ಕನ್ನಡ ಸಾಹಿತ್ಯ ಲೋಕದಲ್ಲಿ ಮುಂದುವರೆದ ಜನಾಂಗದವರ ಸಾಹಿತ್ಯಸೃಷ್ಟಿ ತುಂಬಾ ಹೆಚ್ಚಾಗುತ್ತಿದ್ದು ಒಂದೆರಡು ವರ್ಷಗಳ ಕಾಲ ಇವರ ಸಾಹಿತ್ಯಸೃಷ್ಟಿಯನ್ನು ನಿರ್ಭಂದಿಸಬೇಕೆಂದು ಇಲ್ಲಿ ಒತ್ತಾಯಿಸಲಾಯಿತು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಯುತರು, ಕನ್ನಡ ಸಾಹಿತ್ಯದಲ್ಲಿ ಇಲ್ಲಿಯವರೆಗೆ ಬಹುಪಾಲು ಮುಂದುವರೆದ ಜನಾಂಗದವರೆ ಸಾಹಿತ್ಯಸೃಷ್ಟಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಅವರ ಕನ್ನಡ ಸಾಹಿತ್ಯದಲ್ಲಿ ಅವರ ಪ್ರಮಾಣ ಹೆಚ್ಚಾಗಿದ್ದು, ಉಳಿದವರಿಗೂ ಅವಕಾಶ ನಿಡುವುದಕ್ಕಾಗಿ ಸರ್ಕಾರ ಅವರ ಮೇಲೆ ವಿಶೇಷ ಮಸೂದೆ ಮಂಡಿಸಿ ಅವರ ಸಾಹಿತ್ಯಸೃಷ್ಟಿಯನ್ನು ನಿರ್ಭಂದಿಸಬೇಕೆಂದು ಮನವಿ ಮಾಡಿದ್ದಾರೆ. ಒಂದು ವೇಳೆ ಮನ್ನಣೆ ದೊರೆಯದಿದ್ದ ಪಕ್ಷದಲ್ಲಿ ಮನೆಯಿಂದ ಬೀದಿಗಿಳಿದು,ಬಸ್ಸ ಹತ್ತಿ ಬೆಂಗಳೂರಿಗೆ ಬಂದು ಲಾಲಭಾಗ, ವಿಧಾನಸೌಧ ಇತ್ಯಾದಿ ನೋಡಿಕೊಂಡು ಹಾಗೆಯೇ ಬೃಹತ್ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.
ಪೂರಕ ಓದಿಗೆ: ಕನ್ನಡ ಪ್ರಭ

http://kenecoffee.wordpress.com/
“ಕನ್ನಡ ಸಾಹಿತ್ಯ ಲೋಕದಲ್ಲಿ ಮುಂದುವರೆದ ಜನಾಂಗದವರ ಸಾಹಿತ್ಯಸೃಷ್ಟಿ ತುಂಬಾ ಹೆಚ್ಚಾಗುತ್ತಿದ್ದು ಒಂದೆರಡು ವರ್ಷಗಳ ಕಾಲ ಇವರ ಸಾಹಿತ್ಯಸೃಷ್ಟಿಯನ್ನು ನಿರ್ಭಂದಿಸಬೇಕೆಂದು ಇಲ್ಲಿ ಒತ್ತಾಯಿಸಲಾಯಿತು”
ಎನ್ರೀ ಇದರ ಅರ್ಥ? ಇಲ್ಲಿ “ಮುಂದುವರೆದ ಜನಾಂಗ”ದವರೆಂದರೆ ಯಾರು? ಅವರ್ಯಾರಾದರೂ ನಿರ್ಬಂಧ ತರೋದೆಂದರೆ ಏನರ್ಥ ಅದರದ್ದು? ಸ್ವಲ್ಪ ತಿಳಿಸ್ತೀರಾ?
ಪೂರಕ ಓದಿಗೆಂದು ಕನ್ನಡ ಪ್ರಭಕ್ಕೆ ಹೋದ್ರೆ (ಇದು ನೀವೇ ಮೇಲ್ಗಡೆ ಕೊಟ್ಟ ವಿಳಾಸ–
http://www.kannadaprabha.com/NewsItems.asp?ID=KPD20081218120325&Title=District+Page&lTitle=%C1%DBd%C0+%C8%DB%7D%E6%25&Topic=0&ndate=12/19/2008&dName=%5F%7D%DA%C3%A5%DA%DFV%DA%25&Dist=-2), “ಬಹುಪಾಲು ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರನ್ನಾಗಿ ಮುಂದುವರಿದ ಜನಾಂಗದವರನ್ನು ಮಾಡಲಾಗಿದೆಯೆಂದು” ಇದೆ. ನೀವು ಬರೆದ ಹಾಗೆ, “ಮುಂದುವರೆದ ಜನಾಂಗದವರ ಸಾಹಿತ್ಯ ಸೃಷ್ಟಿ ನಿಲ್ಲಬೇಕು” ಎಂದು ಏನೂ ಬರೆದಿಲ್ಲವಲ್ಲ? ಸ್ವಲ್ಪ ಸ್ಪಷ್ಟಪಡಿಸಿ.
ಸದ್ಯ ಆ ಹೋರಾಟಗಾರರ ಜಾತಿಕಣ್ಣು ಬ್ಲಾಗ್ ಮೇಲೆ ಇನ್ನೂ ಬಿದ್ದಿಲ್ಲ. ಬ್ಲಾಗ್ ಲೋಕದಲ್ಲೂ ಹೀಗೆ ಆಗಿದ್ದು ಇನ್ಮೇಲೆ ಬ್ಲಾಗ್ ತೆಗೆಯೋಕೆ ’ಮುಂದುವರೆದವರಿಗೆ’ ಅವಕಾಶ ಕೊಡಬಾರದೆಂದು ಗೂಗಲ್ ಮುಂತಾದ ಸಂಸ್ಥೆಗಳಿಗೆ ಆದೇಶಿಸಬೆಕು ಅಂತ ವಿಶ್ವಸಂಸ್ಥೆಗೆ ಅರ್ಜಿ ಸಲ್ಲಿಸ್ತೀವಿ ಅಂತನೂ ಹೊರಟ್ರೆ ಆಶ್ಚರ್ಯ ಏನಿಲ್ಲ.
ಮುಂದುವರೆದ ಜನಾಂಗದವರ ಸಾಹಿತ್ಯಸೃಷ್ಟಿಯನ್ನು ನಿರ್ಬಂಧಿಸಲು ಕೇಳಿದ್ದಾರೆಯೇ ಹೊರತು,
ಜನಾಂಗ-ಸೃಷ್ಟಿಯನ್ನೇ ನಿರ್ಬಂಧಿಸಲು ಕೇಳಿಲ್ಲವಲ್ಲಾ. Thank God!
ಕುಡಿದು ಚರ೦ಡಿಯಲ್ಲಿ ಬಿದ್ದಾಗ ಬಾಯಲ್ಲಿ ಬರೋದೇ ‘ಸಾಹಿತ್ಯ’ ಅ೦ತ ತಿಳ್ಕೊ೦ಡಿದ್ದಾರೆ ಮಹಾನ್ ಪ್ರಜೆಗಳು.
ವೈಶಾಲಿ,
ಪ್ರದೀಪ್,
ಇದು ನಮ್ಮ ಪುಗಸಟ್ಟೆ ಪುರವಣಿಯಲ್ಲಿ ಬಂದಿದ್ದು
ವಿಕಾಸ್,
ಬಂದೆ ಬರತಾವಾ ಕಾಲಾ ಬಂದೆ ಬರತಾವ
ಕಾಕಾ,
ಯಪ್ಪಾ..!@#@#!#!#@#????
ಪ್ರಮೋದ,
ಅದು ಓಂಥರಾ ಸಾಹಿತ್ಯನರಿ
ಪ್ರೀತಿಯಿರಲಿ
ಶೆಟ್ಟರು