ತಾಳು ನನ್ನವಳು ಬರಲಿ

ನಿನ್ನೆತನಕ ಜೀವದ ಗೆಳತಿ
ಇಂದವಳು ನನ್ನ ಮದುವಣಗಿತ್ತಿ,
ನಿನ್ನೆಯ ಕನಸ, ನಾಳಿನ ಬದುಕ
ಜೋತೆ ನೆಡೆಯುವ ಸಂಗಾತಿ.

~~0~~

ಕಾಡಿಗೆ ಹಚ್ಚಿದ,
ಕಾಡುವ ಕಂಗಳ
ಮಧು ತುಂಬಿದ ಹೂ ನೀ

ಬಿಟ್ಟು ಬಿಡದೆ,
ನಿನ್ನನೆ ಸುತ್ತುವ
ಆಸೆ ತುಂಬಿದ ದುಂಬಿ ನಾ.Test

~~0~~

ನೀಲಾಕಾಶದ ಎಲ್ಲ
ಮೋಡಗಳು ಹನಿಯಾಗುವುದಿಲ್ಲ
ನನ್ನದೆಯ ಎಲ್ಲ
ಪ್ರೀತಿಯೂ ಮಾತಾಗುವುದಿಲ್ಲ,
ಕೆಲವೊಮ್ಮೆ ಬರ-ಮತ್ತೊಮ್ಮೆ ನೆರೆ.

~~0~~

ಮೋಡದ ಸೆರಗಿನ ಹಿಂದೆ
ಕಣ್ಣಾ ಮುಚ್ಚಾಲೆಯಾಡುತ್ತಿದ್ದ
ಸೂರ್ಯನಿಗೆ ನಾ ಹೇಳಿದೆ
‘ತಾಳು ನನ್ನವಳು ಬರಲಿ’

3 Responses to “ತಾಳು ನನ್ನವಳು ಬರಲಿ”


  1. 2 ಸುನಾಥ September 9, 2009 at 5:14 pm

    ಶೆಟ್ಟರ,
    ಕವನ first class ಆಗೇದ.

  2. 3 ಶೆಟ್ಟರು (Shettaru) September 18, 2009 at 12:07 pm

    ರಂಜಿತ್, ಕಾಕಾ

    ತಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು

    -ಶೆಟ್ಟರು


Leave a Reply




a

Blog Stats

  • 8,289 hits

ಕೆಂಡಸಂಪಿಗೆಯಲ್ಲಿ “ಮೆಚ್ಚುಗೆ”ಯ ಮಾತುಗಳು

ದಿನದ ಬ್ಲಾಗ್ - ಶೆಟ್ಟರ ಒಂದಿಷ್ಟು ಕನಸುಗಳು ಜಿತೇಂದ್ರ ಮಂಗಳವಾರ, 8 ಜುಲೈ 2008 (10:11 IST) ಶೆಟ್ಟರ ಒಂದಿಷ್ಟು ಕನಸುಗಳು ‘ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಅನ್ನೋದು ಶೆಟ್ಟರ ವಾದ.ಕನಸು ಕಾಣುವುದಲ್ಲಿ ಇವರು ನಿಸ್ಸೀಮರು ಅಂತ ಇಲ್ಲಿರುವ ಒಂದಿಷ್ಟು ಕನಸುಗಳೇ ಹೇಳುತ್ತಿವೆ. ಇಲ್ಲಿ ಈಗಷ್ಟೆ ಕಳೆದುಹೋದವನ ನೆನಪಿನ ಮಳೆಯಲ್ಲಿ ನೆನೆದ ಗುರುತಿದೆ. ಮನಸ್ಸಿಗೆ ಆಪ್ತವಾಗುವಂತ ಸರಳ ಶೈಲಿಯಲ್ಲಿಯೇ ಲೇಖಕರು ಎಲ್ಲವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಬಾಗಲಕೋಟೆ ಹೋಳಿಯ ಸವಿ ನೆನಪು, ಹೀಗೂ ಒಂದು (ಆತ್ಮ)ಕಥೆ ಮುಂತಾದ ಲೇಖನಗಳು ಓದುತ್ತಲೇ ಇಷ್ಟವಾಗುತ್ತವೆ. ನಡುವೆ ಮುಂಬಯಿ ಬದುಕಿನ ಕಥೆ-ವ್ಯಥೆಗಳಿವೆ. ಜೊತೆಗೆ ಒಂದಿಷ್ಟು ಕವನ ರಸಾಯನ. ಇದೆನ್ನೆಲ್ಲ ಸವಿಯಬೇಕಿದ್ದವರು ಇಲ್ಲಿಗೊಮ್ಮೆ ಹೋಗಿ ಬನ್ನಿ.

ಕನ್ನಡಪ್ರಭದ ‘ಬ್ಲಾಗ್ ಬುಟ್ಟಿ’ಯಲ್ಲಿ ನನ್ನದು ಒಂದು ಹಣ್ಣು- ಪು.ಸಂ. ೫, “ಸಾಪ್ತಾಹಿಕ ಪ್ರಭ”, ರವಿವಾರ, ೨೦ ಜುಲೈ ‘೦೮

ಕನಸು, ಕವನ, ಲಹರಿ, ನೆನಪು.. ಎಲ್ಲವೂ ಸೇರಿ ಶೆಟ್ಟರ 'ಒಂದಿಷ್ಟು ಕನಸು' ಬ್ಲಾಗ್ ರೂಪುಗೊಂಡಿದೆ. 'ಜಂಗಮ ಮತ್ತು ಸ್ಥಾವರಗಳ ನಡುವಿನ ಹೊಯ್ದಾಟ: ಮಾತು, ಮೌನ, ಕನವರಿಕೆ ಇದೇ ಬದುಕು' ಎನ್ನುವ ಶೆಟ್ಟರು ಇಲ್ಲಿ ಮುಂಬಯಿ ಬದುಕಿನ ಕಥೆ-ವ್ಯಥೆಗಳನ್ನೂ ಪೋಣಿಸಿಕೊಟ್ಟಿದ್ದಾರೆ. ಸರಳವಾಗಿ, ಓದಿಸಿಕೊಂಡು ಹೋಗುವಂತೆ ಬರೆಯುವ ಶೆಟ್ಟರ ಬ್ಲಾಗನ ಒಂದು ಬರಹ ಇಲ್ಲಿದೆ.

ಕನಸಿಗೆ ಬಂದವರು