ಮುಂಬಯಿ ಮೇರಿ ಜಾನ್…: ಬದುಕಿಗಾಗಿ ಹೋರಾಟ

ಬದುಕಿಗಾಗಿ ಹೋರಾಟ

ಪ್ರತಿ ಸಲದಂತೆಯೇ ಈ ಸಲ ಮುಂಬಯಿ ಮೈ ಕೊಡವಿ ಮತ್ತೆ ಎದ್ದು ನಿಂತಿದೆ, ಮುಂಬಯಿ ಮೇಲೆ ದಾಳಿ, ಅದು ಒಮ್ಮಲೇ ಸೋತಂತೆ ನಟಿಸಿ ಅದೇ ವೇಗದಲ್ಲಿ ಪುಟಿದು ಮತ್ತೆ ತನ್ನ ಎಂದಿನಂತಹ ಜೀವನ ಪ್ರೀತಿ ಮತ್ತು ವೇಗದ ಬದುಕಿಗೆ ಹೊಂದಿಕೊಂಡು ಬಿಡುತ್ತದೆ. ಪ್ರತಿ ಸಲವು ಮುಂಬಯಿ ಮೇಲೆ ನೆಡೆದ ದಾಳಿಗಳಿಗೆ ಸಾಂತ್ವನ ಹೇಳುವ ಮೊದಲೇ ಎದ್ದು ನಿಲ್ಲುವ ಮುಂಬಯಿ ಬದುಕಿಗೆ ಮತ್ತು ಮುಂಬೈಕರಗಳ ಮೇಲೆ ಪ್ರೀತಿ, ಹೆಮ್ಮೆ ಉಕ್ಕಿ ಹರಿದರೂ, ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಸಿಟ್ಟು ಹೆಡೆಬಿಚ್ಚಿ ನಿಲ್ಲುತ್ತದೆ.

ಈ ‘ಮುಂಬಯಿ’ ನಮಗೆಂತಹ ಮಾದರಿ ನೀಡುತ್ತಿದೆ? ಬಿದ್ದರು ನಿಲ್ಲದಷ್ಟು, ಗಾಯಕ್ಕೊಂದು ಪಟ್ಟಿ ಕಟ್ಟುವುದಕ್ಕು ನಿಲ್ಲದಷ್ಟು, ಮೈಗಂಟಿದ ಮಣ್ಣನ್ನು ಕೊಡವಿಕೊಳ್ಳದಷ್ಟು ವೇಗವಾಗಿ ತನ್ನನ್ನು ಸಂಭಾಳಿಸಿಕೊಂಡು ಹೋಗುವ ಮುಂಬಯಿ, ಬೇರೆ ನಗರಗಳಿಗೆ ಎಂಥಹ ಮಾದರಿ ನೀಡುತ್ತಿದೆ? ನಮ್ಮ ರಾಜಕಾರಣಿಗಳಿಗೆ ನಮ್ಮ ಬಗ್ಗೆ ಎನು ಹೇಳಿಕೊಡುತ್ತಿದೆ?

‘ನಮಗಿಗ ಬಿಳುವುದು, ಈ ನೋವು ರೂಢಿಯಾಗಿದೆ, ಒಂದೊಮ್ಮೆ ಸಹಿಸಲಸಾದ್ಯವಾದದ್ದು ಇವತ್ತು ನಮಗೆ ದಿನನಿತ್ಯದ ಬದುಕಿನ ಅಂಗವಾಗಿದೆ, ಪೇಪರುಗಳಲ್ಲಿ ದಿನಾಲೂ ಅಲ್ಲಲ್ಲಿ ಬಾಂಬ್, ಭಯ್ಯೋತ್ಪಾದಕ ದಾಳಿ ಆಗಿರದೆ ಹೋದಲ್ಲಿ ನಮಗೇನೊ ಕಳೆದುಕೊಂಡಂತಾಗುವುದಿಲ್ಲವೇ? ದಿನಾ ಸಾಯುವವನಿಗೆ ಅಳುವುದಾರೆಂದು, ನಮ್ಮ ಸರದಿಗಾಗಿ ಕಾಯುವುದರ ಬದಲು ನಮ್ಮ ಸರದಿ ಬರುವ ಮೊದಲೇ ಸ್ವಲ್ಪ ಬದುಕು ಬದುಕಿಬಿಡುವಾಸೆ…!!!’

ನಮಗಿಗ ಈ ಭಯೊತ್ಪಾದಕ ದಾಳಿ, ಸಾವು, ರಕ್ತ, ಕೋಲೆ, ಎ.ಕೆ.೪೭, ಅರ್.ಡಿ.ಎಕ್ಸ್. ಇವುಗಳೆಲ್ಲ ನಮ್ಮ ದಿನನಿತ್ತ್ಯದ ಅವಿಭಾಜ್ಯ ಅಂಗಗಳು, ಮೊದಮೊದಲು ದೇಶದ ಯಾವುದೊ ಭಾಗದಲ್ಲಿ ಬಾಂಬ್ ವಿಸ್ಪೋಟವಾದಾಗ ಇಡಿ ದೇಶವೇ ಮನೆಯಲ್ಲೆ ಉಳಿದುಬಿಡುತ್ತಿತ್ತು, ಇವತ್ತಿನ ಪರಿಸ್ಥಿತಿ, ‘ಪಕ್ಕದ ಬೀದಿಯಲ್ಲಿ ಬಾಂಬ್ ವಿಸ್ಪೋಟವಾಗಿ ಸುಮಾರು ಜನ ಸತ್ತಿದ್ದರು, ನಮಗೇನು ಅನಿಸುವುದೇ ಇಲ್ಲ’, ನಮ್ಮ ವಿಕೆಂಡ್, ಪಾರ್ಟಿ, ರೇವ್, ಡಿಸ್ಕೋ, ಇಂಟರನೆಟ್, ಇ-ಮೇಲ, ಎಸ್.ಎಮ್.ಎಸ್., ಮಿಸ್ಸ್ಡಕಾಲ್ ಇವುಗಳಲ್ಲೆನು ಬದಲಾವಣೆಗಳೇ ಆಗುವುದಿಲ್ಲ, ಸಾವುಗಳ ಸಂಖ್ಯೆ ಸ್ವಲ್ಪ ಹೆಚ್ಚಾದರೆ ನಮ್ಮ-ನಮ್ಮಲ್ಲೆ ಕ್ಯಾಂಟಿನಿನ ಮೇಜಿನ ಸುತ್ತಲೊ, ಗುಂಪಿನಲ್ಲಿ ಸೀಗರೇಟ್ ಸುಡುತ್ತಾ ಸಿರಿಯಸ್ಸಾಗಿರುವ ಚಿಂತಕರಂತೆ, ಕ್ಯಾಬಿನಲ್ಲಿ ಕುಳಿತು ನಮ್ಮ ಬುದ್ದಿಜೀವಿಗಳಂತೆ ಸರ್ಕಾರ, ರಾಜಕಾರಣಿಗಳನ್ನು, ಭಾರತವನ್ನು ಮತ್ತು ಅದರ ಪ್ರಜೆಗಳನ್ನು ಒಂದಿಷ್ಟು ಬೈದಾಡಿ, ಮರುದಿನ ಅದನ್ನು ಮರೆತು ವಿಕೆಂಡನಲ್ಲಿ ಪಾರ್ಟಿಯನ್ನೊ, ಚಾರಣವನ್ನೊ, ಮೂವಿ ಪ್ರೋಗ್ರಾಮನ್ನೊ ಹಾಕಿಕೊಳ್ಳುತ್ತಿವಿ. ಆ ಬಾಂಬ ದಾಳಿಯಲ್ಲಿ ಸತ್ತವರನ್ನು ಎಲ್ಲರೂ ಮರೆತು, ಆವತ್ತು ಭಯೋತ್ಪಾದನೆಯ ವಿರುದ್ಧ ತಮ್ಮ ಯೋಜನೆ ಮತ್ತು ಯೋಚನೆ ಸಿಡಿಸಿದ ಮಂತ್ರಿಗಳು ಅದನ್ನು ಮರೆತು, ಎಲ್ಲರೂ ಸುಖವಾಗಿದ್ದಾರೆ ಎಂದು ಸುಳ್ಳು ನಂಬಿಕೆಯನ್ನು ತಾವು ನಂಬಿ ನಮ್ಮನ್ನು ನಂಬಿಸುತ್ತಾರೆ, ಅದಾದ ಮೂರನೆಯ ದಿನಕ್ಕೆ ಮತ್ತೊಂದು ಕಡೆ ಬಾಂಬ್ ವಿಸ್ಪೋಟ ಮತ್ತೆರಡು ದಿನ ಮಾತು-ಕಥೆ, ಹೇಳಿಕೆ…ಹಾಗೆಯೇ ಅದೇ ರಕ್ತದ ಮೇಲೆಯೇ ಮರುದಿನ ನಮ್ಮ ಬದುಕು ಪ್ರಾರಂಭ. ಇದು ಇವತ್ತು ಭಾರತದ ಎಲ್ಲ ನಗರಗಳ ಪರಿಸ್ಥಿತಿ, ಆದರೆ ಇಂತಹ ಮಾದರಿ ನೀಡಿದ್ದೆ ಮುಂಬೈ.

‘ಜನರಿಗೆ ಇವತ್ತು ಹೆಚ್ಚಿನ ಸಹನೆ ಬಂದಿದೆ, ತಾನು ಮತ್ತು ತನ್ನವರು ಸುಖವಾಗಿದ್ದರೆ ಸಾಕು ಎನ್ನು ಸ್ಥಿತಿಗೆ ತಲುಪಿದ್ದಾರೆ, ಇಂಥಹ ಘಟನೆ ನೆಡೆದ ಮರುದಿನ ತಮ್ಮ ಬದುಕು ಕಟ್ಟಿಕೊಳ್ಳಲು ತಮ್ಮ ಹಾದಿ ತಾನು ಹುಡುಕಿಕೊಂಡು ಸಾಗುವರಿಗೆ, ನೆನಪಿನ ಶಕ್ತಿ ದೊಡ್ಡದಿರುವುದಿಲ್ಲ, ಮನುಶ್ಯನ ಹಸಿವೆಗೆ ಎಂಥಹದನ್ನು ಮರೆಸುವ ಶಕ್ತಿ ಇರುತ್ತದೆ.’ ಎಂಬ ನಂಬಿಕೆ ನಮ್ಮನ್ನಳುವವರದ್ದು, ನಾವು ಭಯೊತ್ಪಾದನೆಯನ್ನು ಎಷ್ಟು ಸರಳವಾಗಿ ತೆಗೆದುಕೊಳ್ಳುತ್ತೆವೆಯೋ ನಮ್ಮನ್ನಾಳುವವರು ಅದಕ್ಕಿಂತ ಸರಳವಾಗಿ ನಮ್ಮ ಬದುಕಿನ ಬಗ್ಗೆ ತೆಗೆದುಕೊಳ್ಳುತ್ತಾರೆ ಎಂದು ಈಗ ಮುಂಬೈಕರಗೆ ತೀಳಿದಿದೆ, ಹೀಗಾಗಿ ನಿನ್ನೆ ತಾಜ್ ಎದುರಿಗೆ ಅಷ್ಟೊಂದು ಜನರು ಸೇರಿದ್ದು.

ಅದು ಕೇವಲ ಆರಂಭ, ಇದೇ ಬುಧುವಾರ ಸಾಯಂಕಾಲ ೬ ಗಂಟೆಗೆ ಇದೇ ತಾಜ್ ಹೋಟೆಲಿನ ಎದುರಿನಲ್ಲಿರುವ “ಗೇಟ ವೇ ಅಫ್ ಇಂಡಿಯಾ” ಬಳಿ ನಾವೆಲ್ಲ ಸೇರಿ ನಮ್ಮನ್ನಾಳುವವರನ್ನು ಕೇಳುವವರಿದ್ದೆವೇ, “ನಮ್ಮ ಜೀವದ ಬೆಲೆ ಎಷ್ಟು?”..

ನೀವು ಬರುತ್ತಿರಲ್ಲಾ, ನಾವಿಗ ಎಚ್ಚೆತ್ತಿದ್ದೆವೆ, ಮತ್ತೆ ಹೋಸ ಮಾದರಿಯಾಗಬೇಕಾಗಿದೆ ನಮಗೆ, ನಮ್ಮ ಸಹನೆಯ ಕಟ್ಟೆ ಒಡೆದಿದೆ. ನಾವಿನ್ನು ಬಯೊತ್ಪಾದಕರನ್ನು ಮತ್ತು ನಮ್ಮ ರಾಜಕಾರಣಿಗಳನ್ನು ಪ್ರತಿಸಲದಂತೆ ನಮ್ಮ ಜೀವ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಎನಾದರೂ ಮಾಡಬೇಕಾಗಿದೆ, ನಾವಿಗ ಸುಮ್ಮನಿರುವುದಿಲ್ಲ ಎಂದು ತಿಳಿಸಬೇಕಾಗಿದೆ, ನಮ್ಮ ನಾಯಕರಿಗೆ, ನಮ್ಮನ್ನಾಳುವವರಿಗೆ, ನಮ್ಮ ರಾಜಕಾರಣಿಗಳಿಗೆ ನಮ್ಮ ಸಿಟ್ಟು, ಅವರ ಮೇಲಿರುವ ನಮ್ಮ ಬೇಸರ ತಿಳಿಸಬೇಕಾಗಿದೆ, ನಾವಿಗ ತೋರಿಸಬೇಕಾಗಿದೆ ನಾವೆಷ್ಟು ನೊಂದಿದ್ದೆವೆ, ನಮ್ಮ ಸಹನೆ ತಿರಿಹೋಗಿದೆ. ಈಗ ನಮ್ಮ ಕೋಪ, ಸುಸ್ತು, ನಿರಾಶೆ ಎಲ್ಲವನ್ನು ನಮ್ಮನ್ನಾಳುವರಿಗೆ ತೋರಿಸಬೇಕಾಗಿದೆ.

ಅದಕ್ಕಾಗಿ ಇದೇ ಬುಧುವಾರ, ದಿಸೆಂಬರ್ ೩ರ ಸಾಯಂಕಾಲ ೬ ಗಂಟೆಗೆ “ಗೇಟ ವೇ ಅಫ್ ಇಂಡಿಯಾ” ಬಳಿ ನಾವೆಲ್ಲ ಸೇರಲಿದ್ದೆವೆ, ನಮ್ಮ ಹಕ್ಕನ್ನು ಕೇಳಲು, “ಹೆದರಿಕೆ ಇಲ್ಲದೇ ಬದುಕುವ” ಹಕ್ಕಿಗಾಗಿ. ನಮ್ಮೆಲ್ಲರ ಬದುಕಿಗಾಗಿ ನಮ್ಮ ಬಳಿ ಒಂದು ಸಂಜೆಯಿಲ್ಲವೇ?

Right to LIVE fearlessly. Lets devote one evening of our life to it.

ಕಾಯುವೆ ನಿಮಗಾಗಿ, ಹೋರಾಡಲು ಕೈ ಹಿಡಿದು…

4 Responses to “ಮುಂಬಯಿ ಮೇರಿ ಜಾನ್…: ಬದುಕಿಗಾಗಿ ಹೋರಾಟ”


  1. 1 ನೀಲಾಂಜಲ December 1, 2008 at 9:30 pm

    ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

  2. 4 Mallikarjunagowda December 5, 2008 at 7:47 pm

    ಬರ್ತೀನ್ರೀ …. ಆದ್ರ ನಿಮ್ಮ ಲೇಖನ ಓದಿದ್ದು ೪ನೆ ತಾರೀಖು ಸಾಯಂಕಾಲ …. ಹ್ಯಾಂಗೂ ೯ಕ್ಕ ಮುಂಬೈ ಬರ್ತೀನಲ್ಲ ಆಗ ನಾ ಒಬ್ನ ಅದರೂ ನಿಂತು ಹೋರಾಡಿದ ಆ ಧೀರರಿಗೆ ನಂದೊಂದು ಸಲಾಮು ಹೊಡದ ಬರ್ತೀನಿ ..


Leave a Reply




a

Blog Stats

  • 8,400 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು