ಚಿಮ್ಮಿದ ಹನಿಗಳು

ಸುಖ ಕ್ಷಣಿಕ, ದುಖ ನಿರಂತರ.. ಹೀಗಾಗಿ
ಇರಲಿ ಪ್ರೀತಿಗೂ, ಮದುವೆಗೂ ಅಂತರ.

-0-

ಗೆಳತಿ, ಆ ಕನ್ನಡಕದ ಹಿಂದಿರುವ
ನಿನ್ನ ಕಣ್ಣುಗಳ ಮೇಲಾಣೆ,
ವರ್ಷ ವರ್ಷವೂ ಹೆಚ್ಚಾಗುತ್ತಿರುವ
ನಿನ್ನ ಕನ್ನಡಕದ ನಂಬರಿಗೂ, ಏರುತ್ತಿರುವ
ನನ್ನ ಸುತ್ತಳತೆಗೂ ಸುತಾರಾಮ್ ಸಂಭಂದವಿಲ್ಲ.

-0-

ನೀನಿಲ್ಲದೇ ಬದುಕಿನಲ್ಲಿ
ಏನಿಲ್ಲವೆಂದುಕೊಂಡಿದ್ದೆ.
ಈಗ ಗೊತ್ತಾಯಿತು ನನಗೆ,
ಏನೆಲ್ಲಾ ಕಳೆದುಕೊಂಡಿದ್ದೆ.

-0-

ಚುನಾವಣೆ ಸಮಯದಲ್ಲಿ
ಎಲ್ಲ ಪಕ್ಷಗಳ ಪ್ರಣಾಲಿಕೆಯಲ್ಲಿ ಬರಿ “ಅಭಿವೃದ್ಡಿ”
ಚುನಾವಣೆ ಮುಗಿದ ಮೇಲೆ
ಕೂಡಿಸಿದರೆ ಎಷ್ಟೊಂದು ರದ್ದಿ.

Advertisements

ಮರೆತೇನಂದರ ಮರೆಯಲಿ ಹ್ಯಾಂಗ: “ನೆನಪುಗಳೇ ಕಾಡದಿರಿ please”

ನಿನ್ನೊಂದಿಗೆ ಕಳೆದ ದಿನಗಳು ಮರೆಯಲು ಸಾಧ್ಯವೇ? ನಿನ್ನ ಜೊತೆ ಕಳೆದ ಆ ಸುಂದರ ದಿನಗಳ ಸವಿನೆನಪುಗಳು, ಆ ಸುಂದರ ಸಂಜೆಗಳ ಒಡನಾಟ, ಆ ತುಂಟಾಟ… ಆ ನೆನಪುಗಳೇ ಹಾಗೆ ಬಿಟ್ಟು ಬಿಡದೆ ಕಾಡುತ್ತವೆ।ನೆನಪುಗಳೇ ನೀವೇಕೆ ಹೀಗೆ? ಆಫೀಸಿನಲ್ಲಿ ದುಡಿದು ದಣಿದ ಕಣ್ಣುಗಳಿಗೆ ವಿಶ್ರಾಂತಿ ಕೊಡಲೆಂದು ಸ್ವಲ್ಪ ಕಣ್ಣರೆಪ್ಪೆ ಮುಚ್ಚಿದರೆ ಸಾಕು, ದಾಳಿ ಆರಂಭ। “ನೆನಪುಗಳೇ ಕಾಡದಿರಿ please”. ಹೀಗೆನ್ನಲು ಕೂಡಾ ಭಯ.!!!

ನಾನು ಹಾಗೆ ಹೇಳಿದೆನೆಂದು ನೀವು ಮುನಿಸಿಕೊಂಡು ಬರದೇ ಹೋದರೆ?, ನಾನು ನನಗೆ ಮತ್ತೆ ಸಿಗದೇ ಕಳೆದು ಹೋಗಬಹುದು। ನಾನು “ನಾನೇ” ಎಂಬುದನ್ನು ಜ್ಞಾಪಿಸ ಲಾದರು ನೀವು ತಿರುಗಿ ಬರಬೇಕು. ಆದರೂ ಇಷ್ಟೊಂದು ಕಾಡದಿರಿ please. ನಾನು ಯಾರೆಂಬುದನ್ನು ಜ್ಞಾಪಿಸುತ್ತಾ, ನಾನೇನಾಗಬೇಕೊ ಅದನ್ನು ಮರೆಯಿಸದಿರಿ, ನನ್ನ ದಾರಿ ತಪ್ಪಿಸದಿರಿ ನೆನಪುಗಳೇ… ಅರ್ಜೆಂಟಾಗಿ ನಾನು ಏನೋ ಆಗಬೇಕಾಗಿದೆ, ಏನೋ ಸಾಧಿಸಬೇಕಾಗಿದೆ. ದೊಡ್ಡ ಊರಿಗೆ ಹೋದವನು ದೊಡ್ಡದಾಗಿ ಏನೋ ಸಾಧಿಸುತ್ತಾನೆಂದು ಮನೆಯಲ್ಲಿ ಎಲ್ಲರೂ “ಕನಸು” ಕಾಣುತ್ತಿದ್ದಾರೆ, ಅವರ ಕನಸುಗಳನ್ನು ಕೊಲ್ಲದಿರಿ ನೆನಪುಗಳೇ…

ಹಾಗೆಂದು ಬರದೇ ಹೋಗದಿರಿ, ನೀವಲ್ಲದೇ ಈ ಊರಲ್ಲಿ ನನಗಾರು ಹೇಳಿ? ಹೊಸ ಊರಲ್ಲಿ ಹೊಸ ಪರಿಚಯಗಳಾಗಬೇಕು, ಹೊಸ ಗೆಳೆತನ ಬೆಳೆಯಲೇಬೇಕು ಆದರೆ ಅದು ಹಳೆಯ ಗೆಳೆತನದ ಸಾವಲ್ಲ। ನೆನಪುಗಳೇ ದಯವಿಟ್ಟು ಮುನಿಯದಿರಿ, ಮುನಿದು ನನ್ನ ನೂಯಿಸದಿರಿ. ಈ ಹೊಸ ಗೆಳೆಯರು ಕೊಡಾ ಯಾವೊತ್ತೊ ಮುಂದೊಂದು ದಿನ ನಿಮ್ಮೊಡನೆ ಸೇರಿ ಮತ್ತೆ ನನ್ನನ್ನೇ ಕಾಡುತ್ತೀರಿ. ಕೊನೆಯಲ್ಲಿ ಒಂಟಿಯಾಗುವನು ನಾನೇ. “ನೆನಪುಗಳೇ ಕಾಡದಿರಿ please”.

“ಬಾಳ ದಾರಿಯಲಿ ಬೇರೆಯಾದರೂ, ಚಂದಿರ ಬರುವನು ನಮ್ಮ ಜೊತೆ,
ಕಾಣುವೆನು ಅವನಲಿ ನೀನ್ನನೇ…
ಇರಲಿ ಗೇಳೆಯಾ… ಈ ಅನುಭಂದ ಹೀಗೆ ಸುಮ್ಮನೇ…”

ಗೊಂದಲಗಳ ನಡುವೆ ಯೌವನ

ಬೆಳಿಗ್ಗೆಯಿಂದ ಯಾಕೋ ಅವನ ಮನಸ್ಸು ಗೊಂದಲದ ಗೂಡಾಗಿದೆ, ತನಗೆ ಎನೋ ಅಗಿದೆ ಆತಂಕ ಅವನಿಗೆ ಕ್ಷಣ ಕಣಕ್ಕೂ ಹೆಚ್ಚಾಗುತ್ತಿದೆ, ಎನೋ ಆಗಿದೆ ಎಂಬ ಆತಂಕಕ್ಕಿಂತ ಅದನ್ನು ಯಾರಿಗೆ ಹೇಳಬೇಕೆಂಬ ಗೊಂದಲವೇ ಅವನನ್ನು ಆವರಿಸಿದೆ. ಇದನ್ನು ಯಾರಿಗೆ ಹೇಳಲಿ? ಎನೆಂದು ಹೇಳಲಿ? ಹೇಗೆ ಹೇಳಲಿ?…

ಅವನು ಬಲು ಚೂಟಿ ಹುಡುಗ, ಯಾವ ಕ್ಷಣಕ್ಕೂ ಸುಮ್ಮನೆ ಕುಳಿತುಕೊಳ್ಳುವನೇ ಅಲ್ಲ. ಆದರೆ ಇತ್ತಿಚಿಗೆ ಕೆಲವು ದಿನಗಳಿಂದ ಮಂಕಾಗಿರುತ್ತಾನೆ, ಎನೋ ಯೋಚಿಸುತ್ತಾನೆ, ಮನೆಯಲ್ಲಿ ಎಲ್ಲರ ಮೇಲು ಗುರ್ರೆನ್ನುತ್ತಾನೆ, ಮನೆಯ ನೆರಳಲ್ಲಿ ಸುಮ್ಮನೆ ಮಲಗಿರುವ ನಾಯಿಗೆ ವಿನಾಕಾರಣ ಕಲ್ಲೆಸೆಯುತ್ತಾನೆ. ಅವನ ಮನಸ್ಸಿನಲ್ಲಿ ಎನೊ ಕಾಡ್ತಾಯಿದೆ, ಅದು ಹೊರಗೆ ಬರದೆ ಇವನನ್ನು ಕಾಡಿಸುತ್ತಿದೆ.

ಇತ್ತಿಚಿಗೆ ಅವನಿಗೆ ಎಲ್ಲಾ ಓಂಥರಾ ಅನಿಸುತ್ತಿದೆ, ಎಲ್ಲೆಲ್ಲೊ ಹೋಸದಾಗಿ ಮೂಡುತ್ತಿರುವ  ಕೂದಲು, ಮನಸ್ಸಿನಲ್ಲಿ ಮೂಡುತ್ತಿರೋ ಎನೇನೊ ಹೋಸ ಆಸೆಗಳು, ಮಲಗಿದವನಿಗೆ ಬೆಚ್ಚಿ ಬಿಳುವ ಕನಸುಗಳು, ನಿದ್ದೆಗಣ್ಣಲ್ಲಿ ಹೋರಳಾಟ, ಹುಡುಗಿಯರನ್ನು ಕಂಡಾಗ ಗರಿಗೆದರೋ ಆಸೆಗಳು, ಮರುಕ್ಷಣದಲ್ಲಿ ಹುಟ್ಟುವ ಗಾಭರಿ, ರಾತ್ರಿ ಯಾವದೋ ಹೊತ್ತಿನಲ್ಲಿ ಒದ್ದೆಯಾಗುವುದು, ಬೆಳಿಗ್ಗೆ ಎಳುವಾಗ ಅದರಿಂದಾಗುವ ಕಿರಿಕಿರಿ ಎಲ್ಲವೂ ಹೋಸದವನಿಗೆ.

‘ಅವ್ವನಿಗೆ ಇದರ ಬಗ್ಗೆ ಹೇಳಲಾ?’, ‘ಆವಾಗಲೇ ಯಾಕೋ ಹೇಳಲಿಲ್ಲ’ ಎಂದು ಕೇಳಬಹುದು, ಎಲ್ಲಿ ತೋರಿಸೆಂದರೆ? ಛೇ ಬೇಡ. ಅಪ್ಪನಿಗೆ ಹೇಳಿದರಾಯಿತು ಎಂದುಕೊಂಡ ಮರುಕ್ಷಣವೇ ‘ಎನು ಮಾಡ್ಕೊಂಡಿ ಖರೆ ಹೇಳು, ಎಲ್ಲಿ ಹೋಗಿದ್ದಿ’ ಅನ್ಕೊಂತ ಬೆನ್ನಿಗೆ ಒಂದೆರಡೂ ಬಿಟ್ಟರು ಬಿಟ್ಟನೇ…ಬೇಡಪ್ಪ ಬೇಡ. ಇನ್ನು ಅಕ್ಕನಿಗೆ..ಛೇ ಆಕಿ ಬಾಯಾಗ ಒಂದ ಮಾತು ನಿಲ್ಲುದಿಲ್ಲ ಸೀದಾ ಹೋಗಿ ಅವ್ವಗ ಹೇಳುವಾಕಿನ ಆಕಿ, ಸುಮ್ಮನ ಒಣಾ ಕಿರಿಕಿರಿ, ಅಣ್ಣಗ ಕೇಳಿದ್ರ ಹೆಂಗಂಥ? ಅಂವಗ ಗೊತ್ತಿರಾಕ ಬೇಕು, ಎನೇನೊ ಪುಸ್ತಕಾ ಮುಚ್ಚಿಟ್ಕೊಂಡು ಓತ್ತಾನಂವ. ಆದ್ರ ಅವನ ಕಮಾಯಿಗೋಳ್ನ ಅಪ್ಪಗ ರೀಪೊರ್ಟ ಮಾಡ್ತಿನಂತ ಇದನ್ನ ಮುಂದ ಮಾಡಿ ತನ್ನೂ ಎಲ್ಲ ಕೆಲಸಾ ನನ್ನ ಮ್ಯಾಲೆ ಹಾಕ್ತಾನ, ಅಂವನ ಸುದ್ದಿನ ಬ್ಯಾಡ.

ಇನ್ನು ಉಳಿದವರಂದ್ರ ತಮ್ಮ-ತಂಗಿ, ಅವ್ರಿಬ್ರೂ ಇನ್ನೂ ಸಣ್ಣಾವ್ರು ಅವ್ರಿಗೇನೂ ಗೋತ್ತಿರುದಿಲ್ಲ, ಹಾಂ.. ಹಿಂಗ ಮಾಡಿದ್ರ ಹೆಂಗ, ಸಾಲ್ಯಾಗ ಸರ್ ನ ಕೇಳಿದ್ರ? ಅವ್ರು ನಕ್ಕು ಇಷ್ಟು ಗೋತ್ತಿಲ್ಲನ ದಡ್ಡಾ ಅಂದ್ಕೊಂಡ್ರ, ಛೆ ಬ್ಯಾಡಪಾ. ಗೆಳ್ಯಾರಗೆ ಹೇಳಿದ್ರ ಸುಮ್ಮ ಅವರ ನಗುವಿಗೆ ಮೂಲ ಆಕ್ಕೇನ, ಛೇ ಇದನ್ನ ಯಾರಿಗೆ ಕೇಳಬೇಕು? ಡಾಕ್ಟರಗೇನರ ತೋರಸಬೇಕೇನೊ…

ಹೀಗೆ ದಿನಗಳು ಕಳೆದಂತೆ ಗೆಳೆಯರೊಂದಿಗೆ ಅದರ ಬಗ್ಗೆ ಮಾತನಾಡಿದ, ಗೆಳೆಯರೋ ಇವನಿಗಿಂತ ಹೆಚ್ಚು ಗೊಂದಲದಲ್ಲಿದ್ದರು, ‘ಹೀಗಂತೆ, ಹಾಗಂತೆ,ಅವರಿವರು ಹೇಳಿದ್ದು’, ‘ಅದು ಒಂದು ಹನಿ ಆಗಲು ೧೫ ಹನಿ ರಕ್ತ ಬೇಕು…’, ‘ವಿವೇಕಾನಂದರು ಅದನ್ನೆ ಕುಡಿತಿದ್ದರಂತೆ, ಅದಕ್ಕೆ ಅವರ ಮುಖದಲ್ಲಿ ಆ ತೇಜಸ್ಸು…’, ‘ಎ ಹೋಗ್ಲೋ ಅದಕ್ಕೆ ಅವರು ಬೇಗ ಸತ್ತಿದ್ದು…’,  ‘ಅದು ಹೋದ್ರೆ ವೀಕ್ ಆಗ್ತಾರಂತೆ, ಮೂಂದೆ ತುಂಬಾ ಪ್ರಾಬ್ಲಮ್…’, ‘ಎಷ್ಟು ದೊಡ್ಡದಿರುತ್ತೊ ಅಷ್ಟು ಓಳ್ಳೆದೋ…”, ‘ಹುಡಿಗಿಯರನ್ನ ಪ್ರೀತಿಸಬೇಕು..’, ‘ಈ ಪ್ರೀತಿ, ಪ್ರೇಮ ಎಲ್ಲಾ ಸುಳ್ಳು…’, ಬ್ರಹ್ಮಚರ್ಯ ಪಾಲಿಸಬೇಕು, ಕಂಟ್ರೋಲ್ ಮಾಡ್ಕೊಬೇಕು..’, ‘ಉಪ್ಪು-ಖಾರ ಕಡಿಮೆ ಮಾಡಬೇಕು, ಉಳ್ಳಾಗಡ್ಡಿ (ಇರುಳ್ಳಿ), ಬಳ್ಳೊಳ್ಳಿ ತಿನ್ಲೇಬಾರ್ದು’ ಅಂತೆಲ್ಲಾ ಅವನು ಕೇಳಿದ್ದು, ಕೇಳಿಲ್ಲದ್ದು ಎಲ್ಲಾ ಹೇಳಿ ಅವನನ್ನು ಇನ್ನೂ ಗೊಂದಲಕ್ಕೆ ನೂಕಿದರು, ಕೇಲವರು ಎಂಥವೊ ಪುಸ್ತಕಗಳನ್ನು ಕೊಟ್ಟು ಅವನ ಗೊಂದಲಗಳನ್ನು ಹೆಚ್ಚಿಸುವುದರಲ್ಲಿ ತಮ್ಮ ಕಾಣಿಕೆಗಳನ್ನು ಸಲ್ಲಿಸಿದರು. ಆವತ್ತಿನಿಂದ ಇವತ್ತಿನವರೆಗೂ ಆ ಗೊಂದಲಗಳಲ್ಲೆ ಬೆಳದ, ಆ ಗೊಂದಲಗಳಲ್ಲೆ ಕಲಿತ-ನೌಕರಿ ಹಿಡಿದ, ಒಟ್ಟಿನಲ್ಲಿ ದೊಡ್ಡವನಾದ, ಹಾಗೆಯೇ ಗೊಂದಲಗಳು ಬೆಳೆದವು. ಹೀಗೆ ಗೊಂದಲಗಳ ಸುಳಿಗೆ ಸಿಕ್ಕಿಕೊಂಡ ಅವನಿಗೆ ಮುಂದಿನ ವಾರವೆ ಮದುವೆ. ಎನೋ.. ಹೇಗೋ.. ಅವನಿಗೆ ಒಂದೂ ತಿಳಿತ್ತಿಲ್ಲ, ಈಗಲೂ ಯಾರಿಗೆ ಕೇಳಬೇಕು ಎಂಬ ಚಿಂತೆಯಲ್ಲಿಯೇ ಹೋಸ ಕನಸುಗಳನ್ನು ಹೋಸೆಯುತ್ತಿದ್ದಾನೆ.

ಮನೆ ಮತ್ತು ಮನಸ್ಸು

ಮಳೆ-ಗಾಳಿಗೆ ಬಿದ್ದ ಮರಗಳು,
ಗೆಳತಿ ನಾವ್ಕಂಡ್ ಕನಸುಗಳೇ?
ಈ ನಲುಗಿದ ಬಳ್ಳಿಗಳು
ನಮ್ಮ ಪ್ರೀತಿಯೇ?

ದಿನವೂ ಕಾಣುವ ಸೂರ್ಯನಿಗೆ
ಅಡ್ಡಲಾಗಿ ದಟ್ಟ ಕಾರ್ಮೋಡಗಳು,
ನಮ್ಮ ಪ್ರೀತಿಯ ಸುತ್ತ
ಬರಿ ಸ್ವಾರ್ಥದ ಗೆರೆಗಳು.
ಆ ಎರಡರಿಂದಲೂ
ಬದಕು ಬರಿ ಕತ್ತಲು.

ಕುಸಿದು ಬಿದ್ದ ಮನೆಗಳು
ಮುರಿದು ಬಿದ್ದ ಮನಗಳು,
ಕಾಯಬೇಕು ಮುಗಿವವರೆಗೆ ಮಳೆಗಾಲ,
ಎರಡು ಮತ್ತೆ ಮೇಲೇಳಲು,
ಮನೆ ಕಟ್ಟುವವರು ಸಿಕ್ಕಾರೂ,
ಆದರೆ ಮನ ಕಟ್ಟುವವರು?

Expire ಮತ್ತು Renewalಗಳ ಮಧ್ಯ ಸ್ನೇಹ ಮತ್ತು ಪ್ರೀತಿ

 

ಬದುಕಿನ ಪ್ರತಿ ಸಂಭಂದವು Renewal ಆಗ್ತಾಯಿರಬೇಕು ಇಲ್ಲದೇ ಹೋದರೇ ಪ್ರತಿ ಸಂಭಂದವು Expire ಆಗಿಬಿಡುತ್ತೆ. ಎಷ್ಟೊಂದು ನಿಜವಲ್ಲವೆ? ಬದುಕಿನಲ್ಲಿ ಪ್ರತಿ ದಿನವೂ ಹೋಸ ಸಂಭಂದಗಳು ಸೃಷ್ಟಿ ಆಗ್ತಾನೆ ಹೋಗುತ್ತಿರುತ್ತವೆ, ಹಾಗೆಯೇ ಎಷ್ಟೊ ಹಳೆಯ ಸಂಭಂದಗಳು ನರಳಿಕೆಯೇ ಇಲ್ಲದೇ ಸಾಯುತ್ತಿರುತ್ತವೆ.

ಮೋನ್ನೆ ತಾನೇ ಸೇರಿದ ಕಂಪನಿಯಲ್ಲಿ ಪಕ್ಕದ Cubicalನವನ ಜೋತೆ ವಿಕೇಂಡನಲ್ಲಿ ಮೂವಿಗೆ ಹೋಗಲು ಪ್ಲಾನ ಮಾಡುವ ನಾವೇ, ಮೋನ್ನೆ ಮೋನ್ನೆಯವರೇಗೆ ಒಂದೇ ಬೆಂಚನಲ್ಲಿ ಜೋತೆಯಲ್ಲಿಯೇ ಕೂಡುತ್ತಿದ್ದ ಗೇಳೆಯನನ್ನು ಕರೆಯಲು ಮರೆಯುತ್ತೇವೆ.

ಆಫಿಸಿಗೇ ಒಂದೇ ಬಸ್ಸಿನಲ್ಲಿ ಬರುವವರಿಗೆಲ್ಲ SMS ಕಳುಹಿಸುವ ನಾವು, ಹಾಸ್ಟೇಲಿನಲ್ಲಿ ರೂಮಮೇಟ ಆಗಿದ್ದವನ ನಂಬರ ಯಾವತ್ತೋ ಡಿಲಿಟ ಅಗಿದ್ದನ್ನು ಮರೇಯುತ್ತೇವೆ. ನಾವು ನೋಡಿಯೇ ಇರದ ಕ್ಲೈಂಟಗಳಿಗೆ ಕ್ರಿಸ್ಮಸ , ನ್ಯೂ ಇಯರಗೇ e-ಮೇಲ ಕಳುಹಿಸುವ ನಾವು, ಪರಿಕ್ಷೇಯ ಸಮಯದಲ್ಲಿ ತನ್ನ ನೋಟ್ಸ ಕೊಟ್ಟು ಓದಿಸಿದ ಗೆಳೆಯನ ಪೋಸ್ಟಲ ಅಡ್ರೇಸ್ಸನ್ನೇ ಮರೇಯುತ್ತೇವೆ.

ಪ್ರತಿ ಸಂಭಂದವು ಅಷ್ಟೆ ನೀರೆರೆಯದಿದ್ದರೆ ಒಣಗಿದ ಬಳ್ಳಿಯೇ, ಹೂವು ಅರಳದು, ಕಂಪು ಹರಡದು.

ಗೆಳೆತನವೆಂಬುದು ಬಳ್ಳಿಯಿದ್ದಂತೆ ಅದು ಏಷ್ಟೆ ಬೆಳೆದರು ನೀರು ಹಾಕದಿದ್ದರೇ ಬಾಡುವುದೆ. ಹಾಗಾದರೇ ನಮ್ಮ ಗೆಳೆತನದ ಬಳ್ಳಿಗೆ ನೀರೆರೆಯೋಣ , ಮತ್ತೆ Reneval ಮಾಡೋಣ, Expiry Date ಸಮೀಪೀಸ್ತಾಯಿದೆ. ಗೆಳೆಯಾ, ನಾನಿಲ್ಲಿ ನಿನ್ನ e-ಮೇಲ ಹಾದಿಯನ್ನೆ ಕಾಯ್ತಾ ಕುಳಿತಿದ್ದೀನಿ ಅನ್ಕೊಬೇಡ, ನಾನೀಗ ನಿನ್ನ ನಂಬರನ್ನೇ ಡೈಯಲ್ ಮಾಡ್ತಯಿದ್ದೇನೆ.