ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕನ್ನಡ ಮಾತು ಮೋಳಗಲಿ ಗಲ್ಲಿ ಗಲ್ಲಿಯಲಿ…

ನೆಡೆಯಲು ಕನ್ನಡ ನೆಲ,
ಕುಡಿಯಲು ಕನ್ನಡ ಜಲ,
ಹೆಚ್ಚಲಿ ಕನ್ನಡ ಬಲ,
ಪ್ರತಿಷ್ಠೆ ಬಿಡಿ, ಕನ್ನಡ ಮಾತಾಡಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕನ್ನಡ ಮಾತು ಮೋಳಗಲಿ ಗಲ್ಲಿ ಗಲ್ಲಿಯಲಿ

Advertisements

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

 

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ನಮ್ಮನಷ್ಟೆ ಮರೆತಿದೆ!
                    – ಅಂಬಿಕಾತನಯದತ್ತ

ಎಲ್ಲಾರ್ಗೂ ಹೊಸ ವರುಷದ ಶುಭಾಶಯಗಳು

ತಾಳು ನನ್ನವಳು ಬರಲಿ

ನಿನ್ನೆತನಕ ಜೀವದ ಗೆಳತಿ
ಇಂದವಳು ನನ್ನ ಮದುವಣಗಿತ್ತಿ,
ನಿನ್ನೆಯ ಕನಸ, ನಾಳಿನ ಬದುಕ
ಜೋತೆ ನೆಡೆಯುವ ಸಂಗಾತಿ.

~~0~~

ಕಾಡಿಗೆ ಹಚ್ಚಿದ,
ಕಾಡುವ ಕಂಗಳ
ಮಧು ತುಂಬಿದ ಹೂ ನೀ

ಬಿಟ್ಟು ಬಿಡದೆ,
ನಿನ್ನನೆ ಸುತ್ತುವ
ಆಸೆ ತುಂಬಿದ ದುಂಬಿ ನಾ.Test

~~0~~

ನೀಲಾಕಾಶದ ಎಲ್ಲ
ಮೋಡಗಳು ಹನಿಯಾಗುವುದಿಲ್ಲ
ನನ್ನದೆಯ ಎಲ್ಲ
ಪ್ರೀತಿಯೂ ಮಾತಾಗುವುದಿಲ್ಲ,
ಕೆಲವೊಮ್ಮೆ ಬರ-ಮತ್ತೊಮ್ಮೆ ನೆರೆ.

~~0~~

ಮೋಡದ ಸೆರಗಿನ ಹಿಂದೆ
ಕಣ್ಣಾ ಮುಚ್ಚಾಲೆಯಾಡುತ್ತಿದ್ದ
ಸೂರ್ಯನಿಗೆ ನಾ ಹೇಳಿದೆ
‘ತಾಳು ನನ್ನವಳು ಬರಲಿ’