ಒಮ್ಮೆ ನೀನು…

ಒಮ್ಮೆ ನೀನು ನಕ್ಕುಬಿಡು
ನನ್ನ ನೋಡಿ ಸುಮ್ಮನೇ…
ಕಳೆದು ಹೋಗಲೊಂದು ಬದುಕು
ಅದರ ಒಂದು ನೆನಪಲೇ…

6 Responses to “ಒಮ್ಮೆ ನೀನು…”


  1. 1 sunaath June 24, 2008 at 11:52 pm

    ಶೆಟ್ಟರ,
    ಚುಟುಕು ಭಾವಪೂರ್ಣ ಅದ. ಆ picture ಸುದ್ದಾ ಭಾಳ ಒಪ್ಪತದ ನೋಡ್ರಿ.

  2. 2 ಶೆಟ್ಟರು (Shettaru) June 25, 2008 at 8:48 am

    ಕಾಕಾ,

    ತಮ್ಮ ಮೆಚ್ಚುಗೆಗೆ ನಾನು ಆಭಾರಿ…

    ಪ್ರೀತಿಯಿರಲಿ

    ಶೆಟ್ಟರು

  3. 3 ಮಾರುತಿ June 25, 2008 at 1:03 pm

    ಬರೆ ಕಿವಿ ಮ್ಯಾಗ ಹೂ ಇಡುವಂಗ, ಹುಡಿಗ್ಯಾರು ಹಾಕೂ ಸಣ್ಣ ಟಾಪನಂಗ ಸಣ್ಣು ಕವನ-ಚುಟುಕ ಬರಿತಾನ ಅದಿಯಲ, ಒಂದ ಮಸ್ತನ ಕಥಿ ಬರಿಯೊ ಮಾರಾಯಾ, ಜಲ್ದಿ.

    ಗೆಳೆಯ
    ಮಾರುತಿ

  4. 4 ಶೆಟ್ಟರು (Shettaru) June 27, 2008 at 1:39 pm

    ಆಯಿತ್ರಿ ಸರ್,

    ಇನ್ನ ಮ್ಯಾಲೆ ನೀವು ಹಾಕೂ ಬರ್ಮೋಡದಂಥಾ ದೊಡ್ಡು ಕಥಿ ಬರಿಯೂಣ್ರಿ.
    Just Kidding…

    ಪ್ರೀತಿಯಿರಲಿ
    ಶೆಟ್ಟರು

  5. 5 navada July 21, 2008 at 3:53 pm

    ಶೆಟ್ಟರೇ,
    ನಿಮ್ಮ ಮಳೆಯ ನೆನಪನ್ನೂ ಓದಿದೆ. ಜತೆಗೆ ಮುಂಬಯಿ ಕಥೆ ಕಹಾನಿಯೂ ಸಹ. ನಿಜವಾಗಲೂ ನಾವು ನಗರದ ಯಾಂತ್ರಿಕತೆಯನ್ನೇ ಬೈದುಕೊಳ್ಳುತ್ತಲೇ ಅದರೊಳಗಿರುವ ಬದುಕು ಕಟ್ಟಿಕೊಡುವ ಸ್ವಭಾವವನ್ನು ಮೆಚ್ಚಬೇಕೆನಿಸುತ್ತದೆ. ಮುಂಬಯಿಯಂಥ ಮಹಾನಗರಗಳು ಎಷ್ಟೋ ಮಂದಿಗೆ ಬದುಕು ಕೊಟ್ಟಿದೆ. ಅದನ್ನು ಅಲ್ಲಗಳೆಯುವಂತಿಲ್ಲ. ನಿಮ್ಮ ಕಹಾನಿ ಬರೆಯುತ್ತಾ ಹೋಗಿ. ನಾವು ಓದುತ್ತಾ ಹೋಗುತ್ತೇವೆ.
    ಧನ್ಯವಾದಗಳೊಂದಿಗೆ ನಾವಡ

  6. 6 ಶೆಟ್ಟರು (Shettaru) July 28, 2008 at 9:31 am

    ನಾವಡರೆ,

    ನಿಮ್ಮ ಮಾತುಗಳು ಎಷ್ಟೊಂದು ನಿಜ…!!!!!!!!!!!!!
    ಕೆಲವೊಮ್ಮೆ ಬೇಕಾಗಿಯೋ, ಬೇಡದೆಯೋ ಬಂದಂತೆ ಬದುಕಬೇಕಾಗುವ ನಮ್ಮ ಅವಶ್ಯಕತೆಳೂ ಕೂಡಾ ಅಷ್ಟೆ ಕಾರಣವಲ್ಲವೇ?

    -ಶೆಟ್ಟರು


Leave a Reply




a

Blog Stats

  • 7,920 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು