ಆ ಗೆಳೆಯನೇ ಬೇರೆ

ಬದುಕಿನ ನಿತ್ಯ ಜಾತ್ರೆಯಲ್ಲಿ ಎಷ್ಟೊಂದು ಜನರನ್ನು ಭೇಟಿಯಾಗುತ್ತೆವೆ ಹಾಗೆಯೇ ಎಷ್ಟೋ ಜನ ಸ್ನೇಹಿತರು ‘ಹಾಗೆ ಸುಮ್ಮನೆ’ ಕಳೆದು ಹೋಗುತ್ತಾರೆ. ಅದೇ ಹಳೆಯ ಗೆಳೆಯರು ಎಷ್ಟೋ ವರ್ಷಗಳ ನಂತರ ಸಿಕ್ಕಾಗ ಎಷ್ಟೊಂದು ಖುಷಿಯಾಗುತ್ತಲ್ಲವೇ, ಆದರೆ ಅವರನ್ನು ಭೇಟಿಯಾಗಿ ಮಾತನಾಡಿ ಕೆಲಹೋತ್ತು ಅವರೊಂದಿಗೆ ಕಳೆದುಬಂದ ಮೇಲೆ, ‘ನಮಗೆ ಗೋತ್ತಿದ್ದ ಆ ಸ್ನೇಹಿತ ಬೇರೆಯೇ’ ಎಂದನಿಸುವುದಲ್ಲವೇ?

ಯಾಕೆ ಹೀಗಾಗುತ್ತದೆ? ನನಗಷ್ಟೆ ಹೀಗಾಗುವುದೇ? ಛೇ ಇವನು/ಳು ತುಂಬಾ ಬದಲಾಗಿದ್ದಾನೆ, ಮೊದಲಿನ ಹಾಗಿಲ್ಲ. ಆಗ ಎಷ್ಟೊಂದು ಒಳ್ಳೆಯವನಿದ್ದ, ಎಷ್ಟೊಂದು ಸ್ನೇಹದಿಂದಿದ್ದ, ನಾವಿಬ್ಬರೂ ಎಷ್ಟೊಂದು ಮಾತನಾಡುತ್ತಿದ್ದೆವು, ಎಷ್ಟೊಂದು ವಿಷಯ ಹಂಚಿಕೊಳ್ಳುತ್ತಿದ್ದೆವು. ನಮ್ಮಿಬ್ಬರ ನಡುವೆ ಎಷ್ಟೊಂದು ಸಲಿಗೆಯಿತ್ತು, ಆದರೆ ಈಗೇಕೆ ಹೀಗೆ ಮಾತನಾಡುತ್ತಿದ್ದಾನೆ ಎನೋ? ನಮ್ಮಿಬ್ಬರ ನಡುವೆ ಬಹುವಚನದ ಹಂಗೆಲ್ಲಿತ್ತು? ಆವತ್ತಿಲ್ಲದ ಬಿಗುಮಾನ ಇವತ್ತೇಕೆ? ನಾವಿಬ್ಬರು ಕೂಡಿದಾಗ ಎಷ್ಟೊಂದು ನಗ್ತಾಯಿದ್ದೆವು, ಇದೆಲ್ಲಿಂದ ಬಂತು ಹುಸಿ ಗಾಂಭಿರ್ಯ?….ಹೀಗೆಲ್ಲಾ ಅನಿಸುತ್ತೆ ಅಲ್ಲವಾ?

ನನಗೆ ಹೀಗೆಲ್ಲಾ ಅನ್ನಿಸಿದಂತೆ, ನೀನಗೂ ಹಾಗೇ ಅನ್ನಿಸಿತಾ ಗೆಳೆಯಾ? ನೀನಗೂ ನಾ ಬೇರೆ ಯಾರೋ ಅನ್ನಿಸಿತಾ ಗೆಳೆಯಾ, ನಿಜ ಹೇಳು?

ನನ್ನ ಸಧ್ಯದ ಓದು ಮತ್ತು ಈಗಷ್ಟೆ ಮುಗಿದ ಓದು

ಶನಿವಾರದಂದು ಬೆಳಿಗ್ಗೆ ಎಂದಿನಂತೆ ರಜೆ, ಹೋರಗೆ ಹೋಗಲಾರದ ನನ್ನ ಆಲಸಿತನವನ್ನು ಊರಿಂದ ಕೊಂಡೊಯ್ದ ಕನ್ನಡ ಪುಸ್ತಕಗಳ ನಡುವೆ ಕಳೆಯುವ ನನ್ನ ವೀಕೆಂಡ್ ಶುರುವಾಗಿದ್ದು ಎಚ್ ನಾಗವೇಣಿ ಬರೆದ ‘ಗಾಂಧಿ ಬಂದ’ ಪುಸ್ತಕದೊಂದಿಗೆ.

ಸ್ವಾತಂತ್ರ್ಯಪೂರ್ವ ಸಮಯದ ದಕ್ಷಿಣ ಕನ್ನಡದ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಕಥೆ, ಆ ಪ್ರದೇಶದ ಜಾತಿಪದ್ಧತಿ, ಆಚಾರ-ವಿಚಾರಗಳ ಹಾಗೂ ವ್ಯಕ್ತಿ-ವಿಚಾರಗಳನ್ನೊಳಗೊಂಡ ಕಥೆ, ಕಥೆಗೆ ಹೋಸ ಆಯಾಮವಾಗಿ ಮಂಗಳೂರಿಗೆ ಬರುವ ಗಾಂಧಿ, ತಾನು ಪ್ರತಿ ಸಲ ಬಂದಾಗಲೂ ಹೋಸ ಹಂಬಲ, ಹೋಸ ಚಿಂತನೆ, ಹೋಸ ತಲ್ಲಣಗಳನ್ನು ಸೃಷ್ಟಿಸುತ್ತಾರೆ. ಹಲವಾರು ಕಥೆಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟು ಕೊಂಡಿರುವ ಈ ಕಾದಂಬರಿಯ ಕೆಂದ್ರ ಕಥೆ ಒಬ್ಬ ಬ್ರಾಹ್ಮನ ವಿಧವೆ ತನ್ನೆಲ್ಲ ಸಂಪ್ರದಾಯಿಕ ಸಂಕೋಲೆಗನ್ನು ದಾಟಿ ತನ್ನನ್ನು ಪ್ರೀತಿಸುವ ಬ್ಯಾರಿ ಮುಸ್ಲಿಮನನ್ನು ಸೇರುವ ಕಥೆ. ಅದಕ್ಕೆ ಪೂರಕವಾಗಿ ಹಲವಾರು ಕಥೆಗಳು ಇಂತಹ ಮತ್ತೊಂದು ಎಳೆಯೆ ಗಾಂಧಿ ಮಂಗಳೂರಿಗೆ ಬಂದದ್ದು.

ಕಥೆಗಿಂತ ನನ್ನನ್ನು ಸೇಳೆದದ್ದು ನಾಗವೇಣಿಯವರು ಓದುಗರಿಗೆ ಪಾತ್ರಗಳೊಂದಿಗೆ ಕಟ್ಟಿಕೊಡುವ ಅನುಬಂದ, ಓದಿ ಮುಗಿಸಿ ೨-೩ ದಿನಗಳಾದರೂ ಅಲ್ಲಿನ ಪಾತ್ರಗಳಾದ ಅಂತಪ್ಪ, ಐತು, ಮಾರಪ್ಪ, ಪಾಂಡು ಶೆಟ್ಟರು, ಕುಸುಮೊಯಿಲಿ ಇತ್ಯಾದಿಗಳು ನನ್ನೊಡನೆ ಇಷ್ಟೊತ್ತಿನವರೆಗೂ ಇಲ್ಲೆ ಇದ್ದರು, ಈಗಷ್ಟೆ ಎಲ್ಲೊ ಹೋಗಿದ್ದಾರೆ ಇನ್ನೇನು ಬರುತ್ತಾರೆ ಎನ್ನುವ ಭಾವ ನನ್ನಲ್ಲಿನ್ನೂ ಉಳಿದಿದೆ.

ಐತಿಹಾಸಿಕ ಘಟನೆಯನ್ನು ಇಟ್ಟುಕೊಂಡು ಅದರ ಸುತ್ತ ಕಾದಂಬರಿ ಕಟ್ಟುವುದು ತುಂಬ ಕಡಿಮೆ, ಆ ಕಡಿಮೆಯಲ್ಲೆ ಅದು ಯಶಸ್ವಿಯಾಗುವುದು ಮತ್ತೂ ಕಡಿಮೆ. ಆದರೆ ಇಲ್ಲಿ ಲೇಖಕರು ತೆಗೆದುಕೊಂಡ ವಿಷಯ, ಅದಕ್ಕೆ ಅವರು ಅಂತಿಮವಾಗಿ ಕೊಟ್ಟ ಅಂತ್ಯ, ಅವರ ಚಿಂತನೆಗಳು, ಆಲೋಚನೆಗಳು ಇಲ್ಲಿ ಗೆದ್ದಿವೆ. ಓದಿಟ್ಟ ಮೇಲೆ ನಮ್ಮನ್ನು ಮತ್ತೆ ಮತ್ತೆ ಕಾಡುವ ಮತ್ತು ನಮ್ಮನ್ನು ಸುಪ್ತಯೋಚನೆಗೆ ತಳ್ಳುವ ಪುಸ್ತಕ “ಗಾಂಧಿ ಬಂದ”, ಎಚ್ ನಾಗವೇಣಿಯವರಿಗೆ ಅಭಿನಂದನೆಗಳು.

Gandhi Banda
ಗಾಂಧಿಯೊಂದಿಗೆ ಮಂಗಳೂರು ಸೇರಿ ಕಳೆದುಹೋಗುತ್ತಿದ್ದ ನನಗೆ ಕೈಗೆ ಸಿಕ್ಕಿದ್ದು ಬಲ್ಲಾಳರ “ಮುಂಬಯಿ ದಿನಾಂಕ”, ಓದುತ್ತಾ ಹೋದಂತೆ ನನ್ನ ಮುಂಬಯಿಯ ಮೊದಲ ದಿನಗಳು ನೆನಪಾದವು, So ಮತ್ತೆ ಮುಂಬಯಿಗೆ ಮರಳಿ ಬಂದಿದ್ದೇನೆ.