ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕನ್ನಡ ಮಾತು ಮೋಳಗಲಿ ಗಲ್ಲಿ ಗಲ್ಲಿಯಲಿ…

ನೆಡೆಯಲು ಕನ್ನಡ ನೆಲ,
ಕುಡಿಯಲು ಕನ್ನಡ ಜಲ,
ಹೆಚ್ಚಲಿ ಕನ್ನಡ ಬಲ,
ಪ್ರತಿಷ್ಠೆ ಬಿಡಿ, ಕನ್ನಡ ಮಾತಾಡಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕನ್ನಡ ಮಾತು ಮೋಳಗಲಿ ಗಲ್ಲಿ ಗಲ್ಲಿಯಲಿ

Advertisements

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು..

ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..
ಹೆಸರಾಗಿದೆ ಕರ್ನಾಟಕ, ಉಸಿರಾಗಲಿ ಕನ್ನಡ..
– ಅಮೋಘವರ್ಷ. ಈ. ಶೆಟ್ಟರ.

ಬರಿ ನಲವತ್ತು, ಇನ್ನೂ ಸ್ವಲ್ಪ ಬೇಕಿತ್ತು: ಕನ್ನಡ ಬ್ಲಾಗ ಲೋಕದ ಸಮೀಕ್ಷೆ, ನೀವೂ ಭಾಗವಹಿಸಿ ಮತ್ತು ನಿಮ್ಮ ಗೆಳೆಯರಿಗೂ ತಿಳಿಸಿ

ಆತ್ಮೀಯರೆ,

ಅತ್ಯಂತ ಶೀಘ್ರವಾಗಿ ಹಾಗೂ ಗುಣಾತ್ಮಕವಾಗಿ ಬೆಳೆಯುತ್ತಿರುವ ಒಂದು ಪ್ರಬಲ ಮಾದ್ಯಮ “ಬ್ಲಾಗಿಂಗ್”, ಇದಕ್ಕೆ ಕನ್ನಡಿಗರು ಮತ್ತು ಕನ್ನಡ ಬ್ಲಾಗಿಂಗ ಹೋರತಲ್ಲ. ಇವತ್ತಿಗೆ ಕನ್ನಡದಲ್ಲು ಸುಮಾರು ೮೦೦ಕ್ಕೂ ಹೆಚ್ಚು ಬ್ಲಾಗಗಳಿವೆ. ಭಾರತಿಯ ಭಾಷೆಗಳ ಬ್ಲಾಗಿಂಗ ಸಂಭ್ರಮದಲ್ಲಿ ಕನ್ನಡವಿಗ ಪ್ರಖರ ಪ್ರಕಾಶ, ಸುಂದರ ಅಕ್ಷರಗಳ ಉದ್ಯಾನ.

ಬಹಳಷ್ಟು ಬ್ಲಾಗ್‍ಗಳಲ್ಲಿ ಒಂದು, ಎರಡು ಪೋಸ್ಟುಗಳಿವೆ. ಕೆಲವೆಡೆ ಒಬ್ಬರೇ ಐದಾರು ಬ್ಲಾಗ್ ಮಾಡಿಕೊಂಡಿದ್ದಾರೆ. ಏನೇ ಆದರೂ ಉತ್ಸಾಹ-ಆಕಾಶಕ್ಕೆ ಏಣಿ ಹಾಕುವಷ್ಟಿದೆ. ಹೀಗಾಗಿ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ಈ ಸಮೀಕ್ಷೆ ನಮ್ಮ ಮನದಲ್ಲಿ ಹುಟ್ಟಿದ್ದು, ಈ ಸಮೀಕ್ಷೆ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ವಿಶೇಷಗುಣ, ಅಪೂರ್ವಲಕ್ಷಣ, ವೈಶಿಷ್ಟ್ಯಗಳನ್ನು ಅರ್ಥೈಸಿಕೊಳ್ಳುವ ಒಂದು ಸಣ್ಣ ಪ್ರಯತ್ನ.
ಆತ್ಮೀಯ ಬ್ಲಾಗ ಬಂಧುಗಳೇ, ಈ ಸಮೀಕ್ಷೆಯ ಸಫಲತೆ ನಿಮ್ಮ ಸಹಯೋಗದಿಂದ ಮಾತ್ರ ಸಾಧ್ಯ. ಹೀಗಾಗಿ ದಯವಿಟ್ಟು ಈ ಕೆಳಗೆ ನೀಡಿದ ಸಂಪರ್ಕ ಕೊಂಡಿ (Link) ಚಿಟುಕಿಸಿ ಅಲ್ಲಿ ನೀಡಲಾಗಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. ನೀವು ನಿಡಿದ ಎಲ್ಲ ಮಾಹೀತಿಗಳನ್ನು ರಹಸ್ಯವಾಗಿರಿಸುವುದಾಗಿಯೂ ಮತ್ತು ಸಮೀಕ್ಷೆಯ ಫಲಿತಾಂಶವನ್ನು ಕೇವಲ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ಉಪಯೋಗಿಸಿಕೊಳ್ಳಲಾಗುವುದಾಗಿ ಈ ಮೂಲಕ ಪ್ರಮಾಣಿಸುತ್ತೆವೆ.
http://spreadsheets.google.com/viewform?formkey=dF90eEtaNDlnNkRQQmVPZlBRSE02OGc6MA..

ತಮ್ಮ ಸಲಹೆ ಮತ್ತು ಸಂದೇಹಗಳಿಗಾಗಿ shettaru@gmail.com ಗೆ ಮಿಂಚಂಚೆ ಕಳುಹಿಸಿ.

ಧನ್ಯವಾದಗಳೊಂದಿಗೆ
ಗ್ರಂಥಪಾಲಕ ಗೆಳೆಯರು

ಮುಂದುವರೆದ ಜನಾಂಗದವರ ಸಾಹಿತ್ಯ ಸೃಷ್ಟಿ ನಿಲ್ಲಬೇಕು: ಒತ್ತಾಯ

ಕನ್ನಡ ಸಾಹಿತ್ಯ ಲೋಕದಲ್ಲಿ ಮುಂದುವರೆದ ಜನಾಂಗದವರ ಸಾಹಿತ್ಯಸೃಷ್ಟಿ ತುಂಬಾ ಹೆಚ್ಚಾಗುತ್ತಿದ್ದು ಒಂದೆರಡು ವರ್ಷಗಳ ಕಾಲ ಇವರ ಸಾಹಿತ್ಯಸೃಷ್ಟಿಯನ್ನು ನಿರ್ಭಂದಿಸಬೇಕೆಂದು ಇಲ್ಲಿ ಒತ್ತಾಯಿಸಲಾಯಿತು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಯುತರು, ಕನ್ನಡ ಸಾಹಿತ್ಯದಲ್ಲಿ ಇಲ್ಲಿಯವರೆಗೆ ಬಹುಪಾಲು ಮುಂದುವರೆದ ಜನಾಂಗದವರೆ ಸಾಹಿತ್ಯಸೃಷ್ಟಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಅವರ ಕನ್ನಡ ಸಾಹಿತ್ಯದಲ್ಲಿ ಅವರ ಪ್ರಮಾಣ ಹೆಚ್ಚಾಗಿದ್ದು, ಉಳಿದವರಿಗೂ ಅವಕಾಶ ನಿಡುವುದಕ್ಕಾಗಿ ಸರ್ಕಾರ ಅವರ ಮೇಲೆ ವಿಶೇಷ ಮಸೂದೆ ಮಂಡಿಸಿ ಅವರ ಸಾಹಿತ್ಯಸೃಷ್ಟಿಯನ್ನು ನಿರ್ಭಂದಿಸಬೇಕೆಂದು ಮನವಿ ಮಾಡಿದ್ದಾರೆ. ಒಂದು ವೇಳೆ ಮನ್ನಣೆ ದೊರೆಯದಿದ್ದ ಪಕ್ಷದಲ್ಲಿ ಮನೆಯಿಂದ ಬೀದಿಗಿಳಿದು,ಬಸ್ಸ ಹತ್ತಿ ಬೆಂಗಳೂರಿಗೆ ಬಂದು ಲಾಲಭಾಗ, ವಿಧಾನಸೌಧ ಇತ್ಯಾದಿ ನೋಡಿಕೊಂಡು ಹಾಗೆಯೇ ಬೃಹತ್ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.

ಪೂರಕ ಓದಿಗೆ: ಕನ್ನಡ ಪ್ರಭ

ವಲಸಿಗ ಪರಭಾಷಿಕರ ಮೇಲೆ ಮತ್ತೆ ಭುಗಿಲೆದ್ದಿದ್ದಾನೆ ಮರಾಠಿ ಮಾನುಸ್ (ಮರಾಠಿ ಮನುಷ್ಯ)

ಮುಂಬಯಿ ಕಥೆ-ಕಹಾನಿ

ಶಿವನೇ ಶಂಭುಲಿಂಗ,

ನೀವ್ಯಾರು, ನಮ್ಮ ತೋಟಕ್ಕ ಬರಬ್ಯಾಡ್ರಿ, ನಮ್ಮ ಗಿಡದ ಹಣ್ಣ ತಿನಬ್ಯಾಡ್ರಿ, ನಮಗೇನು ನಿಮ್ಮ ನೀರ ಬ್ಯಾಡ, ಗೊಬ್ಬರಾ ಬ್ಯಾಡ, ದೇಖ್-ರೆಖಿ ಬ್ಯಾಡ ಹೋಗ್ರಿ, ನೀವೆನು ಸಾಮಾನು ನಮ್ಮ ಅಂಗಡ್ಯಾಗ ತೊಗೊಳುದಿಲ್ಲ, ಹಿಂಗಾಗಿ ನೀವು ನಮ್ಮ ತ್ವಾಟದ ಕೆಲಸಕ್ಕ ಬರಬ್ಯಾಡ್ರಿ ಹೋಗ್ರಿ ಅಂದರು ನಮ್ಮೂರ ಗೌಡ್ರು.

ಎರಡ ದಿನ, ಅವರ ತ್ವಾಟದ ತುಂಬ ಕಸ ಕುಂತಿತ್ತು, ನೆಲಕ್ಕ ಬಿದ್ದ ಹಣ್ಣ ಅರಿಸಿ ಬುಟ್ಟಿಗೆ ತುಂಬಾಕ ಯಾರಿದ್ದಿಲ್ಲ, ನೀರು ಇಲ್ದ ಗಿಡ ಬಾಡಾಕತ್ತಿತ್ತು, ಹುಳಾ ಹತ್ತಿ  ಹಣ್ಣು ಕೋಳ್ಯಾಕಹತ್ತಿದ್ದ್ವು, ನೋಡ್ಕೊಳ್ಳೊವ್ರು ಇಲ್ದಕ್ಕ ತ್ವಾಟನ್ನುದು ಹಾಳು ಸುರಿಯಾಕತ್ತಿತ್ತು. ಗೌಡ್ರು ಗೋಳಾಡಕತ್ತಿದ್ರು, ನಮ್ಮ ತ್ವಾಟದ ಕೆಲಸಕ್ಕ ನೀವು ಬರ್ರೊ, ಯಪ್ಪಾ ನೀವು ಬರ್ರೋ ಅಂತ ಎಲ್ಲಾರನ್ನು ಕರೆಯಾಕತ್ರು, ಅದ್ರ ಯಾರು ಬರ್ಲೆ ಇಲ್ಲ. ಎಲ್ಲಾರು ಬ್ಯಾರೆ ಕಡೆ ಕೆಲಸಕ್ಕ ಹತ್ತಿದ್ರು.ಗೌಡ್ರ ತ್ವಾಟ ಹಾಳು ಬಿದ್ದೋಯ್ತು.

So, ಹಿಂಗಾಗಿ ಕಥೆ ಸಾರಾಂಶ ಎನಂದ್ರೆ ಮಂಬಯಿ ಈಗ ಗೌಡ್ರ ತ್ವಾಟ ಆಗುತ್ತಿದೆ, ರಾಜ್ ಠಾಕ್ರೆ ಹಾಳುರಿನ ಗೌಡ ಅಗಲಿಕ್ಕೆ ಸಿದ್ದವಾಗ್ತಿದ್ದಾನೆ.

ವಲಸಿಗ ಪರಭಾಷಿಕರ ಮೇಲೆ ಮತ್ತೆ ಭುಗಿಲೆದ್ದಿದ್ದಾನೆ ಮರಾಠಿ ಮಾನುಸ್ (ಮರಾಠಿ ಮನುಷ್ಯ) ಎಂದ ನನ್ನ ಗೆಳೆಯ, ಇದು ಅನ್ಯಾಯ ಅಂದೆ ನಾನು, ಅದು ಹೇಗೆ ಅಂದ ಗೆಳೆಯ, ನಾನದಕ್ಕಂದೆ ಇದು ಭಾರತ, ಇಲ್ಲಿರೊದು ಪ್ರಜಾಪ್ರಭುತ್ವ, ಭಾರತಿಯರು ಭಾರತದಲ್ಲಿ ಯಾವುದೆ ಭಾಗದಲ್ಲಿ ವಾಸಿಸಬಹುದು ಎಂದೆ, ಅದಕ್ಕವನು ಸರಿ ಹಾಗಿದ್ದರೆ ನಡೆ ಕಾಶ್ಮಿರಕ್ಕೆ ಸ್ವಲ್ಪ ಜಾಗ ಖರಿದಿಸಿ ಅಲ್ಲೆ ಇರುವಂತೆ ಅಂದ. ಅದು ಹೇಗೋ?, ಅನ್ನುತ್ತಾ ನೀನು ವಿಷಯ ಬದಲಿಸ್ತಾ ಇದ್ದಿ ಅಂದೆ.

“ನೀನೆ ತಾನೆ, ಬೆಂಗಳೂರಲ್ಲಿ ತಮಿಳ್ರು, ತೆಲಗ್ರು, ಈ ಭೈಯ್ಯಾಗಳು ಜಾಸ್ತಿಯಾಗವ್ರೆ, ಇವ್ರನ್ನೆಲ್ಲ ಇಲ್ಲಿಂದ ಒದ್ದು ಓಡಿಸ್ಬೆಕು ಅನ್ತಾಯಿದ್ದುದ್ದು, ನಿಮ್ಮುರಲ್ಲಿ ತುಂಬಾ ಜನ ಬೇರೆಯವರಾದ್ರೆ ಓಡಿಸ್ಬೇಕು, ಆದ್ರೆ ಬೇರೆವುರಲ್ಲಿ ನೀವು ಬಹಳ ಜನ ಆದ್ರೆ ಅವ್ರು ಏನು ಅನ್ಬಾರ್ದಾ?, ಅದೆಂಗೊ, ನೀನು ಯಾವತ್ತಾದ್ರು ಮರಾಠಿ ಕಲಿಯೊದಕ್ಕೆ ಪ್ರಯತ್ನ ಪಟ್ಟಿದಿಯಾ? ನಿಜ ಹೇಳು?”

“ಇಲ್ಲ್ಯಾರು ಮರಾಠಿನ್ಯಾಗ ಮಾತಾಡುದಿಲ್ಲ, ಎಲ್ಲಾರು English, Hinglish or ಹಿಂದಿನ್ಯಾಗ ಮಾತಾಡ್ತಾರ, ಸೊ ನನಗ ಅವಶ್ಯಕತೆನೆ ಬಿಳಲಿಲ್ಲ”

“ಆದ್ರೂ ನೀನು ಮಹಾರಾಷ್ತ್ರದಾಗ ಅದಿನಿ ಅಂತರ ಮರಾಠಿ ಕಲಿತೇನು? ಮಹಾರಾಷ್ತ್ರದ ನಾಡಗೀತೆ ಯಾವ್ದು ಅಂತೆನರ ಗೊತ್ತೆನು, ಮರಾಠಿ ಪ್ರಮುಖ ದಿನಪತ್ರಿಕೆಗಳ್ಯಾವು ಗೊತ್ತೈತೇನು? ಹೋಗ್ಲಿ ಬಿಡು ಇಷ್ಟೊಂದು ಟಿ.ವಿ. ನೋಡ್ತಿಯಲಾ ಮರಾಠಿ ಪ್ರಮುಖ ಚಾನಲ್ಲಗಳ್ಯಾವು ಗೊತ್ತೈತೇನು? ಹೋಗ್ಲಿ ಮರಾಠಿ ಸಾಹಿತ್ಯದ ಬಗ್ಗೆ ಗೊರ್ತ ಐತೇನ್ ನಿನಗ?”

“ಇದನ್ನೆಲ್ಲ ತೊಗೊಂಡು ನಾಯೇನ್ ಮಾಡ್ಲಿ, ನಾಯಿಲ್ಲಿ ದುಡಿಯಾಕ ಬಂದಾವ, ಗಳಸ್ತಿನಿ ಹಂಗ ಟ್ಯಾಕ್ಸು ತುಂಬ್ತಿನಿ, ಮೇಲಾಗಿ ನಾವೆಲ್ಲ ಇಲ್ಲಿಂದ ಹೋದ್ರ ಇವ್ರಿಗೆಲ್ಲಾ ರೊಕ್ಕ ಎಲ್ಲಂದ ಹುಟ್ಟತೈತಿ, ನಾನು ದುಡದ ರೊಕ್ಕ ನಾನು ನಮ್ಮೂರಾಗ ಶಾಲಿ ಕಟ್ಟಿಸಿದ್ರ ನಿಮಗೇನ ಕಷ್ಟ?”

“ಟ್ಯಾಕ್ಸ ತುಂಬ್ತಿನಿ ಅಂದೆಲ್ಲಾ ಎನ ಹಂಗ ತುಂಬ್ತಿಯಾ ಕೊಟ್ಟಿಲ್ಲಾ ನಿನ್ನ ಮನಿಗಿ ನೀರು, ಬೆಳಕು, ರೋಡು, ನಿಮ್ಮ ಮಕ್ಕಳಿಗೆ ಶಾಲಿ, ಪುಸ್ತಕ ಎಲ್ಲಾ, ನಿಮ್ಮೂರಿಗೆ ಎಲ್ಲಾ ಮಾಡವಿದ್ರ ದುಡಿಯಾಕರ ಇಲ್ಲಿಗ್ಯಾಕ ಬರ್ತಿ, ಅಲ್ಲೆ ದುಡಿ.., ನಾವೇನು ನಿನ್ನ ರೊಕ್ಕ ಕೇಳಾಕತ್ತಿಲ್ಲ, ನಿವಿಲ್ಲಿ ಬಂದ ಅದಿರಿ ಅಂದ್ರ ಇಲ್ಲಿ  ಸಂಸ್ಕ್ರುತಿ ನಿಮ್ಮದಾಗಿಸ್ಗೊಬೇಕು, ನಾಳೆ ಯಾರರೆ ನಿಮ್ಮನಿಗೆ ಬಣ್ಣ ಹಚ್ಛಾಕಂತ ಬಂದು ಇದು ನಮ್ದ ಮನಿ, ಇಲ್ಲೆ ನಮ್ಮ ಹಬ್ಬಾನ ಆಚರಿಸ್ಬೇಕು, ನಿಮ್ಮ ಆಚಾರ-ವಿಚಾರ ನಮಗ ಸಂಭಂದಿಲ್ಲ ಅಂದ್ರ ಹೆಂಗಕ್ಕೈತಿ, ನೀವೆಲ್ಲಿರತಿರೋ ಅಲ್ಲಿ ಆಚಾರ-ವಿಚಾರ ಪಾಲಿಸಬೇಕು. Be Roman when you are in Rome” ಎಂದು ಹೇಳಿ ಅವನು ಟಿ.ವಿ. ಹಾಕಿದ.

ಟಿ.ವಿ.ಯಲ್ಲಿ ಬಡ ಕೂಲಿ ಕಾರ್ಮಿಕರನ್ನು, ಟ್ಯಾಕ್ಸಿ ಡ್ರೈವರಗಳನ್ನು ಅಟ್ಟಿಸಿಕೊಂಡು ಬಡಿಯುತ್ತಿರುವುದು ಕಾಣಿಸಿತು ಸಂಕಟವಾಯಿತು, ನಾನು ವಲಸಿಗನೇ ಎಂಬುದು ನೆನಪಾಯಿತು. ನಮ್ಮೂರಿನ ಬಗ್ಗೆ ನೆನೆದು ಮನಸ್ಸು ಸಂಧಿಗ್ದದಲ್ಲಿ ತೋಡಗಿತು.