ಎಲ್ಲರಿಗೂ ಹೋಸ ವರುಷದ ಶುಭಾಷಯಗಳು…

Happy New Year 2009

Advertisements

ಕನಸು ಹುಟ್ಟುವ ಮುನ್ನ

ಕನಸು ಹುಟ್ಟುವ ಮುನ್ನ
ಹೋಸ ಕನಸು ಮೂಡುವಾ ಮೊದಲು
ಮೂಕವಾಗಿದೆ ನನ್ನ ಮನಸು
ಮಾತು ಮೂಡುತ್ತಿಲ್ಲ, ಎನೊಂದು ತಿಳಿಯುತ್ತಿಲ್ಲ
ನನಗಂತೂ ಇದೇ ಮೊದಲು.

ಹೋಸ ಪರಿಚಯದ ಹಂಗೇ,
ಅವಳ ಕುಡಿನೋಟದ ಬಂಧವೇ?
ಮೊದಲೆಂದು ಹೀಗಾಗಿರಲಿಲ್ಲ, ಇದು
ನನಗಂತೂ ಇದೇ ಮೊದಲು.

ಮಾತು ಬರಿ ತೋದಲು, ನೋಟ ಒಲವೇ ಒಲವು
ಅವಳ ಕುಡಿನೋಟದಲ್ಲಿ ಕಳೆದು ಹೋಗಿರುವೆನೆನೋ?
ಹುಡುಕುತ್ತಿದ್ದನೆ ನನ್ನನ್ನೆ ನಾನು, ಇದು
ನನಗಂತೂ ಇದೇ ಮೊದಲು.

ಬೀಜ ಮೊಳೆಯುವ ಮುನ್ನ
ಕನಸು ಹುಟ್ಟುವ ಮುನ್ನ
ಹೀಗಾಗಲೇ ಬೇಕೆನೋ? ಇದು
ನನಗಂತೂ ಇದೇ ಮೊದಲು,
ಅಲ್ಲಿ ಅವಳದೂ ಇದೇ ಸ್ಥಿತಿಯೇನೋ?

ಬ್ಲಾಗ ಸಾಹಿತ್ಯದ ಪ್ರಚಾರಕ್ಕೆ ಜ್ಞಾನಪೀಠಿ

ಬ್ಲಾಗ ಸಾಹಿತ್ಯದ ಪ್ರಚಾರಕ್ಕೆ ಜ್ಞಾನಪೀಠಿ
ಇತ್ತಿಚಿನ ದಿನಗಳಲ್ಲಿ ಬ್ಲಾಗ ಬರೆಯುತ್ತಿರುವವರ ಸಂಖ್ಯೆ ಬೆಳೆಯುತ್ತಿದ್ದರು ಅದಕ್ಕೆ ಪೂರಕವಾಗಿ ಬ್ಲಾಗ ಓದುಗರ ಸಂಖ್ಯೆ ಬೆಳೆಯುತ್ತಿಲ್ಲದಿರುವುದನ್ನು ಗಮನಿಸಿ “ಕನ್ನಡ ಬ್ಲಾಗ ಸಾಹಿತ್ಯ ಪರಿಷತ್” ಜ್ಞಾನಪೀಠಿ ಅನಂತಮೂರ್ತಿಯವರನ್ನು ತಮ್ಮ ಬ್ರಾಂಡ್ ಅಂಬಾಸಿಡರ ಆಗಿ ನಿಯುಕ್ತಗೊಳಿಸಿದ್ದಾರೆ.

ಅನಂತಮೂರ್ತಿಯವರು ಇದನ್ನು ಸವಾಲಾಗಿ ಸ್ವಿಕರಿಸಿ, ಉತ್ತಮ ಪ್ರಾಚಾರಕ್ಕಿಂತ ಇಂದು ಜನರು “ಅಪಪ್ರಚಾರ” ಮತ್ತು “ಬ್ರೇಕಿಂಗ್ ನ್ಯೂಜ್”ಗಳಿಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆಂದು ಕಳೆದ ವರ್ಷದ “ವಾರ್ಷಿಕ ಸಾಹಿತ್ಯಿಕ ಜಗಳ”ವನ್ನು ಉದಾಹರಿಸಿದ್ದಾರೆ, ಕಳೆದ ವರ್ಷದ “ವಾರ್ಷಿಕ ಸಾಹಿತ್ಯಿಕ ಜಗಳ”ದಿಂದಾಗಿ ಭೈರಪ್ಪನವರ “ಆವರಣ” ಕನ್ನಡದ ಸೂಪರ್ ಹಿಟ್ ಆಗಿತ್ತು ಎಂದು ನೆನಪಿಸುತ್ತಾ, ಬ್ಲಾಗ ಸಾಹಿತ್ಯ ಪ್ರಚಾರಕ್ಕೆ ಅದೆ ಹಿನ್ನಲೆಯಿಟ್ಟು ಪ್ರಚಾರ ಆರಂಭಿಸುವುದಾಗಿ ಚಿಂತನೆ ನೆಡೆಸಿ ಪ್ರಚಾರವನ್ನು ಆರಂಬಿಸಿಯೆ ಬಿಟ್ಟರು.

ಇನ್ನು ಕನ್ನಡ ಬ್ಲಾಗ ಸಾಹಿತ್ಯ ತನ್ನ ಉತ್ತುಂಗಕ್ಕೆ ಎರುವುದು ಖಂಡಿತ..!!!???

ಪೂರಕ ಓದಿಗೆ: ಕನ್ನಡಪ್ರಭ

ಮುಂದುವರೆದ ಜನಾಂಗದವರ ಸಾಹಿತ್ಯ ಸೃಷ್ಟಿ ನಿಲ್ಲಬೇಕು: ಒತ್ತಾಯ

ಕನ್ನಡ ಸಾಹಿತ್ಯ ಲೋಕದಲ್ಲಿ ಮುಂದುವರೆದ ಜನಾಂಗದವರ ಸಾಹಿತ್ಯಸೃಷ್ಟಿ ತುಂಬಾ ಹೆಚ್ಚಾಗುತ್ತಿದ್ದು ಒಂದೆರಡು ವರ್ಷಗಳ ಕಾಲ ಇವರ ಸಾಹಿತ್ಯಸೃಷ್ಟಿಯನ್ನು ನಿರ್ಭಂದಿಸಬೇಕೆಂದು ಇಲ್ಲಿ ಒತ್ತಾಯಿಸಲಾಯಿತು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಯುತರು, ಕನ್ನಡ ಸಾಹಿತ್ಯದಲ್ಲಿ ಇಲ್ಲಿಯವರೆಗೆ ಬಹುಪಾಲು ಮುಂದುವರೆದ ಜನಾಂಗದವರೆ ಸಾಹಿತ್ಯಸೃಷ್ಟಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಅವರ ಕನ್ನಡ ಸಾಹಿತ್ಯದಲ್ಲಿ ಅವರ ಪ್ರಮಾಣ ಹೆಚ್ಚಾಗಿದ್ದು, ಉಳಿದವರಿಗೂ ಅವಕಾಶ ನಿಡುವುದಕ್ಕಾಗಿ ಸರ್ಕಾರ ಅವರ ಮೇಲೆ ವಿಶೇಷ ಮಸೂದೆ ಮಂಡಿಸಿ ಅವರ ಸಾಹಿತ್ಯಸೃಷ್ಟಿಯನ್ನು ನಿರ್ಭಂದಿಸಬೇಕೆಂದು ಮನವಿ ಮಾಡಿದ್ದಾರೆ. ಒಂದು ವೇಳೆ ಮನ್ನಣೆ ದೊರೆಯದಿದ್ದ ಪಕ್ಷದಲ್ಲಿ ಮನೆಯಿಂದ ಬೀದಿಗಿಳಿದು,ಬಸ್ಸ ಹತ್ತಿ ಬೆಂಗಳೂರಿಗೆ ಬಂದು ಲಾಲಭಾಗ, ವಿಧಾನಸೌಧ ಇತ್ಯಾದಿ ನೋಡಿಕೊಂಡು ಹಾಗೆಯೇ ಬೃಹತ್ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.

ಪೂರಕ ಓದಿಗೆ: ಕನ್ನಡ ಪ್ರಭ

ಆಗ ಬಿಡೆವು ಮತ್ತೊಂದು ಬಾರಿ

We Salute

ಹಾಗೇ ಬಿಡೆವು ಈ ಸಾರಿ
ಆಗ ಬಿಡೆವು ಇದ ಮತ್ತೊಂದು ಬಾರಿ
ತೋಡೆಯ ತಟ್ಟಿ, ನೆಲವ ಮೆಟ್ಟಿ
ಹಿಡಿದು ನಾಯಕರ ಕಾಲರ ಪಟ್ಟಿ,
“ನಮ್ಮ ಭದ್ರತೆಯ ಭಾರ ನಿಮ್ಮದಲ್ಲವಾ?”

ಸೇಕ್ಯೂರಿಟಿ ನಿಮಗೆ ಬೇಕು..
‘ಎಕ್ಸೂ’ ಬೇಕು, ‘ವಾಯ್-ಝಡ್ಡೂ’ ಬೇಕು.
ಮೇಲೆ ನಿಮಗೆ ನಮ್ಮ ಟ್ಯಾಕ್ಸು ಬೇಕು
ವೋಟು ಬೇಕು, ಗೂಟದ ಕಾರೂ ಬೇಕು,
“ನಮ್ಮ ಜೀವ ಕಾಯುವ ಭಾರ ನಿಮ್ಮದಲ್ಲವಾ?”

ಪ್ರತಿ ಸಲವೂ ಇದೇ ಆಯಿತು,
ಸತ್ತವರಿಗೆ ಸಂತಾಪವಾಯಿತು, ಬದುಕಿದವರಿಗೆ ಪರಿಹಾರವಾಯ್ತು,
ಅದರ ಮೇಲೆ ನಿಮ್ಮ ‘ಉತ್ತರ’ನ ಪೌರುಷ,
‘ನಮ್ಮ ಬಳಿ ಮಾಹೀತಿ ಇದೆ, ಶಿಘ್ರದಲ್ಲಿಯೇ ಭಂದಿಸಲಿದ್ದೆವೆ’???

‘ತಾಳಿದವನು ಬಾಳಿಯಾನು’ನಮ್ಮ ನಂಬಿಕೆ ಸೋತು ಹೋಗಿದೆ,
ಡಾರ್ವಿನ್ನನೆ ಕೋನೆಗೆ ಜಯಿಸಿದ, ‘ದುರ್ಬಲ ಸಾಯುವ, ಸಬಲನೆ ಬದುಕುವ’
ಬದುಕುವ ಹಂಬಲ ನನಗೂ ಇದೆ, ನೀನಗೂ ಇದೆ, ಬಾ ಗೆಳೆಯ
ತೋಡೆಯ ತಟ್ಟಿ, ನೆಲವ ಮೆಟ್ಟಿ ಹಾಕುವ ಕೂಗೊಂದನು,
“ಭಾರತಿಯರು ಎಲ್ಲ ಒಂದೇ, ನಮಗೆ ಒಬ್ಬನೆ ಶತ್ರುವು.
ಭಯದ ಎದುರು ಗೆದ್ದೆಗೆಲುವೆವು ಅದಕೆ ನಾವು ಭಾರತಿಯರು.”

——0——

ಇವತ್ತು ಬುಧುವಾರ ಸಾಯಂಕಾಲ ೬ ಗಂಟೆಗೆ ತಾಜ್ ಹೋಟೆಲಿನ ಎದುರಿನಲ್ಲಿರುವ “ಗೇಟ ವೇ ಅಫ್ ಇಂಡಿಯಾ” ಬಳಿ ನಾವೆಲ್ಲ ಸೇರಿ ನಮ್ಮನ್ನಾಳುವವರನ್ನು ಕೇಳುವವರಿದ್ದೆವೇ, “ನಮ್ಮ ಜೀವಕ್ಕೆ ಬೆಲೆ ಇಲ್ಲವೇ?”..

ನೀವು ಬರುತ್ತಿರಲ್ಲಾ, ನಾವಿಗ ಎಚ್ಚೆತ್ತಿದ್ದೆವೆ, ನಮ್ಮ ಸಹನೆಯ ಕಟ್ಟೆ ಒಡೆದಿದೆ. ನಾವಿನ್ನು ಬಯೊತ್ಪಾದಕರನ್ನು ಮತ್ತು ನಮ್ಮ ರಾಜಕಾರಣಿಗಳನ್ನು ಪ್ರತಿಸಲದಂತೆ ನಮ್ಮ ಜೀವ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಎನಾದರೂ ಮಾಡಬೇಕಾಗಿದೆ, ನಾವಿಗ ಸುಮ್ಮನಿರುವುದಿಲ್ಲ ಎಂದು ತಿಳಿಸಬೇಕಾಗಿದೆ, ನಮ್ಮ ನಾಯಕರಿಗೆ, ನಮ್ಮನ್ನಾಳುವವರಿಗೆ, ನಮ್ಮ ರಾಜಕಾರಣಿಗಳಿಗೆ ನಮ್ಮ ಸಿಟ್ಟು, ಅವರ ಮೇಲಿರುವ ನಮ್ಮ ಬೇಸರ ತಿಳಿಸಬೇಕಾಗಿದೆ, ನಾವಿಗ ತೋರಿಸಬೇಕಾಗಿದೆ ನಾವೆಷ್ಟು ನೊಂದಿದ್ದೆವೆ, ನಮ್ಮ ಸಹನೆ ತಿರಿಹೋಗಿದೆ. ಈಗ ನಮ್ಮ ಕೋಪ, ಸುಸ್ತು, ನಿರಾಶೆ ಎಲ್ಲವನ್ನು ನಮ್ಮನ್ನಾಳುವರಿಗೆ ತೋರಿಸಬೇಕಾಗಿದೆ.

ಅದಕ್ಕಾಗಿ ಇಂದು ಬುಧುವಾರ, ದಿಸೆಂಬರ್ ೩ರ ಸಾಯಂಕಾಲ ೬ ಗಂಟೆಗೆ “ಗೇಟ ವೇ ಅಫ್ ಇಂಡಿಯಾ” ಬಳಿ ನಾವೆಲ್ಲ ಸೇರಲಿದ್ದೆವೆ, ನಮ್ಮ ಹಕ್ಕನ್ನು ಕೇಳಲು, “ಹೆದರಿಕೆ ಇಲ್ಲದೇ ಬದುಕುವ” ಹಕ್ಕಿಗಾಗಿ. ನಮ್ಮೆಲ್ಲರ ಬದುಕಿಗಾಗಿ ನಮ್ಮ ಬಳಿ ಒಂದು ಸಂಜೆಯಿಲ್ಲವೇ?

Right to LIVE fearlessly. Lets devote one evening of our life to it.

ಕಾಯುವೆ ನಿಮಗಾಗಿ, ಹೋರಾಡಲು ಕೈ ಹಿಡಿದು…
We Protect

ಮುಂಬಯಿ ಮೇರಿ ಜಾನ್…: ಬದುಕಿಗಾಗಿ ಹೋರಾಟ

ಬದುಕಿಗಾಗಿ ಹೋರಾಟ

ಪ್ರತಿ ಸಲದಂತೆಯೇ ಈ ಸಲ ಮುಂಬಯಿ ಮೈ ಕೊಡವಿ ಮತ್ತೆ ಎದ್ದು ನಿಂತಿದೆ, ಮುಂಬಯಿ ಮೇಲೆ ದಾಳಿ, ಅದು ಒಮ್ಮಲೇ ಸೋತಂತೆ ನಟಿಸಿ ಅದೇ ವೇಗದಲ್ಲಿ ಪುಟಿದು ಮತ್ತೆ ತನ್ನ ಎಂದಿನಂತಹ ಜೀವನ ಪ್ರೀತಿ ಮತ್ತು ವೇಗದ ಬದುಕಿಗೆ ಹೊಂದಿಕೊಂಡು ಬಿಡುತ್ತದೆ. ಪ್ರತಿ ಸಲವು ಮುಂಬಯಿ ಮೇಲೆ ನೆಡೆದ ದಾಳಿಗಳಿಗೆ ಸಾಂತ್ವನ ಹೇಳುವ ಮೊದಲೇ ಎದ್ದು ನಿಲ್ಲುವ ಮುಂಬಯಿ ಬದುಕಿಗೆ ಮತ್ತು ಮುಂಬೈಕರಗಳ ಮೇಲೆ ಪ್ರೀತಿ, ಹೆಮ್ಮೆ ಉಕ್ಕಿ ಹರಿದರೂ, ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಸಿಟ್ಟು ಹೆಡೆಬಿಚ್ಚಿ ನಿಲ್ಲುತ್ತದೆ.

ಈ ‘ಮುಂಬಯಿ’ ನಮಗೆಂತಹ ಮಾದರಿ ನೀಡುತ್ತಿದೆ? ಬಿದ್ದರು ನಿಲ್ಲದಷ್ಟು, ಗಾಯಕ್ಕೊಂದು ಪಟ್ಟಿ ಕಟ್ಟುವುದಕ್ಕು ನಿಲ್ಲದಷ್ಟು, ಮೈಗಂಟಿದ ಮಣ್ಣನ್ನು ಕೊಡವಿಕೊಳ್ಳದಷ್ಟು ವೇಗವಾಗಿ ತನ್ನನ್ನು ಸಂಭಾಳಿಸಿಕೊಂಡು ಹೋಗುವ ಮುಂಬಯಿ, ಬೇರೆ ನಗರಗಳಿಗೆ ಎಂಥಹ ಮಾದರಿ ನೀಡುತ್ತಿದೆ? ನಮ್ಮ ರಾಜಕಾರಣಿಗಳಿಗೆ ನಮ್ಮ ಬಗ್ಗೆ ಎನು ಹೇಳಿಕೊಡುತ್ತಿದೆ?

‘ನಮಗಿಗ ಬಿಳುವುದು, ಈ ನೋವು ರೂಢಿಯಾಗಿದೆ, ಒಂದೊಮ್ಮೆ ಸಹಿಸಲಸಾದ್ಯವಾದದ್ದು ಇವತ್ತು ನಮಗೆ ದಿನನಿತ್ಯದ ಬದುಕಿನ ಅಂಗವಾಗಿದೆ, ಪೇಪರುಗಳಲ್ಲಿ ದಿನಾಲೂ ಅಲ್ಲಲ್ಲಿ ಬಾಂಬ್, ಭಯ್ಯೋತ್ಪಾದಕ ದಾಳಿ ಆಗಿರದೆ ಹೋದಲ್ಲಿ ನಮಗೇನೊ ಕಳೆದುಕೊಂಡಂತಾಗುವುದಿಲ್ಲವೇ? ದಿನಾ ಸಾಯುವವನಿಗೆ ಅಳುವುದಾರೆಂದು, ನಮ್ಮ ಸರದಿಗಾಗಿ ಕಾಯುವುದರ ಬದಲು ನಮ್ಮ ಸರದಿ ಬರುವ ಮೊದಲೇ ಸ್ವಲ್ಪ ಬದುಕು ಬದುಕಿಬಿಡುವಾಸೆ…!!!’

ನಮಗಿಗ ಈ ಭಯೊತ್ಪಾದಕ ದಾಳಿ, ಸಾವು, ರಕ್ತ, ಕೋಲೆ, ಎ.ಕೆ.೪೭, ಅರ್.ಡಿ.ಎಕ್ಸ್. ಇವುಗಳೆಲ್ಲ ನಮ್ಮ ದಿನನಿತ್ತ್ಯದ ಅವಿಭಾಜ್ಯ ಅಂಗಗಳು, ಮೊದಮೊದಲು ದೇಶದ ಯಾವುದೊ ಭಾಗದಲ್ಲಿ ಬಾಂಬ್ ವಿಸ್ಪೋಟವಾದಾಗ ಇಡಿ ದೇಶವೇ ಮನೆಯಲ್ಲೆ ಉಳಿದುಬಿಡುತ್ತಿತ್ತು, ಇವತ್ತಿನ ಪರಿಸ್ಥಿತಿ, ‘ಪಕ್ಕದ ಬೀದಿಯಲ್ಲಿ ಬಾಂಬ್ ವಿಸ್ಪೋಟವಾಗಿ ಸುಮಾರು ಜನ ಸತ್ತಿದ್ದರು, ನಮಗೇನು ಅನಿಸುವುದೇ ಇಲ್ಲ’, ನಮ್ಮ ವಿಕೆಂಡ್, ಪಾರ್ಟಿ, ರೇವ್, ಡಿಸ್ಕೋ, ಇಂಟರನೆಟ್, ಇ-ಮೇಲ, ಎಸ್.ಎಮ್.ಎಸ್., ಮಿಸ್ಸ್ಡಕಾಲ್ ಇವುಗಳಲ್ಲೆನು ಬದಲಾವಣೆಗಳೇ ಆಗುವುದಿಲ್ಲ, ಸಾವುಗಳ ಸಂಖ್ಯೆ ಸ್ವಲ್ಪ ಹೆಚ್ಚಾದರೆ ನಮ್ಮ-ನಮ್ಮಲ್ಲೆ ಕ್ಯಾಂಟಿನಿನ ಮೇಜಿನ ಸುತ್ತಲೊ, ಗುಂಪಿನಲ್ಲಿ ಸೀಗರೇಟ್ ಸುಡುತ್ತಾ ಸಿರಿಯಸ್ಸಾಗಿರುವ ಚಿಂತಕರಂತೆ, ಕ್ಯಾಬಿನಲ್ಲಿ ಕುಳಿತು ನಮ್ಮ ಬುದ್ದಿಜೀವಿಗಳಂತೆ ಸರ್ಕಾರ, ರಾಜಕಾರಣಿಗಳನ್ನು, ಭಾರತವನ್ನು ಮತ್ತು ಅದರ ಪ್ರಜೆಗಳನ್ನು ಒಂದಿಷ್ಟು ಬೈದಾಡಿ, ಮರುದಿನ ಅದನ್ನು ಮರೆತು ವಿಕೆಂಡನಲ್ಲಿ ಪಾರ್ಟಿಯನ್ನೊ, ಚಾರಣವನ್ನೊ, ಮೂವಿ ಪ್ರೋಗ್ರಾಮನ್ನೊ ಹಾಕಿಕೊಳ್ಳುತ್ತಿವಿ. ಆ ಬಾಂಬ ದಾಳಿಯಲ್ಲಿ ಸತ್ತವರನ್ನು ಎಲ್ಲರೂ ಮರೆತು, ಆವತ್ತು ಭಯೋತ್ಪಾದನೆಯ ವಿರುದ್ಧ ತಮ್ಮ ಯೋಜನೆ ಮತ್ತು ಯೋಚನೆ ಸಿಡಿಸಿದ ಮಂತ್ರಿಗಳು ಅದನ್ನು ಮರೆತು, ಎಲ್ಲರೂ ಸುಖವಾಗಿದ್ದಾರೆ ಎಂದು ಸುಳ್ಳು ನಂಬಿಕೆಯನ್ನು ತಾವು ನಂಬಿ ನಮ್ಮನ್ನು ನಂಬಿಸುತ್ತಾರೆ, ಅದಾದ ಮೂರನೆಯ ದಿನಕ್ಕೆ ಮತ್ತೊಂದು ಕಡೆ ಬಾಂಬ್ ವಿಸ್ಪೋಟ ಮತ್ತೆರಡು ದಿನ ಮಾತು-ಕಥೆ, ಹೇಳಿಕೆ…ಹಾಗೆಯೇ ಅದೇ ರಕ್ತದ ಮೇಲೆಯೇ ಮರುದಿನ ನಮ್ಮ ಬದುಕು ಪ್ರಾರಂಭ. ಇದು ಇವತ್ತು ಭಾರತದ ಎಲ್ಲ ನಗರಗಳ ಪರಿಸ್ಥಿತಿ, ಆದರೆ ಇಂತಹ ಮಾದರಿ ನೀಡಿದ್ದೆ ಮುಂಬೈ.

‘ಜನರಿಗೆ ಇವತ್ತು ಹೆಚ್ಚಿನ ಸಹನೆ ಬಂದಿದೆ, ತಾನು ಮತ್ತು ತನ್ನವರು ಸುಖವಾಗಿದ್ದರೆ ಸಾಕು ಎನ್ನು ಸ್ಥಿತಿಗೆ ತಲುಪಿದ್ದಾರೆ, ಇಂಥಹ ಘಟನೆ ನೆಡೆದ ಮರುದಿನ ತಮ್ಮ ಬದುಕು ಕಟ್ಟಿಕೊಳ್ಳಲು ತಮ್ಮ ಹಾದಿ ತಾನು ಹುಡುಕಿಕೊಂಡು ಸಾಗುವರಿಗೆ, ನೆನಪಿನ ಶಕ್ತಿ ದೊಡ್ಡದಿರುವುದಿಲ್ಲ, ಮನುಶ್ಯನ ಹಸಿವೆಗೆ ಎಂಥಹದನ್ನು ಮರೆಸುವ ಶಕ್ತಿ ಇರುತ್ತದೆ.’ ಎಂಬ ನಂಬಿಕೆ ನಮ್ಮನ್ನಳುವವರದ್ದು, ನಾವು ಭಯೊತ್ಪಾದನೆಯನ್ನು ಎಷ್ಟು ಸರಳವಾಗಿ ತೆಗೆದುಕೊಳ್ಳುತ್ತೆವೆಯೋ ನಮ್ಮನ್ನಾಳುವವರು ಅದಕ್ಕಿಂತ ಸರಳವಾಗಿ ನಮ್ಮ ಬದುಕಿನ ಬಗ್ಗೆ ತೆಗೆದುಕೊಳ್ಳುತ್ತಾರೆ ಎಂದು ಈಗ ಮುಂಬೈಕರಗೆ ತೀಳಿದಿದೆ, ಹೀಗಾಗಿ ನಿನ್ನೆ ತಾಜ್ ಎದುರಿಗೆ ಅಷ್ಟೊಂದು ಜನರು ಸೇರಿದ್ದು.

ಅದು ಕೇವಲ ಆರಂಭ, ಇದೇ ಬುಧುವಾರ ಸಾಯಂಕಾಲ ೬ ಗಂಟೆಗೆ ಇದೇ ತಾಜ್ ಹೋಟೆಲಿನ ಎದುರಿನಲ್ಲಿರುವ “ಗೇಟ ವೇ ಅಫ್ ಇಂಡಿಯಾ” ಬಳಿ ನಾವೆಲ್ಲ ಸೇರಿ ನಮ್ಮನ್ನಾಳುವವರನ್ನು ಕೇಳುವವರಿದ್ದೆವೇ, “ನಮ್ಮ ಜೀವದ ಬೆಲೆ ಎಷ್ಟು?”..

ನೀವು ಬರುತ್ತಿರಲ್ಲಾ, ನಾವಿಗ ಎಚ್ಚೆತ್ತಿದ್ದೆವೆ, ಮತ್ತೆ ಹೋಸ ಮಾದರಿಯಾಗಬೇಕಾಗಿದೆ ನಮಗೆ, ನಮ್ಮ ಸಹನೆಯ ಕಟ್ಟೆ ಒಡೆದಿದೆ. ನಾವಿನ್ನು ಬಯೊತ್ಪಾದಕರನ್ನು ಮತ್ತು ನಮ್ಮ ರಾಜಕಾರಣಿಗಳನ್ನು ಪ್ರತಿಸಲದಂತೆ ನಮ್ಮ ಜೀವ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಎನಾದರೂ ಮಾಡಬೇಕಾಗಿದೆ, ನಾವಿಗ ಸುಮ್ಮನಿರುವುದಿಲ್ಲ ಎಂದು ತಿಳಿಸಬೇಕಾಗಿದೆ, ನಮ್ಮ ನಾಯಕರಿಗೆ, ನಮ್ಮನ್ನಾಳುವವರಿಗೆ, ನಮ್ಮ ರಾಜಕಾರಣಿಗಳಿಗೆ ನಮ್ಮ ಸಿಟ್ಟು, ಅವರ ಮೇಲಿರುವ ನಮ್ಮ ಬೇಸರ ತಿಳಿಸಬೇಕಾಗಿದೆ, ನಾವಿಗ ತೋರಿಸಬೇಕಾಗಿದೆ ನಾವೆಷ್ಟು ನೊಂದಿದ್ದೆವೆ, ನಮ್ಮ ಸಹನೆ ತಿರಿಹೋಗಿದೆ. ಈಗ ನಮ್ಮ ಕೋಪ, ಸುಸ್ತು, ನಿರಾಶೆ ಎಲ್ಲವನ್ನು ನಮ್ಮನ್ನಾಳುವರಿಗೆ ತೋರಿಸಬೇಕಾಗಿದೆ.

ಅದಕ್ಕಾಗಿ ಇದೇ ಬುಧುವಾರ, ದಿಸೆಂಬರ್ ೩ರ ಸಾಯಂಕಾಲ ೬ ಗಂಟೆಗೆ “ಗೇಟ ವೇ ಅಫ್ ಇಂಡಿಯಾ” ಬಳಿ ನಾವೆಲ್ಲ ಸೇರಲಿದ್ದೆವೆ, ನಮ್ಮ ಹಕ್ಕನ್ನು ಕೇಳಲು, “ಹೆದರಿಕೆ ಇಲ್ಲದೇ ಬದುಕುವ” ಹಕ್ಕಿಗಾಗಿ. ನಮ್ಮೆಲ್ಲರ ಬದುಕಿಗಾಗಿ ನಮ್ಮ ಬಳಿ ಒಂದು ಸಂಜೆಯಿಲ್ಲವೇ?

Right to LIVE fearlessly. Lets devote one evening of our life to it.

ಕಾಯುವೆ ನಿಮಗಾಗಿ, ಹೋರಾಡಲು ಕೈ ಹಿಡಿದು…