ಮೊಹರಂ ಅಂದರೆ ಹುಲಿ ವೇಷ, ಅಳ್ಳೊಳ್ಳಿ ಬವ್ವ…

ಮೊಹರಂ ಅಂದರೆ ಹುಲಿ ವೇಷ, ಅಳ್ಳೊಳ್ಳಿ ಬವ್ವಾ, ಮಾದಲಿ, ಚೊಂಗೆ, ಅಲಮ್ ಗಳು, ಅಲ್ಲಾ ದೇವರ ಡೋಲಿಗಳು, ಕತ್ತಲರಾತ್ರಿ, ಮಸೂತಿಗೆ ಹೋಗಿ ಸಕ್ಕರಿ ಹಂಚೂದು, ಮುಲ್ಲಾನ ನವಿಲುಗರಿ ಆಶಿರ್ವಾದ, ಡೋಲಿಗಳು ಕೊನೆಯ ದಿನ ಹೊಳೆಗೆ ಹೋಗುವಾಲ ಹಿಂದು ಮುಸ್ಲಿಮರೆನ್ನದೇ ಎಲ್ಲರೂ ಡೋಲಿಯನ್ನು ಹೋರುವುದು, ಎಲ್ಲ ಮನೆಯವರು ತಮ್ಮ ಮನೆಯ ಮುಂದೆ ಡೋಲಿಗಳು ಬಂದಾಗ ಕಾಲಿಗೆ ನೀರು ಸುರುವಿ, ಉದುಬತ್ತಿ ಕೊಟ್ಟು ನಮಸ್ಕಾರ ಮಾಡುದು, ರಿವಾಯತ್ ಹಾಡುಗಾರರ ಕರ್ಬಲಾ ಹಾಡುಗಳು, ಅಲಾಯಿ ಕುಣಿತ… ಮೊಹರಂ ಅಂದರೆ ಎಷ್ಟೆಲ್ಲ ಆಗಿತ್ತು ನಮ್ಮ ಬಾಲ್ಯದಲ್ಲಿ, ಈಗ ಕೇವಲ ಸರ್ಕಾರಿ ರಜೆಯಾಗಿದೆ.

ಕನ್ನಡದ ಕೆಲವು ಕರ್ಬಲಾ ಪದಗಳು ಹೀಗಿವೆ (ನನ್ನ ನೆನಪಿಗೆ ಬಂದ ಹಾಗೆ)…
“ಮೊದಲಿಗೆ ನೆನೆದಿನೋ
ಅಲ್ಲಾನ ನಾನಾ
ಪ್ರತಮಕ ನೆನುವೇನೋ ಶಿವನ ಧ್ಯಾನಾ…”

“ಬಾಗಲಕೋಟಿ ಶಹರಾ, ರಾಜ್ಯಕ್ಕ ಮಿಗಿಲ
ಕೇಸುಪೀರ ದೇವರು ನೆನದಾನಲ್ಲ”

ಎಲ್ಲರಿಗೂ ಮೊಹರಂ ಹಬ್ಬದ ಶುಭಾಶಯಗಳು…

Advertisements

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕನ್ನಡ ಮಾತು ಮೋಳಗಲಿ ಗಲ್ಲಿ ಗಲ್ಲಿಯಲಿ…

ನೆಡೆಯಲು ಕನ್ನಡ ನೆಲ,
ಕುಡಿಯಲು ಕನ್ನಡ ಜಲ,
ಹೆಚ್ಚಲಿ ಕನ್ನಡ ಬಲ,
ಪ್ರತಿಷ್ಠೆ ಬಿಡಿ, ಕನ್ನಡ ಮಾತಾಡಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ, ಕನ್ನಡ ಮಾತು ಮೋಳಗಲಿ ಗಲ್ಲಿ ಗಲ್ಲಿಯಲಿ

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು..

ನಿಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..
ಹೆಸರಾಗಿದೆ ಕರ್ನಾಟಕ, ಉಸಿರಾಗಲಿ ಕನ್ನಡ..
– ಅಮೋಘವರ್ಷ. ಈ. ಶೆಟ್ಟರ.

ದೀಪದಿಂದ ದೀಪ ಹಚ್ಚಿ ದೀಪಾವಳಿ….

ನಿನ್ನೆ ರಾತ್ರಿ ನೀಲಾಕಾಶದಲ್ಲಿ
ನಕ್ಷತ್ರಗಳಿಗೆ ನಿನ್ನದೇ ಚಿಂತೆ,
ನೀ ಬರುವ ಹಾದಿಯಲ್ಲೇ
ಹೂಡುವುವಂತೆ ಬೆಳಕಿನಾ ಸಂತೆ.

ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು