ನನ್ನ ಬಗ್ಗೆ ಒಂದಿಷ್ಟು..

ಶೆಟ್ಟರು – Down to earth, caring, simple, cool, always smiling…

…ಅಂತೆಲ್ಲಾ ಏನಿಲ್ರಿ, ಏನ ಅನಸ್ತೈತಿ ಅದನ್ನ ನೇರವಾಗಿ ಹೇಳ್ತಿನಿ. ಕೆರಿಂಗ್-ಪಾರಿಂಗ್ ಅಂತ ಎನ ಇಲ್ರಿ ನಿಮಗೇನರ ಹೆಲ್ಪ ಬೇಕಂದ್ರ, ಸಿದಾ ಕೇಳ್ರಿ ಅಕ್ಕಿತ್ತಂದ್ರ ಮತ್ತ ನನಗ ‘ಹೌದ’ ಅನಿಸಿದ್ರ ಮಾಡ್ತಿನಿ. ಸಿಂಪಲ್ ಅಂತ ಎನಿಲ್ರಿ ಪಗಾರ ಆದಾಗ ಭಾರಿ ಗ್ರ್ಯಾಂಡ್ ಇರ್ತಿನ್ರಿ, ಖಾಲಿ ಆಗಿಂದ ಮಂದಿ ನನಗ “ಎಷ್ಟ ಸಿಂಪಲ್ ಅದಿಯೋ” ಅಂತಾರ್ರಿ. ಕೂಲ್!!! ಎನಿಲ್ರಿ ಕೊಟ್ರ ದಿನಕ್ಕ ಒಂದಿಪ್ಪತ್ತ ಸಲೆ “ಚಾ” ಕುಡಿತಿನ್ರಿ, ಹಿಂಗಾಗಿ ಪಿತ್ತ ನೆತ್ತಿ ಹತ್ತಿ ಯಾವಾಗ್ಲೂ ಉರ್ಕೊಂಡು ಕುಂತಿರ್ತಿನ್ರಿ. ಇನ್ನ ಆಲ್ವೇಜ ಸ್ಮೈಲಿಂಗ್… ಹುಚ್ಚಿಲ್ರಿಪಾ ನನಗ, ಮುಂಜಾನೆ ಸುರ್ಯಾ ಎಳುದುಕ್ಕು ಮುಂಚೆ ಎದ್ದು ಆಫೀಸಿಗೆ ಹೋದ್ರ, ಅಂವ ಮುಳುಗಿದ ಎಷ್ಟೋ ಹೊತ್ತಿನ ಮ್ಯಾಲೆ ಮನಿ ಮುಟ್ಟತಿನಿ. ದಿನದ ಅರ್ಧ ವ್ಯಾಳೆ ಕಂಪನಿ ಬಸ್ಸನ್ಯಾಗ, ಟ್ರಾಫ್ಹಿಕ್ ಧೂಳಿನ್ಯಾಗ ಕಳಿಯೋವಾಗ always smiling ಅಂದ್ರ ಧೂಳು ಬಾಯಾಗ ಹೊಕೈತ್ರಿ.

ಹಂಗಂದ್ರ ಆಸಾಮಿ ತಲಿ ತಿರಕ ಅದಾನ ಅನ್ಕೋಂಡ್ರಿ ಹೌದಿಲ್ಲೊ? ಹಂಗೆನಿಲ್ರಿ, ಬಾಗಲಕೋಟ್ಯಾಂವ್ ನೋಡ್ರಿ ಸ್ವಲ್ಪ ಹುಂಬತನ ಜಾಸ್ತಿ, ‘ಮಾತು ಒರಟು, ಆದ್ರ ಹುಡುಗ ಒಳ್ಳ್ಯಾಂವ್’ ಅಂತ ನಮ್ಮ ಅಮ್ಮ ಅಂತಾಳ್ರಿ. ಓದುದಂದ್ರ ಭಾರಿ ಇಷ್ಟ, ಬರೆಯೂದು ಅಷ್ಟಕ್ಕಷ್ಟ. ನನ್ನ ಮಾತು ಕೇಳಾಕ ಎಲ್ಲಾರಿಗೂ ಭಾರಿ ಖುಷಿರಿ, ಆದ್ರ ನಾನು ಖುಷಿಯೋಳಗಿದ್ದಾಗಷ್ಟ ನಾನು ಮಾತಾಡೋದು. ಹುಡುಗಿಯರು ಅಂದ್ರ ಬಾಳ ಹೆದ್ರಿಕಿ, ಗೆಳೆಯರಂದ್ರ ಬಾಳ ಖುಷಿರಿ. ಬದುಕಂದ್ರ ಬಾಳ ಪ್ರೀತಿ, ಕನಸುಗಳಂದ್ರ ನನ್ನ ಜೀವ. ಮೌನ ಇಷ್ಟ, ಮಾತು ಬೇಕೇ ಬೇಕು. ನಾಟಕ-ಕಲೆ ಅಂದ್ರೆ ಸ್ವಲ್ಪ ಹುಚ್ಚು ಜಾಸ್ತಿ..

ಒಟ್ಟಿನಲ್ಲಿ ಒಂದಿಷ್ಟು ಹುಂಬತನ, ಸ್ವಲ್ಪೆ ಸ್ವಲ್ಪ ತಿಕ್ಕಲುತನ, ಬದುಕಿನೆಡೆಗೆ ಅಸಾಧ್ಯ ಪ್ರೀತಿ, ಕನಸುಗಳ ಬಗ್ಗೆ ಅಪಾರ ನಂಬಿಕೆ, ಪ್ರೀತಿ-ಸ್ನೇಹಗಳ ಬಗ್ಗೆ ಸೇಳೆತ, ಬದುಕಿನಲ್ಲಿ ಎನನ್ನೊ ಹುಡುಕುವ ತುಡಿತ..ಎಲ್ಲೆಲ್ಲೊ ಕಳೆದುಹೋಗುತ್ತಿರುವ ನಾನು ಮತ್ತು ನನ್ನತನವನ್ನು ಹಿಡಿದಿಟ್ಟುಕೊಳ್ಳುವ ಒಂದು ಪ್ರಯತ್ನವೇ ಈ ಬ್ಲಾಗ್.

ನಿಮಗೆ ಮೆಚ್ಚಿಕೆಯಾದರೆ ನಿಮ್ಮ ಹೆಜ್ಜೆ ಗುರುತುಗಳನ್ನು ದಾಖಲಿಸಿ, ಮೆಚ್ಚಿಗೆಯಾಗದಿದ್ದರೇ ನೀವು ‘ದಯವಿಟ್ಟು’ ದಾಖಲಿಸಿ.

ಶರಣು ಶರಣಾರ್ತಿ..

Advertisements

28 thoughts on “ನನ್ನ ಬಗ್ಗೆ ಒಂದಿಷ್ಟು..

 1. ಶೆಟ್ಟರಿಗೆ,

  ನಮಸ್ಕಾರ ಸಾರು, ಹೇಗಿದಿರಾ?
  ನಿಮ್ಮ ಬ್ಲಾಗ್ ನೊಡಿದೆ, ಛೆನ್ನಗಿ ಮೂಡಿಬಂದಿದೆ.

  ಇನ್ನು ಹೋಸ ಹೋಸ ಪ್ರಯತ್ನಗಳಾಗಲಿ.

  ತಮ್ಮ ಗೆಳೆಯ

  ಮಾರುತಿ, ಮಳಲಿ

 2. ನಮಸ್ಕಾರ ಶೆಟ್ಟರಿಗೆ

  ತಮ್ಮ ಪರಿಚಯ ಆಗಲಿಲ್ವೇ? ಮುಂಬಯಿಯಲ್ಲಿ ನೀವು ಎಲ್ಲಿದ್ದೀರಿ? ಎಷ್ಟು ವರ್ಷಗಳಿಂದ ಇಲ್ಲಿದ್ದೀರಿ?

  ನಿಮ್ಮ ಬ್ಲಾಗು ಚೆನ್ನಾಗಿ ಮೂಡಿ ಬರುತ್ತಿದೆ. ಪ್ರತಿನಿತ್ಯ ಈ ಕಡೆ ಕಣ್ಣು ಹಾಯಿಸುವೆ

  ಒಳ್ಳೆಯದಾಗಲಿ

  ಗುರುದೇವ ದಯಾ ಕರೊ ದೀನ ಜನೆ

 3. ತವಿಶ್ರೀ ಯವರೆ,

  ನಮಸ್ಕಾರ, ನಾನು ನವಿಮುಂಬಯಿಯಲ್ಲಿರುತ್ತೇನೆ, ಸುಮಾರು ೩ ವರ್ಷಗಳಿಂದ ಮುಂಬಯಿ ನಿವಾಸಿ.

  ತಮಗೆ ನನ್ನ ಬ್ಲಾಗ್ ಗೆ ಸುಸ್ವಾಗತ, ತಮ್ಮಂಥ ಹಿರಿಯರ ಅಶಿರ್ವಾದ, ಸಲಹೆಗಳು ಅವಶ್ಯಕ.

  ಧನ್ಯವಾದಗಳೊಂದಿಗೆ.

  ಪ್ರೀತಿಯಿರಲಿ

  ಶೆಟ್ಟರು, ಮುಂಬಯಿ

 4. ಇದ ಅವಕಾಶಾನ ನಾನು ನನ್ನ ಬಗ್ಗೆ ಹೇಳ್ಕೊಲ್ಲಾಕ ಮತ್ತ ಬೇರೆ ಗೆಳೆಯರ್ನ ಪರಿಚಯ ಮಾಡ್ಕೊನಾಕ ಆಗ್ತದ ಅಂತ ಇಲ್ಲೇ ಶುರು ಮಾಡೀನಿ..ಶೆಟ್ರ ನಿಮ್ಮ ಬ್ಲಾಗ್ ತುಂಬ ಖುಷಿ ಕೊಟ್ತು..ಹೀಂಗ ಮುಂದವರಿಸಿಕೊಂಡು ಹೋಗ್ರೀ, ಅಂದಂಗ ನನ್ ಬಗ್ಗೆ ನಿಮಗೆಲ್ಲಾ ಗೊತ್ತದ, ಆದ್ರೂ ಬೇರೆ ಗೆಳೆಯರಿಗೆ ಗೊತ್ತಾಗಲಿ ಅಂತಾ ನನ್ ಬಗ್ಗೆ ೨ ಸಾಲು…
  ನನ್ ಹೆಸರು ಮಲ್ಲಿಕಾರ್ಜುನಗೌಡ ಅಂತ.. ಶೆಟ್ರ ಜ್ಯೂನಿಯರ್ (ತಮ್ಮ ಅಂತ ತಿಳದ್ರ ಒಳ್ಳೇದು) ಡಿಗ್ರೀಯೊಳಗ, ಮತ್ತ ಅವರ ದಿಕ್ಕು ಪುಸ್ತಕದ ಗ್ರಂಥಾಲಯ ಆದ್ರ ನಂದು MBA ಕಡೆ ಹೋತು, ಇನ್ ಒಂದ್ ತಿಂಗಳದಾಗ ಮುಗಿತದ… ಮತ್ತ ಇಲ್ಲೇ ವಿಜಯ ಬ್ಯಾಂಕ್ನ್ಯಾಗ ಕೆಲಸನೂ ಸಿಕ್ಕದ (ಕಡೆ ಪರೀಕ್ಷೆ ಪಾಸ್ ಆದ್ರ).. ಅಸಿಸ್ಟೆಂಟ್ ಮ್ಯಾನೇಜರ್ ಅಂತ.. ನೋಡಬೇಕು ದೇವರ ಇಚ್ಚಾ ಹೆಂಗ ಅದ ಅಂತ..ಎಲ್ಲೆಲಿಗೆ ಕರಕೊಂಡ ಹೋಗ್ತಾನ ಅಂತ..
  ಎಲ್ರಿಗೂ ನನ್ ಸಾಮ್ರಾಜ್ಯಕ್ಕ ಸ್ವಾಗತ

 5. ಅಂತೂ ಇಂತೂ ಸರಸ್ವತಿ ಮನೆಗೆ ಲಕ್ಷ್ಮಿ ಕಳೆ ತಂದ್ರಿ ಗೌಡ್ರ. ಹಿಂಗ ಅವಾಗವಾಗ ಬಂದು ತಮ್ಮ ವಿಮರ್ಶೆ ತಿಳಿಸಿ.

  ಗೌಡ್ರು ಕೇವಲ ಬ್ಯಾಂಕರ್ ಅಲ್ಲ, ಒಳ್ಳೆ ಮಾತುಗಾರರು, ವಿಮರ್ಶಕರು (ನಾನಿನ್ನು ಯುಥ್ ಫೆಸ್ಟಿವಲ್ ದಿನಗಳನ್ನು ಮರೆತಿಲ್ರಿ ಗೌಡ್ರ), ಒಳ್ಳೆ ಕೇಳುಗರು (ಹೀಗಾಗಿ ಒಳ್ಳೆ ವಿದ್ಯಾರ್ಥಿಯಾಗಿದ್ದರು, ಈಗಲೂ ಕೂಡ) ಮೇಲಾಗಿ ಒಳ್ಳೆ ಸಹೃದಯಿ ಸನ್ಮಿತ್ರರು, ಅವರಿಗೆ ಒಳ್ಳೆಯದಾಗಲಿ, ಅವರ ವೃತ್ತಿ ಜೀವನಕ್ಕೆ ಶುಭ ಹಾರೈಸುತ್ತಾ ತಮ್ಮ ಪ್ರವೃತ್ತಿಗಳ ಕಡೆಗೂ ಗಮನ ನೀಡಲಿ.

  ಪ್ರೀತಿಯಿರಲಿ

  ಶೆಟ್ಟರು

 6. ‘ಮುಂಬೈ ಕನ್ನಡಿಗ’ರಿಗೆ ನಮಸ್ಕಾರ.
  ನಿಮ್ಮ ಬ್ಲಾಗಿನ ವೈವಿಧ್ಯತೆ ಇಷ್ಟವಾಗುತ್ತೆ.
  ಕನ್ನಡಿಗರ ಪರಿಸ್ಥಿತಿ, ಉದ್ಯಮಶೀಲತೆ, ಅವಕಾಶಗಳು, ರಾಜಕೀಯ, ಪ್ರಾದೇಶಿಕತೆ ಇವೆಲ್ಲಾ ಮುಂಬೈ ಜಗತ್ತಿನಲ್ಲಿ ಹೇಗೆ ನೆಲೆಗೊಂಡಿವೆ ಎನ್ನುವ ಲೇಖನಗಳು ಕಾಲ ಕಾಲಕ್ಕೆ ಬರುತ್ತಿರಲಿ. ನಮಗೂ ಮುಂಬೈಗೂ ಇರುವ ಕೊಂಡಿ ನೀವು. ವ್ಯಾಸರಾಯ ಬಲ್ಲಾಳರ ಕಾದಂಬರಿ ‘ಉತ್ತರಾಯಣ’ ಇತ್ತೀಚೆಗೆ ಓದಿದೆ. ಅಲ್ಲಿನ ಮುಂಬೈ ಜಗತ್ತಿಗೂ ಈಗಿನ ಸಂದರ್ಭಕ್ಕೂ ವ್ಯತ್ಯಾಸ ತಿಳಿಯುವ ಅಭಿಲಾಷೆ.

  ನಿಮ್ಮ ಕನ್ನಡದ ಕೊಂಡಿ ಹೀಗೇ ಜೋಪಾನವಾಗಿರಲೆಂದು ಬಯಸುವ
  ಕೆ.ಗಣೇಶ್, ಬೆಂಗಳೂರು, ದಾವಣಗೆರೆ

 7. ಗಣೇಶಣ್ಣ, ನಿಮಗಿದೊ ಸ್ವಾಗತ.

  ಮುಂಬೈ ನನಗೆ ಮುಂಚಿನಿಂದಲೂ ಸೇಳೆದ ನಗರ ಇದಕ್ಕೆ ಹಲವಾರೂ ಕಾರಣಗಳಲ್ಲಿ ಚಿತ್ತಾಲರು, ಬಲ್ಲಾಳರು ಮತ್ತು ಕಾಯ್ಕಿಣಿ ಕೂಡಾ.

  ಇವತ್ತಿಗೂ ನಾನು ಮುಂಬೈ ಬಗ್ಗೆ ಬರೆಯಲೆತ್ನಿಸಿದಾಗಲೆಲ್ಲ ಕಾಯ್ಕಿಣಿ ಕೈ ಹಿಡಿದು ಬರೆಸುತ್ತಿದ್ದಾರೆನೋ ಎಂದೆನೆಸಿ ಅರ್ಧಕ್ಕೆ ನಿಲ್ಲಿಸಿದ್ದು ಇದೆ (ಭಾರಿ ಮುಜುಗರದಿಂದ ಬರೆಯುತ್ತಿದ್ದೇನೆ, ಅದು ಹೆಮ್ಮೆಯಿಂದಲ್ಲ ಅವರ ಪ್ರಭಾವ ಅಷ್ಟಿದೆ “ಮಂಬಯಿ” ವಿಷಯ ಬರೆಯಬೇಕಾದಾಗ)

  ಆದರೂ ಪ್ರಯತ್ನಪಡುತ್ತೇನೆ.

  ಪ್ರೀತಿಯಿರಲಿ

  ಶೆಟ್ಟರು

 8. ಪ್ರಿಯ ಆತ್ಮೀಯ ಕನ್ನಡ ಸ್ನೇಹಿತರೆ,

  ನಿಮ್ಮ ಅಂತರ್ಜಾಲ ಬಹಳ ಸುಂದರವಾಗಿದೆ. ನಿಮ್ಮ ಈ ಪ್ರಯತ್ನಕ್ಕೆ ನನ್ನ ನಮಸ್ಕಾರಗಳು.

  ನಾನು ಕನ್ನಡ ಹನಿಗಳ ಬಳಗದಿಂದ ಬಂದಿದ್ದೇನೆ.

  KannadaHanigalu.com

  ನಿಮ್ಮಂತೆಯೇ ನಾನು ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇನೆ. ಇಲ್ಲಿ ನಾವು ಇಂದಿನ ಯುವ ಉತ್ಸಾಹಿ ಕವಿಗಳ ಕವನ, ಹನಿಗವನಗಳನ್ನು ಪ್ರಕಟಿಸಿ, ಅವರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದು ನಮ್ಮ ಧ್ಯೇಯ.

  ನೀವು ಈ ಒಂದು ಪ್ರಯತ್ನವನ್ನು ಪ್ರೋತ್ಸಾಹಿಸುತ್ತೇರೆಂದು ನಂಬಿರುತ್ತೇನೆ.

  ನೀವು ಮೀಕ್ಷಿಸಿ, ನಿಮಗೆ ತೃಪ್ತಿಯಾದಲ್ಲಿ ನಿಮ್ಮ ಅಂತರ್ಜಾಲದಲ್ಲಿ ಪ್ರಕಟಿಸುವಿರಾ ???

  ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಅಂತರ್ಜಾಲವನ್ನು ಪ್ರಕಟಿಸುತ್ತೇವೆ.

  ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

  ಧನ್ಯವಾದಗಳೊಂದಿಗೆ…..
  ಕನ್ನಡ ಹನಿಗಳ ಬಳಗ
  kannadajokes@gmail.com

 9. ಉತ್ತರ ಕರ್ನಾಟಕ ಭಾಷಾದಾಗ ಇದಕಿಂತ ಚಂದ ತಮ್ಮನ್ನ ತಾವು ಯಾರೂ ಪರಿಚಯ ಮಾಡಿಕೋಳ್ಳಕ ಸಾಧ್ಯ ಇಲ್ ಬಿಡ್ರೀ… ಬಹಳ ಛಲೋ ಐತ್ರಿ ನಿಮ್ಮ ಬ್ಲಾಗ

 10. ಹರಿಹರಪುರ ಶ್ರೀಧರರವರಿಗೆ, ಲಕ್ಷ್ಮಿಯವರಿಗೆ, ಕನ್ನಡ ಹನಿಗಳ ಬಳಗಕ್ಕೆ

  ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು, ನನ್ನ ಲೋಕಕ್ಕೆ ಸ್ವಾಗತ

  ರವಿರಾಜ ಮತ್ತು ಪ್ರಭು

  ಶರಣರಿ ಯಪ್ಪಾ.. ಹೆಂಗದಿರಿ?
  ಬ್ಲಾಗ್ ಲೋಕದಾಗ ನಮ್ಮ ಮಂದಿ ಕಾಣೂದ ಅಪರೂಪ, ಹಂಗ ಆವಾಗವಾಗ ಕಣ್ಖಾಕ್ತಿರ್ರಿ.

  ಮತ್ತ ಬರ್ರಿ

  ಪ್ರೀತಿಯಿರಲಿ
  ಶೆಟ್ಟರು

 11. ಶೆಟ್ರ ನಿಮ್ಮ ಬ್ಲಾಗ್ ನೋಡಿ ರಗಡ ಖುಷಿ ಆತ. ನನ್ನಂತಹ ಹೊಸ ಬ್ಲಾಗ್ ಬರಹಗನಿಗೆ ನಿಮ್ಮ ಬ್ಲಾಗ್ ದಾರಿ ತೋರಿಸ್ತದ. ನಿಮಗು ಶರಣು ಶರಣಾರ್ತಿಗಳು………

 12. Namskar Shettre,
  Nimma Blog bahal chennagide and the way u expressed your views on different things that’s amazing and I love it. One more thing I wanted tell u that I am huge fan of Mr Ravi sir and his writings and I do hope this will continue and ur blogs make us very happy when we feel bore.
  with regards
  mspatil

 13. ಶೆಟ್ಟರಿಗೆ,

  ನಮಸ್ಕಾರ ಸಾರು, ಹೇಗಿದಿರಾ?
  ನಿಮ್ಮ ಬ್ಲಾಗ್ ನೊಡಿದೆ, ಛೆನ್ನಗಿ ಮೂಡಿಬಂದಿದೆ.

  ಇನ್ನು ಹೋಸ ಹೋಸ ಪ್ರಯತ್ನಗಳಾಗಲಿ.

  regards,
  Mahantesh jakati

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s