ನನ್ನ ನೆನಪಾಗುವುದೇ ಇಲ್ಲವೇ?

ನಿಜ ಹೇಳು ಗೆಳತಿ, ನಿನಗೆ
ನನ್ನ ನೆನಪಾಗುವುದೇ ಇಲ್ಲವೇ?

ಮನೆಗೆಲವನ್ನೇಲ್ಲ ಮುಗಿಸಿ,
ಟಿ.ವಿ. ನೋಡುತ್ತಾ, ಮೈ ಮರೇತು
ನಿದ್ರೆಗೆ ಜಾರುವಾಗಲೆಲ್ಲ
ನಿಜ ಹೇಳು ಗೆಳತಿ, ನಿನಗೆ
ನನ್ನ ನೆನಪಾಗುವುದೇ ಇಲ್ಲವೇ?

ಸಂಜೆ ದೇವಸ್ಥಾನಕ್ಕೇ ಹೋದಾಗ
ದೇವರನ್ನಲ್ಲದೇ ಬೇರಾರಿಗೊ
ಕಾಯುತ್ತಿರುವ ಆ ಹುಡುಗನನ್ನು ನೋಡಿದಾಗ
ನಿಜ ಹೇಳು ಗೆಳತಿ, ನಿನಗೆ
ನನ್ನ ನೆನಪಾಗುವುದೇ ಇಲ್ಲವೇ?

ಗುರುಗುಟ್ಟುವ ಬೈಕಿನಲ್ಲಿ ಮೈಗೇ
ಮೈ ಅಂಟಿಕೊಂಡು ಕುಳಿತಿರುವ
ಜೋಡಿಯೋಂದು ಕಣ್ಮುಂದೆ ಬಂದಾಗ
ನಿಜ ಹೇಳು ಗೆಳತಿ, ನಿನಗೆ
ನನ್ನ ನೆನಪಾಗುವುದೇ ಇಲ್ಲವೇ?

ನೀ ಮಾಡಿದ ಅಡುಗೆ ಹೇಗಿದೆಯೆಂದು
ಹೇಳದೆ, ತುಟಿಗೇ ನಗು ತಾರದೇ,
ಹಾಗೆಯೆ ನಿನ್ನವನೇದ್ದು ಹೋದಾಗ
ನಿಜ ಹೇಳು ಗೆಳತಿ, ನಿನಗೆ
ನನ್ನ ನೆನಪಾಗುವುದೇ ಇಲ್ಲವೇ?

ನೀ ಕಲಿಸಿಟ್ಟ ಅನ್ನ-ತುಪ್ಪುಪ್ಪು
ತಿನ್ನದೇ, ಉಪ್ಪಿನಕಾಯಿಗಾಗಿ
ನಿನ್ನ ಮಗ ಹಠ ಮಾಡಿದಾಗ
ನಿಜ ಹೇಳು ಗೆಳತಿ, ನಿನಗೆ
ನನ್ನ ನೆನಪಾಗುವುದೇ ಇಲ್ಲವೇ?

ನಿಜ ಹೇಳು ಗೆಳತಿ, ನೀನು
ನನ್ನ ಮರೆತಿದಿದ್ದಾದರು ಹೇಗೆ?
ನನಗೂ ಮರೆಯಬೇಕಿದೆ ಹಾಗೆ.

(ಈ ಕವನ ಗೆಳಯ ಅರವಿಂದ ಅವರು ಕೊಟ್ಟ ಸ್ಪೂರ್ತಿಯಿಂದ…)

Advertisements

ಇಲ್ಲಿ ನೀನ್ಯಾರು, ನಾನ್ಯಾರು?

ಅವಳ ನೆನಪಿನ ಬಸಿರು
ದಿನಾ ಹೆರುತ್ತಲೇ ಇದೆ
ನೂರಾರು ಕೂಸು-ಕುನ್ನೆಗಳ,
ಮದುವೆಯಾಗಿ ವರ್ಷಗಳೂರುಳಿದರೂ
ತುಂಬುತ್ತಿಲ್ಲ ಅವಳ ಒಡಲು ಗಂಡ-
ನೊಟ್ಟಿಗೆ ಆಸ್ಪತ್ರೆಗಳಿಗೆ ದಿನಾ ಸುಳಿಗಳು

ತೊಂದರೆ ಕಾಣುತ್ತಿಲ್ಲ ಡಾಕ್ಟರರಿಗೆ
ಅವರ ದೊಡ್ಡ ದೊಡ್ಡ ಯಂತ್ರಗಳಿಗೆ
ನೂರಾರು ಸಾವಿರದ ಟೇಸ್ಟುಗಳಿಗೆ,
ಮತ ಎಣಿಕೆಯ ಹಾಗೆ ಎನಿಸಿದ್ದು
ಆಯಿತು, ಅವನ ಗಂಡುಸುತನದ
ಗುರುತುಗಳನ್ನು, ಸುಳಿವೇ ಇಲ್ಲ

ಅವಳಿಗಾದರೂ ತಿಳಿಯಬಾರದೇ,
ಟೇಸ್ಟುಬಿನಲ್ಲಿ ಬೇಬಿ ಬೇಕಂತೆ.
ಬರಿ ಗರ್ಭವಿದ್ದರೇ ಎನಾಯ್ತು
ಮನಸು ಬೇಕಲ್ಲ ಜೋತೆಗೆ.

ಅವಳ ಗಂಡ ಸಿಕ್ಕಿದ್ದ, ಕೊಟ್ಟೆ ಅವನಿಗೆ
ಅವಳ ಮನಸನ್ನ, ಅವನೂ ಯಾರಿಗೊ
ಎನೋ ಮರಳಿಸಲು ಬಂದಿದ್ದಂತೆ, ಈ
ದೊಡ್ಡ ಊರಿನಲ್ಲಿ ಕಷ್ಟಗಳು ನೂರಾರು
ಹೀಗಾಗಿ ಇಲ್ಲಿ ನೀನ್ಯಾರು, ನಾನ್ಯಾರು?

ಸಾಕಾಗಿದೆ ಈ ಒಂಟಿ ಬದುಕು, ಎಲ್ಲಿರುವೆ ಗೆಳತಿ ಒಮ್ಮೆಯಾದರೂ ಸಿಗು

ನನ್ನೊಳಗಿರುವ ನಿನಗೂ
ನಿನ್ನೊಳಗಿರುವ ನನಗೂ
ಎನೂ ಸುಖವಿಲ್ಲ ಗೆಳತಿ,
ನಿನಲ್ಲಿ, ನಾನಿಲ್ಲಿ
ಮಾತು ಬರಿ ಮೊಬೈಲಿನಲ್ಲಿ
ನೋಟ ನಿನ್ನ e-ಮೇಲಿನಲ್ಲಿ.

 
ಈ ಎಸ್ಸೆಮ್ಮೆಸ್ಸು, ಇ-ಮೇಲು
ಈ ಚಾಟು, ಗೆಳತಿ ಇಷ್ಟಿಷ್ಟೆ ಸಾಕಾಗಿದೆ,
ಒಮ್ಮೆ ಇಡಿಯಾಗಿ ಸಿಗು
ನಿನ್ನ ನಗು, ಆ ಮಾತು
ನಿನ್ನ ತೊಳತೆಕ್ಕೆಯಲ್ಲಿ ಕರಗಬೇಕಿದೆ.

 

ನೀ ನಿಂತಲ್ಲೆ ನದಿಯಾದೆ,
ಎದ್ದುಹೋದರೆ ಅಲೆಯಾದೆ,
ಅದಾವುದು ನನಗಿಷ್ಟವಿಲ್ಲ.
ನೀ ಎದ್ದು ಹೋದಮೇಲೂ
ಉಳಿದಿತ್ತಲ್ಲ ನಿನ್ನ ಮೈಯ ಘಮ
ಅದು ನನಗಿಷ್ಟ, ಅದು ನೀನಾಗು.