ಗುಲ್ ಮೊಹರ್ ಮತ್ತೆ ಅರಳಿದೆ…

 ಗುಲ್ ಮೋಹರ್ ಮತ್ತೆ ಅರಳಿದೆ
ಗೆಳತಿ, ಗುಲ್ ಮೊಹರ್ ಹೂವಿನ
ಹಂದರದ ಕೆಳಗೆ ನೀ ಕೊಟ್ಟು ಹೋದ ಮುಗುಳ್ನಗೆ
ನನ್ನನ್ನು ಇನ್ನೂ ಕಾಡುತ್ತಿದೆ, ನಾನಲ್ಲೆ ಕಾಯುತ್ತಿದ್ದೆನೆ
ನೀ ಮತ್ತೆ ಬರುವ ದಾರಿ ಕಾಯುತ್ತಾ.
ಗುಲ್ ಮೊಹರ್ ಮತ್ತೆ ಅರಳಿದೆ ನಿನಗೆ ಗೋತ್ತಾ?

*

ಕಣ್ಣಂಚಲಿ ನೀ ನಗುವ ಚಿತ್ರವಿದೆ
ತುಟಿಯಂಚಲಿ ನಿನ್ನದೆ ಹೆಸರಿದೆ,
ಒಟ್ಟಿನಲ್ಲಿ ಮನದ ಬಯಲೊಳೆಗೆಲ್ಲ
ಬರಿ ನಿನ್ನದೆ ಒಲವ ಜಾತ್ರೆಯಿದೆ.

5 Responses to “ಗುಲ್ ಮೊಹರ್ ಮತ್ತೆ ಅರಳಿದೆ…”


  1. 1 prachi June 11, 2009 at 4:12 pm

    hey
    its nice… i just read i found my old memories of broken love

  2. 2 ಸುನಾಥ June 12, 2009 at 11:41 am

    ನವಿರಾದ ಭಾವನೆಗಳ ಕವನ!

  3. 3 ಶೆಟ್ಟರು (Shettaru) June 12, 2009 at 3:51 pm

    ಪ್ರಾಚಿ,

    ನಿಮ್ಮ ಪ್ರೀತಿಯ ಗುಲ್ ಮೊಹರ್ ಮತ್ತೆ ಅರಳಲಿ ಎಂಬ ಹಾರೈಕೆ ನನ್ನದು.

    ಕಾಕಾ,

    ಧನ್ಯವಾದಗಳು

    -ಶೆಟ್ಟರು

  4. 4 ವಿಜಯರಾಜ್ ಕನ್ನಂತ July 2, 2009 at 1:10 pm

    touching Lines..ನೀ ಮತ್ತೆ ಬರುವ ದಾರಿ ಕಾಯುತ್ತಾ.
    ಗುಲ್ ಮೊಹರ್ ಮತ್ತೆ ಅರಳಿದೆ ನಿನಗೆ ಗೋತ್ತಾ?

  5. 5 ಶೆಟ್ಟರು (Shettaru) July 6, 2009 at 3:06 pm

    ವಿಜಯರಾಜ್,

    ಧನ್ಯವಾದಗಳು

    -ಶೆಟ್ಟರು


Leave a Reply




a

Blog Stats

  • 7,975 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು