ಮುಂಬಯಿ, ಬರಿ ಮುಖವಾಡ ಮತ್ತು ಮಾನವಿಯತೆ ಇಲ್ಲಿ ಪವಾಡ…!!!

ಮುಂಬಯಿ ಕಥೆ-ಕಹಾನಿ

ಮುಂಬಯಿ ಭಾರತದ ಮಾಯಾನಗರಿ, ಕನಸುಗಳ ನಗರಿ, ಕನಸು ಮಾರುವ ನಗರಿ. ಮಂಬಯಿ ಉಗ್ರರಿಗೆ ಮೊದಲ ಗುರಿ, ಭೂಗತದೊರೆಗಳಿಗೆ ಜನ್ಮಭೂಮಿ, ಅಶ್ರಯನಗರಿ. ಎಂದೂ ನಿಲ್ಲದ ನಗರಿ, ಯಾರಿಗೂ ಕಾಯದ ನಗರಿ. “ಮುಂಬಯಿ ಬರಿ ಮುಖವಾಡ ಮತ್ತು ಮಾನವಿಯತೆ ಇಲ್ಲಿ ಪವಾಡ”

ಇದಿಷ್ಟು ನಾನು ಮುಂಬಯಿಗೆ ಅನ್ನ-ನೀರು ಅರಸಿ ಬರುವಾಗ ಗೆಳೆಯರು-ಹಿತೈಶಿಗಳು-ಹಿರಿಯರು ಹೇಳಿದ್ದು ಮತ್ತೂ ನಾನು ತಿಳಿದದ್ದು ಅಷ್ಟೆ. ಈ ತಿಂಗಳ ೩೦ಕ್ಕೆ ನನ್ನ ಮುಂಬಯಿ ಬದುಕಿಗೆ ೩ ವರ್ಷ ಕಳೆದು, ನಾಲ್ಕನೇ ವರ್ಷಕ್ಕೆ ಕಾಲಿಡುತ್ತದೆ. ಬರುವಾಗಿದ್ದ ಆತಂಕ-ಭಯಗಳ ಜಾಗದಲ್ಲಿ ಮುಂಬಯಿಯ ಬಗ್ಗೆ ಹೆಮ್ಮೆ-ಗೌರವಗಳಿವೆ.

ಕವಿ ಕಾಯ್ಕಿಣಿ ಹೇಳಿದಂತೆ “ಕಾಯಕದ ಕೈಲಾಸ” ಮುಂಬಯಿ, ಈಗ ನನ್ನ ಕಾಯಕದ ಕೈಲಾಸವೂ ಹೌದು. ಮುಂಬಯಿಗೆ ಕಾಲಿಟ್ಟ ಈ ಮೂರು ವರ್ಷಗಳಲ್ಲಿ ಮುಂಬಯಿಯ ಅತ್ಯಂತ ಕರಾಳ ಮಳೆಯನ್ನು, ಲೋಕಲಗಳಲ್ಲಾದ ಬಾಂಬ ಸರಣಿ ದುರಂತವನ್ನು ನೋಡಿದ್ದೆನೆ, ಹಾಗೆಯೇ ಮುಂಬೈಕರಗಳ ಮಾನವಿಯ ಮುಖವನ್ನು ಕೂಡ. ಅಂತೆಯೇ ಮುಂಬಯಿಯನ್ನು ಕಾಡುತ್ತಿರುವ ಭೂಗತಲೋಕ, ಮರಾಠಿ ಮಾನುಸ ವಿಚಾರ, ಹಿಂದಿ ಚಿತ್ರೊದ್ಯಮ ಮತ್ತು ಅವರೊಳಗಿನ ಗಾಸಿಪ್ಪುಗಳು, ಹಾಜಿ ಅಲಿ-ಸಿದ್ಧಿವಿನಾಯಕರ ಸುದ್ದಿಗಳು, ಮುಂಬಯಿನ ಲೋಕಲ್ಲು ಮತ್ತು ಅದರ ಹಳಿಗಳೊಂದಿಗೆ ಸಾಗುವ ಬದುಕು, ಕನಸು ಅರಸಿ ಬಂದವರು ಮತ್ತು ಕನಸು ಕಳೆದುಕೊಂಡವರು, ವನ-ರೂಮ ಕಿಚನ್ನಲ್ಲಿ ಬದುಕುವ ಬವಣೆ, ಮನೆಯೊಳಗೆ ಹೇಲಿಕ್ಯಾಪ್ಟರನ್ನು ಇಳಿಸುವ ಅಂಬಾನಿ, ಇವರೊಂದಿಗೆನೆ ಬದುಕುವ ಎಶಿಯಾದ ದೊಡ್ಡ ಸ್ಲಮ್ “ಧಾರಾವಿ” ಮತ್ತದರ ತಮ್ಮಂದಿರು, ಕೊಟ್ಯಾಧಿಪತಿ ಭಿಕ್ಷುಕರು ಮತ್ತು ಅವರನ್ನು ತಯಾರಿಸುವ ಕಾರಖಾನೆಗಳು, ಮುಂಬಯಿಯ ಮಳೆ ಮತ್ತು ಅದು ಹುಟ್ಟಿಸುವ ಮಾನವಿಯತೆ, ಒಟ್ಟಿನಲ್ಲಿ ಮುಂಬಯಿ ಮತ್ತು ಮುಂಬೈಕರಗಳ ಇನ್ನು ಅನೇಕ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಾಗಿದೆ. ಹೀಗಾಗಿ ನನ್ನದೊಂದು ಸಣ್ಣ ಪ್ರಯತ್ನ “ಮುಂಬಯಿ: ಕಥೆ-ಕಹಾನಿ”, ಇದನ್ನು ಅಂಕಣವೆನಬೇಕೊ, ನನ್ನ ಅನುಭವವೇನಬೇಕೊ, ಇಲ್ಲ ಮುಂಬಯಿ ಬಗ್ಗೆ ಒಂದು ನ್ಯೂಜ್ ಎನ್ನಬೇಕೂ ಅದನ್ನು ನೀವೆ ನಿರ್ಧರಿಸಿ.

ನನಗಿದು ನನ್ನ “ಕಾಯಕದ ಕೈಲಾಸ”ವನ್ನು ಇನ್ನಷ್ಟು ಅರಿತುಕೊಳ್ಳುವ ಒಂದು ಸಣ್ಣ ಪ್ರಯತ್ನ. ನಿಮ್ಮ ಬೆಂಬಲವಿರಲಿ.

Advertisements

ಒಮ್ಮೆ ನೀನು…

ಒಮ್ಮೆ ನೀನು ನಕ್ಕುಬಿಡು
ನನ್ನ ನೋಡಿ ಸುಮ್ಮನೇ…
ಕಳೆದು ಹೋಗಲೊಂದು ಬದುಕು
ಅದರ ಒಂದು ನೆನಪಲೇ…

ಬಡ್ಡಿಮಗಂದು…ಕನಸು ಬೈದು ಹೇಳಿತು

ನನ್ನೆದೆಯ ಗೂಡಿನಲ್ಲಿ, ಅವಳ
ನೆನಪುಗಳ ಗೋರಿ ಕಟ್ಟಿದೆ,
ಹೇಗೊ-ಎನೋ, ಗೋರಿಯ ಮಣ್ಣ
ಮೇಲೆ ಗರಿಕೆ-ಹುಲ್ಲು ಹುಟ್ಟಿದೆ.

ಕನಸುಗಳೆಂಬ ಬೇರಿಗೆ
ಕಟ್ಟುಬಿದ್ದು ಅಲ್ಲೆ ನಿಂತಿದ್ದೆ.
ನಿನ್ನೆ ಹೂವಾಗಿ, ಹಣ್ಣಾಗಿ,
ಒಣಗಿ ಬೀಜ ದೂರ ಹಾರಿದೆ.

ಮನಸ್ಸು… ಬುದ್ದಿ ಹೇಳಿತು
ಅವಳು ನಿನ್ನ ಬದುಕು, ಒಪ್ಪಿಕೋ.
ಬಡ್ಡಿಮಗಂದು…ಕನಸು ಬೈದು ಹೇಳಿತು
ಅವಳೇ ನಿನ್ನ ಬದುಕು, ತಪ್ಪಿಸಿಕೋ…!!!

ಒಂದು ಮಳೆಯಾದ ಮುಂಜಾನೆ..

ಒಂದು ಮಳೆಯಾದ ಮುಂಜಾನೆ..

ರಾತ್ರಿ ಮಳೆಯಾದರೆ, ಮರುದಿನದ ಮುಂಜಾನೆಯ ತಿಳಿ ಬಿಸಿಲಿಗೆ ಎಂತದೋ ಸಡಗರ, ಎಂತದೋ ಘನತೆ, ಅದರೊಂದಿಗೆ ಬರುವ ಗಾಳಿಯಲ್ಲಿ ಎಂತದೋ ಘಮ.

ಮೋಡ ಮುಸುಕಿದ ಮೂರು ದಿನಗಳ ನಂತರ ಈ ಭೂಮಿ ತಿಳಿ ಬಿಸಿಲು ಕಂಡಿದೆ, ಅದಕ್ಕೋ ಎಂತದೋ ಸಂಭ್ರಮ, ಇಡೀ ವಾತಾವರಣವೇ ಅಹ್ಲಾದಕರ, ಅದರೊಂದಿಗೆ ನಿನ್ನ ಸವಿ ಸವಿ ನೆನಪು. ನೆನಪಿಗೆ ಬಂದವಳನ್ನು ಹಾಗೆ ಹಿಡಿದಿತ್ತುಕೊಳ್ಳಲು ಆಸೆ ಪಡುತ್ತದೆ ಮನಸ್ಸು, ಆಗಿದ್ದವಳು ಈಗಿಲ್ಲ, ಮೋಡವೋಂದು ಅಡ್ಡವಾಯಿತು. ನೀನೆಲ್ಲೋ ಆ ಮೇಘರಾಣಿಯ ಚೊಚ್ಚಳ ಮಗಳಿರಬೇಕು, ನನ್ನ ನೆನಪಿಗೆ ಬಂದವಳೆಲ್ಲಿ ಈ ತೀಲಿಬಿಸಿಲಿಗೆ ಕಪ್ಪಗಾಗಿಯಾ ಎಂದು ತನ್ನ ಸೆರಗು ಅಡ್ಡ ಹಿಡಿದಿದ್ದಾಳೆ.

ಈ ಮುಂಜಾನೆಯ ತಿಳಿ ಬಿಸಿಲ ಗಮ್ಮತ್ತೆ ಬೇರೆ, ನಮ್ಮ ಸುತ್ತಲಿನ ಜಗತ್ತು ಬೇರೆಯೇ ಆಗಿ ಕಾಣುತ್ತದೆ, ಅದೆಲ್ಲವೂ ಚಿನ್ನದ್ದೇನೋ ಅನ್ನಿಸಿಬಿಡುತ್ತದೆ. ಈ ತಿಳಿ ಬಿಸಿಲ ಚಿನ್ನದ ಬಣ್ಣದಲ್ಲಿ ಚೆಂಬೂರಿನ ಕೊಳಗೆರಿ ಕೊಡ ಆ ಸುವರ್ಣ ಲಂಕೆಯಾಗಿ ತೋರುತ್ತದೆ. ಅಲ್ಲಿನ ಕಪ್ಪು ಮಣ್ಣಿನ ಮಕ್ಕಳೂ ಚಿನ್ನದ ಪುತ್ಥಳಿಗಳಾಗಿದ್ದಾರೆ. ಈ ತಿಳಿ ಬಿಸಿಲ ಸೂರ್ಯನು ಕೂಡಾ ತುಂಬಾ ಒಳ್ಳೆಯವನು, ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಕೊಡಾ ಮುಗುಳ್ನಕ್ಕೂ “ಹಲೋ” ಎನ್ನುತ್ತಾನೆ, ಕಣ್ಣು ಕೋರೈಸದೇ. ಮುಂಜಾನೆಯ ಗಾಳಿಯೂ ಕೂಡಾ ಅಷ್ಟೇ ತಂಪಾಗಿ ಸುಳಿದು, ನಿನ್ನೆಯಷ್ಟೇ ಬಿದ್ದ ಮಳೆಯ ಘಮವೆಲ್ಲ ಹಂಚುತ್ತದೆ. ನನಗೆ ನಿನ್ನ ನೆನಪನ್ನು ಹೊತ್ತು ತಂದು ಮೈಯೆಲ್ಲ ಕಚಗುಳಿಯಿಡುತ್ತದೆ ಹಳೆಯ ಗೆಳೆಯನಂತೆ.

ನಿನ್ನೆ ಆದ ಮಳೆಗೆ ಇಡಿ ಭೂಮಿಯೇ ತೋಳೆದಿಟ್ಟಂತಿದೆ, ಗಿಡ ಮರಗಳೆಲ್ಲ ಫಳ-ಫಳ ಹೋಳೆಯುತ್ತಿದ್ದಾವೆ. ಹಸಿರೆಲೆಗಳೇಲ್ಲ ಹೋಸದಾಗಿವೆ. ರಸ್ತೆಗಳೆಲ್ಲ ಕ್ಲೀನಾಗಿವೆ.ದಿನಾ ಕಾಣುವ ಅವೇ ರಸ್ತೆ-ಕಟ್ಟಡಗಳು ಇವತ್ತಷ್ಟೆ ಕಟ್ಟಿದ್ದಾರೆನೋ ಎಂಬಂತೆ ಕಾಣುತ್ತಿವೆ. ಯಾವುದೊ ಗಂಧವ೯ ಲೋಕವೇನೊ ಅನ್ನಿಸಿಬಿಡುತ್ತದೆ.

ದಿನಾ ಕಾಣೋ ಹುಡುಗಿಯರೆಲ್ಲ ಇವತ್ತೇ ಇಷ್ಟೊಂದು ಸುಂದರವಾಗಿ ಕಾಣುತ್ತಿದ್ದಾರೆ. ದಿನ ಇದೆ ಬಸ್ಸನ್ನೆ ಹತ್ತುವ ಆ ಕಪ್ಪು ಸುಂದರಿ “ರಂಭೆ”ಯ ಕೋನೆಯ ತಂಗಿಯೇನೊ ಅನಿಸುತ್ತಿದ್ದಾಳೆ, ಅಗೋ ಆ ಸಿಡಬು ಕಲೆಯ ಸಿಡುಕ ಮುಖದವನಿಗೂ ಇಂದು ವಿನಾಕಾರಣ ಮುಗುಳ್ನಗೆ.

“ಮುಂಗಾರುಮಳೆಯೇ ಏನು ನಿನ್ನ ಹನಿಗಳ ಲೀಲೇ..”