ಮುಂಬಯಿಯಲ್ಲಿ “ಕನ್ನಡವೇ ಸತ್ಯ”

ಮುಂಬಯಿಯಲ್ಲಿ "ಕನ್ನಡವೇ ಸತ್ಯ"

 ಇದೇ ಎಪ್ರೀಲ್ ೧೯ರ ರವಿವಾರ ಸಾಯಂಕಾಲ ಮುಂಬಯಿ ಕನ್ನಡಿಗರು “ಭಾವಗಳೊಂದಿಗೆ ಒಂದು ಸುಂದರ ಸಂಜೆ” ನಾಡಿನ ಹೆಸರಾಂತ ಗಾಯಕ ಮತ್ತು ಸಂಗೀತ ನಿರ್ದೇಶಕ “ಸಿ. ಅಶ್ವತ್ಥ್”ರೊಡನೆ ಹಂಚಿಕೊಳ್ಳುತ್ತಿದ್ದಾರೆ.

ಕನ್ನಡದ ಹೆಮ್ಮೆಯ ಸಂಘ್ಹಗಳಲ್ಲೊಂದಾದ “ಮುಂಬಯಿ ಕನ್ನಡ ಸಂಘ್ಹ”ವು ‘ಮುಂಬೈನಲ್ಲಿ ಸಿ.ಅಶ್ವಥ್’ ಎಂಬ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಿದ್ದಾರೆ, ಸಿ.ಅಶ್ವಥ್ ಇದೇ ಮೊದಲ ಬಾರಿಗೆ ಮುಂಬೈ ಕನ್ನಡಿಗರಿಗಾಗಿ ರಸಸಂಜೆಯೊಂದನ್ನು ನಡೆಸಿಕೊಡಲಿದ್ದು, ಆಯ್ದ 24 ಗೀತೆಗಳಿಂದ ಮೂರುವರೆ ಗಂಟೆಗಳ ಕಾಲ ಮುಂಬೈ ಕನ್ನಡಿಗರನ್ನು ಗಾನಸುಧೆಯಲ್ಲಿ ಮೈಮರೆಸಲಿದ್ದಾರೆ. ಅಶ್ವಥ್ ರೊಂದಿಗೆ ಎಂ ಡಿ ಪಲ್ಲವಿ, ಸುಪ್ರಿಯಾ ಮತ್ತು ಮಂಗಳ ಸಹ ಗಾನ ಸುಧೆ ಹರಿಸಲಿದ್ದಾರೆ. ಗಾಯಕಿ ಸಂಗೀತ ಕಟ್ಟಿ ವಿಶೇಷ ಹಾಡೊಂದನ್ನು ಹಾಡಲಿದ್ದಾರೆ. ಕುವೆಂಪು, ನರಸಿಂಹಸ್ವಾಮಿ, ಗೋಪಾಲಕೃಷ್ಣಅಡಿಗ, ದ.ರಾ.ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ, ಎಚ್.ಎಚ್.ವೆಂಕಟೇಶಮೂರ್ತಿ, ಲಕ್ಷ್ಮಿನಾರಾಯಣ ಭಟ್ಟ, ವ್ಯಾಸರಾವ್…ಮುಂತಾದವರ ಭಾವಗೀತೆಗಳು ಶಣ್ಮುಖಾನಂದ ಸಭಾಂಗಣ ಮುಂಬೈನಲ್ಲಿ  ಪ್ರತಿಧ್ವನಿಸಲಿವೆ.

ಪಾಸು ಹೊಂದಿದವರು ಮಾತ್ರ ಕಾರ್ಯಕ್ರಮ ನಡೆಯುವ ಸಭಾಂಗನಕ್ಕೆ ಪ್ರವೇಶ ಹೊಂದಬಹುದಾಗಿದ್ದು, ಪಾಸುಗಳಿಗಾಗಿ ಸಂಘದ ಕಛೇರಿಯಲ್ಲಿ ವಿಚಾರಿಸಬಹುದಾಗಿದೆ.

ಕರ್ನಾಟಕ ಸಂಘ, ಮುಂಬಯಿ, ವಿಚಾರಣೆಗಾಗಿ ಮಾಹೀತಿಗಳು:
ದೂರವಾಣಿ ಸಂಖ್ಯೆ: 24377022/ 24379645/ 24339346
ಫ್ಯಾಕ್ಸ ಸಂಖ್ಯೆ: 24381486
ಮಿಂಚಂಚೆ:
karnataka.sangha@yahoo.com
ವೇಬಸೈಟ್: http://karnatakasanghamumbai.com/

ಎಲ್ಲರೂ ಬನ್ನಿ, ಕಾರ್ಯಕ್ರಮದಲ್ಲಿ ಭೇಟಿಯಾಗೋಣ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಸಿರಿಗನ್ನಡಂ ಗಲ್ಲಿ ಗಲ್ಲಿಗೆ, ೧೯ರ ಸಂಜೆ ಮುಂಬಯಿ ಕನ್ನಡಿಗರೆಲ್ಲ ಶಣ್ಮುಖಾನಂದ ಹಾಲ್ಗೆ…

1 Response to “ಮುಂಬಯಿಯಲ್ಲಿ “ಕನ್ನಡವೇ ಸತ್ಯ””


  1. 1 ಸುನಾಥ April 8, 2009 at 11:46 pm

    ಶೆಟ್ಟರ,
    ಬರಲಿಕ್ಕೆ ಆಗದಿದ್ದರೂ ಸಹ, ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ಕೋರುತ್ತೀನಿ.
    ಕಾರ್ಯಕ್ರಮ ಯಶಸ್ವಿಯಾಗಲಿ, ಕನ್ನಡಿಗರ ಮನಸ್ಸನ್ನು ತಣಿಸಲಿ.


Leave a Reply




a

Blog Stats

  • 8,446 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು