ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು

Image

Advertisements

ಹೊಸ ವರುಷದ ಹಾರ್ಧಿಕ ಶುಭಾಶಯಗಳು ೨೦೧೨

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು..

ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..
ಹೆಸರಾಗಿದೆ ಕರ್ನಾಟಕ, ಉಸಿರಾಗಲಿ ಕನ್ನಡ..
– ಅಮೋಘವರ್ಷ. ಈ. ಶೆಟ್ಟರ.

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ

 

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ನಮ್ಮನಷ್ಟೆ ಮರೆತಿದೆ!
                    – ಅಂಬಿಕಾತನಯದತ್ತ

ಎಲ್ಲಾರ್ಗೂ ಹೊಸ ವರುಷದ ಶುಭಾಶಯಗಳು

ಹೊಸ ವರುಷದ ಹಾರ್ಧಿಕ ಶುಭಾಶಯಗಳು ೨೦೧೦

ಹಳೆಯ ಕಹಿ ನೆನಪುಗಳೆಲ್ಲ
ಹಾಗೆ ಕರಗಿ ಹೋಗಲಿ,
ಹೊಸ ಕನಸುಗಳ ಕೈ ಹಿಡಿದು
ಈ ಬದುಕು ನಡೆಸಲಿ.

ಹೊಸ ವರುಷದ ಹಾರ್ಧಿಕ ಶುಭಾಶಯಗಳು.
ಹೊಸ ವರುಷ ನಿಮ್ಮ ಬದುಕಿನಲ್ಲಿ ಹೊಸ ಕನಸು, ಹೊಸ ಹರುಶ, ಹೊಸ ನಗು ತರಲಿ.

BENGALI-

 সুভো নববর্ষো (subho nababarsho)

GUJARATI-

 નૂતન વર્ષાભિનંદન (nootan varshabhinandan)

HINDI –

 नव वर्ष की शुभकामना (nav varsh ki subhkamna)

KANNADA-

 ಹೊಸ ವರ್ಷದ ಶುಭಾಶಯಗಳು (hosa varshada shubhaashayagalu)

MALAYALAM-

 നവ വര്‍ഷ ആശംശകള്‍ (nava varsha ashamshagal)

MARATHI-

नवीन वर्षाच्या हार्दिक शुभेच्छा (navin varshaachya hardik shubbheccha)

PUNJABI-

ਨਵੇਂ ਸਾਲ ਦੀਆਂ ਵਧਾਈਆਂ (nave saal deeyan vadhaiyaan)

TAMIL-

இனிய புத்தாண்டு வாழ்த்துக்கள்!! (iniya puthandu nalVazhthukkal)

TELAGU-

నూతన సంవత్శర శుభాకాంక్షలు (nuthana samvathsara subhakankshalu)

May new year brings more success, joy and fruitful movements in your life.

 

Best Wishes

Iranna Shettar & Family

 

ಇರಲಿ ಗೆಳೆಯಾ… ಈ ಅನುಭಂದ ಹೀಗೆ ಸುಮ್ಮನೇ…

ಗೆಳೆಯರೇ,

“ಈ ಬದುಕಿನ ತುತ್ತಿನ ಚೀಲ ತುಂಬುವ ಬವಣೆಯ ನಡುವೆ ನನ್ನ ನೇನಪಿದೆಯೇ?” ಎಂದು ಕೇಳುತ್ತಾ, ನನ್ನನ್ನು ಕೇಳಿಕೊಳ್ಳುತ್ತಾ, ಕೂಳಿನ ಕೈಂಕರ್ಯಗಳ ನಡುವೇ ನಮ್ಮ ಖುಷಿಯ ಕರಾಮತ್ತುಗಳನ್ನು ನೆನೆಯುತ್ತಾ… “ಗೆಳೆಯರ ದಿನದ ಶುಭಾಶಯಗಳು”

-ಶೆಟ್ಟರು