ಕನ್ನಡಪ್ರಭ: ನೋಡಿ ಸ್ವಾಮಿ ನಾವಿರೋದು ಹೀಗೆ ಮತ್ತು ವಿಜಯ ಕರ್ನಾಟಕದ ಜಾಣ ಕುರುಡು

ಕಳೆದ ವಾರ ನಾನು ೩/೩/೨೦೧೦ ರ ಕನ್ನಡಪ್ರಭದಲ್ಲಿ ಉಂಟಾದ ಒಂದು ದೊಡ್ಡ (ಅವರಿಗದು ಸಣ್ಣದಾಗಿರಬಹುದು) ಮುದ್ರಣ ಪ್ರಮಾದದ ಬಗ್ಗೆ ಬರೆದಿದ್ದೆ. ಅದೇ ವಿಷಯ ಈ ವಾರದ “ಮೀಡಿಯಾ ಮಿರ್ಚಿ“ಯಲ್ಲೂ (ವಿಜಯ ಕರ್ನಾಟಕ, ೨೦/೩/೨೦೧೦) ಪ್ರಸ್ತಾಪವಾಗಿದೆ. ಅದಕ್ಕೆ ಪರೋಕ್ಷ ಉತ್ತರ ಕನ್ನಡಪ್ರಭದ ಇಂದಿನ “ವಂಡರ್ ಡೈರಿ”ಯಲ್ಲಿ ನೀಡಲಾಗಿದೆ. ಅದನ್ನು ತಮ್ಮ ಮಾಹೀತಿಗಾಗಿ ಈ ಕೆಳಗೆ ನೀಡಿದ್ದೆನೆ.

ತಮ್ಮ ಗಮನಕ್ಕೆ: ಜಿ ಎನ್  ಮೋಹನರಿಗೆ ನನ್ನ ಇನ್ನೊಂದು ಪೋಸ್ಟ ಏಕೆ ಕಂಡಿಲ್ಲವೋ ಗೋತ್ತಿಲ್ಲ, ಇದು ಜಾಣ ಕುರುಡೊ ಹೇಗೆ? ಅದನ್ನು ನೀವು ಇಲ್ಲಿ ಓದಬಹುದು.

Advertisements

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

 

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ನಮ್ಮನಷ್ಟೆ ಮರೆತಿದೆ!
                    – ಅಂಬಿಕಾತನಯದತ್ತ

ಎಲ್ಲಾರ್ಗೂ ಹೊಸ ವರುಷದ ಶುಭಾಶಯಗಳು

ವಿಜಯ ಕರ್ನಾಟಕದ ಆಫಿಸಿನಲ್ಲಿಯೂ ಇಮೇಜ ಸರ್ಚ್ (Image Search) ಫೇಸಿಲಿಟಿ ಇಲ್ವೇ?

ಮೊನ್ನೆ ತಾನೆ ಕನ್ನಡಪ್ರಭ ಆಫಿಸಿನಲ್ಲಿ ಇಮೇಜ ಸರ್ಚ್ (Image Search) ಫೇಸಿಲಿಟಿ ಇಲ್ಲವಾಗಿರುವ ಸೂಚನೆ ದೊರೆತಿರುವ ಕಾಲಕ್ಕೆ, ಕನ್ನಡದ so called ನಂಬರ್ ೧ ಪತ್ರಿಕೆ ವಿಜಯ ಕರ್ನಾಟಕ ತಾನೂ ಬೇರೆಯಲ್ಲ, ನಮ್ಮಲ್ಲೂ ಇಮೇಜ ಸರ್ಚ್ (Image Search) ಫೇಸಿಲಿಟಿ ಇಲ್ಲ ಎಂದು ಪುರಾವೆ ಇವತ್ತಿನ ಪತ್ರಿಕೆಯ ೧೦ನೆಯ ಪುಟದಲ್ಲಿ ಪ್ರಕಟಿಸಿದ್ದಾರೆ.

“ಪ್ರಚೋದನಕಾರಿ ಭಾಷಣ ನಿಲ್ಲಿಸಲು ಠಾಕ್ರೆಗೆ ಸೂಚನೆ” ಎಂಬ ಶಿರೋನಾಮೆಯುಳ್ಳ ವರದಿಯಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ (ವಿಜಯ ಕರ್ನಾಟಕವೆಂಬ ಕನ್ನಡ ಪತ್ರಿಕೆಯ ಪ್ರಕಾರ ಸುಪ್ರೀಂ ಕೋರ್ಟ್) ಮ.ನ.ಸೇ. ನಾಯಕ ರಾಜ ಠಾಕ್ರೆಗೆ ನೀಡಿದ ಎಚ್ಚರಿಕೆಯ ಸುದ್ದಿ ಬಂದಿದೆ. ಆ ಲೇಖನದ ಯಾವುದೇ ಸಾಲಿನಲ್ಲಿ ಶಿವಸೇನೆಯ ನಾಯಕ ಬಾಳ್ ಠಾಕ್ರೆಯ ಹೆಸರು ಅಥವಾ ಉಲ್ಲೇಖವಿಲ್ಲ ಆದರೂ ಲೇಖನದ ಜೋತೆ ಬಾಳ್ ಠಾಕ್ರೆಯ ಭಾವಚಿತ್ರ ಪ್ರಕಟಿಸಿದ್ದಾರೆ.

ಇದರರ್ಥ ವಿಜಯ ಕರ್ನಾಟಕದ ಆಫಿಸಿನಲ್ಲಿಯೂ ಇಮೇಜ ಸರ್ಚ್ (Image Search) ಫೇಸಿಲಿಟಿ ಇಲ್ಲ ಅಂತಲ್ವಾ?

ಕನ್ನಡಪ್ರಭ ಆಫಿಸಲ್ಲಿ ಇಮೇಜ ಸರ್ಚ್ (Image Search) ಫೇಸಿಲಿಟಿ ಇಲ್ವೆ?

ಇವತ್ತಿನ ಕನ್ನಡಪ್ರಭದ ೧೦ನೆಯ ಪುಟ ನೋಡಿದಾಗ ನನಗನಿಸಿದ್ದು ಕನ್ನಡಪ್ರಭ ಆಫಿಸಲ್ಲಿ ಇಮೇಜ ಸರ್ಚ್ (Image Search) ಫೇಸಿಲಿಟಿ ಇಲ್ವೆ ಅಂತ.

ಯಾಕೆಂದ್ರೆ ಕನ್ನಡಪ್ರಭದ ೧೦ನೆಯ ಪುಟದಲ್ಲಿ “ಜನುಮ ದಿನ” ಸೇಕ್ಷನನಲ್ಲಿ ಜಮ್ ಶೇಡಜಿ ಟಾಟಾ ಹುಟ್ಟಿದ ಹಬ್ಬದ ಮಾಹೀತಿಯೊಂದಿಗೆ ಜೆ.ಆರ್.ಡಿ. ಟಾಟಾರವರ ಭಾವಚಿತ್ರ ಮುದ್ರಿಸಿದ್ದಾರೆ.

ರಾಜ್ಯಮಟ್ಟದ ಪತ್ರಿಕೆಯೇ ಇಂತಹ ತಪ್ಪು ಮಾಡಿದರೇ ಹೇಗೆ? ಅದು ಇಂದಿನ ಮಾಹೀತಿ ತಂತ್ರಜ್ಞಾನದ ಈ ದಿನಗಳಲ್ಲಿ. ಕನ್ನಡಪ್ರಭ ಆಫಿಸಲ್ಲಿ ಇಮೇಜ ಸರ್ಚ್ (Image Search) ಫೇಸಿಲಿಟಿ ಇಲ್ವೆ?