ಜೊತೆಯಾಗಿ……?

ಜೋತೆಯಾಗಿ......?ಜೊತೆಯಲ್ಲಿಯೇ ಸಾಗುತ್ತಿದ್ದೆವೆ
ಎಂದು ನಂಬಿ
ಮನದ ಭಾವನೆಗಳನ್ನು
ಮಾತಾಗಿಸಿ ನೆಡೆಯುತ್ತಿದ್ದಾಗ,
ನೀ ಕೈಬಿಟ್ಟು ಹೋದ
ಸುಳಿವೆ ತಿಳಿಯದೆ
ನಗುತ್ತಾ-ಮಾತಾಡುತ್ತಾ ಹಾಗೆಯೆ
ಸ್ವಲ್ಪ ದೂರ ಸಾಗಿದೆ.

ಜನರೆಲ್ಲಾ ಕಲ್ಲು ಬಿಸಿ
ಜೋರಾಗಿ ಚಪ್ಪಾಳೆ ಹಾಕಿ
ನಗುತ್ತಿದ್ದಾಗ,
ತಲೆಯತ್ತಿ, ಕಣ್ಣು ಬಿಟ್ಟು
ಸುತ್ತಲೂ ನೋಡಿದಾಗ
ನಿಜವಾಗಿಯೂ ನೋವಾಯಿತು.

ಜನರು ಬಿಸಿದ ಕಲ್ಲುಗಳಿಂದ
ಆದ ನೋವಿಗಾಗಿ
ಅಲ್ಲ ಗೆಳತಿ, ಆ
ನಗುವವರ ಗುಂಪಿನಲ್ಲಿ
ಸದ್ದಿಲ್ಲದೆ ಕೈ ಬಿಟ್ಟು
ನಗುತ್ತ ನಿಂತ ನಿನ್ನ ಕಂಡು.

Advertisements

It happens only in India.. : ಬಾಂದ್ರಾ-ವರ್ಲಿ ಸಮುದ್ರ ಸೇತುವೆ

It happens only in India

It happens only in India..

ಬಾಂದ್ರಾ-ವರ್ಲಿ ಸಮುದ್ರ ಸೇತುವೆ ಉದ್ಗಾಟನೆಯಾಗಿ ಇನ್ನೂ ಒಂದು ವಾರವಾಗಿಲ್ಲ, ಅಷ್ಟರಲ್ಲೆ ನಮ್ಮ ಈ ಗೆಳೆಯ ತನ್ನ ಸಂಪ್ರದಾಯದಂತೆಯೂ ಉದ್ಗಾಟಿಸಿಯೆಬಿಟ್ಟ.

ಸುಮಾರು ೧೬೫೦ ಕೋಟಿ ರೂಪಾಯಿಗಳ ಈ ಸೇತುವೆ ಪಾವನವಾಯಿತಲ್ಲ, ಅಷ್ಟೆ ಸಾಕು…!!!!