ನನ್ನ ಸಧ್ಯದ ಓದು ಮತ್ತು ಈಗಷ್ಟೆ ಮುಗಿದ ಓದು

ಶನಿವಾರದಂದು ಬೆಳಿಗ್ಗೆ ಎಂದಿನಂತೆ ರಜೆ, ಹೋರಗೆ ಹೋಗಲಾರದ ನನ್ನ ಆಲಸಿತನವನ್ನು ಊರಿಂದ ಕೊಂಡೊಯ್ದ ಕನ್ನಡ ಪುಸ್ತಕಗಳ ನಡುವೆ ಕಳೆಯುವ ನನ್ನ ವೀಕೆಂಡ್ ಶುರುವಾಗಿದ್ದು ಎಚ್ ನಾಗವೇಣಿ ಬರೆದ ‘ಗಾಂಧಿ ಬಂದ’ ಪುಸ್ತಕದೊಂದಿಗೆ.

ಸ್ವಾತಂತ್ರ್ಯಪೂರ್ವ ಸಮಯದ ದಕ್ಷಿಣ ಕನ್ನಡದ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಕಥೆ, ಆ ಪ್ರದೇಶದ ಜಾತಿಪದ್ಧತಿ, ಆಚಾರ-ವಿಚಾರಗಳ ಹಾಗೂ ವ್ಯಕ್ತಿ-ವಿಚಾರಗಳನ್ನೊಳಗೊಂಡ ಕಥೆ, ಕಥೆಗೆ ಹೋಸ ಆಯಾಮವಾಗಿ ಮಂಗಳೂರಿಗೆ ಬರುವ ಗಾಂಧಿ, ತಾನು ಪ್ರತಿ ಸಲ ಬಂದಾಗಲೂ ಹೋಸ ಹಂಬಲ, ಹೋಸ ಚಿಂತನೆ, ಹೋಸ ತಲ್ಲಣಗಳನ್ನು ಸೃಷ್ಟಿಸುತ್ತಾರೆ. ಹಲವಾರು ಕಥೆಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟು ಕೊಂಡಿರುವ ಈ ಕಾದಂಬರಿಯ ಕೆಂದ್ರ ಕಥೆ ಒಬ್ಬ ಬ್ರಾಹ್ಮನ ವಿಧವೆ ತನ್ನೆಲ್ಲ ಸಂಪ್ರದಾಯಿಕ ಸಂಕೋಲೆಗನ್ನು ದಾಟಿ ತನ್ನನ್ನು ಪ್ರೀತಿಸುವ ಬ್ಯಾರಿ ಮುಸ್ಲಿಮನನ್ನು ಸೇರುವ ಕಥೆ. ಅದಕ್ಕೆ ಪೂರಕವಾಗಿ ಹಲವಾರು ಕಥೆಗಳು ಇಂತಹ ಮತ್ತೊಂದು ಎಳೆಯೆ ಗಾಂಧಿ ಮಂಗಳೂರಿಗೆ ಬಂದದ್ದು.

ಕಥೆಗಿಂತ ನನ್ನನ್ನು ಸೇಳೆದದ್ದು ನಾಗವೇಣಿಯವರು ಓದುಗರಿಗೆ ಪಾತ್ರಗಳೊಂದಿಗೆ ಕಟ್ಟಿಕೊಡುವ ಅನುಬಂದ, ಓದಿ ಮುಗಿಸಿ ೨-೩ ದಿನಗಳಾದರೂ ಅಲ್ಲಿನ ಪಾತ್ರಗಳಾದ ಅಂತಪ್ಪ, ಐತು, ಮಾರಪ್ಪ, ಪಾಂಡು ಶೆಟ್ಟರು, ಕುಸುಮೊಯಿಲಿ ಇತ್ಯಾದಿಗಳು ನನ್ನೊಡನೆ ಇಷ್ಟೊತ್ತಿನವರೆಗೂ ಇಲ್ಲೆ ಇದ್ದರು, ಈಗಷ್ಟೆ ಎಲ್ಲೊ ಹೋಗಿದ್ದಾರೆ ಇನ್ನೇನು ಬರುತ್ತಾರೆ ಎನ್ನುವ ಭಾವ ನನ್ನಲ್ಲಿನ್ನೂ ಉಳಿದಿದೆ.

ಐತಿಹಾಸಿಕ ಘಟನೆಯನ್ನು ಇಟ್ಟುಕೊಂಡು ಅದರ ಸುತ್ತ ಕಾದಂಬರಿ ಕಟ್ಟುವುದು ತುಂಬ ಕಡಿಮೆ, ಆ ಕಡಿಮೆಯಲ್ಲೆ ಅದು ಯಶಸ್ವಿಯಾಗುವುದು ಮತ್ತೂ ಕಡಿಮೆ. ಆದರೆ ಇಲ್ಲಿ ಲೇಖಕರು ತೆಗೆದುಕೊಂಡ ವಿಷಯ, ಅದಕ್ಕೆ ಅವರು ಅಂತಿಮವಾಗಿ ಕೊಟ್ಟ ಅಂತ್ಯ, ಅವರ ಚಿಂತನೆಗಳು, ಆಲೋಚನೆಗಳು ಇಲ್ಲಿ ಗೆದ್ದಿವೆ. ಓದಿಟ್ಟ ಮೇಲೆ ನಮ್ಮನ್ನು ಮತ್ತೆ ಮತ್ತೆ ಕಾಡುವ ಮತ್ತು ನಮ್ಮನ್ನು ಸುಪ್ತಯೋಚನೆಗೆ ತಳ್ಳುವ ಪುಸ್ತಕ “ಗಾಂಧಿ ಬಂದ”, ಎಚ್ ನಾಗವೇಣಿಯವರಿಗೆ ಅಭಿನಂದನೆಗಳು.

Gandhi Banda
ಗಾಂಧಿಯೊಂದಿಗೆ ಮಂಗಳೂರು ಸೇರಿ ಕಳೆದುಹೋಗುತ್ತಿದ್ದ ನನಗೆ ಕೈಗೆ ಸಿಕ್ಕಿದ್ದು ಬಲ್ಲಾಳರ “ಮುಂಬಯಿ ದಿನಾಂಕ”, ಓದುತ್ತಾ ಹೋದಂತೆ ನನ್ನ ಮುಂಬಯಿಯ ಮೊದಲ ದಿನಗಳು ನೆನಪಾದವು, So ಮತ್ತೆ ಮುಂಬಯಿಗೆ ಮರಳಿ ಬಂದಿದ್ದೇನೆ.