
ಗೆಳತಿ,
ಈ ಬದುಕು ನೀನಗಾಗಿ
ಪ್ರೀತಿಯಿಂದ,
ಪ್ರೀತಿಗಾಗಿ,
ಪ್ರೀತಿಗೋಸ್ಕರ.
**************************
ನೀ ಬರುವ ದಾರಿ ಕಾಯುತ್ತಿವೆ
ನನ್ನ ಮನೆ-ಮನಗಳೆರಡೂ, ಮತ್ತೆ
ದೇವರೆದುರಿನ ಹಣತೆಯಲ್ಲಿ
ಈಗಷ್ಟೆ ಮಡಿಯಿಂದ ಹೋಸೆದ ಬತ್ತಿಯೂ.
ಜನುಮ-ಜನುಮದ ಅನುಭಂದವೋ
ನಾನರಿಯೆ, ಈ ಜನ್ಮದ್ದಂತೂ ನಿಜ,
ಈ ಉಸಿರಿನಷ್ಟೆ, ನೀ
ನನ್ನೊಳಗಿರುವುದು ಅಷ್ಟೆ ಸಹಜ.
ಆಕಾಶ-ಭೂಮಿ ಒಂದಾದಂತೆ
ನನಗೇಕೋ ಈ ಅನಿಸಿಕೆ,
ನೀ ಬರುವ ದಾರಿ ಕಾಯುವುದಷ್ಟೆ
ಈಗ ಈ ಮನದ ಹವಣಿಕೆ.
ಕಣ್ರೆಪ್ಪೆಗೆ ದಣಿವಿಲ್ಲ
ನಿನ್ನ ದಾರಿ ಕಾಯಲು,
ನಿದ್ರೆಯದ್ದಂತೂ ಸುಳಿವಿಲ್ಲ
ಮನದಲ್ಲೊಮ್ಮೆ ನೀ ಹಾಯಲು
ನಿನ್ನೆ ರಾತ್ರಿ ನೀಲಾಕಾಶದಲ್ಲಿ
ನಕ್ಷತ್ರಗಳಿಗೆ ನಿನ್ನದೇ ಚಿಂತೆ,
ನೀ ಬರುವ ಹಾದಿಯಲ್ಲೇ
ಹೂಡುವುವಂತೆ ಬೆಳಕಿನಾ ಸಂತೆ.

“ನಿನ್ನೆ ರಾತ್ರಿ ನೀಲಾಕಾಶದಲ್ಲಿ
ನಕ್ಷತ್ರಗಳಿಗೆ ನಿನ್ನದೇ ಚಿಂತೆ,
ನೀ ಬರುವ ಹಾದಿಯಲ್ಲೇ
ಹೂಡುವುವಂತೆ ಬೆಳಕಿನಾ ಸಂತೆ.”
ವಾಹ್ ಶೆಟ್ಟರ, ಶಾಯರೀ ಪಸಂದ ಆತು.
ಸುಹಾನ ಅಲ್ಲಾ!
ವ್ಹಾವ್…ಸುನಾಥರು ಹೇಳಿದ ಸಾಲುಗಳೂ ನನ್ನ ಮನಮುಟ್ಟಿದವು.
ಥ್ಯಾಂಕ್ಸ್ರಿ ಕಾಕಾ,
ನಿಮ್ಮ ವ್ಹಾ..ವ್ಹಾ..ಕ,
“ಇರ್ಶಾದ” ಅನ್ನರಿ ಇನ್ನೋದು ಹಂಗ “ಸಮಾ ಮೇಹಫಿಲ್ ಕೆ ನಾಮ್” ಹಾಕೂನಂತ..
ಗ್ರಾಮಸ್ಥರಿಗೆ,
ಸ್ವಾಗತ, ತಮ್ಮ ಮೆಚ್ಚುಗುಗೆ ಆಭಾರಿ..
ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಷಯ
-ಶೆಟ್ಟರು
ಸರ್,
ಗ್ರೀಟಿಂಗ್ಸ್ ನಲ್ಲಿ “ನೋವಿಗೂ” ಆಗಬೇಕಾಗಿದ್ದ ಜಾಗದಲ್ಲಿ ನೂವಿಗೂ ಅಂತಾಗಿದೆ.
ಕವಿತೆ ಚೆನ್ನಾಗಿದೆ.
ರಂಜಿತ್ ,
ಧನ್ಯವಾದಗಳು, ತಿದ್ದುಪಡಿ ಮಾಡಲಾಗಿದೆ.
-ಶೆಟ್ಟರು
koneya 2 pyaara thumbaa chennaagittu
ಚೆನ್ನಾಗಿದೆ