ಆಗ ಬಿಡೆವು ಮತ್ತೊಂದು ಬಾರಿ

We Salute

ಹಾಗೇ ಬಿಡೆವು ಈ ಸಾರಿ
ಆಗ ಬಿಡೆವು ಇದ ಮತ್ತೊಂದು ಬಾರಿ
ತೋಡೆಯ ತಟ್ಟಿ, ನೆಲವ ಮೆಟ್ಟಿ
ಹಿಡಿದು ನಾಯಕರ ಕಾಲರ ಪಟ್ಟಿ,
“ನಮ್ಮ ಭದ್ರತೆಯ ಭಾರ ನಿಮ್ಮದಲ್ಲವಾ?”

ಸೇಕ್ಯೂರಿಟಿ ನಿಮಗೆ ಬೇಕು..
‘ಎಕ್ಸೂ’ ಬೇಕು, ‘ವಾಯ್-ಝಡ್ಡೂ’ ಬೇಕು.
ಮೇಲೆ ನಿಮಗೆ ನಮ್ಮ ಟ್ಯಾಕ್ಸು ಬೇಕು
ವೋಟು ಬೇಕು, ಗೂಟದ ಕಾರೂ ಬೇಕು,
“ನಮ್ಮ ಜೀವ ಕಾಯುವ ಭಾರ ನಿಮ್ಮದಲ್ಲವಾ?”

ಪ್ರತಿ ಸಲವೂ ಇದೇ ಆಯಿತು,
ಸತ್ತವರಿಗೆ ಸಂತಾಪವಾಯಿತು, ಬದುಕಿದವರಿಗೆ ಪರಿಹಾರವಾಯ್ತು,
ಅದರ ಮೇಲೆ ನಿಮ್ಮ ‘ಉತ್ತರ’ನ ಪೌರುಷ,
‘ನಮ್ಮ ಬಳಿ ಮಾಹೀತಿ ಇದೆ, ಶಿಘ್ರದಲ್ಲಿಯೇ ಭಂದಿಸಲಿದ್ದೆವೆ’???

‘ತಾಳಿದವನು ಬಾಳಿಯಾನು’ನಮ್ಮ ನಂಬಿಕೆ ಸೋತು ಹೋಗಿದೆ,
ಡಾರ್ವಿನ್ನನೆ ಕೋನೆಗೆ ಜಯಿಸಿದ, ‘ದುರ್ಬಲ ಸಾಯುವ, ಸಬಲನೆ ಬದುಕುವ’
ಬದುಕುವ ಹಂಬಲ ನನಗೂ ಇದೆ, ನೀನಗೂ ಇದೆ, ಬಾ ಗೆಳೆಯ
ತೋಡೆಯ ತಟ್ಟಿ, ನೆಲವ ಮೆಟ್ಟಿ ಹಾಕುವ ಕೂಗೊಂದನು,
“ಭಾರತಿಯರು ಎಲ್ಲ ಒಂದೇ, ನಮಗೆ ಒಬ್ಬನೆ ಶತ್ರುವು.
ಭಯದ ಎದುರು ಗೆದ್ದೆಗೆಲುವೆವು ಅದಕೆ ನಾವು ಭಾರತಿಯರು.”

——0——

ಇವತ್ತು ಬುಧುವಾರ ಸಾಯಂಕಾಲ ೬ ಗಂಟೆಗೆ ತಾಜ್ ಹೋಟೆಲಿನ ಎದುರಿನಲ್ಲಿರುವ “ಗೇಟ ವೇ ಅಫ್ ಇಂಡಿಯಾ” ಬಳಿ ನಾವೆಲ್ಲ ಸೇರಿ ನಮ್ಮನ್ನಾಳುವವರನ್ನು ಕೇಳುವವರಿದ್ದೆವೇ, “ನಮ್ಮ ಜೀವಕ್ಕೆ ಬೆಲೆ ಇಲ್ಲವೇ?”..

ನೀವು ಬರುತ್ತಿರಲ್ಲಾ, ನಾವಿಗ ಎಚ್ಚೆತ್ತಿದ್ದೆವೆ, ನಮ್ಮ ಸಹನೆಯ ಕಟ್ಟೆ ಒಡೆದಿದೆ. ನಾವಿನ್ನು ಬಯೊತ್ಪಾದಕರನ್ನು ಮತ್ತು ನಮ್ಮ ರಾಜಕಾರಣಿಗಳನ್ನು ಪ್ರತಿಸಲದಂತೆ ನಮ್ಮ ಜೀವ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಎನಾದರೂ ಮಾಡಬೇಕಾಗಿದೆ, ನಾವಿಗ ಸುಮ್ಮನಿರುವುದಿಲ್ಲ ಎಂದು ತಿಳಿಸಬೇಕಾಗಿದೆ, ನಮ್ಮ ನಾಯಕರಿಗೆ, ನಮ್ಮನ್ನಾಳುವವರಿಗೆ, ನಮ್ಮ ರಾಜಕಾರಣಿಗಳಿಗೆ ನಮ್ಮ ಸಿಟ್ಟು, ಅವರ ಮೇಲಿರುವ ನಮ್ಮ ಬೇಸರ ತಿಳಿಸಬೇಕಾಗಿದೆ, ನಾವಿಗ ತೋರಿಸಬೇಕಾಗಿದೆ ನಾವೆಷ್ಟು ನೊಂದಿದ್ದೆವೆ, ನಮ್ಮ ಸಹನೆ ತಿರಿಹೋಗಿದೆ. ಈಗ ನಮ್ಮ ಕೋಪ, ಸುಸ್ತು, ನಿರಾಶೆ ಎಲ್ಲವನ್ನು ನಮ್ಮನ್ನಾಳುವರಿಗೆ ತೋರಿಸಬೇಕಾಗಿದೆ.

ಅದಕ್ಕಾಗಿ ಇಂದು ಬುಧುವಾರ, ದಿಸೆಂಬರ್ ೩ರ ಸಾಯಂಕಾಲ ೬ ಗಂಟೆಗೆ “ಗೇಟ ವೇ ಅಫ್ ಇಂಡಿಯಾ” ಬಳಿ ನಾವೆಲ್ಲ ಸೇರಲಿದ್ದೆವೆ, ನಮ್ಮ ಹಕ್ಕನ್ನು ಕೇಳಲು, “ಹೆದರಿಕೆ ಇಲ್ಲದೇ ಬದುಕುವ” ಹಕ್ಕಿಗಾಗಿ. ನಮ್ಮೆಲ್ಲರ ಬದುಕಿಗಾಗಿ ನಮ್ಮ ಬಳಿ ಒಂದು ಸಂಜೆಯಿಲ್ಲವೇ?

Right to LIVE fearlessly. Lets devote one evening of our life to it.

ಕಾಯುವೆ ನಿಮಗಾಗಿ, ಹೋರಾಡಲು ಕೈ ಹಿಡಿದು…
We Protect

2 Responses to “ಆಗ ಬಿಡೆವು ಮತ್ತೊಂದು ಬಾರಿ”


  1. 1 sunaath December 7, 2008 at 4:08 pm

    ಹೌದು ಗೆಳೆಯಾ,
    ಈ ಸಲ ಒಳಗಿನ ಶತ್ರುಗಳನ್ನು ವೋಟುಗಳ ಮೂಲಕ ಸಾಯಿಸಬೇಕಾಗಿದೆ.

  2. 2 ಪ್ರದೀಪ್ December 10, 2008 at 2:02 pm

    ಚೆನ್ನಾಗಿ ಬರೆದಿದ್ದೀರಿ ಶೆಟ್ರೇ… ಆದ್ರೆ, ಶೀಘ್ರ ಬಂಧಿಸಿದವರನ್ನು ಮಾಡಿದ್ದೇನು? ಒಬ್ಬನನ್ನು ವಿಮಾನ ಅಪಹರಣ ಮಾಡಿ ಬಿಡುಗಡೆಗೊಳ್ಳಿಸುವ ತನಕ ಜೈಲಿನಲ್ಲಿ ಅತಿಥಿ ಸತ್ಕಾರ ಮಾಡಿದರು. ಮತ್ತೊಬ್ಬ “ಗುರು”ವನ್ನು ಇನ್ನೂ ಜೈಲಿನಲ್ಲಿ ಸತ್ಕರಿಸುತ್ತಿದ್ದಾರೆ. (ರಾಷ್ಟ್ರಪತಿಗಳಿಗೋಂದು ನಿರ್ಣಯ ಮಾಡಲು ವರ್ಷಗಳು ಬೇಕೆ?) ಚಿತ್ರದಲ್ಲಿ ಬರೆದಂತೆ, ಈ ಉಗ್ರ ತರಬೇತಿ ಕೇಂದ್ರಗಳನ್ನಿನ್ನಾದರೂ ಧ್ವಂಸಗೊಳಿಸಬೇಕು. ಇಲ್ಲವಾದಲ್ಲಿ ರಾಜಿನಾಮೆ ಕೊಟ್ಟು, ಕೈಯಲ್ಲಿ ಬಳೆ ತೊಟ್ಟು ಮನೆಯಲ್ಲಿ ಕೂರಬೇಕು, ಆಡಳಿತದ ಚುಕ್ಕಾಣಿ ಹಿಡಿದವರು.


Leave a Reply




a

Blog Stats

  • 8,400 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು