
ಅವಳು ತಬ್ಬಿ ನಿಂತಾಗ
ತಬ್ಬಿಬ್ಬುಗೊಂಡ ಹುಡುಗ,
ಅವಳು ‘ನಾ ಬಳ್ಳಿಯಂತೆ’ ಎಂದಾಗ
ಇನ್ನಷ್ಟು ಹತ್ತಿರ ಬರ ಸೆಳೆದ.
ಗೆಳತಿ, ನೀ ಸಿಗುವ ತನಕ
ಮೌನ ನನಗರ್ಥವಾಗುವುದು
ನನಗೇ ಗೋತ್ತಿರಲಿಲ್ಲ,
ಈಗ ಮಾತುಗಳು ಬರಿ
ಕಿವಿಗಪ್ಪಳಿಸಿ ಹಿಂದೆ ಸರಿವ
ಸಪ್ಪಳಗಳಾಗಿವೆಯಲ್ಲ.
ಚಿತ್ರಕೃಪೆ: ಬಿ.ಬಿ.ಸಿ. ವಾರ್ತೆ

ಶೆಟ್ಟರ,
ಪ್ರೇಮದಲ್ಲಿ ಸಿಲುಕಿರುವವರ ಸ್ಥಿತಿಯನ್ನು ಚೆನ್ನಾಗಿ ಬಣ್ಣಿಸಿರುವಿರಿ. (ಸ್ವಂತ ಅನುಭವವೆ?)
ಕಾಕಾ,
ಸ್ವಂತದ್ದೆನಿಲ್ರಿ, ಎಲ್ಲಾ “ನೋಡಿ ಕಲಿ”, ಇನ್ನು ಮುಂದೆ “ಮಾಡಿ ಕಲಿ”
ಪ್ರೀತಿಯಿರಲಿ
ಶೆಟ್ಟರು