ನಿಮಗಿದು ಗೋತ್ತೆ? “ಮತದಾನ ನಿರಾಕರಣೆ” ಹಕ್ಕು (ಭಾರತಿಯ ಚುನಾವಣಾ ಕಾಯ್ದೆ 1961 “49 O”)

ನಿಮಗಿದು ಗೋತ್ತೆ? ನಮ್ಮ ಸಂವಿಧಾನ ನಮಗೆ ಮತದಾನ ಕೆಂದ್ರಕ್ಕೆ ಹೋಗಿ, ಚುನಾವಣಾಧಿಕಾರಿ ಬಳಿ ಹೇಸರು ನೋಂದಾಯಿಸಿ, ಇಂಕಿನ ಗುರುತನ್ನು ಬೇರಳಿಗೆ ಹಾಕಿಸಿಕೊಂಡು, “ನಾನು ಯಾವ ಅಭ್ಯರ್ಥಿಗೂ ಓಟು ಮಾಡುವುದಿಲ್ಲ”ವೆಂದು ಹೇಳಬಹುದು ಎಂಬ ಹಕ್ಕು ನೀಡಿದೆ. ಹೌದು ಇದು ನಿಜ ೧೯೬೯ರ ಭಾರತ ಶಾಸನ ವಿಧಿಯ ಪ್ರಕಾರ ನೀವು “ಮತದಾನ ನಿರಾಕರಣೆ” ಮಾಡಬಹುದಾಗಿದೆ. ಇದನ್ನು “CONDUCT OF ELECTIONS RULES, 1961-49 O” ಎಂದು ಕರೆಯುತ್ತಾರೆ.

ನಾವ್ಯಾಕೆ “ಮತದಾನ ನಿರಾಕರಣೆ” ಮಾಡಬೇಕು?

ನಾವ್ಯಾಕೆ “ಮತದಾನ ನಿರಾಕರಣೆ” ಮಾಡಬೇಕು? ಯಾಕೆಂದರೆ, ಆ ಕ್ಷೇತ್ರದ ಯಾವುದೆ ಅಭ್ಯರ್ಥಿ ನಿಮಗೆ ನಿಮ್ಮ ಪ್ರತಿನಿಧಿಯಾಗಲು ನಾಲಾಯಕ್ (ಅಸಂಸದಿಯ ಶಬ್ದ, ಆದರೆ ನನಗೆ ಇದಕ್ಕಿಂತ ಗೌರವಿಯ ಶಬ್ದ ದೊರೆಯಲಿಲ್ಲ) ಅನ್ನಿಸಿದರೆ, ನಿಮ್ಮ “ಮತದಾನ ನಿರಾಕರಣೆ” ನಿಮ್ಮ ಕ್ಷೇತ್ರದ ಪ್ರತಿನಿಧಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಹೇಗೆಂದರೆ ನಿಮ್ಮ ಕ್ಷೇತ್ರದ ಯಾವುದೆ ಅಭ್ಯರ್ಥಿ ಗೆದ್ದಾಗ ಅವನ ಗೆಲುವಿನ ಅಂತರದಷ್ಟೆ “ಮತದಾನ ನಿರಾಕರಣೆ” ಮತಗಳಿದ್ದರೆ ಅವನ ಗೆಲುವು ಅಸಿಂಧುವಾಗುತ್ತದೆ.

ಉದಾಹರಣೆಗೆ ಗೆದ್ದ ಅಭ್ಯರ್ಥಿಯ ಗೆಲುವಿನ ಅಂತರ 123 ಆಗಿದ್ದಲ್ಲಿ ಮತ್ತು ಆ ಕ್ಷೇತ್ರದ “ಮತದಾನ ನಿರಾಕರಣೆ” ಮತಗಳು ಕೂಡ 123 ಇದ್ದಲ್ಲಿ, ಆ ಚುನಾವಣೆಯನ್ನು ಅಸಿಂಧುಗೊಳಿಸಲಾಗುತ್ತದೆ (ರದ್ದುಗೊಳಿಸಲಾಗುತ್ತದೆ) ಮತ್ತು ಮರು-ಚುನಾವಣೆಯಾಗುತ್ತದೆ.

ಅಷ್ಟೆ ಅಲ್ಲ, ಆ ಚುನಾವಣೆಗೆ ನಿಂತಿದ್ದ ಎಲ್ಲ ಅಭ್ಯರ್ಥಿಗಳನ್ನು ಅಸಿಂಧುಗೊಳಿಸಿ, ಅವರು ಮರುಚುನಾವಣೆಗೆ ನಿಲ್ಲದಂತೆ ತಡೆಹಿಡಿಯಲಾಗುತ್ತದೆ ಯಾಕೆಂದರೆ ಮತದಾರ ಅವರ ಬಗ್ಗೆ ಇಗಾಗಲೆ ತಿರ್ಪು ನಿಡಿದ್ದಾಗಿರುತ್ತದೆ.

ಈ “ಮತದಾನ ನಿರಾಕರಣೆ” ಕ್ರಮ ನಮ್ಮ ರಾಜಕೀಯ ಪಕ್ಷಗಳಲ್ಲಿ ಮತ್ತು ಅದರ ನಾಯಕರುಗಳನ್ನು ಎಚ್ಚರಿಸಬಹುದೇನೋ, ಉತ್ತಮ ಜನಪ್ರತಿನಿಧಿಗಳ ಆಯ್ಕೆಗೆ ಸಹಕಾರಿಯಾಗಬಹುದು ಮತ್ತು ಸೊ-ಕಾಲ್ಡ ರಾಜಕೀಯ ವ್ಯವಸ್ಥೆ ಒಂದಿಷ್ಟಾದರೂ ಬದಲಾಗಬಹುದು.

ಮತದಾನ ಬರಿ ನಮ್ಮ ಹಕ್ಕಷ್ಟೆ ಅಲ್ಲ ಕರ್ತವ್ಯವೂ ಕೂಡಾ, ಹಾಗಿದ್ದರೆ ದಯವಿಟ್ಟು ಮತಗಟ್ಟೆಗೆ ಹೋಗಿ “ಮತ ನೀಡಿ” ಇಲ್ಲ “ಮತದಾನ ನಿರಾಕರಿಸಿ” (vote not to vote (vote 49-O))..!!!

ಉತ್ತಮ ಸಮಾಜದ ಪ್ರಾರಂಭ ನಮ್ಮಿಂದಲೇ ಶುರುವಾಗಲಿ…

ಹೆಚ್ಚಿನ ಮಾಹೀತಿ: ಭಾರತಿಯ ಚುನಾವಣಾ ಆಯೋಗದ ವೇಬ್ ಸೈಟಿನಲ್ಲಿ

ಇಂಗ್ಲೀಷ ಮೂಲ: http://www.naitazi.com/

Advertisements

3 thoughts on “ನಿಮಗಿದು ಗೋತ್ತೆ? “ಮತದಾನ ನಿರಾಕರಣೆ” ಹಕ್ಕು (ಭಾರತಿಯ ಚುನಾವಣಾ ಕಾಯ್ದೆ 1961 “49 O”)

 1. ಮತ್ತೆನರ ಸಾಧ್ಯತೆಗಳು ಅದಾವನು ನೋಡಿ ಹೀಗೆ ಹೇಳ್ತಾಯಿರು.

  ಈ ಸಾರಿ ದಯವಿಟ್ಟು ಎಲ್ಲರೂ ಓಂದೆ ಪಕ್ಷವನ್ನು ಗೆಲ್ಲಿಸಿ, ಮತ್ತೆ ಕಿಚಡಿ ಸರ್ಕಾರ ಬಂದರೆ ನಮ್ಮ ರಾಜ್ಯದ ಗತಿ ಅಧೋಗತಿ, ಬೀಹಾರದ ಬದಲು ನಮ್ಮ ಮಾದರಿ ತೆಗೆದುಕೊಳ್ಳುತ್ತಾರೆ “ದಡ್ಡ ಜನರ” ಉದಾಹರಣೆಯಾಗಿ

  -ಮಾರುತಿ

 2. ಪ್ರೀಯ ಮಾರುತಿ,

  ಕ್ಷಮಿಸಿ, ನಿಮ್ಮ ಮಾತುಗಳಲ್ಲಿ ವಿರೋಧೊಭಾಸ ಎದ್ದು ಕಾಣುತ್ತಿದೆ.

  ನೀವು ಮತ ನಿರಾಕರಣೆಯ ಬಗ್ಗೆಯೂ ಮಾತನಾಡುತ್ತಿದ್ದಿರಿ, ಮತ್ತು ಒಂದೆ ಪಕ್ಷವನ್ನು ಆರೀಸಿ ತರಲು ಕೇಳುತ್ತಿದ್ದಿರಿ.

  “ಮತದಾನ ನಿರಾಕರಣೆ” ಕೇವಲ ಅಭ್ಯರ್ಥಿಗಳು ನಿಮ್ಮನ್ನು ಪ್ರತಿನಿಧಿಸಲು ಅಸಮರ್ಥರಿದ್ದಾಗ ಮಾತ್ರ, ಸುಮ್ಮನೆ ಪ್ರಯೋಗ ಮಾಡಲು ನಿಮ್ಮ ಮತದ ಪ್ರಾಮುಖ್ಯತೆ ಕಳೆಯಬೇಡಿ, ಮತ್ತು ನಮ್ಮ ಪ್ರಜಾಪ್ರಭುತ್ವದ ಅತಿ ದೊಡ್ಡ ವಿಡಂಬನೆಯೆಂದರೆ ನಾವು ಇರುವವರಲ್ಲಿಯೇ ಕಡಿಮೇ ಕೇಡಿಯನ್ನು ನಮ್ಮ ಪ್ರತಿನಿಧಿಯಾಗಿಸಬೇಕಾಗಿದೆ.

  ಮತ್ತು ಒಂದೇ ಪಕ್ಷವನ್ನು ಆರಿಸಿ ಕಳಿಸುವ ಸಲವಾಗಿ ಕೇಡಿಗಾಳನ್ನು- ರೌಡಿಗಳನ್ನು- ಕಾಳಸಂತೆಕೋರರನ್ನು ಆರಿಸಿ ಕಳುಹಿಸುವುದು ಬೇಡ ಎನ್ನುವುದು ನನ್ನ ಕಳಕಳಿ.

  ಉಳಿದಿದ್ದು ನಿಮ್ಮ ವಿಚಾರ,

  -ಶೆಟ್ಟರು,

  ಮಾಜಿ ಮತದಾರಪ್ರಭು, ಕರ್ನಾಟಕ ಸರಕಾರ. ಹಾಲಿ ಎಡಬಿಡಂಗಿ ಪ್ರಜೆ, ಮಹಾರಾಷ್ಟ್ರ ಸರಕಾರ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s