ಗೆಳತಿ..ನಿನಗಿದೋ ನನ್ನ ವಿದಾಯ

ನನ್ನ ಬಾಳ ಕಥೆಯ ಮುನ್ನುಡಿಯೇ,

ನೀನು ಇಂದು ನನ್ನ ಬಿಟ್ಟು ಹೋಗುತ್ತಿರುವೆ ಎಂದು ನಿನ್ನ ಮೇಲೆ ಆಪಾದನೆ ಮಾಡಲಾರೆ ಏಕೆಂದರೆ “ಬಿಟ್ಟು ಬಂದವನು” ನಾನು. ಬದುಕನ್ನು ಎದುರಿಸುವ ಧೈರ್ಯವಿಲ್ಲದೇ, ಬದುಕನ್ನೇ ಅರ್ಧ ದಾರಿಗೆ ಬಿಟ್ಟು ಬಂದವನು ನಾನು.

ಗೆಳತಿ ನೀನಿಲ್ಲದ ಬದಕು ಇನ್ನು ಕೇವಲ Black and White ಆಗಿರುತ್ತದೆ ಎಂಬುದೇ ಈ ಬದುಕಿನ ಬಹುದೊಡ್ಡ ಕಷ್ಟವಾಗಿದೆ. ಒಂದನ್ನು ಗಮನಿಸಿದೆಯಾ, ನನಗಿನ್ನೂ “ಬದಕು” ಎಂಬ ಮೂರಕ್ಷರದ ಮೇಲಿನ ನನ್ನ ನಂಬಿಕೆ. ಯಾಕೆ ನನಗಿನ್ನೂ ಆ ನಂಬಿಕೆ ಇದೆಯೆಂದರೆ, ನೀನು ನನ್ನ ಬಾಳಲ್ಲಿ ಕಾಲಿಡುವುದಕ್ಕೂ ಮುಂಚೆ ಕೂಡ ಒಂದು ಬದುಕಿತ್ತು, ಅದು ಕೂಡಾ ಚೆನ್ನಾಗಿತ್ತು. ಆದರೆ ಹೀಗೆ ಕಲರ್-ಕಲರ್ ಆಗಿರಲಿಲ್ಲ ಅಷ್ಟೇ ಹೀಗಾಗಿ ಬದುಕು ಅಲ್ಲಿಗೆ ಮರಳಿ ಬಂದು ನಿಂತಿರದಿದ್ದರೂ, ಅಲ್ಲಿಗೇನೇ ಬಂದು ನಿಂತಿದೆ ಎಂದು ಮನಸ್ಸಿಗೆ ನಂಬಿಸಿದೆ. ಅಂತಹ ಹಲವಾರು ನಂಬಿಕೆಗಳ ಒಟ್ಟು ಮೊತ್ತವೆ ಬದುಕಲ್ಲವೇ? ಈಗ ನಿನ್ನ ಮನದಲ್ಲಿ ಅದೆಷ್ಟು ಹೊಸ ನಂಬಿಕೆಗಳೋ ಏನೋ?

ನೀನೇನೆ ಹೇಳು ಗೆಳತಿ, ಈ ಪ್ರೀತಿ, ಪ್ರೇಮ, ಆಣೆ, ಪ್ರಮಾಣಗಳೆಲ್ಲ ಬಾರಿ ಈ ಹುಚ್ಚು ಪ್ರೇಮಿಗಳ ಹುಚ್ಚಾಟಗಳು ಅನಿಸುವುದಿಲ್ಲವೇ? ಆದರೂ ಗೆಳತಿ ನನಗೆ ಈ ಪ್ರೀತಿಯ ಮೇಲಿನ ನಂಬಿಕೆ ಇನ್ನು ಹೋಗಿಲ್ಲ ಏಕೆಂದರೆ ನಮ್ಮೆಲ್ಲರ ಬದುಕಿನಲ್ಲಿ ಪ್ರೀತಿಸುವ ಜೀವಗಲೆಷ್ಟೋ ಅಲ್ಲವೇ? ಈ ಪ್ರೇಮದ ಹುಚ್ಚಿನಲ್ಲಿ ನಾವೆಲ್ಲ ಕೇವಲ ಒಂದು ಗಂಡು ಮತ್ತು ಹೆಣ್ಣಿನ ನಡುವೆ ಮಾತ್ರ “ಪ್ರೀತಿ” ಇರುವುದು ಎಂದು ನಂಬಿಬಿಟ್ಟಿದ್ದೇವೆ. ಆದರೆ ನಮ್ಮನ್ನು ನಮಗಿಂತ ಹೆಚ್ಚಾಗಿ ಪ್ರೀತಿಸುವ ಅವ್ವ-ಅಪ್ಪ, ಅಕ್ಕ-ತಂಗಿ, ಅಣ್ಣ – ತಮ್ಮ, ಅಜ್ಜ-ಅಜ್ಜಿ, ಕುಟುಂಬ ಇವರೆಲ್ಲರನ್ನೂ ನಾವು ಮರೆತಿದ್ದೆವು ಅಲ್ಲವೇ?

ಹೋಗಲಿ ಬಿಡು, ಮಾತುಗಳು ಎಲ್ಲಿಂದ ಎಲ್ಲಿಗೋ ಹೋದವು. ನೀನಿಗ ಹೊಸ ಬದುಕಿನ ಹೊಸ ಹಾದಿಯಲ್ಲಿರುವೆ. ನಿನಗೆ ಶುಭ ಹಾರೈಸಿ ಬೀಳ್ಕೊಡುವ ಸಡಗರ ನನಗಿರಲಿ ಗೆಳತಿ ನಿನ್ನ ಬಾಳು ಬಂಗಾರವಾಗಲಿ.

ಹುಡುಗಿ.. ಚೆಲುವಾಂತ ಚೆನ್ನಿಗಾರಾಯ ಕೈಯ ಹಿಡಿವನು
ನಿನ್ನ ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡುವನು….

ಗೆಳತಿ, ಇನ್ನೊಮ್ಮೆ ನಿನ್ನ ಬಾಳು ಬಂಗಾರವಾಗಲಿ. ನಿನ್ನ ಬದುಕು ತುಂಬಿ ನಿಂತ ಮುತ್ತಿನ ತೆನೇಯಾಗಲಿ. ನೀನು ನೆಡೆಯುವ ಹಾದಿ ನಗೆ ಹೂ ಹಾಸಲಿ ಇದೆ ನನ್ನ ಹಾರೈಕೆ. ಗೆಳತಿ ನಿನಗಾಗಿ ನಾನು ಇಷ್ಟೇ ಮಾಡಬಲ್ಲೆ ಜೊತೆಗೆ ನಿನಗೊಂದು ಭರವಸೆ ನೀಡಬಲ್ಲೆ, “ಪ್ರೀತಿಯ ಗೋರಿಯ ಮೇಲೆ ಸ್ನೇಹದ ಹುಲ್ಲು ಅರಳದು, ಅರಳುವುದಿಲ್ಲ”.

ಬರುತ್ತೇನೆ, ಇಲ್ಲ ಗೆಳತಿ ಹೋಗುತ್ತೇನೆ. ನಿನ್ನಿಂದ ದೂರ, ನಿನ್ನ ಬದುಕಿಗೆ ನನ್ನ ನೆರಳು ಕೂಡ ಸೋಕದ ಹಾಗೆ…

8 Responses to “ಗೆಳತಿ..ನಿನಗಿದೋ ನನ್ನ ವಿದಾಯ”


  1. 1 chetana chaitanya May 23, 2008 at 5:46 pm

    ಪ್ರೀತಿಯ ಗೋರಿ ಮೇಲೆ ಸ್ನೇಹದ ಹುಲ್ಲು (ಹೂವು?) ಅರಳದು. ತೀರ ನಿಜದ ಸಾಲು.
    ್ಅಂದಹಾಗೆ, ಹೊಸ ಲುಕ್ ಚೆನ್ನಾಗಿದೆ.
    - ಚೇತನಾ

  2. 2 ಶೆಟ್ಟರು (Shettaru) May 24, 2008 at 3:03 pm

    ಚೇತನಾ,

    ನ್ಯೂ ಲುಕ್ಕಗೆ ನೀವೇ ಸ್ಪೂರ್ತಿ…ಆದರೂ ಥ್ಯಾಂಕ್ಸ್,

    ಮತ್ತು “ಪ್ರೀತಿಯ ಗೋರಿಯ ಮೇಲೆ ಸ್ನೇಹದ ಹುಲ್ಲು ಅರಳದು” ಈ ಸಾಲು ಕಡ ತಂದದ್ದು ರವಿ ಬೆಳೆಗೆರೆಯಿಂದ.
    ನಿಮ್ಮ ಮೆಚ್ಚುಗೆ ಅವರನ್ನು ತಲುಪಲಿ, ಸಾಲು ನಿಮಗೆ ತಲುಪಿಸಿದ ಸುಖ ಮಾತ್ರ ನನ್ನದಾಗಲಿ.

    ಪ್ರೀತಿಯಿಂದ

    ಶೆಟ್ಟರು

  3. 3 vikas hegde May 27, 2008 at 1:55 pm

    ನೀವು ಭಗ್ನ ಪ್ರೇಮಿಯಾ ಅಂತ ನಂಗೆ ಸುಮ್ಸುಮ್ನೇ ಡೌಟು ಯಾಕ್ ಬಂತು ಅಂತ ಗೊತ್ತಾಗ್ತಿಲ್ಲ ! :)

  4. 4 ಶೆಟ್ಟರು (Shettaru) May 27, 2008 at 5:16 pm

    ಅಯ್ಯೋ ಶಿವನೇ…ಇದೊಂದು ಬಿರುದು ಕಡಿಮೆಯಾಗಿತ್ತು…!!!:o

  5. 5 gubbacchi May 28, 2008 at 3:33 pm

    ಅಂತು ಇಂತು ಶೆಟ್ಟರು ಗೆಳತಿಗೆ ವಿದಾಯ ಹೇಳೀಯೆಬಿಟ್ಟರು ……… :P

    -ಅಮರ

  6. 6 chitra May 28, 2008 at 6:40 pm

    Registration- Seminar on the ocassion of KSC’s 8th year Celebration

    On the occasion of 8th year celebration of Kannada saahithya.com we are arranging one day seminar at Christ college.

    As seats are limited interested participants are requested to register at below link.

    Please note Registration is compulsory to attend the seminar.

    If time permits informal bloggers meet will be held at the same venue after the seminar.

    For further details and registration click on below link.

    http://saadhaara.com/events/index/english

    http://saadhaara.com/events/index/kannada

    Please do come and forward the same to your like minded friends

  7. 7 ಸಂತೋಷಕುಮಾರ May 29, 2008 at 6:29 pm

    ಶೆಟ್ಟರೆ ಅರ್ಥವಾಯಿತು ಬಿಡಿ. ನೀವು ಆ ಕೇಸೆ…

  8. 8 ಶೆಟ್ಟರು (Shettaru) May 30, 2008 at 9:50 am

    ಆದಷ್ಟು ಜಲ್ದಿ ಬ್ಯಾರೆ ಎನರ ಬರಿಬೇಕಪಾ ಯಪ್ಪಾ…! ಇಲ್ಲಾಂದ್ರ ಗೆಳ್ಯಾರೆಲ್ಲಾ ಸೇರಿ ನನ್ನ ಕರಿಯರ್ (ಮದುವೆ, ಮಡದಿ, ಮಕ್ಕಳು) ಹಾಳ ಮಾಡಿಬಿಡ್ತಾರ್ರಿ.


Leave a Reply




a

Blog Stats

  • 7,920 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು