
ನಿನ್ನ ಕಣ್ಣಿನಾಳದಲ್ಲಿ ಇಳಿದು
ನೋಡುವಾಸೆ ನನಗೂ ಇದೆ ಗೆಳತಿ,
ಆದರೆ ಪ್ರೀತಿಯ ಸುಳಿಗೆ
ಸಿಕ್ಕು ಮುಳುಗುವ ಭಯ ನನ್ನದು.
ಗಾಳಿಯೊಡನೆ ಗುದ್ದಾಡುವ
ಬಯಕೆಯಿಂದ, ಬೈಕಿನ
ಕಿವಿ ಹಿಂಡಿದರೆ,
ಹಿಂದೆ ನೀನು ತಬ್ಬಿ ಕುಳಿತ
ಸ್ಥಿತಿಗೆ ಆ ಗಾಳಿ ಉಸಿರುಗಟ್ಟಿ ಸತ್ತಿತು.
ಗೆಳತಿ ನೀನಗೆ ಕೇವಲ
ಕಳೆದುಕೊಂಡ ಹತಾಶೆಯಿದೆ,
ಆದರೆ ನನಗೆ ಹತಾಶೆಯೊಂದಿಗೆ
ಬಿಟ್ಟು ಬಂದ ನೋವು ಜೊತೆಗಿದೆ.
ನನ್ನೆದೆಗೆ ಒರಗಿ
ನಿನ್ನೆದೆಯ ಮೆದು ತಾಕಿಸಿದಾಗಲೂ
ಹರಿಯದ ನನ್ನ ಕಾಮ, ಇವತ್ತಿನ
-ತನಕ ನಿನ್ನಲ್ಲಿ ಅಸಡ್ಡೆ ಮೂಡಿಸಿದ್ದರೆ?
ಅದು ನನ್ನ ತಪ್ಪಲ್ಲ ಗೆಳತಿ. ಯಾಕೆಂದರೆ,
ಅದೇ ಕಾರಣಕ್ಕೆ ನಾನಿನ್ನು ಕನ್ನಡಿಯೊಳಗೆ
ಕಣ್ಣಿಟ್ಟು ನೋಡಿಕೊಳ್ಳುತ್ತೆನೆ, ದಿನಾಲೂ
ಹೆಮ್ಮೆಯಿಂದ, ಅಷ್ಟೆ ಪ್ರೀತಿಯಿಂದ.
ನಿನ್ನ ಕಣ್ಣಿನಾಳದಲ್ಲಿ ಇಳಿದು
ನೋಡುವಾಸೆ ನನಗೂ ಇದೆ ಗೆಳತಿ,
ಆದರೆ ಪ್ರೀತಿಯ ಸುಳಿಗೆ
ಸಿಕ್ಕು ಮುಳುಗುವ ಭಯ ನನ್ನದು.
ಶೆಟ್ರೇ ಇದು ಭಾಳ ಇಷ್ಟ ಆತು ನೋಡ್ರಿ..:)
ರಂಜಿತ್ ಧನ್ಯವಾದಗಳು,
ನಿಮಗೂ “ಆ” ಭಯ ಇದೆ ಅಂತಾಯ್ತು?
ಪ್ರೀತಿಯಿರಲಿ
ಶೆಟ್ಟರು
ವೆರಿ ಗುಡ್ ಶಾಯರಿ, ಶೆಟ್ಟರs.
ಆದರ, ಧೈರ್ಯದಿಂದ ಕಣ್ಣಾಗ ಇಣಕಿ ಹಾಕಿ, ಪ್ರೀತಿಯ ಸುಳಿಯೊಳಗ ಗರಗರಾ ತಿರಗರಿ.
ಮಸ್ತ ಮಜಾ ಬರತsದ.
ಶೆಟ್ಟರೆ,
ಬಹಳ ಚೆನ್ನಾಗಿದೆ!! ಅದರಲ್ಲೂ ಎರಡನೆಯ ಹನಿ ಬಹಳ ಇಷ್ಟವಾಯ್ತು!!
modala 2 hani ishta aaytu
ಗೆಳತಿ ನೀನಗೆ ಕೇವಲ
ಕಳೆದುಕೊಂಡ ಹತಾಶೆಯಿದೆ,
ಆದರೆ ನನಗೆ ಹತಾಶೆಯೊಂದಿಗೆ
ಬಿಟ್ಟು ಬಂದ ನೋವು ಜೊತೆಗಿದೆ.
ನಿಮ್ಮ ಗೆಳತಿಗೆ ಹತಾಶೆಯಿದೆ ಮಾತ್ರ ಇದೆ ಅ೦ತ ಹೇಗೆ ಗೊತ್ತಾಯ್ತು ಶೆಟ್ಟರೆ?.. ಚೆನ್ನಾಗಿದೆ..