ಪ್ರೇಮಿಗಳ ದಿನ: ನೀ ಬರುವ ದಾರಿಯಲ್ಲಿ

 ನೀ ಬರುವ ದಾರಿಯಲ್ಲಿ

ಗೆಳತಿ,

ಈ ಬದುಕು ನೀನಗಾಗಿ
ಪ್ರೀತಿಯಿಂದ,
ಪ್ರೀತಿಗಾಗಿ,
ಪ್ರೀತಿಗೋಸ್ಕರ. 

**************************

ನೀ ಬರುವ ದಾರಿ ಕಾಯುತ್ತಿವೆ
ನನ್ನ ಮನೆ-ಮನಗಳೆರಡೂ, ಮತ್ತೆ
ದೇವರೆದುರಿನ ಹಣತೆಯಲ್ಲಿ
ಈಗಷ್ಟೆ ಮಡಿಯಿಂದ ಹೋಸೆದ ಬತ್ತಿಯೂ.

 ಜನುಮ-ಜನುಮದ ಅನುಭಂದವೋ
ನಾನರಿಯೆ, ಈ ಜನ್ಮದ್ದಂತೂ ನಿಜ,
ಈ ಉಸಿರಿನಷ್ಟೆ, ನೀ
ನನ್ನೊಳಗಿರುವುದು ಅಷ್ಟೆ ಸಹಜ.

ಆಕಾಶ-ಭೂಮಿ ಒಂದಾದಂತೆ
ನನಗೇಕೋ ಈ ಅನಿಸಿಕೆ,
ನೀ ಬರುವ ದಾರಿ ಕಾಯುವುದಷ್ಟೆ
ಈಗ ಈ ಮನದ ಹವಣಿಕೆ.

ಕಣ್ರೆಪ್ಪೆಗೆ ದಣಿವಿಲ್ಲ
ನಿನ್ನ ದಾರಿ ಕಾಯಲು,
ನಿದ್ರೆಯದ್ದಂತೂ ಸುಳಿವಿಲ್ಲ
ಮನದಲ್ಲೊಮ್ಮೆ ನೀ ಹಾಯಲು

ನಿನ್ನೆ ರಾತ್ರಿ ನೀಲಾಕಾಶದಲ್ಲಿ
ನಕ್ಷತ್ರಗಳಿಗೆ ನಿನ್ನದೇ ಚಿಂತೆ,
ನೀ ಬರುವ ಹಾದಿಯಲ್ಲೇ
ಹೂಡುವುವಂತೆ ಬೆಳಕಿನಾ ಸಂತೆ.

ಅವಳು ಕಟ್ಟಿ ಕೊಟ್ಟ ಹಾಲ್ಗನಸು

ಅವಳು ಕಟ್ಟಿ ಕೊಟ್ಟ ಹಾಲ್ಗನಸು
ತಮಸೋಮ ಜ್ಯೋತಿರ್ಗಮಯ
ಹೀಗಾಗಿ ಅವಳೇ ನನ್ನ ಗಮ್ಯ..

ಅವಳ ಕಣ್ಣುಗಳಲ್ಲಿ
ಎನೋ ಸೇಳೆತವಿದೆ
ಇಲ್ಲದಿದ್ದರೆ, ಪದೇ ಪದೇ
ರಜೆ ನಾ ಹಾಕುವವ’ನಲ್ಲ’

ಸಾಗರ ದಡದಲ್ಲಿ ಸಿಕ್ಕ
ಶಂಖದ ಹೂ ನೀನು,
ಅದರ ಮತ್ತೇ ಸಾಗರ ಸೇರುವ
ತವಕದ ಹೆಸರೇ “ನನ್ನ ಪ್ರೀತಿ”

ಅವಳು ಕಟ್ಟಿ ಕೊಟ್ಟ
ಹಾಲ್ಗನಸು,
ಈಗಷ್ಟೆ ನನ್ನೊಳಗೆ
ಮೊಳಕೆಯೊಡದಿದೆ.

ಆ ಸಂಜೆ,
ಅವಳಿಗೆ ನನ್ನ ಪ್ರೀತಿ ತಿಳಿಸಿದಾಗ
ಸಾಗರ ಕೂಡಾ ಬೆಚ್ಚಿಬಿದ್ದು ಬೇವಿತೆದ್ದಿತು.