ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು
ಜಿತೇಂದ್ರ
ಮಂಗಳವಾರ, 8 ಜುಲೈ 2008 (10:11 IST)
ಶೆಟ್ಟರ ಒಂದಿಷ್ಟು ಕನಸುಗಳು
‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ.
ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.
ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.
ನಿಮ್ಮ ಕನಸು ನನಸಾಗಲಿ ಎಂದು ಹಾರೈಸುತ್ತೇನೆ
ಕಾಕಾ,
ನಾನು ೨ ವರ್ಷ ಧಾರವಾಡದಲ್ಲಿದ್ದಾಗ ಮನಸ್ಸಿಗೆ ಬೇಜಾರಾದಾಗ ಪಾವಟೆನಗರದಿಂದ ಸಾಧನಕೇರಿಗೆ ಹೋಗಿ ಅಡ್ಡಾಡಿ ಬರುತ್ತಿದ್ದೆ (ಬೇಂದ್ರೆ, ಜೋಶಿ ಅವರಿದ್ದ ಜಾಗವಲ್ಲವೆ, ಪುಣ್ಯಕ್ಷೇತ್ರ). ಮುಂಬಯಿಗೆ ಬಂದ ಮೇಲೆ ಆ ಅವಕಾಶವನ್ನು ಕಳೆದುಕೊಂಡಿದ್ದೆ, ನೀವು ಬ್ಲಾಗನ್ನು ಶುರು ಮಾಡಿದ ಮೇಲೆ ನಿಮ್ಮ ಬ್ಲಾಗ ನನ್ನ ಸಾಧನಕೇರಿಯಾಗಿದೆ. ನನ್ನ ಬ್ಲಾಗರೊಲಿನಲ್ಲಿ ನಿಮ್ಮ ಬ್ಲಾಗನ್ನು “ಬಾರೊ ಸಾಧನಕೇರಿಗೆ” ಎಂದು ಹೇಸರಿಸಿದ್ದೆನೆ.
ನೀವು ನನ್ನ ಬ್ಲಾಗನ್ನು ಕಣ್ಣಾಡಿಸಿದ್ದು ಮತ್ತು ಕಮೇಂಟಿಸಿದ್ದು ನಿಜಕ್ಕೂ ನನ್ನ ಸೌಭಾಗ್ಯ.
ನಮ್ಮ ಆಫಿಸಿನಲ್ಲಿ “ಬ್ಲಾಗಸ್ಪಾಟ”ನ್ನು ಬ್ಲಾಕ ಮಾಡಿದ್ದಾರೆ, ಆದರೆ ಪ್ರತಿ ಶನಿವಾರ ನಿಮ್ಮ ಬ್ಲಾಗನ್ನು ಭೇಟಿಯಾಗುವುದನ್ನು ತಪ್ಪಿಸುವುದಿಲ್ಲ. ನಿಮ್ಮ ಲೇಖನಗಳು ನಮ್ಮಂತ ಹುಡುಗರನ್ನು ಒಳ್ಳೆಯ ಚಿಂತನೆ ನೀಡುತ್ತಿವೆ.
ಪ್ರೀತಿಯಿರಲಿ
ಶೆಟ್ಟರು
ಏನು ಶೆಟ್ರು ಪೂರಾ ಲಹರಿಯ ಚಿತ್ತದಲ್ಲಿರುವ ಹಾಗಿದೆ… ಎಲ್ಲಾ ಕವನ ಲೇಖನಗಳಲ್ಲಿಯೂ ತಮ್ಮ ಮೂಡ್ ಎದ್ದು ಕಾಣುತ್ತಿದೆ
“ಆಷಾಡ ಗಾಳಿ ಬೀಸಿ ಕುಣಿದಾವ ಹುಡುಗನ ಮೀಸಿ”
ನೀವೇ ಹೇಳಿದಂತೆ ” ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ”