ಈ ಮೌನ, ಒಂಟಿತನ ಮತ್ತೇ ಅದೇ ಬೇಸರ

ಈ ಮೌನ, ಒಂಟಿತನ
ಮತ್ತೇ ಅದೇ ಬೇಸರ
ಎಕೋ ಇಷ್ಟವಾಗುತಿದೆ
ಬದುಕಿದು ಎಂಥ ಸೋಜಿಗ.

 

ಊರು, ಊರೋಳಗಿನ ಹೋಳೆ,
ಹೋಳೆಯ ಮುಂದಲ ಬಯಲು
ಅವನ್ನೇಲ್ಲ ಮುಳುಗಿಸಿದ ಆಣೇಕಟ್ಟು.
ಈ ಮೌನ, ಒಂಟಿತನ
ಮತ್ತೇ ಅದೇ ಬೇಸರ

 

ಕಲಿತ ಶಾಲೆ, ಶಾಲೆಯಾ ಗೆಳೆಯರು,
ಗೆಳೆಯರಾ ಜೋತೆ ಆಡಿದಾ ಆಟಗಳು
ಆ ಹುಡುಗಾಟವ ಬಿಡಿಸಿದ ಬದುಕು.
ಈ ಮೌನ, ಒಂಟಿತನ
ಮತ್ತೇ ಅದೇ ಬೇಸರ

 

ಅವಳು, ಅವಳೊಳಗಿನ ನಾನು,
ನಮ್ಮಿಬ್ಬರ ಆ ಪ್ರೀತಿ-ಕನಸುಗಳು
ನಮ್ಮನ್ನಗಲಿಸಿದ ಹುಸಿ ಸ್ವಾರ್ಥ.
ಈ ಮೌನ, ಒಂಟಿತನ
ಮತ್ತೇ ಅದೇ ಬೇಸರ

 

ಈ ಸಂಜೆ, ಸಂಜೆಯೋಳಗಿನ ಎಕಾಂತ,
ಕೈಯಲ್ಲಿ ಚಿನ್ನದ ಮಧುಪಾತ್ರೆ
ಮನದಲ್ಲವಳ ನೆನಪಿನಾ ಜಾತ್ರೆ.
ಈ ಮೌನ, ಒಂಟಿತನ
ಮತ್ತೇ ಅದೇ ಬೇಸರ

 

ಈ ಮೌನ, ಒಂಟಿತನ
ಮತ್ತೇ ಅದೇ ಬೇಸರ
ಎಕೋ ಇಷ್ಟವಾಗುತಿದೆ
ಬದುಕಿದು ಎಂಥ ಸೋಜಿಗ.
Advertisements

“ಗಝಲ್” ಎಂಬ ಮನಸಿನ ಗೋಜಲು

ಗೆಳತಿ
ನನ್ನೆದೆಯ ಬೆಂಕಿ ಸುಡುತ್ತಿದೆ, ಗೆಳತಿ
ನೀನಿಲ್ಲದೆ ಕಂಡು ಮನಸ್ಸೇಕೊ ಮಂಕಾಗಿದೆ.
ನೀನಗೇನೋ ಹಠವಿದೆ, ನಾ ನಿನ್ನ ಮರೆಯಬೇಕಿದೆ
ಮನಸಿಗೇನು ಹೇಳಲಿ, ಅದಕ್ಕೆ ನೀನೇ ಬೇಕಿದೆ.
ನಿನ್ನ ಕಂಡು ನನ್ನ ಮನ ನನ್ನೇ ಮರೆತಿದೆ
ಪ್ರತಿ ಕನ್ನಡಿಯಲ್ಲೂ ನಿನ್ನದೆ ಬಿಂಬ ಅರಳಿದೆ.
ಬೆಳಕಿನ ಕಿರಣಗಳು ಕಣ್ಣು ಕುಕ್ಕುತ್ತವೆ
ರಾತ್ರಿಯ ಕತ್ತಲು ಭಾರಿ ಗೆಳೆಯರಾಗಿವೆ.
ಇದು ನೀ ಕೊಟ್ಟ ಕಾಣಿಕೆಯೇ ಇರಬೇಕು
ನನ್ನ ನಾ ಮಾತನಾಡಿಸಲು ಹೆದರಬೇಕು.

ಮುಂಬಯಿ ಕಥೆ-ವ್ಯಥೆ

ಮುಂಬಯಿ ಕಥೆ-ಕಹಾನಿ

ಮುಂಬಯಿ ತನ್ನದೆ ಕಾಸ್ಮೊಪಾಲಿಟಿನ್ ಮನಸ್ಥಿತಿಗೆ, ವೇಗದ ಜೀವನಕ್ಕೆ ಹೆಸರುವಾಸಿ, ಇಂದು ಆ ಮನಸ್ಥಿತಿಗೆ ಭೀತಿ ಮತ್ತು ವೇಗಕ್ಕೆ ತಡೆ ಬಿದ್ದಿದೆ. ಅಲ್ಲಿನ ವಲಸಿಗ ಪರಭಾಷಿಕರು ಈಗ ಮತ್ತೊಂದು ಆತಂಕ ಎದುರಿಸುತ್ತಿದ್ದಾರೆ. ಕನಸುಗಳ  ನಗರಿ ಮತ್ತೊಮ್ಮೆ ಭಾಷಿಕ ಸಮಸ್ಯೆಗಳ ಬೆಂಕಿಗೆ ಸಿಲುಕಿದೆ. ಎಲ್ಲಿಂದಲೋ ಹೊಟ್ಟೆಪಾಡು ಅರಸಿ ಬಂದವರು, ಹೊಟ್ಟೆ ತುಂಬತೊಡಗಿದಂತೆ  ಸ್ಥಳೀಯರೆಡೆಗೆ ತೋರಿದ ನಿರ್ಲಕ್ಷ್ಯ ಈಗ ಅವರನ್ನು ತಿರುಗಿ ಬೀಳುವಂತೆ ಮಾಡಿದೆ.

ಹಾಗೆ ನೋಡಿದರೆ ಮುಂಬಯಿಯಲ್ಲಿ ಈ ರೀತಿ ನೆಡೆಯುತ್ತಿರುವುದು ಇದೇ ಮೊದಲಲ್ಲ. ೧೯೬೦ರಲ್ಲಿ ಶಿವಸೇನೆಯ ಸ್ಥಾಪಕರಾದ ಬಾಳಾಸಾಹೇಬ ಠಾಕ್ರೆ ಇದೇ ರೀತಿಯಲ್ಲಿ ದಕ್ಷಿಣ ಭಾರತಿಯರ ಮೇಲೆ ಯುದ್ಧ ಘೋಷಿಸಿದ್ದರು. ಅದರೆ ಆಗ ಇದ್ದ ಕಾರಣಗಳು ಮತ್ತು ಪರಿಸ್ಥಿತಿಗಳೇ ಬೇರೆ. ಮುಂಬಯಿಯ ಆಗಿನ ಎಲ್ಲ ಖಾಸಗಿ, ಅರೆ-ಖಾಸಗಿ ಉದ್ಯಮಗಳಲ್ಲಿ ದಕ್ಷಿಣ ಭಾರತದ ಉದ್ಯೋಗಿಗಳು ಹೆಚ್ಚುತ್ತಿರುವ ಸಂಖ್ಯೆಗೆ ಹೆದರಿದ, ಅವಕಾಶ ವಂಚಿತ ಮರಾಠಿಗರ ಮುಖವಾಣಿಯಾಗಿ ಅಂದು ಠಾಕರೆ ಘೋಷಿಸಿದ್ದು “ಪುಂಗಿ ಬಜಾವೋ, ಲುಂಗಿ ಭಗಾವೋ” (ಪುಂಗಿ ಊದಿರಿ, ಲುಂಗಿ ಓಡಿಸಿರಿ). ಅಂದು ಮರಾಠಿಗರು ದಕ್ಷಿಣ ಭಾರತಿಯರ ಮೇಲೆ ಮುರಿದುಕೊಂಡು ಬಿದ್ದಿದ್ದರು.

ನಲವತ್ತೆಂಟು ವರ್ಷಗಳ ಹಿಂದೆ ನಡೆದ ಈ ಘಟನೆಯಲ್ಲಿ ಎರಡೂ ಗುಂಪಿನ ನಡುವೆ ಹಲ್ಲೆಗಳು, ಕೊಲೆಗಳು ನೆಡೆದಿದ್ದವು. ಆ ವೇಳೆಗಾಗಲೇ ಮುಂಬಯಿಯಲ್ಲಿ ತಳವೂರಿದ್ದ ದಕ್ಷಿಣ ಭಾರತೀಯರು ನಂತರದ ದಿನಗಳಲ್ಲಿ ಮನೆಯ ಹೊರಗಡೆ ತಮ್ಮ ಭಾಷೆಗಳನ್ನು ಬಳಸಲು ಹೆದರಲಾರಂಭಿಸಿದ್ದರು. ಈ ಘಟನೆಗಳನ್ನು ಬಲವಾಗಿಟ್ಟುಕೊಂಡು ೧೯೬೬ರಲ್ಲಿ ಹುಟ್ಟಿದ್ದು ಶಿವಸೇನೆ. ಅಂದು ಬಾಳಾ ಠಾಕರೆ ದಕ್ಷಿಣ ಭಾರತೀಯರ ಮೇಲೆ ಪ್ರಯೋಗಿಸಿದ ಅಸ್ತ್ರವನ್ನೇ ಇಂದು ರಾಜ್ ಠಾಕರೆ ಉತ್ತರ ಭಾರತೀಯರ ಮೇಲೆ ತೇಲಿಸಿದ್ದಾರೆ. ಈವತ್ತು ಮುಂಬಯಿಯಲ್ಲಿ ನೆಡೆಯುತ್ತಿರುವ ಘಟನೆಗಳಿಗೆ ರಾಜಕೀಯ ಕಾರಣಗಳಿರಬಹುದು. ಆದರೆ ಇದಕ್ಕೆ ಬಲಿಯಾಗುತ್ತಿರುವುದು ‘ಆಮ್‌ ಆದ್ಮಿ’ ಎಂಬ ಸಾಮಾನ್ಯ ನಾಗರಿಕ.

ಈ ಲೇಖನ “ಕೆಂಡಸಂಪಿಗೆ.ಕಾಂ” ನಲ್ಲಿ ದಿನದ ಸುದ್ದಿ (೦೯/೦೨/೨೦೦೮) ವಿಭಾಗದಲ್ಲಿ ಪ್ರಕಟವಾಗಿದೆ. ಪ್ರಕಟಿಸಿದ ಸಂಪಾದಕರಿಗೆ ಧನ್ಯವಾದಗಳು.

“ಪುರುಷೋತ್ತಮ” ಚಿತ್ತಾಲರಿಗಿಗ “ಪಂಪ ಪ್ರಶಸ್ತಿ”ಯ ಗೌರವ

ಮುಂಬಯಿ ಕಥೆ-ಕಹಾನಿ

Chittal ಮುಂಬಯಿಯ ಹೆಮ್ಮೆಯ  ಯಶವಂತ ಚಿತ್ತಾಲರ ಮುಕುಟಕ್ಕಿಗ ಪಂಪ ಪ್ರಶಸ್ತಿಯ ಗರಿ.  ೧೯೫೭ ರಲ್ಲಿ ಮೈತಳೆದ, “ಸಂದರ್ಶನ” ಕಥಾಸಂಕಲನಿಂದ ಹಿಡಿದು, ೨೦೦೧ರಲ್ಲಿ ಹೊರಬಂದ, “ಸಾಹಿತ್ಯದ ಸಪ್ತಧಾತುಗಳು”ದ ವರೆಗೆ, ಚಿತ್ತಾಲರು ಬರೆದ, ವಿವಿಧ ಕೃತಿಗಳನ್ನು ಪರಿಶೀಲಿಸಿದರೆ, ಆ ಬರಣಿಗೆಯ ಹಿಂದಿರುವ ತುಡಿತಗಳನ್ನು ನಾವು ಗುರುತಿಸಬಹುದು. ಅವರ ಹಲವಾರು ಬರಹಗಳಲ್ಲಿ ಅವರ ಜನ್ಮಭೂಮಿ ‘ಹನೇಹಳ್ಳಿ’ ಕೇಂದ್ರಬಿಂದು. ಬಾಲ್ಯದ ಭೂತಕಾಲವನ್ನು, ವರ್ತಮಾನದ ಸಂಕೀರ್ಣ ಬದುಕಿನೊಂದಿಗೆ ಹೋಲಿಸಿ, ಅದನ್ನು ಇಡೀ ಮನುಕುಲದಲ್ಲಿ ಸಂಭವಿಸಿರುವ ಅಸ್ತಿತ್ವದ ಬಿಕ್ಕಟ್ಟಿಗೆ ಪ್ರತಿಮೆಯಾಗಿ ಪರಿವರ್ತಿಸುತ್ತಾರೆ ; ಅವರ ಪ್ರಶಸ್ತಿವಿಜೇತ ಕಾದಂಬರಿ, “ಪುರುಷೋತ್ತಮ,” ದಲ್ಲಿ, ನಾಯಕನ ಸಿದ್ಧಿಯ ಚರಮ-ಕ್ಷಣಗಳೆಂದರೆ, ಅವನ ಹನೇಹಳ್ಳಿಗೆ ಮತ್ತೆ ಜೀವತುಂಬಿ-ತುಳುಕಾಡುವುದೇ ಆಗಿದೆ.“ಒಟ್ಟಿನಲ್ಲಿ ನಾನು ಬರೆಯುತ್ತಿದ್ದದ್ದು, ನಾನು ನಾನೇ ಆಗಲು. ನಾನು ನಾನಾಗಿಯೇ ಉಳಿದು, ಉಳಿದವರಿಂದ ಬರೆಯಲು ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ, ಜೀವಂತ ಸಂಬಂಧಗಳನ್ನು ಹುಟ್ಟಿಸಲು. ಉಳಿದವರನ್ನು ತಿದ್ದುವುದಕ್ಕಲ್ಲ- ಆ ಯೋಗ್ಯತೆಯಾಗಲೀ ಅಧಿಕಾರವಾಗಲೀ ನನಗಿಲ್ಲ.”- ಇದು ಅವರು ಏಕೆ ಬರೆಯುತ್ತಾರೆ, ಎನ್ನುವ ಬಗ್ಗೆ ಅವರೇ ಕೊಟ್ಟಿರುವ ನಿರೂಪಣೆ. ಪ್ರಸ್ತುತ ಕನ್ನಡದ ಹೆಮ್ಮೆಯ ಬರಹಗಾರ ಯಶವಂತ ಚಿತ್ತಾಲರಿಗೆ ಈ ಬಾರಿಯ ಪಂಪ ಪ್ರಶಸ್ತಿ ಬಂದಿದೆ. ನಾಡಿನಿಂದ ದೂರದಲ್ಲಿ ಕುಳಿತು ತಣ್ಣಗೆ ತಮ್ಮ ಪಾಡಿಗೆ ತಾವು ಬರೆಯುತ್ತ, ಅಷ್ಟೆ ಪ್ರೀತಿಯಿಂದ ಅದನ್ನು ನಮ್ಮಿಂದ ಓದಿಸುತ್ತಲೆ ಇರುವ ಚಿತ್ತಾಲರಿಗೆ ಅಭಿನಂದನೆಗಳು. ಇಂತಿ ನಿಮ್ಮ ಪ್ರೀತಿಯ ಮುಂಬಯಿ ಕನ್ನಡಿಗ

ಚಿತ್ತಾಲರ ಕಥೆಗಳು/ಕಾದಂಬರಿಗಳು

ಕಥಾಸಂಕಲನಗಳು:

ಬೊಮ್ಮಿಯ ಹುಲ್ಲು ಹೊರೆ (೧೯೪೯ ರಲ್ಲಿ ಬರೆದ ಅವರ ಮೊತ್ತ ಮೊದಲ ಕಥೆ)

ಸಂದರ್ಶನ-ಕಥಾಸಂಕಲನ.

ಆಬೋಲಿನ.ಅಟ.

ಬೇನ್ಯಾ.

ಕಥೆಯಾದಳು ಹುಡುಗಿ.

ಕುಮಟೆಗೆ ಬಂದಾ ಕಿಂದರಿಜೋಗಿ.

ಓಡಿ ಬಂದಾ ಮುಟ್ಟಿಸಿ ಹೋದಾ.

ಐವತ್ತೊಂದು ಕತೆಗಳು.

ಕಾದಂಬರಿಗಳು:

ಪುರುಷೋತ್ತಮ.

ಛೇದ.

ಶಿಕಾರಿ.

ಮೂರು ದಾರಿಗಳು.

ಕೇಂದ್ರವೃತ್ತಾಂತ.

ವಿಮರ್ಶೆ:

ಸಾಹಿತ್ಯ, ಸೃಜನಶೀಲತೆ ಮತ್ತು ನಾನು.

ಸಾಹಿತ್ಯದ ಸಪ್ತಧಾತುಗಳು.

ಇವರ “ಕಥೆಯಾದಳು ಹುಡುಗಿ” ಎಂಬ ಕೃತಿಗೆ ೧೯೮೩ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. “ಶಿಕಾರಿ” ಕಾದಂಬರಿಗೆ ೧೯೭೯ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಪ್ರಶಸ್ತಿ ದೊರೆತಿದೆ. ೨೦೦೨ ಸಾಲಿನ ‘ನಿರಂಜನ ಪ್ರಶಸ್ತಿ’ ದೊರೆತಿದೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಮಹಾರಾಷ್ಟ್ರ ಸರ್ಕಾರದ ಸನ್ಮಾನ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳೂ ಲಭಿಸಿವೆ.

ವಲಸಿಗ ಪರಭಾಷಿಕರ ಮೇಲೆ ಮತ್ತೆ ಭುಗಿಲೆದ್ದಿದ್ದಾನೆ ಮರಾಠಿ ಮಾನುಸ್ (ಮರಾಠಿ ಮನುಷ್ಯ)

ಮುಂಬಯಿ ಕಥೆ-ಕಹಾನಿ

ಶಿವನೇ ಶಂಭುಲಿಂಗ,

ನೀವ್ಯಾರು, ನಮ್ಮ ತೋಟಕ್ಕ ಬರಬ್ಯಾಡ್ರಿ, ನಮ್ಮ ಗಿಡದ ಹಣ್ಣ ತಿನಬ್ಯಾಡ್ರಿ, ನಮಗೇನು ನಿಮ್ಮ ನೀರ ಬ್ಯಾಡ, ಗೊಬ್ಬರಾ ಬ್ಯಾಡ, ದೇಖ್-ರೆಖಿ ಬ್ಯಾಡ ಹೋಗ್ರಿ, ನೀವೆನು ಸಾಮಾನು ನಮ್ಮ ಅಂಗಡ್ಯಾಗ ತೊಗೊಳುದಿಲ್ಲ, ಹಿಂಗಾಗಿ ನೀವು ನಮ್ಮ ತ್ವಾಟದ ಕೆಲಸಕ್ಕ ಬರಬ್ಯಾಡ್ರಿ ಹೋಗ್ರಿ ಅಂದರು ನಮ್ಮೂರ ಗೌಡ್ರು.

ಎರಡ ದಿನ, ಅವರ ತ್ವಾಟದ ತುಂಬ ಕಸ ಕುಂತಿತ್ತು, ನೆಲಕ್ಕ ಬಿದ್ದ ಹಣ್ಣ ಅರಿಸಿ ಬುಟ್ಟಿಗೆ ತುಂಬಾಕ ಯಾರಿದ್ದಿಲ್ಲ, ನೀರು ಇಲ್ದ ಗಿಡ ಬಾಡಾಕತ್ತಿತ್ತು, ಹುಳಾ ಹತ್ತಿ  ಹಣ್ಣು ಕೋಳ್ಯಾಕಹತ್ತಿದ್ದ್ವು, ನೋಡ್ಕೊಳ್ಳೊವ್ರು ಇಲ್ದಕ್ಕ ತ್ವಾಟನ್ನುದು ಹಾಳು ಸುರಿಯಾಕತ್ತಿತ್ತು. ಗೌಡ್ರು ಗೋಳಾಡಕತ್ತಿದ್ರು, ನಮ್ಮ ತ್ವಾಟದ ಕೆಲಸಕ್ಕ ನೀವು ಬರ್ರೊ, ಯಪ್ಪಾ ನೀವು ಬರ್ರೋ ಅಂತ ಎಲ್ಲಾರನ್ನು ಕರೆಯಾಕತ್ರು, ಅದ್ರ ಯಾರು ಬರ್ಲೆ ಇಲ್ಲ. ಎಲ್ಲಾರು ಬ್ಯಾರೆ ಕಡೆ ಕೆಲಸಕ್ಕ ಹತ್ತಿದ್ರು.ಗೌಡ್ರ ತ್ವಾಟ ಹಾಳು ಬಿದ್ದೋಯ್ತು.

So, ಹಿಂಗಾಗಿ ಕಥೆ ಸಾರಾಂಶ ಎನಂದ್ರೆ ಮಂಬಯಿ ಈಗ ಗೌಡ್ರ ತ್ವಾಟ ಆಗುತ್ತಿದೆ, ರಾಜ್ ಠಾಕ್ರೆ ಹಾಳುರಿನ ಗೌಡ ಅಗಲಿಕ್ಕೆ ಸಿದ್ದವಾಗ್ತಿದ್ದಾನೆ.

ವಲಸಿಗ ಪರಭಾಷಿಕರ ಮೇಲೆ ಮತ್ತೆ ಭುಗಿಲೆದ್ದಿದ್ದಾನೆ ಮರಾಠಿ ಮಾನುಸ್ (ಮರಾಠಿ ಮನುಷ್ಯ) ಎಂದ ನನ್ನ ಗೆಳೆಯ, ಇದು ಅನ್ಯಾಯ ಅಂದೆ ನಾನು, ಅದು ಹೇಗೆ ಅಂದ ಗೆಳೆಯ, ನಾನದಕ್ಕಂದೆ ಇದು ಭಾರತ, ಇಲ್ಲಿರೊದು ಪ್ರಜಾಪ್ರಭುತ್ವ, ಭಾರತಿಯರು ಭಾರತದಲ್ಲಿ ಯಾವುದೆ ಭಾಗದಲ್ಲಿ ವಾಸಿಸಬಹುದು ಎಂದೆ, ಅದಕ್ಕವನು ಸರಿ ಹಾಗಿದ್ದರೆ ನಡೆ ಕಾಶ್ಮಿರಕ್ಕೆ ಸ್ವಲ್ಪ ಜಾಗ ಖರಿದಿಸಿ ಅಲ್ಲೆ ಇರುವಂತೆ ಅಂದ. ಅದು ಹೇಗೋ?, ಅನ್ನುತ್ತಾ ನೀನು ವಿಷಯ ಬದಲಿಸ್ತಾ ಇದ್ದಿ ಅಂದೆ.

“ನೀನೆ ತಾನೆ, ಬೆಂಗಳೂರಲ್ಲಿ ತಮಿಳ್ರು, ತೆಲಗ್ರು, ಈ ಭೈಯ್ಯಾಗಳು ಜಾಸ್ತಿಯಾಗವ್ರೆ, ಇವ್ರನ್ನೆಲ್ಲ ಇಲ್ಲಿಂದ ಒದ್ದು ಓಡಿಸ್ಬೆಕು ಅನ್ತಾಯಿದ್ದುದ್ದು, ನಿಮ್ಮುರಲ್ಲಿ ತುಂಬಾ ಜನ ಬೇರೆಯವರಾದ್ರೆ ಓಡಿಸ್ಬೇಕು, ಆದ್ರೆ ಬೇರೆವುರಲ್ಲಿ ನೀವು ಬಹಳ ಜನ ಆದ್ರೆ ಅವ್ರು ಏನು ಅನ್ಬಾರ್ದಾ?, ಅದೆಂಗೊ, ನೀನು ಯಾವತ್ತಾದ್ರು ಮರಾಠಿ ಕಲಿಯೊದಕ್ಕೆ ಪ್ರಯತ್ನ ಪಟ್ಟಿದಿಯಾ? ನಿಜ ಹೇಳು?”

“ಇಲ್ಲ್ಯಾರು ಮರಾಠಿನ್ಯಾಗ ಮಾತಾಡುದಿಲ್ಲ, ಎಲ್ಲಾರು English, Hinglish or ಹಿಂದಿನ್ಯಾಗ ಮಾತಾಡ್ತಾರ, ಸೊ ನನಗ ಅವಶ್ಯಕತೆನೆ ಬಿಳಲಿಲ್ಲ”

“ಆದ್ರೂ ನೀನು ಮಹಾರಾಷ್ತ್ರದಾಗ ಅದಿನಿ ಅಂತರ ಮರಾಠಿ ಕಲಿತೇನು? ಮಹಾರಾಷ್ತ್ರದ ನಾಡಗೀತೆ ಯಾವ್ದು ಅಂತೆನರ ಗೊತ್ತೆನು, ಮರಾಠಿ ಪ್ರಮುಖ ದಿನಪತ್ರಿಕೆಗಳ್ಯಾವು ಗೊತ್ತೈತೇನು? ಹೋಗ್ಲಿ ಬಿಡು ಇಷ್ಟೊಂದು ಟಿ.ವಿ. ನೋಡ್ತಿಯಲಾ ಮರಾಠಿ ಪ್ರಮುಖ ಚಾನಲ್ಲಗಳ್ಯಾವು ಗೊತ್ತೈತೇನು? ಹೋಗ್ಲಿ ಮರಾಠಿ ಸಾಹಿತ್ಯದ ಬಗ್ಗೆ ಗೊರ್ತ ಐತೇನ್ ನಿನಗ?”

“ಇದನ್ನೆಲ್ಲ ತೊಗೊಂಡು ನಾಯೇನ್ ಮಾಡ್ಲಿ, ನಾಯಿಲ್ಲಿ ದುಡಿಯಾಕ ಬಂದಾವ, ಗಳಸ್ತಿನಿ ಹಂಗ ಟ್ಯಾಕ್ಸು ತುಂಬ್ತಿನಿ, ಮೇಲಾಗಿ ನಾವೆಲ್ಲ ಇಲ್ಲಿಂದ ಹೋದ್ರ ಇವ್ರಿಗೆಲ್ಲಾ ರೊಕ್ಕ ಎಲ್ಲಂದ ಹುಟ್ಟತೈತಿ, ನಾನು ದುಡದ ರೊಕ್ಕ ನಾನು ನಮ್ಮೂರಾಗ ಶಾಲಿ ಕಟ್ಟಿಸಿದ್ರ ನಿಮಗೇನ ಕಷ್ಟ?”

“ಟ್ಯಾಕ್ಸ ತುಂಬ್ತಿನಿ ಅಂದೆಲ್ಲಾ ಎನ ಹಂಗ ತುಂಬ್ತಿಯಾ ಕೊಟ್ಟಿಲ್ಲಾ ನಿನ್ನ ಮನಿಗಿ ನೀರು, ಬೆಳಕು, ರೋಡು, ನಿಮ್ಮ ಮಕ್ಕಳಿಗೆ ಶಾಲಿ, ಪುಸ್ತಕ ಎಲ್ಲಾ, ನಿಮ್ಮೂರಿಗೆ ಎಲ್ಲಾ ಮಾಡವಿದ್ರ ದುಡಿಯಾಕರ ಇಲ್ಲಿಗ್ಯಾಕ ಬರ್ತಿ, ಅಲ್ಲೆ ದುಡಿ.., ನಾವೇನು ನಿನ್ನ ರೊಕ್ಕ ಕೇಳಾಕತ್ತಿಲ್ಲ, ನಿವಿಲ್ಲಿ ಬಂದ ಅದಿರಿ ಅಂದ್ರ ಇಲ್ಲಿ  ಸಂಸ್ಕ್ರುತಿ ನಿಮ್ಮದಾಗಿಸ್ಗೊಬೇಕು, ನಾಳೆ ಯಾರರೆ ನಿಮ್ಮನಿಗೆ ಬಣ್ಣ ಹಚ್ಛಾಕಂತ ಬಂದು ಇದು ನಮ್ದ ಮನಿ, ಇಲ್ಲೆ ನಮ್ಮ ಹಬ್ಬಾನ ಆಚರಿಸ್ಬೇಕು, ನಿಮ್ಮ ಆಚಾರ-ವಿಚಾರ ನಮಗ ಸಂಭಂದಿಲ್ಲ ಅಂದ್ರ ಹೆಂಗಕ್ಕೈತಿ, ನೀವೆಲ್ಲಿರತಿರೋ ಅಲ್ಲಿ ಆಚಾರ-ವಿಚಾರ ಪಾಲಿಸಬೇಕು. Be Roman when you are in Rome” ಎಂದು ಹೇಳಿ ಅವನು ಟಿ.ವಿ. ಹಾಕಿದ.

ಟಿ.ವಿ.ಯಲ್ಲಿ ಬಡ ಕೂಲಿ ಕಾರ್ಮಿಕರನ್ನು, ಟ್ಯಾಕ್ಸಿ ಡ್ರೈವರಗಳನ್ನು ಅಟ್ಟಿಸಿಕೊಂಡು ಬಡಿಯುತ್ತಿರುವುದು ಕಾಣಿಸಿತು ಸಂಕಟವಾಯಿತು, ನಾನು ವಲಸಿಗನೇ ಎಂಬುದು ನೆನಪಾಯಿತು. ನಮ್ಮೂರಿನ ಬಗ್ಗೆ ನೆನೆದು ಮನಸ್ಸು ಸಂಧಿಗ್ದದಲ್ಲಿ ತೋಡಗಿತು.