ಮುಂಬಯಿ, ಬರಿ ಮುಖವಾಡ ಮತ್ತು ಮಾನವಿಯತೆ ಇಲ್ಲಿ ಪವಾಡ…!!!

ಮುಂಬಯಿ ಕಥೆ-ಕಹಾನಿ

ಮುಂಬಯಿ ಭಾರತದ ಮಾಯಾನಗರಿ, ಕನಸುಗಳ ನಗರಿ, ಕನಸು ಮಾರುವ ನಗರಿ. ಮಂಬಯಿ ಉಗ್ರರಿಗೆ ಮೊದಲ ಗುರಿ, ಭೂಗತದೊರೆಗಳಿಗೆ ಜನ್ಮಭೂಮಿ, ಅಶ್ರಯನಗರಿ. ಎಂದೂ ನಿಲ್ಲದ ನಗರಿ, ಯಾರಿಗೂ ಕಾಯದ ನಗರಿ. “ಮುಂಬಯಿ ಬರಿ ಮುಖವಾಡ ಮತ್ತು ಮಾನವಿಯತೆ ಇಲ್ಲಿ ಪವಾಡ”

ಇದಿಷ್ಟು ನಾನು ಮುಂಬಯಿಗೆ ಅನ್ನ-ನೀರು ಅರಸಿ ಬರುವಾಗ ಗೆಳೆಯರು-ಹಿತೈಶಿಗಳು-ಹಿರಿಯರು ಹೇಳಿದ್ದು ಮತ್ತೂ ನಾನು ತಿಳಿದದ್ದು ಅಷ್ಟೆ. ಈ ತಿಂಗಳ ೩೦ಕ್ಕೆ ನನ್ನ ಮುಂಬಯಿ ಬದುಕಿಗೆ ೩ ವರ್ಷ ಕಳೆದು, ನಾಲ್ಕನೇ ವರ್ಷಕ್ಕೆ ಕಾಲಿಡುತ್ತದೆ. ಬರುವಾಗಿದ್ದ ಆತಂಕ-ಭಯಗಳ ಜಾಗದಲ್ಲಿ ಮುಂಬಯಿಯ ಬಗ್ಗೆ ಹೆಮ್ಮೆ-ಗೌರವಗಳಿವೆ.

ಕವಿ ಕಾಯ್ಕಿಣಿ ಹೇಳಿದಂತೆ “ಕಾಯಕದ ಕೈಲಾಸ” ಮುಂಬಯಿ, ಈಗ ನನ್ನ ಕಾಯಕದ ಕೈಲಾಸವೂ ಹೌದು. ಮುಂಬಯಿಗೆ ಕಾಲಿಟ್ಟ ಈ ಮೂರು ವರ್ಷಗಳಲ್ಲಿ ಮುಂಬಯಿಯ ಅತ್ಯಂತ ಕರಾಳ ಮಳೆಯನ್ನು, ಲೋಕಲಗಳಲ್ಲಾದ ಬಾಂಬ ಸರಣಿ ದುರಂತವನ್ನು ನೋಡಿದ್ದೆನೆ, ಹಾಗೆಯೇ ಮುಂಬೈಕರಗಳ ಮಾನವಿಯ ಮುಖವನ್ನು ಕೂಡ. ಅಂತೆಯೇ ಮುಂಬಯಿಯನ್ನು ಕಾಡುತ್ತಿರುವ ಭೂಗತಲೋಕ, ಮರಾಠಿ ಮಾನುಸ ವಿಚಾರ, ಹಿಂದಿ ಚಿತ್ರೊದ್ಯಮ ಮತ್ತು ಅವರೊಳಗಿನ ಗಾಸಿಪ್ಪುಗಳು, ಹಾಜಿ ಅಲಿ-ಸಿದ್ಧಿವಿನಾಯಕರ ಸುದ್ದಿಗಳು, ಮುಂಬಯಿನ ಲೋಕಲ್ಲು ಮತ್ತು ಅದರ ಹಳಿಗಳೊಂದಿಗೆ ಸಾಗುವ ಬದುಕು, ಕನಸು ಅರಸಿ ಬಂದವರು ಮತ್ತು ಕನಸು ಕಳೆದುಕೊಂಡವರು, ವನ-ರೂಮ ಕಿಚನ್ನಲ್ಲಿ ಬದುಕುವ ಬವಣೆ, ಮನೆಯೊಳಗೆ ಹೇಲಿಕ್ಯಾಪ್ಟರನ್ನು ಇಳಿಸುವ ಅಂಬಾನಿ, ಇವರೊಂದಿಗೆನೆ ಬದುಕುವ ಎಶಿಯಾದ ದೊಡ್ಡ ಸ್ಲಮ್ “ಧಾರಾವಿ” ಮತ್ತದರ ತಮ್ಮಂದಿರು, ಕೊಟ್ಯಾಧಿಪತಿ ಭಿಕ್ಷುಕರು ಮತ್ತು ಅವರನ್ನು ತಯಾರಿಸುವ ಕಾರಖಾನೆಗಳು, ಮುಂಬಯಿಯ ಮಳೆ ಮತ್ತು ಅದು ಹುಟ್ಟಿಸುವ ಮಾನವಿಯತೆ, ಒಟ್ಟಿನಲ್ಲಿ ಮುಂಬಯಿ ಮತ್ತು ಮುಂಬೈಕರಗಳ ಇನ್ನು ಅನೇಕ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಾಗಿದೆ. ಹೀಗಾಗಿ ನನ್ನದೊಂದು ಸಣ್ಣ ಪ್ರಯತ್ನ “ಮುಂಬಯಿ: ಕಥೆ-ಕಹಾನಿ”, ಇದನ್ನು ಅಂಕಣವೆನಬೇಕೊ, ನನ್ನ ಅನುಭವವೇನಬೇಕೊ, ಇಲ್ಲ ಮುಂಬಯಿ ಬಗ್ಗೆ ಒಂದು ನ್ಯೂಜ್ ಎನ್ನಬೇಕೂ ಅದನ್ನು ನೀವೆ ನಿರ್ಧರಿಸಿ.

ನನಗಿದು ನನ್ನ “ಕಾಯಕದ ಕೈಲಾಸ”ವನ್ನು ಇನ್ನಷ್ಟು ಅರಿತುಕೊಳ್ಳುವ ಒಂದು ಸಣ್ಣ ಪ್ರಯತ್ನ. ನಿಮ್ಮ ಬೆಂಬಲವಿರಲಿ.

5 Responses to “ಮುಂಬಯಿ, ಬರಿ ಮುಖವಾಡ ಮತ್ತು ಮಾನವಿಯತೆ ಇಲ್ಲಿ ಪವಾಡ…!!!”


  1. 1 ಸುಶ್ರುತ ದೊಡ್ಡೇರಿ June 27, 2008 at 3:33 pm

    ಕಾಯ್ಕಿಣಿ, ಬಲ್ಲಾಳ, ಚಿತ್ತಾಲರು ಮುಂಬೈಯಲ್ಲಿ ತಂಗಿ, ಅದರ ಬಗ್ಗೆ ಬರೆದು ಕನ್ನಡಿಗರಿಗೆ ಮುಂಬೈಗೊಂದು ಕೈಗನ್ನಡಿಯಂತಾಗಿದ್ದರು. ಈಗ ನೀವೂ ಆ ಗುಂಪು ಸೇರುತ್ತೀರಾದರೆ, ಶುಭವಾಗಲಿ ಮತ್ತೆ!

  2. 2 ಬಾಲ June 27, 2008 at 9:33 pm

    ನೀವು ಮುಂಬಯಿಯವರಾಗಿದ್ದೂ, ಮುಂಬಯಿಬಗ್ಗೆ ಹೆಚ್ಚು ಬರೆಯುತ್ತಿರಲಿಲ್ಲವಲ್ಲಾ ಎನಿಸಿತ್ತು, ನಿಮ್ಮ “ಮುಂಬಯಿ: ಕಥೆ-ಕಹಾನಿ” ಶುರುವಿನೊಂದಿಗೆ ಆ ಪ್ರಶ್ನೆಗೆ ಉತ್ತರ ಸಿಕ್ಕಿದಂತಾಗಿದೆ.

  3. 3 ಶೆಟ್ಟರು (Shettaru) July 8, 2008 at 10:05 am

    ಸುಶ್ರುತ ಮತ್ತು ಬಾಲ,

    ನಿಮ್ಮ ಹಾರೈಕೆಗೆ ಧನ್ಯವಾದಗಳು, ಹೀಗೆ ಬರುತ್ತಿರಿ.

    ಪ್ರೀತಿಯಿರಲಿ
    ಶೆಟ್ಟರು

  4. 4 ವಿಕಾಸ್ ಹಗಡೆ July 17, 2008 at 9:58 am

    ಶೆಟ್ಟರೇ, ನಿನ್ನೆಯಷ್ಟೆ ಜಯಂತ ಕಾಯ್ಕಿಣಿಯವರು ಕಟ್ಟಿಕೊಟ್ಟ ಮುಂಬೈ ಚಿತ್ರಣವೊಂದಿಷ್ಟನ್ನು ಓದಿದೆ.
    ಈಗ ನಿಮ್ಮ ಕಥೆ, ಕಹಾನಿ ಓದುವ ಅವಕಾಶ ಬಂದಿದೆ. ಕುತೂಹಲ ಮೂಡಿಸುತ್ತಿದೆ.

  5. 5 ಶೆಟ್ಟರು (Shettaru) July 25, 2008 at 5:28 pm

    ನನ್ನ ಪ್ರಯತ್ನ ನಿಮಗೆ ಹಿಡಿಸಿದರೆ, ಅಹಂ ಧನ್ಯೊಸ್ಮಿ


Leave a Reply




a

ಕನ್ನಡ ಹನಿಗಳು

Blog Stats

  • 6,231 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.