ಗೆಳತಿ..ನಿನಗಿದೋ ನನ್ನ ವಿದಾಯ

ನನ್ನ ಬಾಳ ಕಥೆಯ ಮುನ್ನುಡಿಯೇ,

ನೀನು ಇಂದು ನನ್ನ ಬಿಟ್ಟು ಹೋಗುತ್ತಿರುವೆ ಎಂದು ನಿನ್ನ ಮೇಲೆ ಆಪಾದನೆ ಮಾಡಲಾರೆ ಏಕೆಂದರೆ “ಬಿಟ್ಟು ಬಂದವನು” ನಾನು. ಬದುಕನ್ನು ಎದುರಿಸುವ ಧೈರ್ಯವಿಲ್ಲದೇ, ಬದುಕನ್ನೇ ಅರ್ಧ ದಾರಿಗೆ ಬಿಟ್ಟು ಬಂದವನು ನಾನು.

ಗೆಳತಿ ನೀನಿಲ್ಲದ ಬದಕು ಇನ್ನು ಕೇವಲ Black and White ಆಗಿರುತ್ತದೆ ಎಂಬುದೇ ಈ ಬದುಕಿನ ಬಹುದೊಡ್ಡ ಕಷ್ಟವಾಗಿದೆ. ಒಂದನ್ನು ಗಮನಿಸಿದೆಯಾ, ನನಗಿನ್ನೂ “ಬದಕು” ಎಂಬ ಮೂರಕ್ಷರದ ಮೇಲಿನ ನನ್ನ ನಂಬಿಕೆ. ಯಾಕೆ ನನಗಿನ್ನೂ ಆ ನಂಬಿಕೆ ಇದೆಯೆಂದರೆ, ನೀನು ನನ್ನ ಬಾಳಲ್ಲಿ ಕಾಲಿಡುವುದಕ್ಕೂ ಮುಂಚೆ ಕೂಡ ಒಂದು ಬದುಕಿತ್ತು, ಅದು ಕೂಡಾ ಚೆನ್ನಾಗಿತ್ತು. ಆದರೆ ಹೀಗೆ ಕಲರ್-ಕಲರ್ ಆಗಿರಲಿಲ್ಲ ಅಷ್ಟೇ ಹೀಗಾಗಿ ಬದುಕು ಅಲ್ಲಿಗೆ ಮರಳಿ ಬಂದು ನಿಂತಿರದಿದ್ದರೂ, ಅಲ್ಲಿಗೇನೇ ಬಂದು ನಿಂತಿದೆ ಎಂದು ಮನಸ್ಸಿಗೆ ನಂಬಿಸಿದೆ. ಅಂತಹ ಹಲವಾರು ನಂಬಿಕೆಗಳ ಒಟ್ಟು ಮೊತ್ತವೆ ಬದುಕಲ್ಲವೇ? ಈಗ ನಿನ್ನ ಮನದಲ್ಲಿ ಅದೆಷ್ಟು ಹೊಸ ನಂಬಿಕೆಗಳೋ ಏನೋ?

ನೀನೇನೆ ಹೇಳು ಗೆಳತಿ, ಈ ಪ್ರೀತಿ, ಪ್ರೇಮ, ಆಣೆ, ಪ್ರಮಾಣಗಳೆಲ್ಲ ಬಾರಿ ಈ ಹುಚ್ಚು ಪ್ರೇಮಿಗಳ ಹುಚ್ಚಾಟಗಳು ಅನಿಸುವುದಿಲ್ಲವೇ? ಆದರೂ ಗೆಳತಿ ನನಗೆ ಈ ಪ್ರೀತಿಯ ಮೇಲಿನ ನಂಬಿಕೆ ಇನ್ನು ಹೋಗಿಲ್ಲ ಏಕೆಂದರೆ ನಮ್ಮೆಲ್ಲರ ಬದುಕಿನಲ್ಲಿ ಪ್ರೀತಿಸುವ ಜೀವಗಲೆಷ್ಟೋ ಅಲ್ಲವೇ? ಈ ಪ್ರೇಮದ ಹುಚ್ಚಿನಲ್ಲಿ ನಾವೆಲ್ಲ ಕೇವಲ ಒಂದು ಗಂಡು ಮತ್ತು ಹೆಣ್ಣಿನ ನಡುವೆ ಮಾತ್ರ “ಪ್ರೀತಿ” ಇರುವುದು ಎಂದು ನಂಬಿಬಿಟ್ಟಿದ್ದೇವೆ. ಆದರೆ ನಮ್ಮನ್ನು ನಮಗಿಂತ ಹೆಚ್ಚಾಗಿ ಪ್ರೀತಿಸುವ ಅವ್ವ-ಅಪ್ಪ, ಅಕ್ಕ-ತಂಗಿ, ಅಣ್ಣ – ತಮ್ಮ, ಅಜ್ಜ-ಅಜ್ಜಿ, ಕುಟುಂಬ ಇವರೆಲ್ಲರನ್ನೂ ನಾವು ಮರೆತಿದ್ದೆವು ಅಲ್ಲವೇ?

ಹೋಗಲಿ ಬಿಡು, ಮಾತುಗಳು ಎಲ್ಲಿಂದ ಎಲ್ಲಿಗೋ ಹೋದವು. ನೀನಿಗ ಹೊಸ ಬದುಕಿನ ಹೊಸ ಹಾದಿಯಲ್ಲಿರುವೆ. ನಿನಗೆ ಶುಭ ಹಾರೈಸಿ ಬೀಳ್ಕೊಡುವ ಸಡಗರ ನನಗಿರಲಿ ಗೆಳತಿ ನಿನ್ನ ಬಾಳು ಬಂಗಾರವಾಗಲಿ.

ಹುಡುಗಿ.. ಚೆಲುವಾಂತ ಚೆನ್ನಿಗಾರಾಯ ಕೈಯ ಹಿಡಿವನು
ನಿನ್ನ ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡುವನು….

ಗೆಳತಿ, ಇನ್ನೊಮ್ಮೆ ನಿನ್ನ ಬಾಳು ಬಂಗಾರವಾಗಲಿ. ನಿನ್ನ ಬದುಕು ತುಂಬಿ ನಿಂತ ಮುತ್ತಿನ ತೆನೇಯಾಗಲಿ. ನೀನು ನೆಡೆಯುವ ಹಾದಿ ನಗೆ ಹೂ ಹಾಸಲಿ ಇದೆ ನನ್ನ ಹಾರೈಕೆ. ಗೆಳತಿ ನಿನಗಾಗಿ ನಾನು ಇಷ್ಟೇ ಮಾಡಬಲ್ಲೆ ಜೊತೆಗೆ ನಿನಗೊಂದು ಭರವಸೆ ನೀಡಬಲ್ಲೆ, “ಪ್ರೀತಿಯ ಗೋರಿಯ ಮೇಲೆ ಸ್ನೇಹದ ಹುಲ್ಲು ಅರಳದು, ಅರಳುವುದಿಲ್ಲ”.

ಬರುತ್ತೇನೆ, ಇಲ್ಲ ಗೆಳತಿ ಹೋಗುತ್ತೇನೆ. ನಿನ್ನಿಂದ ದೂರ, ನಿನ್ನ ಬದುಕಿಗೆ ನನ್ನ ನೆರಳು ಕೂಡ ಸೋಕದ ಹಾಗೆ…

Advertisements

ನಿಮಗಿದು ಗೋತ್ತೆ? “ಮತದಾನ ನಿರಾಕರಣೆ” ಹಕ್ಕು (ಭಾರತಿಯ ಚುನಾವಣಾ ಕಾಯ್ದೆ 1961 “49 O”)

ನಿಮಗಿದು ಗೋತ್ತೆ? ನಮ್ಮ ಸಂವಿಧಾನ ನಮಗೆ ಮತದಾನ ಕೆಂದ್ರಕ್ಕೆ ಹೋಗಿ, ಚುನಾವಣಾಧಿಕಾರಿ ಬಳಿ ಹೇಸರು ನೋಂದಾಯಿಸಿ, ಇಂಕಿನ ಗುರುತನ್ನು ಬೇರಳಿಗೆ ಹಾಕಿಸಿಕೊಂಡು, “ನಾನು ಯಾವ ಅಭ್ಯರ್ಥಿಗೂ ಓಟು ಮಾಡುವುದಿಲ್ಲ”ವೆಂದು ಹೇಳಬಹುದು ಎಂಬ ಹಕ್ಕು ನೀಡಿದೆ. ಹೌದು ಇದು ನಿಜ ೧೯೬೯ರ ಭಾರತ ಶಾಸನ ವಿಧಿಯ ಪ್ರಕಾರ ನೀವು “ಮತದಾನ ನಿರಾಕರಣೆ” ಮಾಡಬಹುದಾಗಿದೆ. ಇದನ್ನು “CONDUCT OF ELECTIONS RULES, 1961-49 O” ಎಂದು ಕರೆಯುತ್ತಾರೆ.

ನಾವ್ಯಾಕೆ “ಮತದಾನ ನಿರಾಕರಣೆ” ಮಾಡಬೇಕು?

ನಾವ್ಯಾಕೆ “ಮತದಾನ ನಿರಾಕರಣೆ” ಮಾಡಬೇಕು? ಯಾಕೆಂದರೆ, ಆ ಕ್ಷೇತ್ರದ ಯಾವುದೆ ಅಭ್ಯರ್ಥಿ ನಿಮಗೆ ನಿಮ್ಮ ಪ್ರತಿನಿಧಿಯಾಗಲು ನಾಲಾಯಕ್ (ಅಸಂಸದಿಯ ಶಬ್ದ, ಆದರೆ ನನಗೆ ಇದಕ್ಕಿಂತ ಗೌರವಿಯ ಶಬ್ದ ದೊರೆಯಲಿಲ್ಲ) ಅನ್ನಿಸಿದರೆ, ನಿಮ್ಮ “ಮತದಾನ ನಿರಾಕರಣೆ” ನಿಮ್ಮ ಕ್ಷೇತ್ರದ ಪ್ರತಿನಿಧಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಹೇಗೆಂದರೆ ನಿಮ್ಮ ಕ್ಷೇತ್ರದ ಯಾವುದೆ ಅಭ್ಯರ್ಥಿ ಗೆದ್ದಾಗ ಅವನ ಗೆಲುವಿನ ಅಂತರದಷ್ಟೆ “ಮತದಾನ ನಿರಾಕರಣೆ” ಮತಗಳಿದ್ದರೆ ಅವನ ಗೆಲುವು ಅಸಿಂಧುವಾಗುತ್ತದೆ.

ಉದಾಹರಣೆಗೆ ಗೆದ್ದ ಅಭ್ಯರ್ಥಿಯ ಗೆಲುವಿನ ಅಂತರ 123 ಆಗಿದ್ದಲ್ಲಿ ಮತ್ತು ಆ ಕ್ಷೇತ್ರದ “ಮತದಾನ ನಿರಾಕರಣೆ” ಮತಗಳು ಕೂಡ 123 ಇದ್ದಲ್ಲಿ, ಆ ಚುನಾವಣೆಯನ್ನು ಅಸಿಂಧುಗೊಳಿಸಲಾಗುತ್ತದೆ (ರದ್ದುಗೊಳಿಸಲಾಗುತ್ತದೆ) ಮತ್ತು ಮರು-ಚುನಾವಣೆಯಾಗುತ್ತದೆ.

ಅಷ್ಟೆ ಅಲ್ಲ, ಆ ಚುನಾವಣೆಗೆ ನಿಂತಿದ್ದ ಎಲ್ಲ ಅಭ್ಯರ್ಥಿಗಳನ್ನು ಅಸಿಂಧುಗೊಳಿಸಿ, ಅವರು ಮರುಚುನಾವಣೆಗೆ ನಿಲ್ಲದಂತೆ ತಡೆಹಿಡಿಯಲಾಗುತ್ತದೆ ಯಾಕೆಂದರೆ ಮತದಾರ ಅವರ ಬಗ್ಗೆ ಇಗಾಗಲೆ ತಿರ್ಪು ನಿಡಿದ್ದಾಗಿರುತ್ತದೆ.

ಈ “ಮತದಾನ ನಿರಾಕರಣೆ” ಕ್ರಮ ನಮ್ಮ ರಾಜಕೀಯ ಪಕ್ಷಗಳಲ್ಲಿ ಮತ್ತು ಅದರ ನಾಯಕರುಗಳನ್ನು ಎಚ್ಚರಿಸಬಹುದೇನೋ, ಉತ್ತಮ ಜನಪ್ರತಿನಿಧಿಗಳ ಆಯ್ಕೆಗೆ ಸಹಕಾರಿಯಾಗಬಹುದು ಮತ್ತು ಸೊ-ಕಾಲ್ಡ ರಾಜಕೀಯ ವ್ಯವಸ್ಥೆ ಒಂದಿಷ್ಟಾದರೂ ಬದಲಾಗಬಹುದು.

ಮತದಾನ ಬರಿ ನಮ್ಮ ಹಕ್ಕಷ್ಟೆ ಅಲ್ಲ ಕರ್ತವ್ಯವೂ ಕೂಡಾ, ಹಾಗಿದ್ದರೆ ದಯವಿಟ್ಟು ಮತಗಟ್ಟೆಗೆ ಹೋಗಿ “ಮತ ನೀಡಿ” ಇಲ್ಲ “ಮತದಾನ ನಿರಾಕರಿಸಿ” (vote not to vote (vote 49-O))..!!!

ಉತ್ತಮ ಸಮಾಜದ ಪ್ರಾರಂಭ ನಮ್ಮಿಂದಲೇ ಶುರುವಾಗಲಿ…

ಹೆಚ್ಚಿನ ಮಾಹೀತಿ: ಭಾರತಿಯ ಚುನಾವಣಾ ಆಯೋಗದ ವೇಬ್ ಸೈಟಿನಲ್ಲಿ

ಇಂಗ್ಲೀಷ ಮೂಲ: http://www.naitazi.com/

ಯೂನಿವರ್ಸಿಟಿ ಎಂಬ “ಸೂತಕದ ಮನೆ”

ಇವತ್ತೇಕೋ ಮತ್ತೆ ಮತ್ತೆ ಅವೇ ದಿನಗಳು ನೆನಪಾಗುತ್ತಿವೆ. ಹೌದು ಆ ದಿನಗಳು ಯೂನಿವರ್ಸಿಟಿಯ ಪರೀಕ್ಷೆಯ ದಿನಗಳು। ನೀನು ಸಿಕ್ಕು ಸಿಗದಂತಿರುತ್ತಿದ್ದ ದಿನಗಳು, ನೀನೇಕೆ ಕೆಲವೊಮ್ಮೆ ನನಗೆ ನಾನೇ ಸಿಗುತ್ತಿರಲಿಲ್ಲ.

                                                                                            

ಆ ಅಖಂಡ ಮೌನದ ಗ್ರಂಥಾಲಯ, ಯಾವಾಗಲೂ ಪಿಸುಗುಟ್ಟುತ್ತಿದ್ದ ಅದರ ಮೂಲೆಗಳು ಕೂಡಾ ಮೌನವಾಗುತ್ತಿದ್ದವು, ಹಳೆಯ ಪುಸ್ತಕದ ಪುಟಗಳು ಕೂಡಾ “ಚರಪರ್” ಸದ್ದು ಮಾಡಲು ಹೆದರುತ್ತಿವೆಯೇನೋ ಎಂದು ಅನಿಸುತ್ತಿತ್ತು. ಸದಾ “ಚಿಲೀಪಿಲೀ”ಗಿಟ್ಟು ತ್ತಿದ್ದ “ಬೋಟಾನಿಕಲ್” ಗಾರ್ಡನ್ ಕೊಡಾ ಉಸಿರು ಗಟ್ಟಿಹಿಡಿದು ಓದಲು ಕೂಡುತ್ತಿತ್ತು.

 

ಸದಾ ಹುಡುಗರ ಕೇಕೆ ಕೂಗುಗಳಿಂದ ಗಿಜಿಗುಟ್ಟುತ್ತಿದ್ದ ಹುಡುಗರ ಹಾಸ್ಟೆಲ್ ಕೂಡಾ “ಸುನಾಮಿ” ಬಂದು ಹೋದ ಊರಂತಾಗುತ್ತಿತ್ತು. ಗೆಳೆಯರೆಲ್ಲರೂ ಕೈಲ್ಲೊಂದು xerox ನೋಟ್ಸ ಹಿಡಿದು ಕಾರಿಡಾರಿನಲ್ಲಿ ತಿರುಗುತ್ತಾ, ಹೋದ ವರುಷಗಳ ಪ್ರಶ್ನೆಗಳನ್ನು ಮತ್ತೆ ಕೇಳೂವರೆಂದು ಪದೇ ಪದೇ ಅವನ್ನೇ ಓದುತ್ತಿದ್ದಾರೆ, ದಪ್ಪಗಾಜಿನ ಗೆಳೆಯರಂತೂ ರೂಮೆಲ್ಲ ಪುಸ್ತಕ ಹರಡಿಕೊಂಡು, ಅವುಗಳ ಮೇಲೆಯೇ ಕುಳಿತು ಓದುತ್ತಿದ್ದಾರೆ. Toilet ಗೆ ಹೋದರೆ ಟೈಮೆಲ್ಲಿ ವೆಸ್ಟಾಗುತ್ತೋ ಎಂದು ಹೆದರಿ ಎಷ್ಟೋ ಹೊತ್ತಿನವರೆಗೂ ಹಿಡಿದಿಟ್ಟುಕೊಳ್ಳುತ್ತಿದ್ದಾರೆ.

 

ಸಾಯಾಂಕಾಲವಾದರೆ ಸಾಕು “ಲೇಡಿಜ್ ಹಾಸ್ಟೆಲಿ”ನ ಹಿಂದೆ-ಮುಂದೆ ಸುತ್ತುತ್ತಿದ್ದವರೆಲ್ಲ ಅವರಿವರನ್ನು ಕಾಡಿ-ಬೇಡಿ ನೋಟ್ಸ್ ಇಸೀದುಕೊಂಡು xerox ಮಾಡಿಸಿ “ಯುದ್ದಕಾಲೆ ಸಮರಾಭ್ಯಾಸ”ಕ್ಕೆ ತಯಾರಾಗುತ್ತಿದ್ದಾರೆ.

 ಯಾರ ಮುಖದಲ್ಲಿಯೂ ಜೀವ ಕಳೆಯೇ ಇಲ್ಲ. ಯೂನಿವರ್ಸಿಟಿ ಎಂಬುದು “ಸೂತಕದ ಮನೆ”ಯಾಗುತ್ತಿತ್ತು. ಆದರೂ ಆ ದಿನಗಳು ಎಷ್ಟೊಂದು ಛoದವಲ್ಲವೇ?