ಕನ್ನಡ ಬ್ಲಾಗ ಲೋಕದ ಸಮೀಕ್ಷೆ: ಹೀಗೊಂದು ಅಧ್ಯಯನ

ಆತ್ಮೀಯರೆ,

ಅತ್ಯಂತ ಶೀಘ್ರವಾಗಿ ಹಾಗೂ ಗುಣಾತ್ಮಕವಾಗಿ ಬೆಳೆಯುತ್ತಿರುವ ಒಂದು ಪ್ರಬಲ ಮಾದ್ಯಮ “ಬ್ಲಾಗಿಂಗ್”, ಇದಕ್ಕೆ ಕನ್ನಡಿಗರು ಮತ್ತು ಕನ್ನಡ ಬ್ಲಾಗಿಂಗ ಹೋರತಲ್ಲ. ಇವತ್ತಿಗೆ ಕನ್ನಡದಲ್ಲು ಸುಮಾರು ೮೦೦ಕ್ಕೂ ಹೆಚ್ಚು ಬ್ಲಾಗಗಳಿವೆ. ಭಾರತಿಯ ಭಾಷೆಗಳ ಬ್ಲಾಗಿಂಗ ಸಂಭ್ರಮದಲ್ಲಿ ಕನ್ನಡವಿಗ ಪ್ರಖರ ಪ್ರಕಾಶ, ಸುಂದರ ಅಕ್ಷರಗಳ ಉದ್ಯಾನ.

ಬಹಳಷ್ಟು ಬ್ಲಾಗ್‍ಗಳಲ್ಲಿ ಒಂದು, ಎರಡು ಪೋಸ್ಟುಗಳಿವೆ. ಕೆಲವೆಡೆ ಒಬ್ಬರೇ ಐದಾರು ಬ್ಲಾಗ್ ಮಾಡಿಕೊಂಡಿದ್ದಾರೆ. ಏನೇ ಆದರೂ ಉತ್ಸಾಹ-ಆಕಾಶಕ್ಕೆ ಏಣಿ ಹಾಕುವಷ್ಟಿದೆ. ಹೀಗಾಗಿ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ಈ ಸಮೀಕ್ಷೆ ನಮ್ಮ ಮನದಲ್ಲಿ ಹುಟ್ಟಿದ್ದು, ಈ ಸಮೀಕ್ಷೆ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ವಿಶೇಷಗುಣ, ಅಪೂರ್ವಲಕ್ಷಣ, ವೈಶಿಷ್ಟ್ಯಗಳನ್ನು ಅರ್ಥೈಸಿಕೊಳ್ಳುವ ಒಂದು ಸಣ್ಣ ಪ್ರಯತ್ನ.

ಆತ್ಮೀಯ ಬ್ಲಾಗ ಬಂಧುಗಳೇ, ಈ ಸಮೀಕ್ಷೆಯ ಸಫಲತೆ ನಿಮ್ಮ ಸಹಯೋಗದಿಂದ ಮಾತ್ರ ಸಾಧ್ಯ. ಹೀಗಾಗಿ ದಯವಿಟ್ಟು ಈ ಕೆಳಗೆ ನೀಡಿದ ಸಂಪರ್ಕ ಕೊಂಡಿ (Link) ಚಿಟುಕಿಸಿ ಅಲ್ಲಿ ನೀಡಲಾಗಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. ನೀವು ನಿಡಿದ ಎಲ್ಲ ಮಾಹೀತಿಗಳನ್ನು ರಹಸ್ಯವಾಗಿರಿಸುವುದಾಗಿಯೂ ಮತ್ತು ಸಮೀಕ್ಷೆಯ ಫಲಿತಾಂಶವನ್ನು ಕೇವಲ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ಉಪಯೋಗಿಸಿಕೊಳ್ಳಲಾಗುವುದಾಗಿ ಈ ಮೂಲಕ ಪ್ರಮಾಣಿಸುತ್ತೆವೆ.

http://spreadsheets.google.com/viewform?formkey=dF90eEtaNDlnNkRQQmVPZlBRSE02OGc6MA..

ತಮ್ಮ ಸಲಹೆ ಮತ್ತು ಸಂದೇಹಗಳಿಗಾಗಿ shettaru@gmail.com ಗೆ ಮಿಂಚಂಚೆ ಕಳುಹಿಸಿ.

ಧನ್ಯವಾದಗಳೊಂದಿಗೆ

ಈರಣ್ಣ ಶೆಟ್ಟರು ಮತ್ತು ಗ್ರಂಥಪಾಲಕ ಗೆಳೆಯರು

————————————————————-

Hi

This is an academic survey to understand the characteristics of Kannada bloggers, their blogging activity, and factors affecting their motivations for blogging.

In this context, I request you to kindly fill up the attached questionnaire. Your participation is extremely important for success of this survey. Your responses shall be kept completely confidential and results will be used purely for academic purpose only. If you have any problems or concerns, please send e-mail to: shettaru@gmail.com

Link to Survey Form: http://spreadsheets.google.com/viewform?formkey=dF90eEtaNDlnNkRQQmVPZlBRSE02OGc6MA..

Thanking you in anticipation for your time and kind help in carrying out
this study.

Yours Sincerely

Iranna Shettar & Librarian Friends

Advertisements

ಕೆಲವೊಂದಿಷ್ಟು “ಕಾಯ್ ಕೋ”ಗಳು

‘ಕೈ ಕೆಸರಾದರೆ ಬಾಯಿ ಮೊಸರು’-
ಈ ಕಾಂಕ್ರೀಟ್ ಕಾಡಿನಲ್ಲಿ ಕೆಸರೆಲ್ಲಿಂದ ತರೋಣ, ಇನ್ನು ಈ ‘ಬಾಯಿ?-ಮೊಸರು?’ ಇವರೆಲ್ಲಾ ಯಾರು?

‘ಕಾಯಕವೇ ಕೈಲಾಸ’-
ಕಾಯಕವೇ ಇಲ್ಲವೇ ಕೇಳಿ ಕೈ-ಸಾಲ, ಮಾಡಿ ಮತ್ತೊಬ್ಬರ ಕೈ-loss

‘ಕೂತು ತಿಂದರೆ ಕುಡಿಕೆ ಹೋನ್ನು ಸಾಲದು’-
ಯಾರೋ ದರ್ಶಿನಿಯವರ Tag line ಇರಬೇಕು, ಹೀಗಾಗಿ Credi Card ತಂದು ನಿಂತ್ಕೋಂಡೆ ತಿನ್ನಿ ಅಂತಿದಾರೆ.

‘ಪ್ರೇಮಕ್ಕೆ ಕಣ್ಣಿಲ್ಲ’-
ಡಾ||ಮೋದಿಯವರ ಗಮನಕ್ಕೆ ತರಬೇಕು, ಯಾರದ್ರೂ ಮಹಾನ ಪ್ರೇಮಿ ಕಣ್ಣು ದಾನ ಮಾಡಬೇಕು

ನಿಜವಾಗಿಯೂ “ಕಾಯ್ ಕೋ”ಗಳು ಯಾರು?

 ಇನ್ನಾರು ನಮ್ಮ ರಾಜಕಾರಣಿಗಳೂ 🙂