ಎನ್ರಿ ಇದು? ಎನೆಲ್ಲಾ ನಡಿತಿದೆ ಸ್ವತಂತ್ರ ಭಾರತದಲ್ಲಿ?

ಇಂದಿನ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿರುವ ಈ ಕೆಳಗಿನ ಸುದ್ದಿ ಓದಿ, ಬೆಂಗಳೂರು ನಗರದ ಒಬ್ಬ ರಾಜಕೀಯ ಮುಖಂಡರ ಸಾವಿನ ಸುದ್ದಿ ಆದರೆ ಅದಕ್ಕೆ ಕೊಟ್ಟಿರುವ ತಲೆಬರಹ ಮತ್ತು ಚಿತ್ರದೊಂದಿಗೆ ಕೊಟ್ಟ ವಿವರಣೆ ಓದಿ ಏನೊಂದು ತೋಚುತ್ತಿಲ್ಲ.

ಆ ಯುವ ಮುಖಂಡರ ಸಾವಿಗೆ ನಮ್ಮದೂ ಸಂತಾಪವಿದೆ, ಆದರೆ ಸ್ವಾತಂತ್ರ್ಯ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿದರು ಎಂದರೇ ನಾವು ಭಾರತಿಯರಾಗಿರಲು ನಾಲಾಯಕ್ ಗಳು. ಇದು ನಿಜಕ್ಕೂ ಆಚರಿಸಲಾಗಿದೆಯೇ ಅಥವಾ ವರದಿಗಾರನು ಸುದ್ದಿಯ ಟಿ.ಆರ್.ಪಿ.ಗೋಸ್ಕರ ಈ ರೀತಿಯ ಶಬ್ದಗಳನ್ನು ಬಳಸಲಾಗಿದೆಯೇ ಎಂದು ವಿಚಾರಿಸಬೇಕು. ನಿಜಕ್ಕೂ ಆ ರೀತಿಯಾಗಿ ಕರಾಳ ದಿನವನ್ನಾಗಿ ಆಚರಿಸಿಲಾಗಿದ್ದರೆ ಅದಕ್ಕಿಂತ ನಾಚಿಗೆಗೇಡಿನ ಕೆಲಸ ಬೇರಿನ್ನಾವುದೂ ಇಲ್ಲ.

“ವ್ಯಕ್ತಿಗಿಂತ ರಾಷ್ಟ್ರ ದೊಡ್ಡದು” ಇಲ್ಲಿ ನಾವು ಆಚರಿಸುತ್ತಿರುವುದು ಭಾರತದ ಸ್ವಾತಂತ್ರ್ಯೋತ್ಸವವೇ ಹೋರತು ನನ್ನ -ನಿಮ್ಮಂತವರ ಹುಟ್ಟಿದ ಹಬ್ಬವನ್ನಲ್ಲ. ನಮಲ್ಲಿ ರಾಜಕೀಯ ಮುಖಂಡರು, ನೇತಾರರೇ ರಾಷ್ಟ್ರ ಮತ್ತು ಅದರ ಗೌರವಕ್ಕಿಂತ ದೊಡ್ದವರು ಅನ್ನುವ ದಾಸ್ಯಪ್ರವೃತ್ತಿ ಹೆಚ್ಚಾಗುತ್ತಿದೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆ.

ಇದರ ಬಗ್ಗೆ ಹೆಚ್ಚಿನ ವಿವರಣೆ ನಾಳೆ ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕದಲ್ಲಿ ಕೊಡುತ್ತಾರೆ ಎಂದುಕೊಳ್ಳುತ್ತೆನೆ, ಎಕಂದರೆ ಅವರಿಗೂ ಗೋತ್ತು “ಸ್ವಾತಂತ್ರ್ಯ ದಿನ” ಮತ್ತು “ಕರಾಳ ದಿನ”ಗಳ ಯಾವುದಕ್ಕಾಗಿ ಆಚರಿಸುತ್ತಾರೆ ಮತ್ತು ಯಾವುದಕ್ಕೆ ಆಚರಿಸಬೇಕು ಎಂದು, ಅಲ್ವೆ ಭಟ್ರೆ?

ಸುದ್ದಿ ಮತ್ತು ಚಿತ್ರಕೃಪೆ: ವಿಜಯ ಕರ್ನಾಟಕ

Advertisements