ಚೆಲ್ಲಿದ ಹನಿಗಳು

ದಿನಾ ಟ್ರಾಫಿಕ್ಕಿನ ಗೋಳು
ಉಸಿರಾಡಲು ಹೋಗೆಯುಗುಳುವ ಧೂಳು
ಹೇಗೆ ಮೈಗಂಟಿದೆ ನೋಡಿ,
ಊರಿಗೆ ಹೋದರೇ ತಿಳಿಗಾಳಿಗೆ ದಮ್ಮು
ಸಿಹಿ ನೀರಿಗೆ ಶೀತ-ತಲೆನೂವು-ಕೆಮ್ಮು.

 
ಎಂಥ ಎಡಬಿಡಂಗಿ ಬದುಕು ನೋಡಿ
ನಮಗೆ ಪಟ್ಟಣದ ಸವಲತ್ತು ಬೇಕು
ಮೇಲೆ ಹಳ್ಳಿಯ ಸುಖ ಬೇಕು, ಕೋನೆಗೆ
ಸಿಗದ ಸಿಟಿಬಸ್ಸಿನ ಹಿಂದೆ ಓಡತಿರಬೇಕು.

ನೀನಿಲ್ಲದ ಬದುಕು ಬದುಕಲ್ಲ
ನೀನಿಲ್ಲದ ಸಾವು ಸಾವಲ್ಲ.
ನನ್ನ ಬದುಕು-ಸಾವು ನೀನೆಲ್ಲ,
ನೀನಲ್ಲದೇ ನನ್ನಲಿ ನಾನಿಲ್ಲ
“ಕನಸು”ಗಳಿಗೆ ಇನ್ನು ಜೋತೆಯಿಲ್ಲ.

4 Responses to “ಚೆಲ್ಲಿದ ಹನಿಗಳು”


  1. 1 sunaath October 13, 2008 at 10:47 pm

    ಭೇಶ್,ಶೆಟ್ಟರ, ಭೇಶ್! ಈವತ್ತಿನ ಬದುಕಿಗೆ ಮಸ್ತ ಪೈಕಿ ವ್ಯಾಖ್ಯಾನ ಬರದೀರಿ. ಆದರ ಈ ರೂಟೀನ್ ಬದಕನ್ನ ಭೇದಿಸಿ, ಕನಸುಗಳನ್ನ ಕಂಡು, ನನಸು ಮಾಡಿಕೊಳ್ಳೊ capacity ನಿಮಗದ. Good luck, my boy!

  2. 2 vijayraj October 14, 2008 at 12:55 pm

    super….
    vaastavavannu tumbaa chennagi heliddeera

  3. 4 ಶೆಟ್ಟರು (Shettaru) October 16, 2008 at 8:57 am

    ಕಾಕಾ,

    ತಮ್ಮ ಪ್ರೀತಿ ಸದಾ ಹೀಗೆ ಇರಲಿ…

    ವಿಜಯ,

    ಧನ್ಯವಾದಗಳು

    ಜಿತೇಂದ್ರ,

    ನಲ್ಮೆ

    ಪ್ರೀತಿಯಿರಲಿ

    -ಶೆಟ್ಟರು, ಮುಂಬಯಿ


Leave a Reply




a

Blog Stats

  • 8,400 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು