ಅವಳ ನೆನಪಿನ ಬಸಿರು
ದಿನಾ ಹೆರುತ್ತಲೇ ಇದೆ
ನೂರಾರು ಕೂಸು-ಕುನ್ನೆಗಳ,
ಮದುವೆಯಾಗಿ ವರ್ಷಗಳೂರುಳಿದರೂ
ತುಂಬುತ್ತಿಲ್ಲ ಅವಳ ಒಡಲು ಗಂಡ-
ನೊಟ್ಟಿಗೆ ಆಸ್ಪತ್ರೆಗಳಿಗೆ ದಿನಾ ಸುಳಿಗಳು
ತೊಂದರೆ ಕಾಣುತ್ತಿಲ್ಲ ಡಾಕ್ಟರರಿಗೆ
ಅವರ ದೊಡ್ಡ ದೊಡ್ಡ ಯಂತ್ರಗಳಿಗೆ
ನೂರಾರು ಸಾವಿರದ ಟೇಸ್ಟುಗಳಿಗೆ,
ಮತ ಎಣಿಕೆಯ ಹಾಗೆ ಎನಿಸಿದ್ದು
ಆಯಿತು, ಅವನ ಗಂಡುಸುತನದ
ಗುರುತುಗಳನ್ನು, ಸುಳಿವೇ ಇಲ್ಲ
ಅವಳಿಗಾದರೂ ತಿಳಿಯಬಾರದೇ,
ಟೇಸ್ಟುಬಿನಲ್ಲಿ ಬೇಬಿ ಬೇಕಂತೆ.
ಬರಿ ಗರ್ಭವಿದ್ದರೇ ಎನಾಯ್ತು
ಮನಸು ಬೇಕಲ್ಲ ಜೋತೆಗೆ.
ಅವಳ ಗಂಡ ಸಿಕ್ಕಿದ್ದ, ಕೊಟ್ಟೆ ಅವನಿಗೆ
ಅವಳ ಮನಸನ್ನ, ಅವನೂ ಯಾರಿಗೊ
ಎನೋ ಮರಳಿಸಲು ಬಂದಿದ್ದಂತೆ, ಈ
ದೊಡ್ಡ ಊರಿನಲ್ಲಿ ಕಷ್ಟಗಳು ನೂರಾರು
ಹೀಗಾಗಿ ಇಲ್ಲಿ ನೀನ್ಯಾರು, ನಾನ್ಯಾರು?

ಈಗರ ಸರಿ ಹೋತೇನ್ರಿ?
ಯಾರಾದ್ರೂ ಮಹಿಳೆಯರು ಬರೆದಿದ್ರ್ರೆ “ಮಹಿಳಾ ಸಂವೇದನೆ” ಲಸ್ಕಾ ಪುಸ್ಕಾ ಅಂಥ ಎನೇನೋ ಹೊಗಳಿರೊರು. ನನಗಂತೂ ಇಷ್ಟವಾಯಿತು..
ಕಾಕಾ,
ಇನ್ನೂ ಗೋತ್ತಾಗಿಲ್ರಿ..
ಗೌಡ್ರೆ,
ಹೋಗಳಿಸಿಕೊಂದು ಹೊನ್ನ ಶೀಲಕ್ಕೆರುವುದಕ್ಕಿಂತ, ನಿಮ್ಮಿಷ್ಟಕ್ಕೆ ಕಷ್ಟ ಪಡುವುದು ಲೇಸಲ್ಲವೇ?
ಪ್ರೀತಿಯಿರಲಿ
ಶೆಟ್ಟರು