ಇವತ್ತ್ಯಾಕೋ ಬೆಳಿಗ್ಗೆಯಿಂದ ಮನಸ್ಸಿಗೇನೊ ಕಸಿವಿಸಿ, ಎನೋ ಕಳೆದುಕೊಂಡಂತೆ ಭಾವ, ಯಾರೊ ಒಬ್ಬಂಟಿಯಾಗಿ ನನ್ನನ್ನು ಬಿಟ್ಟುಹೋದಂತ ಭಯ ಎಲ್ಲವೂ ಸೇರಿ ನನ್ನನ್ನು ಖಿನ್ನತೆಗಿಡು ಮಾಡಿ ಇಡಿ ದಿನ ಕಳ್ಕೊಂಬಿಡ್ತಿನಿ ಅನ್ನಿಸಿಬಿಟ್ಟಿತ್ತು. ಹೀಗೆ ಅನ್ನಿಸುತ್ತಿದ್ದಾಗ ಸಮಯ ಬರಿ ಬೆಳಗಿನ ೭:೪೫, ಕೆಲವೊಬ್ಬರಿಗೆ (ಬೇರೆ ಯಾರಿಗೊ ಯಾಕೆ, ನನ್ನ ರೂಮ್ ಮೇಟಗೆ) ಇನ್ನು ಬೆಳಕಾಗಿರುವುದಿಲ್ಲ. ಆಗಲೆ ನನಗೆ ಜೀವನವೇ ಬೇಜಾರಾದಂತೆ, ಈ ದಿನ ಯಾಕೋ ನನಗೆ ಸರಿಯಿಲ್ಲವೆಂಬಂತೆ ಅನ್ನಿಸತೋಡಗಿದ್ದು ಸುಳ್ಳಲ್ಲ.
ಆಫಿಸಿಗೆ ಹೋಗುವಾಗ-ಬರುವಾಗ ದಿನದ ಅರ್ಧ ಸಮಯ ಮುಂಬಯಿ ಟ್ರಾಫಿಕ್ಕಿನಲ್ಲಿ ಕಳೆಯುವ ನನಗೆ ಈ ವಾಹನಗಳ ಭಾಷೆ ತಿಳೀಯಲಾರಂಭಿಸಿ ತುಸು ವರ್ಷಗಳೆ ಅದವು. ವಾಹನ ಚಾಲಕರ (ಕನ್ನಡದಲ್ಲಿ ಅಯ್ ಮೀನ್ “ಡ್ರೈವರ್”) ಮನಸ್ಸಿನ ಭಾವನೆಗಳನ್ನು “ಭಕೂಬಿ” i.e. ಯಥಾವತ್ತಾಗಿ ಪ್ರಕಟಿಸುತ್ತವೆ ಎಂಬುದು ಎಲ್ಲರಿಗೂ ತಿಳಿದಿದ್ದೆ. ತಮ್ಮ ಹಾರ್ನಗಳಲ್ಲೆ ಸಿಟ್ಟು, ಸೇಡವು, ಆಕ್ರೋಶಗಳನ್ನು ಸುಂದರವಾಗಿ ಅಷ್ಟೆ ಕರ್ಣಕಠೋರವಾಗಿ ವ್ಯಕ್ತಪಡಿಸುವುದು ಈ ಮೊದಲೆ ಹೇಳಿದಂತೆ ಎಲ್ಲರಿಗೂ ತಿಳಿದಿದ್ದೆ. ಆದರೆ ಇತ್ತಿಚಿಗೆ “ಜನ ಬದಲಾವಣೆ ಕೇಳ್ತಿದಾರೆ” ಅಂದ್ಕೊಂಡು ವಾಹನಗಳ ಚಾಲಕರು ಅವಗಳಿಗೆ ಹೋಸ ಭಾವನೆಗಳನ್ನು ಕಲಿಸುತ್ತಿರಬಹುದು.
ಇವತ್ತಷ್ಟೆ ನಾನು ಗಮನಿಸಿದಂತೆ ವಾಹನಗಳೆಲ್ಲ “ಇಂಡಿಕೇಟರ್ ಹೊಡೆಯಲಾರಂಬಿಸಿದ್ದಾವೆ”, ಇದೇನಿದು ಇಂಡಿಕೇಟರ್ ಹೊಡೆಯುವುದು? ಕಣ್ಣು ಹೊಡೆಯುವುದು ಗೋತ್ತಿತ್ತು, ಲೈನ ಹೊಡೆಯುವುದು ಗೊತ್ತಿತ್ತು, ಇದೇನಿದು ಹೋಸದು ಇಂಡಿಕೇಟರ್ ಹೊಡೆಯುವುದು ಅಂದ್ಕೊಂಡ್ರ? ಅಥವಾ ನಮ್ಮ ಬಾಗಲಕೋಟ ಹುಂಬ ಮಂದಿ ಬಡಿಯಾಕ ಏನು ಸಿಗಲಿಲ್ಲ ಅಂಥ ಇಂಡಿಕೇಟರ್ ತೊಗೊಂಡು ಹೊಡದದ್ದು ಅನ್ಕೊಂಡ್ರ?
ಹಾಗೆನಿಲ್ಲ, ಮುಂಬಯಿಯ ಟ್ರಾಫಿಕನಲ್ಲಿ ಸಿಕ್ಕಿ ಹಾಕೊಂಡು, ಮೊನ್ನೆ ತಾನೆ ಊರಿಂದ ತಂದ “ರಾಯಲ ಸೀಮಾ” ಎರಡೆ ದಿನಕ್ಕೆ ಮುಗಿದ ಬೇಸರಕ್ಕೊ, ಇಲ್ಲಾ …(ಪ್ರಥಮ ಪ್ಯಾರಾ)ಕ್ಕೊ ಬೇಜಾರಾಗಿ…(ರಾಯಲ ಸೀಮಾ, ಚಿಕ್ಕ ಪುಸ್ತಕವೇನು ಅಲ್ಲ, ಅದು ಓದಿಸಿಕೊಂಡು ಹೋಗುವ ವೇಗ,or in Kannada “ಸ್ಪೀಡ” ಹಾಗಿದೆ) ಹೋರಕ್ಕೆ ನೋಡುತ್ತಾ ಕುಳಿತಿದ್ದಾಗ ನೋಡಿದ ಘಟನೆ ಈ ಪೋಸ್ಟಗೆ ಕಾರಣವಾಯಿತು, ಎದುರಿನಿಂದ ಬರುತ್ತಿದ್ದ ದಾರಿಯಲ್ಲಿ ಅಷ್ಟೇನೂ ಟ್ರಾಫಿಕ್ ಇರಲಿಲ್ಲ, ಜಾಮ್ ಬಗ್ಗೆ ಸುಳಿವೇ ಸಿಗಲಿಲ್ಲ ಅದು ಬೇರೆ ಮಾತು.
ಆ ಕಡೆಯಿಂದ ಕಪ್ಪು ಬಣ್ಣದ ಒಂದು ಸ್ಕೋಡಾ ಕಾರು ಬರುತ್ತಿತ್ತು, ಅದರ ಹಿಂದೆ ಸಿಲ್ವರ್ ಕಲರಿನ ಹೋಂಡಾ ಸುಮ್ಮನೆ ಕೆಮ್ಮಿತು (ಹಾರ್ನಾಯಿಸಿತು, ಕನ್ನಡದಲ್ಲಿ) ಅಷ್ಟಕ್ಕೆ, ನಂಬೊಕೆ ಆಗ್ತಾಯಿಲ್ಲ ಆ ಬರಿ ಕೆಮ್ಮಿದ ಸದ್ದಿಗೆ ಸ್ಕೋಡಾ ಕಾರು ದಾರಿ ಮಾಡಿಕೊಟ್ಟಿತು, ಆಶ್ಚರ್ಯ ಅಷ್ಟೆ ಅಲ್ಲ ದಾಟಿ ಹೋದ ಹೋಂಡಾ ಕಾರು ಒಂದು ಸಾರಿ ತನ್ನ “ಇಂಡಿಕೇಟರ್” ಮಿಟುಕಿಸಿತು, ಅದಕ್ಕೆ ಪ್ರತಿಯಾಗಿ ಸ್ಕೋಡಾ ಕೂಡ ಒಂದು ಸಾರಿ ತನ್ನ “ಇಂಡಿಕೇಟರ್” ಮಿಟುಕಿಸಿತು, ಇದನ್ನು ನೋಡಿ ಭಲೆ ಮಜವೇನಿಸಿತು, ಪಕ್ಕದಲ್ಲೆ ನಿದ್ರೆಯಲ್ಲಿದ್ದ ಕಲಿಗನನ್ನು ಎಬ್ಬಿಸಿ ಈ ವಿಷಯ ಹೇಳಿದಾಗ, ಅವನು ಎಲ್ಲಾದರೂ ಬಾಂಬ ಎನಾದರು ಸ್ಪೋಟವಾಗಿರಬಹುದಾ ಎಂಬ ಅನುಮಾನವನ್ನು ತುಂಡರಿಸಿ, ನನ್ನ ಅನುಮಾನವನ್ನು ಮತ್ತು ನನ್ನನ್ನು ಸೇರಿಸಿ ಅವಮಾನಿಸುವ ಮುಖ ಹಿಚುಕಿ, ಅಲ್ಲಿ ನೆಡೆದಿದ್ದನ್ನು “ಮಷೀನ್ ಲ್ಯಾಂಗ್ವೇಜ”ನಿಂದ ಕಂಪೈಲಿಸಿದ ಅಂದರೆ ಅನುವಾದಿಸಿದ:
ದಾರಿ ಬಿಟ್ಟದ್ದಕ್ಕೆ ಹೋಂಡಾ ಕಾರು ತನ್ನ ಇಂಡಿಕೇಟರ್ ಮಿಟುಕಿಸಿ ಸ್ಕೋಡಾ ಕಾರಗೆ ಥ್ಯಾಂಕ್ಸ ಹೇಳಿತು, ಅದಕ್ಕೆ ಪ್ರತಿಯಾಗಿ ಸ್ಕೋಡಾ ಕೂಡಾ ಹೊಂಡಾಗೆ “ಯು ಅರ್ ವೆಲಕಂ” ಅಂತ ತನ್ನ “ಇಂಡಿಕೇಟರ್” ಮಿಟುಕಿಸಿತು.
ಅರೇ ವ್ಹಾ, ವ್ಹಾ, ಮನುಷ್ಯರೇ ಸಂಸ್ಕಾರ ಮರೆಯುತ್ತಿರುವಾಗ, ವಾಹನಗಳು ಸಂಸ್ಕಾರ ಮೆರೆಯುತ್ತಿರುವುದು ತಲೆಯ ಮೇಲಿನ ಟೋಪ್ಪಿಗೆ ತಾನೆತಾನಾಗಿ ಎಗರಿತು. ಅದೇ ಕ್ಷಣದಲ್ಲಿ ಪಕ್ಕದಲ್ಲಿ ಒಂದು ಕಾರು ಜೋರಾಗಿ ಕರ್ಕಷವಾಗಿ ಕೂಗಿ ಆಗ ತಾನೆ ಮೂಡಿದ್ದ ವಾಹನ ಪ್ರೀತಿಗೆ ತಣ್ಣೀರೆರಚಿ, ತನ್ನ ಕರ್ಣಕಠೋರ ಹಾರ್ನಿನಿಂದ ನನ್ನಲ್ಲಿ ಹುದುಗಿದ್ದ “ಶಬ್ದಮಾಲಿನ್ಯ ವಿರೋಧಿ”ಯನ್ನ ಬಡಿದೆಬ್ಬಿಸಿ ತಮ್ಮ ಬಗ್ಗೆ ನನ್ನ ದ್ವೇಷ ಮತ್ತೆ ದ್ವಿಗುಣಗೊಳಿಸಿದವು.ಆದರೆ ಮನಸ್ಸಿನ ಖಿನ್ನತೆ ದೂರವಾಗಿದ್ದು ಮಾತ್ರ ಹಿತವಾಗಿತ್ತು.
ನಮ್ಮಲ್ಲಿ, ಮುಂದೆ ಪೊಲೀಸ್ ಮಾಮ ಇದ್ದಾನೆ ಎಂಬ ಸೂಚನೆ ಕೊಡುವಂತೆ ಹೆಡ್ ಲೈಟುಗಳನ್ನು ಬ್ಲಿಂಕಿಸುತ್ತಾರೆ! ನಿಮ್ಮೂರಲ್ಲಿ ಹಾಗೆ ಮಾಡುವುದಿಲ್ಲವೆ??!
ಚೆನ್ನಾಗಿದೆ ” ಇಂಡಿಕೇಟರ್ ಭಾಷೆ”.
ಶೆಟ್ಟರ,
ಮತ್ತ ನೀವೂ ಯಾವಾಗರ ಇಂಡಿಕೇಟರ್ ಹೊಡೀತಿರ್ತೀರಿಲ್ಲೊ?
ಕೇಳುವ ಕಿವಿ , ಕಾಣುವ ಕಣ್ಣು ಇದ್ರೆ ವಾಹನ ಏನು, ಕಲ್ಲಿನ ಭಾಷೇನೂ ತಿಳ್ಕೋಬಹುದು ಅನ್ನೋದನ್ನ ಸರಿಯಾಗಿ ಹೇಳಿದೀರಾ..
ಅದು ಅಲ್ದೆ …. ಅದು ಸೂರ್ಯಂಗೂ ಕಾಣದೆ ಇದ್ರೂ ನಿಮಗೆ ಕಂಡೆ ಕಾಣುತ್ತೆ .. ರವಿ ಕಾಣದ್ದು ಕವಿ ಕಂಡ ಅಂತಾರೆ…
ಮತ್ತೆ ಕಠಿಣ ಶಬ್ದಗಳನ್ನ ಕನ್ನಡದಲ್ಲಿ ಭಾಷಾಂತರ (ಅಚ್ಚ ಕನ್ನಡದಲ್ಲಿ ಹೇಳೋದಾದ್ರೆ translation) ಮಾಡಿದ್ದು ಅರ್ಥವತ್ತಾಗಿ ತಿಳಿಯಲು ಸಾಧ್ಯವಾಯಿತು ..