
ನೀಲಿ ಛತ್ರಿಯ ಹುಡುಗಿ,

ಹೇಗಿರುವೆ? ಧಾರವಾಡದ ಆ ಯುನಿವರ್ಸಿಟಿ ಕ್ಯಾಂಪಸ್ಸು ನೀನಿಲ್ಲದೇ ಹೇಗಿರುವುದು ಗೆಳತಿ? ಇಂದಿಗೂ ನಾನಲ್ಲಿಗೆ ಹೋದರೆ ನನಗರಿವಿಲ್ಲದೆ ನನ್ನ ಕಣ್ಣುಗಳು ಹುಡುಕುವುದು ನಿನ್ನನ್ನೆ, ಎಲ್ಲಿರುವೇ ಗೆಳತಿ?
ಊರಿಂದ ದೂರವಿದ್ದ ನಮಗೆಲ್ಲ ನೀನು ತಾನೆ ನಮ್ಮಲ್ಲಿ ಕಾನ್ಫಡೇನ್ಸ ಹುಟ್ಟಿಸಿದ್ದು, ನಾವೆಲ್ಲ ಗೆಳೆಯರು ನಿನ್ನನ್ನು ನೋಡಲೆಂದೆ ಅಲ್ಲವೇ ಬೆಳಿಗ್ಗೆ ಬೇಗ ಎದ್ದು ಕ್ಯೂನಲ್ಲಿ ನಿಂತು ಸ್ನಾನ ಮಾಡ್ತಿದ್ದುದು, ಪೈಪೋಟಿಯಲ್ಲಿ ಪೈ ಕ್ಯಾಂಟಿನಿನ ಕಟ್ಟೆಗೆ ಕುಡುತ್ತಿದ್ದುದು. ನೀನು ಬರುವುದು ೮ ಗಂಟೆಗೆ ಅಂತ ಗೋತ್ತಿದ್ದರೂ ೭ ಗಂಟೆಗೇನೆ ಕ್ಯಾಂಟಿನ ಕಟ್ಟೆಯಲ್ಲಿ ಸೀಟಗಾಗಿ ಬಡಿದಾಟವಾಗುತ್ತಿದ್ದುದು.
ಕಲ್ಯಾಣನಗರದ ಇಳಿಜಾರಿನಿಂದ ನೀನು ಬರುತ್ತಿದ್ದರೆ ನೀಲಿ ಬಣ್ಣದ ಮತ್ತೊಬ್ಬ ಸೂರ್ಯ ಉದಯಿಸಿದಂತಾಗುತ್ತಿತ್ತು, ಇವತ್ತಿಗೂ ಅಷ್ಟೆ ನೀನು ನೆನಪಿಗೆ ಬಂದರೆ ಮೊದಲು ಛತ್ರಿ, ಅದರ ಕೆಳಗೆ ನೀನು ಕಣ್ಮುಂದೆ ಬರುತ್ತಿ. ನೀನು ಬರುವುದು ಗೋತ್ತಾದ ಕೂಡಲೆ ನಾವೇಷ್ಟು ಡಿಸೆಂಟಾಗುತ್ತಿದ್ದೆವು ಗೋತ್ತಾ? ಕೈಯಲ್ಲಿದ್ದ ಸೀಗರೇಟನ್ನು ಕೊಡವಿ, ಮತ್ತೊಮ್ಮೆ ತಲೆ ಬಾಚಿಕೊಂಡು, ಅಲ್ಲಿಯವರೆಗೂ ಓದುತ್ತಿದ್ದ “ಕನ್ನಡ ಪ್ರಭ” ಕೆಳಗಿಟ್ಟು “ಇಂಗ್ಲೀಷ” ಪೇಪರಿಗೆ ಮತ್ತೊಂದು ಸುತ್ತಿನ ಪೈಪೋಟಿ ನೆಡೆಸುತ್ತಿದ್ದೆವು. ಆವತ್ತು ಕಟ್ಟೆಯಲ್ಲಿ ಜಾಗ ಸಿಗದಿದ್ದರೆ ನಿನಗೆದುರಾಗಿ ಬರುತ್ತಿದ್ದೆವು, ನಿನ್ನನ್ನು ಹಿಂಬಾಲಿಸುವ ಧೈರ್ಯವಿಲ್ಲದೆ
. ಆದರೆ ನೀನು ಈ ನಮ್ಮ ಸರ್ಕಸ್ಸುಗಳನ್ನು ಮತ್ತು ನಮ್ಮನ್ನು ಕಣ್ಣೆತ್ತಿಯೂ ಮೂಸುತ್ತಿರಲಿಲ್ಲ. ಆದರೆ ನೀನು ನಮ್ಮ ಕಣ್ಮುಂದೆ ಬಳಕುತ್ತಾ ನಡೆದಿದ್ದರೆ ನಮಗೆ ಪಕ್ಕದಲ್ಲಿ ಬಾಂಬ ಬಿದ್ದರೂ ಗೋತ್ತಾಗುತ್ತಿರಲಿಲ್ಲ, ನಿನ್ನ ಮುಖದ ಮೇಲಿನ ಮಂದಹಾಸ ಆಗಷ್ಟೆ ಅರಳಿದ ಹೂವಿನ ಮೇಲಿನ ತೆಳು ಮಂಜಿನಂತೆ ನಮ್ಮ ಕಣ್ಣು ಕುಕ್ಕುತ್ತಿರುತ್ತಿತ್ತು.
ಆಗ ನಿನ್ನ ಹೆಸರೆನೆಂಬುದೆ ನಮಗೆ ಗೋತ್ತಿರಲಿಲ್ಲ, ಈಗದು ಗೋತ್ತಿದ್ದರೂ ಬೇಕಿಲ್ಲ, ಹೀಗಾಗಿ ನಾವೆಲ್ಲ ನಿನ್ನನ್ನು ಕರೆಯುತ್ತಿದ್ದುದೆ ‘ನೀಲಿ’ ಎಂದು. ಇವತ್ತಿಗೂ ಗೆಳೆಯರೆಲ್ಲ ಸೇರಿದಾಗ ನೀಲಿ ಹೇಗಿದ್ದಾಳೆ? ಎನು ಮಾಡ್ತಿದಾಳೆ? ಎಲ್ಲಿದ್ದಾಳೆ? ಎಂದು ಯಾರಾದರೊಬ್ಬರಾದರೂ ಕೇಳುತ್ತಿರುತ್ತಾರೆ. So ಹೇಗಿದ್ದಿಯಾ ಹುಡುಗಿ?… ಮಿಸ್ಸಾ? ಮಿಸ್ಸಸ್ಸಾ? ಬೇಡ ಬಿಡು ಹೇಳ್ಲೆಬೇಡ, ನಮ್ಮ ನೆನಪಲ್ಲಿ ಹೇಗಿದಿಯಾ ಹಾಗೆ ಇರು.
ಗೆಳತಿ ನಿನ್ನ ಉಪಕಾರ ದೊಡ್ಡದು, ಸೂರ್ಯವಂಶಿಗಳಾಗಿದ್ದ ನಮಗೆಲ್ಲ ಬೇಗನೆ ಎಳಲು ಸ್ಪೂರ್ತಿಯಾದೆ, ಸ್ನಾನ ಮಾಡಿ ನೀಟಾಗಿರಲೂ ನೀನೇ ಕಾರಣವಾದೆ. ನಿನ್ನ ಕಾರಣದಿಂದಾದರೂ ಪುಸ್ತಕಗಳು ನಮ್ಮ ಮುಖ ದಿನಾಲೂ ನೋಡುವಂತಾಯ್ತು, ನಿನಗಾಗಿ ಕಾಯುತ್ತ ನಮ್ಮ ಜನರಲ್ ನಾಲೆಡ್ಜ ಇಂಪ್ರೂವ ಆಯಿತು.., ನ್ಯೂಜ್ ಪೇಪರಗಳನ್ನೊದುತ್ತಾ
.
ಆದರೂ ಗೆಳತಿ, ನಿನ್ನನ್ನು ಒಂದು ಸಲವಾದರೂ ಮಾತನಾಡಿಸುವ ದೈರ್ಯವೇ ನನ್ನಲ್ಲಿ ಹುಟ್ಟಲಿಲ್ಲ, ಆ ದೈರ್ಯ ಹುಟ್ಟದಿದ್ದುದೆ ಒಳ್ಳೆಯದಾಯಿತೇನೊ, ಎಕೆಂದರೆ ನಿನ್ನನ್ನು ಮಾತನಾಡಿಸಿ, ಗುಲಾಬಿ ಕೊಡುವ ಧೈರ್ಯ ಮಾಡಿದ ಕುಮಾರ ಇವತ್ತಿಗೂ ಒಂದು ಕಾಲನ್ನೆಳೆಯುತ್ತಾ ನಡೆಯುತ್ತಿದ್ದರೆ, ಆವತ್ತು ಹುಟ್ಟದೇ ಹೋದ ಧೈರ್ಯದ ಬಗ್ಗೆ ಹೆಮ್ಮೆಯಾಗುತ್ತದೆ.
ರಾಕ್ಷಸರ ಕುಲದಲ್ಲಿ ಬರಿ ಶೂರ್ಪನಖಿಯರೇ ಹುಟ್ಟುತ್ತಾರೆಂದುಕೊಂಡಿದ್ದೆ, ಆದರೆ ಆ ೩ ಜನ ರೌಡಿ ರಾಕ್ಷಸರ ಬೆನ್ನಲ್ಲಿ ನೀನೊಬ್ಬ “ಅಪ್ಸರೆ” ಹೇಗೆ ಹುಟ್ಟಿದೇಯೋ ಆ ದೇವರೆ ಬಲ್ಲ?
{ಧಾರವಾಡದ ಆ ದಿನಗಳನ್ನು ಸಹನೀಯಗೊಳಿಸಿದ “ಗೆಳೆಯ”ರನ್ನು ಮತ್ತು “ಅವಳ”ನ್ನು ನೇನೆಯುತ್ತಾ.. ಪ್ರೀತಿಯಿಂದ…}
ದಿನಾ ಟ್ರಾಫಿಕ್ಕಿನ ಗೋಳು
ಮತ್ತೊಂದು ವಿಜಯದಶಮಿ ಊರಿಂದ ದೂರ ಅಚರಿಸಬೇಕಾಗಿದೆ, ಸುಮಾರು ೩-೪ ವರ್ಷಗಳಾಯಿತು ದಸರೆಗೆ ಊರಿಗೆ ಹೋಗದೆ. ದಸರಾ ಹಬ್ಬ ಕರ್ನಾಟಕದ ನಾಡಹಬ್ಬವಾಗಿದ್ದರೂ ಆಚರಣೆಯಲ್ಲಿ ಪ್ರದೇಶ ವ್ಯತ್ಯಾಸ ಕಾಣಬಹುದು.

Recent Comments