
ಇತ್ತಿಚಿನ ದಿನಗಳಲ್ಲಿ ಬ್ಲಾಗ ಬರೆಯುತ್ತಿರುವವರ ಸಂಖ್ಯೆ ಬೆಳೆಯುತ್ತಿದ್ದರು ಅದಕ್ಕೆ ಪೂರಕವಾಗಿ ಬ್ಲಾಗ ಓದುಗರ ಸಂಖ್ಯೆ ಬೆಳೆಯುತ್ತಿಲ್ಲದಿರುವುದನ್ನು ಗಮನಿಸಿ “ಕನ್ನಡ ಬ್ಲಾಗ ಸಾಹಿತ್ಯ ಪರಿಷತ್” ಜ್ಞಾನಪೀಠಿ ಅನಂತಮೂರ್ತಿಯವರನ್ನು ತಮ್ಮ ಬ್ರಾಂಡ್ ಅಂಬಾಸಿಡರ ಆಗಿ ನಿಯುಕ್ತಗೊಳಿಸಿದ್ದಾರೆ.
ಅನಂತಮೂರ್ತಿಯವರು ಇದನ್ನು ಸವಾಲಾಗಿ ಸ್ವಿಕರಿಸಿ, ಉತ್ತಮ ಪ್ರಾಚಾರಕ್ಕಿಂತ ಇಂದು ಜನರು “ಅಪಪ್ರಚಾರ” ಮತ್ತು “ಬ್ರೇಕಿಂಗ್ ನ್ಯೂಜ್”ಗಳಿಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆಂದು ಕಳೆದ ವರ್ಷದ “ವಾರ್ಷಿಕ ಸಾಹಿತ್ಯಿಕ ಜಗಳ”ವನ್ನು ಉದಾಹರಿಸಿದ್ದಾರೆ, ಕಳೆದ ವರ್ಷದ “ವಾರ್ಷಿಕ ಸಾಹಿತ್ಯಿಕ ಜಗಳ”ದಿಂದಾಗಿ ಭೈರಪ್ಪನವರ “ಆವರಣ” ಕನ್ನಡದ ಸೂಪರ್ ಹಿಟ್ ಆಗಿತ್ತು ಎಂದು ನೆನಪಿಸುತ್ತಾ, ಬ್ಲಾಗ ಸಾಹಿತ್ಯ ಪ್ರಚಾರಕ್ಕೆ ಅದೆ ಹಿನ್ನಲೆಯಿಟ್ಟು ಪ್ರಚಾರ ಆರಂಭಿಸುವುದಾಗಿ ಚಿಂತನೆ ನೆಡೆಸಿ ಪ್ರಚಾರವನ್ನು ಆರಂಬಿಸಿಯೆ ಬಿಟ್ಟರು.
ಇನ್ನು ಕನ್ನಡ ಬ್ಲಾಗ ಸಾಹಿತ್ಯ ತನ್ನ ಉತ್ತುಂಗಕ್ಕೆ ಎರುವುದು ಖಂಡಿತ..!!!???
ಪೂರಕ ಓದಿಗೆ: ಕನ್ನಡಪ್ರಭ

ತಮ್ಮ ಕಾದಂಬರಿಗಳಿಗೆ ಓದುಗರೇ ಇಲ್ಲದೆ, ಎಲ್ಲರೂ ಭೈರಪ್ಪನವರ ಓದುಗರೇ ಆಗಿದ್ದರಿಂದ ಈ ಗಡ್ಡದ ಮೂರ್ತಿ ಕೆರಳಿದಂತಿದೆ. ತಾನು ಬರೆದದ್ದೇ “ರುಜುವಾತು” ಎಂದು ತಿಳಿದ ಅಜ್ಞಾನಮೂರ್ತಿ “ತಾನು ಮಣ್ಣು ಮುಕ್ಕಿದರೂ, ಮೀಸೆ ಮಣ್ಣಾಗಿಲ್ಲ” ಎಂದು ಊಳಿಡುತ್ತಿದೆ.
ಅನಂತಮೂರ್ತಿಯವರು ಈ ಮಟ್ಟಕ್ಕೆ ಇಳಿದು, ಫಾಸ್ಸಿಸ್ಟ್ ಗಳ ಬೆಂಬಲಿಗರನ್ನು ದೂಷಿಸುವ ಕೆಲಸವನ್ನೂ ಮಾಡುತ್ತಿದ್ದಾರೆ ಎಂದರೆ ಅವರಿಗೆ ಬೇರೆ ಕೆಲಸವಿಲ್ಲವಿರಬೇಕು… ಅದಿರಲಿ, ಅವರೂ ಒಬ್ಬ ಬ್ಲಾಗರ್ ತಾನೆ?
thats y I admire him so much !
ಕಾಕಾ,
ಕೆರಳಿದವರನ್ನೆಲ್ಲ ನಾವು ಕೇಳಬೇಕಿಲ್ಲ ಅಲ್ವಾ?
ಹರೀಶ್,
ಅವರು ತಮ್ಮನ್ನು ಸೇರಿಸಿಯೇ ಹೇಳಿದ್ದು..
ವಿಕಾಸ್,
ನಾನೂ ಕೂಡಾ
ಪ್ರೀತಿಯಿರಲಿ
ಶೆಟ್ಟರು