್ಪಣಿ: ಯಾಕೋ ಬೆಳಿಗ್ಗೆಯಿಂದ ಬಿಟ್ಟು ಬಿಡದೆ ಈ ಕೆಳಗಿನ ಸಾಲುಗಳು ಮನದಲ್ಲೆ ಸುಳಿದಾಡುತ್ತಿದ್ದವು ,
“ರೆಕ್ಕೆ ಇದ್ದರೆ ಸಾಕೆ,
ಹಕ್ಕಿಗೆ ಬೇಕು ಬಾನು,
ಬಾನಲಿ ತೇಲುತ ತಾನು,
ಮೇಲೆ ಹಾರೋಕೆ…” (ಚಿನ್ನಾರಿ ಮುತ್ತ, ನಿರ್ದೆಶನ: ನಾಗತಿಹಳ್ಳಿ ಚಂದ್ರಶೇಖರ)
ಸುಮ್ಮನೆ ಪದಕ್ಕೆ ಪದ ಹಾಡಿಗೆ ತಕ್ಕಂತೆ (ಅದರ ಲಯಕ್ಕೆ ತಕ್ಕಂತೆ) ಜೋಡಿಸುತ್ತಾ ಹೋದಾಗ ಸಿಕ್ಕಿದ್ದು ಈ ಮೇಲಿನ ಸಾಲುಗಳು. ಹಾಗೆ ಸುಮ್ಮನೆ…!!!

ಶೆಟ್ಟರೆ ಅನುಭವ ಭಾಳ ಇರುವಂತಿದೆ..
ಸಂತೋಷರ ಎಲ್ಲಾ ನಿಮ್ಮ ಮನೋಜನ ಟ್ಯೂಷನ್ನಿನ ಪ್ರಭಾವ
ಶೆಟ್ಟರು