ನನ್ನ ನೆನಪಾಗುವುದೇ ಇಲ್ಲವೇ?

ನಿಜ ಹೇಳು ಗೆಳತಿ, ನಿನಗೆ
ನನ್ನ ನೆನಪಾಗುವುದೇ ಇಲ್ಲವೇ?

ಮನೆಗೆಲವನ್ನೇಲ್ಲ ಮುಗಿಸಿ,
ಟಿ.ವಿ. ನೋಡುತ್ತಾ, ಮೈ ಮರೇತು
ನಿದ್ರೆಗೆ ಜಾರುವಾಗಲೆಲ್ಲ
ನಿಜ ಹೇಳು ಗೆಳತಿ, ನಿನಗೆ
ನನ್ನ ನೆನಪಾಗುವುದೇ ಇಲ್ಲವೇ?

ಸಂಜೆ ದೇವಸ್ಥಾನಕ್ಕೇ ಹೋದಾಗ
ದೇವರನ್ನಲ್ಲದೇ ಬೇರಾರಿಗೊ
ಕಾಯುತ್ತಿರುವ ಆ ಹುಡುಗನನ್ನು ನೋಡಿದಾಗ
ನಿಜ ಹೇಳು ಗೆಳತಿ, ನಿನಗೆ
ನನ್ನ ನೆನಪಾಗುವುದೇ ಇಲ್ಲವೇ?

ಗುರುಗುಟ್ಟುವ ಬೈಕಿನಲ್ಲಿ ಮೈಗೇ
ಮೈ ಅಂಟಿಕೊಂಡು ಕುಳಿತಿರುವ
ಜೋಡಿಯೋಂದು ಕಣ್ಮುಂದೆ ಬಂದಾಗ
ನಿಜ ಹೇಳು ಗೆಳತಿ, ನಿನಗೆ
ನನ್ನ ನೆನಪಾಗುವುದೇ ಇಲ್ಲವೇ?

ನೀ ಮಾಡಿದ ಅಡುಗೆ ಹೇಗಿದೆಯೆಂದು
ಹೇಳದೆ, ತುಟಿಗೇ ನಗು ತಾರದೇ,
ಹಾಗೆಯೆ ನಿನ್ನವನೇದ್ದು ಹೋದಾಗ
ನಿಜ ಹೇಳು ಗೆಳತಿ, ನಿನಗೆ
ನನ್ನ ನೆನಪಾಗುವುದೇ ಇಲ್ಲವೇ?

ನೀ ಕಲಿಸಿಟ್ಟ ಅನ್ನ-ತುಪ್ಪುಪ್ಪು
ತಿನ್ನದೇ, ಉಪ್ಪಿನಕಾಯಿಗಾಗಿ
ನಿನ್ನ ಮಗ ಹಠ ಮಾಡಿದಾಗ
ನಿಜ ಹೇಳು ಗೆಳತಿ, ನಿನಗೆ
ನನ್ನ ನೆನಪಾಗುವುದೇ ಇಲ್ಲವೇ?

ನಿಜ ಹೇಳು ಗೆಳತಿ, ನೀನು
ನನ್ನ ಮರೆತಿದಿದ್ದಾದರು ಹೇಗೆ?
ನನಗೂ ಮರೆಯಬೇಕಿದೆ ಹಾಗೆ.

(ಈ ಕವನ ಗೆಳಯ ಅರವಿಂದ ಅವರು ಕೊಟ್ಟ ಸ್ಪೂರ್ತಿಯಿಂದ…)

17 Responses to “ನನ್ನ ನೆನಪಾಗುವುದೇ ಇಲ್ಲವೇ?”


  1. 1 balaglobal September 24, 2008 at 7:45 pm

    ಶೆಟ್ಟರೆ,
    ಕವನ ಸರಳವಾಗಿ ಚೆನ್ನಾಗಿದೆ.
    “ದೇವರನ್ನಲ್ಲದೇ ಬೇರಾರಿಗೊ
    ಕಾಯುತ್ತಿರುವ ಆ ಹುಡುಗನನ್ನು ನೋಡಿದಾಗ”
    ಎಂಬುದು ತುಂಬಾ ಹಿಡಿಸಿತು. ಇದೆ ಕವನ ನಿಮ್ಮ ಧಾರವಾಡದ ಶೈಲಿಯಲ್ಲಿ ಇನ್ನು ಸುಂದರವಾಗಿ ಮೂಡುತಿತ್ತೇನೊ ಎನಿಸಿತು.
    -ಬಾಲ

  2. 2 murthy September 25, 2008 at 12:38 am

    adhbuthavaada kavana….
    “nija helu gelathi, neenu nanna marethiddaadaru hege? nanagu mareyabekide haage !” wow… simply superb…

  3. 3 vijayraj September 25, 2008 at 3:53 pm

    simple but very touching.
    thanks for a very nice p[oem

  4. 4 navada September 26, 2008 at 11:22 am

    ನಮಸ್ಕಾರ ಶೆಟ್ಟರಿಗೆ,
    ಕವನ ಚೆನ್ನಾಗಿದೆ.
    ಸಂಜೆ ದೇವಸ್ಥಾನಕ್ಕೇ ಹೋದಾಗ
    ದೇವರನ್ನಲ್ಲದೇ ಬೇರಾರಿಗೊ
    ಕಾಯುತ್ತಿರುವ ಆ ಹುಡುಗನನ್ನು ನೋಡಿದಾಗ
    ಸಾಲುಗಳು ಚೆನ್ನಾಗಿವೆ.
    ನಾವಡ

  5. 5 ಶೆಟ್ಟರು (Shettaru) September 26, 2008 at 5:00 pm

    ಬಾಲಗೋಪಾಲರೇ,

    ಈ ಕವಿತೆ ಒಂಥರಾ ಆಶುಕವಿತೆ, ಗೆಳೆಯ ಅರವಿಂದ ಕವನಕ್ಕೆ ಕಾರಣ ಒದಗಿಸಿದರು, ಕವನ ಹುಟ್ಟಿತು, ಅದನ್ನು ತಿದ್ದಲು ಕೂಡ ಬಿಡಲಿಲ್ಲ. ಇನ್ನು ಧಾರವಾಡ ಭಾಷಾದಾಗ ಮತ್ತೊಮ್ಮಿ ಬರಿಯೂಣು ತಗೊರಿ.

    ಮೂರ್ತಿ,

    ಸಿಂಪ್ಲಿ ಥ್ಯಾಂಕ್ಸರಿ ಸರ, ಹಿಂಗ ಬರ್ಕೊಂತ ಇರ್ರಿ.

    ವಿಜಯರಾಜ್,

    ಧನ್ಯವಾದಗಳು,

    ನಾವುಡರೆ,

    ನಾನೂ ದೇವಸ್ಥಾನಕ್ಕೆ ದೇವರನ್ನಲ್ಲದೆ ಭಕ್ತೆಯರ ದರ್ಶನಕ್ಕೆ ಹೋದವನೆ, ಹೀಗಾಗಿ ಆ ಸಾಲು ಹೊಳೆದದ್ದು. ತಮ್ಮ ಮೆಚ್ಚುಗೆಗೆ ಧನ್ಯವಾದಗಳು.

    ಪ್ರೀತಿಯಿರಲಿ
    -ಶೆಟ್ಟರು

  6. 6 ವೈಶಾಲಿ September 26, 2008 at 7:11 pm

    tumba chandakkide kavana.
    ista aaytu.

  7. 7 ಬಾಲ September 26, 2008 at 9:11 pm

    ಶೆಟ್ಟರೆ,
    ನನ್ನ ಪೂರ್ಣ ನಾಮಧೇಯ ಬಾಲಕೃಷ್ಣ ಎಂದು, ನಾನು ಬಾಲಗೋಪಾಲನಲ್ಲ.

    ಸ್ನೇಹದೊಂದಿಗೆ
    ಬಾಲ.

  8. 8 sunaath September 27, 2008 at 10:25 pm

    ಎಲಾ ಶೆಟ್ಟರ!
    ಹತ್ತು ಉದ್ದೇಶ ಇಟಕೊಂಡು, ಹುಡುಗರೂ ಹುಡಿಗೇರೂ ಅಡ್ಯಾಡತಿರ್ತಾರ. ಅದನ್ಯಾಕ ಕೇಳ್ತೀರಪಾ?
    ಮತ್ತ, ನಿಮ್ಮ ನೆನಪು ಆಕಿ ತನ್ನ ಮನಸ್ಸಿನ ಒಳ ಒಳ ಒಳಗ ಇಟ್ಟs ಇಟ್ಟಿರ್ತಾಳ.
    ಅಲ್ಲೆ ಇರಲಿ ಬಿಡರಿ ಅದು.
    -ಕಾಕಾ

  9. 9 ಶೆಟ್ಟರು (Shettaru) September 30, 2008 at 8:51 am

    ವೈಶಾಲಿ,

    ಇದೋ ತಮಗೆ ಸ್ವಾಗತ…

    ಬಾಲಕೃಷ್ಣರೇ,

    ಬಾಲಕೃಷ್ಣ ಮತ್ತು ಬಾಲಗೋಪಾಲ ಒಂದೇ ಅಲ್ಲವೆ, ಅದು ಅಲ್ಲದೆ ಷೇಕ್ಷಪೀಯರನೇ ಹೇಳಿಲ್ಲವೇ, “whats their in…”,
    ಅಯ್ಯೊ ಮನೆಯಲ್ಲಿ ಅಪ್ಪ-ಅಮ್ಮ ಪ್ರೀತಿಯಿಂದ ಹೆಸರಿಟ್ಟಿದ್ದಾರೆ “ಬಾಲಕೃಷ್ಣ” ಅಂತ, ನಾನಿನ್ಮೇಲೆ ಹಾಗೆ ಕರಿತಿನಿ, ಅಯ್ತಾ…

    ಕಾಕಾ,

    ನೀವು ಹೆಂಗ ಹೇಳ್ತಿರಿ ಹಂಗರಿ…
    ಹಂಗಂದ್ರ ನೆನಪಿರ್ತೈತಿ ಆಕಿಗಿ ಅಂತಿರೇನು?

    ಪ್ರೀತಿಯಿರಲಿ
    ಶೆಟ್ಟರು

  10. 10 neelihoovu September 30, 2008 at 12:22 pm

    ನಿಜವಾಗಿಯೂ ಬೊಂಬಾಟ್ ಕವನ.
    “ನಿಜ ಹೇಳು ಗೆಳತಿ, ನೀನು
    ನನ್ನ ಮರೆತಿದಿದ್ದಾದರು ಹೇಗೆ?
    ನನಗೂ ಮರೆಯಬೇಕಿದೆ ಹಾಗೆ.”

    ಇದು ಹೆಚ್ಚು ಇಷ್ಟವಾದರೂ ಒಟ್ಟಾರೆ ಭಾವವೂ ಸೂಪರ್..:)

  11. 11 ಮಾರುತಿ October 1, 2008 at 3:45 pm

    ಮಹಾನ್ ಫ್ಲರ್ಟ ನೀನು, ಅದು ಹೆಂಗ ಇಷ್ಟು ವಿರಹ ಗೀತೆ ಬರಿತಿ ತಿಳಿವಲ್ತು,

    “ದೇವರನ್ನಲ್ಲದೇ ಬೇರಾರಿಗೊ
    ಕಾಯುತ್ತಿರುವ ಆ ಹುಡುಗನನ್ನು ನೋಡಿದಾಗ” ಸಾಲುಗಳು ಹಿಡಿಸಿದವು.

    ಹೀಗೆ ಬರಿತಾಯಿರು

    -ಮಾರುತಿ, ಬೆಂಗಳೂರು

  12. 12 ಮಾರುತಿ October 1, 2008 at 3:46 pm

    ಹೋಸಾ ಹೇಡ್ಡರು ಹಿಡಿಸ್ತು…

    -ಮಾರುತಿ, ಬೆಂಗಳೂರು

  13. 13 ಜೋಮನ್ October 4, 2008 at 5:38 pm

    ಶೆಟ್ಟರೇ ಸೂಪರ್ ………….

  14. 14 ಶೆಟ್ಟರು (Shettaru) October 6, 2008 at 9:32 am

    ನೀಲಿ ಹೂವಿಗೆ,

    ಹೂಗುಚ್ಛದ ಸ್ವಾಗತ, ಬರ್ತಾ ಇರಿ,

    ಮಾರುತಿ,

    “ಮಹಾನ್ ಫ್ಲರ್ಟ ನೀನು” !!!!!!!
    ಇದು ಮೆಚ್ಚುಗೆಯೋ ಇಲ್ಲ ತೆಗಳಿಕೆಯೋ? ಭಾವ ಪೂರ್ಣವಾಗಿಲ್ಲ.
    ಆದರೂ ಮೆಚ್ಚುಗೆಗೆ ಧನ್ಯವಾದಗಳು.

    ಜೋಮನ್,

    ಸ್ವಾಗತ ಮತ್ತು ಧನ್ಯವಾದ.

    ಪ್ರೀತಿಯಿರಲಿ

    ಶೆಟ್ಟರು

  15. 15 ನವಿಲಗರಿ October 14, 2008 at 12:32 pm

    ನಿಜ ಹೇಳು ಗೆಳತಿ, ನೀನು
    ನನ್ನ ಮರೆತಿದಿದ್ದಾದರು ಹೇಗೆ?
    ನನಗೂ ಮರೆಯಬೇಕಿದೆ ಹಾಗೆ.

    nija marilikke agutta? aagalla alva? kandita agolla bidi..:P

    tumba ishtavaayitu..:)

  16. 16 ಶೆಟ್ಟರು (Shettaru) October 16, 2008 at 8:59 am

    ಪ್ರೇಮಕವಿ ಸೋಮಣ್ಣ,

    ಸ್ವಾಗತ..ಸುಸ್ವಾಗತ…

    ಪ್ರೀತಿಯಿರಲಿ
    -ಶೆಟ್ಟರು, ಮುಂಬಯಿ

  17. 17 sundaranadu October 22, 2008 at 7:11 pm

    ನೀ ಕಲಿಸಿಟ್ಟ ಅನ್ನ-ತುಪ್ಪುಪ್ಪು
    ತಿನ್ನದೇ, ಉಪ್ಪಿನಕಾಯಿಗಾಗಿ
    ನಿನ್ನ ಮಗ ಹಠ ಮಾಡಿದಾಗ
    ನಿಜ ಹೇಳು ಗೆಳತಿ, ನಿನಗೆ
    ನನ್ನ ನೆನಪಾಗುವುದೇ ಇಲ್ಲವೇ?

    eshtondu kaalavagide avalu nimmannu maretu ennuvudannu soochisuva hagide.

    ನಿಜ ಹೇಳು ಗೆಳತಿ, ನೀನು
    ನನ್ನ ಮರೆತಿದಿದ್ದಾದರು ಹೇಗೆ?
    ನನಗೂ ಮರೆಯಬೇಕಿದೆ ಹಾಗೆ.

    idu nanage ishtavada salugalu.

    Dhanyavadagalu Shettare, preetiya viraha geethege.

    Nimma Abhimani
    Rajanna


Leave a Reply




a

Blog Stats

  • 7,920 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು